ವ್ಯಾಸರಾಯರು ಹನುಮನನ್ನು ಯಂತ್ರ ರೂಪದಲ್ಲಿ ದಿಗ್ಬಂಧನ ಮಾಡಿದ ಅಪರೂಪದ ದೇವಾಲಯವಿದು..!!!

ವ್ಯಾಸರಾಯರು ಹನುಮನನ್ನು ಯಂತ್ರ ರೂಪದಲ್ಲಿ ದಿಗ್ಬಂಧನ ಮಾಡಿದ ಅಪರೂಪದ ದೇವಾಲಯವಿದು..!!!

ನಮಸ್ತೆ ಪ್ರಿಯ ಓದುಗರೇ, ಆಂಜನೇಯ ಅಂದ್ರೆ ಒಂದು ಶಕ್ತಿ. ಈತನನ್ನು ನಂಬಿದ್ರೆ ಬದುಕಿನ ಭವ ಭಂದಗಳು ದೂರವಾದಂತೆ. ದೇಹಿ ಎಂದರೆ ಸಾಕು ಈ ಭಗವಂತ ನಮ್ಮನ್ನು ಪೋರೆಯುತ್ತಾನೆ. ಬನ್ನಿ ಇವತ್ತಿನ ಲೇಖನದಲ್ಲಿ ವ್ಯಾಸರಾಯರ ತಪೋಭೂಮಿ ಯಲ್ಲಿ ಸ್ಥಾಪನೆಯಾದ ಯಂತ್ರೋದ್ಧಾರಕ ಆಂಜನೇಯ ಸ್ವಾಮಿಯ ದರ್ಶನ ಮಾಡಿ ಇವತ್ತಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಸಾವಿರಾರು ವರ್ಷಗಳಷ್ಟು ಪುರಾತನವಾದ ಈ ಆಂಜನೇಯ ಸ್ವಾಮಿ ದೇವಾಲಯವನ್ನು ಸಂಪೂರ್ಣವಾಗಿ ಬಂಡೆ ಕಲ್ಲುಗಳಿಂದ ಕಟ್ಟಲಾಗಿದ್ದು, ಆಲಯದ ಗೋಡೆಗಳ ಹೊರ ಭಾಗವು ಕೇಸರಿ ಹಾಗೂ ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ದೇಗುಲದ ಗರ್ಬಗುಡಿ ಯಲ್ಲಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿನ ದೇವರು ನಮಗೆ ಶಟ್ಕೋನದ ಒಳಗಡೆ ಕುಳಿತಿರುವಂತೆ ಕಾಣುತ್ತದೆ.

 

 

ಈ ಕ್ಷೇತ್ರಕ್ಕೆ ಬಂದು ಪವನ ಸುತನಿಗೆ ಜೇನುತುಪ್ಪದ ಅಭಿಷೇಕ ಸೇವೆ ಮಾಡಿಸುತ್ತೇವೆ ಎಂದು ಹರಕೆ ಹೊತ್ತರೆ ನಮ್ಮೆಲ್ಲ ಸಂಕಷ್ಟಗಳು ದೂರವಾಗಿ ಅಭೀಷ್ಟೆಗಳೆಲ್ಲ ಶ್ರೀಗ್ರವಾಗಿ ಪೂರ್ಣವಾಗುತ್ತದೆ ಎಂಬುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಅಭಿಪ್ರಾಯವಾಗಿದೆ. ಈ ಕ್ಷೇತ್ರದಲ್ಲಿ ವ್ಯಾಸರಾಯರು ಹನುಮಂತನ ಆತ್ಮವನ್ನು ದಿಗ್ಬಂಧನ ಮಾಡಿದರು ಎಂದು ಹೇಳಲಾಗುತ್ತದೆ. ಹೀಗಾಗಿ ಇಲ್ಲಿನ ಆಂಜನೇಯ ಸ್ವಾಮಿಯನ್ನು ಯಾಂತ್ರೋದ್ಧಾರಕ ಎಂದು ಕರೆಯಲಾಗುತ್ತದೆ. ವ್ಯಾಸರಾಯರು ಈ ರೀತಿ ಹನುಮಂತನನ್ನು ಬಂಧಿಸಿರುವುದರ ಹಿಂದೆ ಒಂದು ಕಾರಣ ಇದೆ. ಒಮ್ಮೆ ವ್ಯಾಸರಾಯರು ಕಲ್ಲಿನ ಮೇಲೆ ಇದ್ದಿಲಿನಿಂದ ಆಂಜನೇಯನ ಚಿತ್ರ ಬಿಡಿಸಿ ಮನೆಗೆ ಹೋದರಂತೆ. ಆದ್ರೆ ಮರುದಿನ ಬಂದಾಗ ಬಂಡೆ ಕಲ್ಲಿನ ಮೇಲೆ ಹನುಮಂತ ದೇವರ ಚಿತ್ರ ಕಾಣದಾದಾಗ, ಮತ್ತೊಮ್ಮೆ ಚಿತ್ರ ಬಿಡಿಸಿದರು. ಅವ್ರು ಎಷ್ಟೇ ಬಾರಿ ಆಂಜನೇಯನ ಚಿತ್ರ ಬಿದಿಸಿದ್ರೋ ಅದು ಮಾರನೆಯ ದಿನ ಬಂದು ನೋಡಿದಾಗ ಕಣ್ಮರೆ ಆಗುತ್ತಿತ್ತು.

