ಕರ್ನಾಟಕದ ಬಾಗೀರಥಿ ಎಂದೇ ಕರೆಯುವ ಶರಾವತಿ ನದಿಯ ಉಗಮವಾದ ಪುಣ್ಯ ಕ್ಷೇತ್ರವಿದು…

ಕರ್ನಾಟಕದ ಬಾಗೀರಥಿ ಎಂದೇ ಕರೆಯುವ ಶರಾವತಿ ನದಿಯ ಉಗಮವಾದ ಪುಣ್ಯ ಕ್ಷೇತ್ರವಿದು…

ನಮಸ್ತೆ ಪ್ರಿಯ ಓದುಗರೇ, ಭೂಮಿ ಮೇಲೆ ನಾವು ಬದುಕಲಿ ಬೇಕಾಗಿರುವುದು ನೀರು. ನೀರು ಇಲ್ಲದಿದ್ದರೆ ಮನುಷ್ಯರು ಮಾತ್ರವಲ್ಲ ಸಕಲ ಚರಾಚರ ಜೀವಿಗಳು ಬದುಕುವುದಕ್ಕೆ ಸಾಧ್ಯವಿಲ್ಲ. ಭಾರತದಲ್ಲಿ ಹುಟ್ಟುವ ಪ್ರತಿ ನದಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಬನ್ನಿ ಇವತ್ತಿನ ಲೇಖನದಲ್ಲಿ ಶರಾವತಿ ನದಿ ಉಗಮವಾದ ಅಂಬುತೀರ್ಥದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಜೋಗ ಜಲಪಾತ ದಂತಹ ಸುಂದರ ಜಲಪಾತವನ್ನು ಸೃಷ್ಟಿಸುವ ಶರಾವತಿ ನದಿಯನ್ನು ಕರ್ನಾಟಕ ದ ಬಾಗೀರಥಿ ಎಂದೇ ಕರೆಯಲಾಗುತ್ತದೆ. ಹೇಗೆ ಕಾವೇರಿ ನದಿಯು ತಲಕಾವೇರಿಯಲ್ಲಿ ಉಗಮವಾದಳು ಅದೇ ರೀತಿ ಶರಾವತಿ ನದಿಯು ಕೂಡ ಅಂಭುತೀರ್ಥ ಎನ್ನುವ ಪುಟ್ಟ ಕುಂಡದಲ್ಲಿ ಉಗಮವಾಗಿದ್ದಾಳೆ. ವರ್ಷದ ಎಲ್ಲಾ ಕಾಲದಲ್ಲೂ ಈ ಕುಂಡದಲ್ಲಿ ನೀರು ಒಂದೇ ಸಮನೆ ಹರಿಯುತ್ತಿದ್ದು, ಈ ನೀರು ಇದುವರೆಗೂ ಬತ್ತಿದ ಉದಾಹರಣೆಯೇ ಇಲ್ಲ.

 

 

