ನಮಸ್ತೆ ಪ್ರಿಯ ಓದುಗರೇ, ನೀವು ಮ್ಯಾಂಗೋ ಪಿಕಲ್ ತಿಂದಿರ್ಥಿರ, ನಿಂಬು ಹಾಗೆ ಇನ್ನಿತರ ರೀತಿಯ ವಿಧ ವಿಧವಾದ ಪಿಕಲ್ ತಿಂದಿರ್ತಿರ. ಆದ್ರೆ ಯಾವತ್ತಾದರೂ ಫಿಶ್ ಪಿಕಲ್ ತಿಂದಿದಿರಾ? ತಿಂದಿಲ್ಲ ಅನ್ನೋದಾದರೆ ಇಂದಿನ ಲೇಖನದಲ್ಲಿ ಫಿಶ್ ಪಿಕಲ್ ಹೇಗೆ ಮಾಡೋದು ಅಂತ ತಿಳಿದುಕೊಳ್ಳೋಣ. ಫಿಶ್ ಪೀಕಲ್ ಮಾಡಲು ಯಾವೆಲ್ಲ ಪದಾರ್ಥಗಳು ಬೇಕು ಎಂದು ಮೊದಲು ನೋಡೋಣ. ಈ ಪಿಕಲ್ ತುಂಬಾ ಖಡಕ್ ಆಗಿ ಟೇಸ್ಟಿ ಆಗಿರುತ್ತೆ. ಊಟಾದ ಜೊತೆ ಈ ಫಿಶ್ ಪಿಕಾಲ್ ಇದ್ರೆ ಅದ್ಭುತ ರುಚಿ ಕೊಡುತ್ತೆ. ಈ ಫಿಶ್ ಉಪ್ಪಿನಕಾಯಿ ತಯಾರಿಸಲು ಮೊದಲಿಗೆ ಫಿಶ್ ಬೇಕೇ ಬೇಕು ಅಲ್ವಾ? ಅದಕ್ಕಾಗಿ ನಾವು ರೂಪ್ ಚಂದನ್ ಎನ್ನುವ ಫಿಶ್ ನ ಬಳಕೆ ಮಾಡಿದ್ದೇವೆ. ನೀವು ಇದನ್ನು ಬಳಸಿದರೆ ಅತ್ಯಂತ ರುಚಿಕರವಾದ ಉಪ್ಪಿನಕಾಯಿ ತಯಾರಾಗುತ್ತದೆ.
150 ಗ್ರಾಂ ಅಷ್ಟು ರೂಪ್ ಚಂದನ್ ಮೀನನ್ನು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ನಂತ್ರ ಅದನ್ನು ಒಂದು ಮಿಕ್ಸಿಂಗ್ ಬೌಲ್ ಗೆ ವರ್ಗಾಯಿಸಿ ಅದಕ್ಕೆ ಒಂದು ಚಮಚ ಖಾರದ ಪುಡಿ, ಅರ್ಧ ಚಮಚ ಅರಿಶಿಣ, ಹಾಗೂ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಉಪ್ಪು ಖಾರ ಮೀನಿನ ಎಲ್ಲಾ ಪೀಸ್ ಗಳಿಗೆ ಹತ್ತುವಂತೆ ಕಲಸಿ 15 ನಿಮಿಷಗಳ ಕಾಲ ಒಂದು ಮುಚ್ಚಳ ಮುಚ್ಚಿ ಹಾಗೆ ಇಡಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ 15 ನಿಮಿಷಗಳು ಮಾರಿನೆಟ್ ಆದ ಫಿಶ್ ಅನ್ನು ಎಣ್ಣೆಯಲ್ಲಿ ಹಾಕಿ. 10-12 ನಿಮಿಷಗಳ ಕಾಲ ಮೀಡಿಯಮ್ ಉರಿಯಲ್ಲಿ ಫಿಶ್ ಚೆನ್ನಾಗಿ ಫ್ರೈ ಆಗಬೇಕು ಆಗ ಮಾತ್ರ ರುಚಿಯಾಗಿ ಇರುತ್ತದೆ.
ಹಾಗೆ ತುಂಬಾ ದಿನಗಳ ವರೆಗೆ ಇಡಬಹುದು. ಫ್ರೈ ಆದ ನಂತರ ಮೀನನ್ನು ಹೊರಗೆ ತೆಗೆದು ಇಡಿ. ಈಗ ಇನ್ನೊಂದು ಫ್ರೈ ಕಡಾಯಿ ಇಟ್ಟು,ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ, ಹಸಿ ಶುಂಠಿಯನ್ನು ಸ್ವಲ್ಪ ದೊಡ್ಡದಾಗಿ ಅಂದ್ರೆ ಬೆಳ್ಳುಳ್ಳಿ ಎಸಲಿನ ಸೈಸ್ ಗೆ ಕತ್ತರಿಸಿ ಹಾಕಿ, 3 ಗೆಡ್ಡೆ ಬೆಳ್ಳುಳ್ಳಿ ನ ಸಿಪ್ಪೆ ಬಿಡಿಸಿ ಹಾಕಿ ಇವೆಲ್ಲ ಎಣ್ಣೆಯಲ್ಲಿ ಫ್ರೈ ಆಗಲಿ, ನಂತರ 2 ಹಸಿ ಮೆಣಸಿನಕಾಯಿ , ಕರಿಬೇವು ಹಾಕಿ ಫ್ರೈ ಮಾಡಿ. ನಂತರ ಮತ್ತೆ ಸ್ವಲ್ಪ ಉಪ್ಪು, ಒಂದು ವರೆ ಚಮಚ ಖಾರದ ಪುಡಿ, ಸ್ವಲ್ಪ ಅರಿಶಿನ, ಸ್ವಲ್ಪ ಕಾಲು ಮೆಣಸಿನ ಪುಡಿ ಸೇರಿಸಿ ಲೈಟ್ ಆಗಿ ಫ್ರೈ ಮಾಡಿ. ಉರಿ ಕಡಿಮೆ ಇರಲಿ. ಈಗ ಮೊದಲೇ ಕರಿದು ಇಟ್ಟುಕೊಂಡ ಮೀನನ್ನು ಹಾಕಿ 8-10 ಚಮಚ ವಿನೆಗರ್ ಹಾಕಿ ಒಂದು ಕುದಿ ಬಂದರೆ ಮೀನಿನ ಉಪ್ಪಿನಕಾಯಿ ಫಿಶ್ ಪಿಕ್ಕಲ್ ಸವಿಯಲು ಸಿದ್ಧ. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.