 

 

ಇದೆ ರೀತಿ 12 ಬಾರಿ ಈ ಘಟನೆ ಪುನರಾವರ್ತನೆ ಆದ ಮೇಲೆ ವ್ಯಾಸರಾಯರು ಒಂದು ಧೃಢವಾದ ತೀರ್ಮಾನಕ್ಕೆ ಬಂದು ಬಂಡೆ ಕಲ್ಲಿನ ಮೇಲೆ ಶತ್ಕೋನವನ್ನು ಬರೆದು ದೇವರ ಚಿತ್ರ ಬಿಡಿಸಿ ಬೀಜಾಕ್ಷರಿ ಮಂತ್ರಗಳನ್ನು ಶಟ್ಕೋಣದ ಸುತ್ತಲೂ ಬರೆದು ಮುಖ್ಯ ಪ್ರಾಣ ಆಂಜನೇಯನನ್ನು ಈ ಶತ್ಕೋಣದ ಒಳ್ಗದೆ ತಪಸ್ಸಿನ ಶಕ್ತಿಯಿಂದ ಬಂಧಿಸಿದರು. ನಂತರ ಹನುಮಂತ ದೇವರು ವ್ಯಾಸರಾಯರ ಭಕ್ತಿಗೆ ಮೆಚ್ಚಿ ಇನ್ಮುಂದೆ ನಾನು ಇಲ್ಲಿಯೇ ನೆಲೆಸುತ್ತೇನೆ ಎಂದು ಹೇಳಿದರ ಫಲವಾಗಿ ಈ ಕ್ಷೇತ್ರದಲ್ಲಿ ದೇವರು ಯಂತ್ರೋದ್ದಾರಕ ಆಂಜನೇಯ ಎನ್ನುವ ಹೆಸರಿನಿಂದ ಜನರನ್ನು ಪೋರೆಯುತ್ತಿದ್ದಾನೇ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಪ್ರತಿವರ್ಷ ಮಾರ್ಗಶಿರ ಶುದ್ಧ ತ್ರಯೋದಶಿ ಅಂದು ಇಲ್ಲಿ ಹನುಮಂತ ವ್ರತವನ್ನು ಆಚರಿಸಲಾಗುತ್ತದೆ. ಈ ಪುಣ್ಯ ದೇಗುಲವು ಬಳ್ಳಾರಿ ಜಿಲ್ಲೆಯ ವಿಜಯನಗರ ತಾಲೂಕಿನ ಹಂಪಿಯಲ್ಲಿ ಇದೆ. ಸಾಧ್ಯವಾದರೆ ಈ ಶಕ್ತಿಶಾಲಿ ಹನುಮಂತನ ಆಶೀರ್ವಾದ ಪಡೆಯಿರಿ ಜೀವನದ ಸಕಲ ಇಷ್ಟಾರ್ಥಗಳನ್ನೂ ಪೂರೈಸಿಕೊಳ್ಳಿ. ಶುಭದಿನ.

ಭಕ್ತಿ