ಇಲ್ಲಿ ಹರಿಯುವ ನೀರಿಗೆ ಔಷಧೀಯ ಗುಣಗಳು ಇದ್ದು ಈ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಯಾವುದೇ ತರಹದ ರೋಗ ರುಜಿನಗಳು ದೂರ ಆಗುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ತೀರ್ಥವನ್ನು ಕುಡಿಯುವುದರಿಂದ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂಬ ಪ್ರತೀತಿ ಇದೆ. ಶರಾವತಿ ನದಿ ಹುಟ್ಟಿದ ಬಗ್ಗೆ ಹಾಗೂ ಈ ಕ್ಷೇತ್ರಕ್ಕೆ ಅಂಬುತೀರ್ಥ ಎಂಬ ಹೆಸರು ಬಂದಿರುವುದರ ಹಿಂದೆ ಒಂದು ಪೌರಾಣಿಕ ಕಥೆ ಕೂಡ ಇದೆ. ರಾಮಾಯಣ ಕಾಲದಲ್ಲಿ ಅರಣ್ಯ ವಾಸದಲ್ಲಿ ಇರುವಾಗ ಶ್ರೀರಾಮಚಂದ್ರನು ಈ ಪ್ರದೇಶಕ್ಕೆ ಬಂದು ನೆಲೆಸಿದಾಗ ಸ್ನಾನ ಸಂಧ್ಯಾ ಕಾರ್ಯಗಳು ಮತ್ತು ಇತರ ಕಾರ್ಯಗಳಿಗೆ ನೀರಿನ ಅಭಾವ. ಆಯಿತು. ಆ ಸಮಯದಲ್ಲಿ ಶ್ರೀರಾಮನು ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥ ಉದ್ಭವ ಆಯಿತಂತೆ. ಹೀಗೆ ಉದ್ಭವ ಆದ ತೀರ್ಥವನ್ನು ಅಂಬೂತೀರ್ಥ ಎಂದು ಹೇಳಲಾಗುತ್ತದೆ. ಅಂಬು ಎಂದರೆ ಸಂಸ್ಕೃತದಲ್ಲಿ ಬಾಣ ಎಂದರ್ಥ ಆಗಿದ್ದು, ಪುಟ್ಟ ಕುಂಡದಲ್ಲಿ ಉದ್ಭವ ಆದ ನೀರು ಶ್ರೀರಾಮನ ಶೀರದಿಂದ ಹುಟ್ಟಿದ್ದರಿಂದ. ಹಾಗೂ ಮುಂದೆ ಈ ನೀರು ನದಿಯಾಗಿ ಹರಿಯುವುದರಿಂದ ಈ ನದಿಗೆ ಶರಾವತಿ ಎಂದು ಹೇಳಲಾಗುತ್ತದೆ.

 

 

ಶ್ರೀರಾಮನು ಈ ಕ್ಷೇತ್ರಕ್ಕೆ ಬಂದಾಗ ಇಲ್ಲಿ ಶಿವ ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದನು. ಹೀಗಾಗಿ ಇಲ್ಲಿನ ಶಿವಲಿಂಗಕ್ಕೆ ವಿಶೇಷವಾದ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಇಲ್ಲಿಗೆ ಬಂದು ಪರಮೇಶ್ವರನ ಮುಂದೆ ನಿಂತು ಭಕ್ತಿಯಿಂದ ಪ್ರಾರ್ಥಿಸಿದರೆ ಆ ದೇವ ನಮ್ಮೆಲ್ಲ ಕೋರಿಕೆಗಳನ್ನು ಶೀಘ್ರವಾಗಿ ನೆರವೇರಿಸುತ್ತಾರೆ. ಇಲ್ಲಿ ಮಹೇಶ್ವರನ ಜೊತೆ ಶ್ರೀರಾಮ ಹಾಗೂ ದುರ್ಗಾ ಪರಮೇಶ್ವರಿ ವಿಗ್ರಹವನ್ನು ಕೂಡ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿನ ಹಚ್ಚ ಹಸಿರು ಪ್ರಕೃತಿಯ ರಮಣೀಯತೆ ಮನಸಿನ ಎಲ್ಲಾ ಕ್ಲೇಶಗಳ ನ್ನೂ ದೂರ ಮಾಡಿ ನಮ್ಮನ್ನು ದೇವರ ಧ್ಯಾನದಲ್ಲಿ ತಲ್ಲೀನ ಆಗುವಂತೆ ಮಾಡುತ್ತೆ. ಈ ಪವಿತ್ರ ಸ್ಥಳವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿದೆ. ಸಾಧ್ಯವಾದರೆ ಶರಾವತಿ ನದಿಯ ಉಗಮ ಸ್ಥಾನಕ್ಕೆ ಭೇಟಿ ನೀಡಿ ಸುಂದರವಾದ ಪ್ರಕೃತಿಯ ಜೊತೆಗೆ ದೇವರ ಅನುಗ್ರಹ ಪಡೆಯುವುದು ಜೀವನದ ಅತ್ಯುತ್ತಮ ಸಂದರ್ಭ ಎಂದೇ ಹೇಳಬಹುದು. ಶುಭದಿನ.

ಉಪಯುಕ್ತ ಮಾಹಿತಿಗಳು