ವಿಶ್ವದಲ್ಲಿ ಅತ್ಯಂತ ದೊಡ್ಡದಾದ ಈಶ್ವರನ ಲಿಂಗವಿರುವ ಪುಣ್ಯ ಕ್ಷೇತ್ರವಿದು.

ವಿಶ್ವದಲ್ಲಿ ಅತ್ಯಂತ ದೊಡ್ಡದಾದ ಈಶ್ವರನ ಲಿಂಗವಿರುವ ಪುಣ್ಯ ಕ್ಷೇತ್ರವಿದು.

ನಮಸ್ತೆ ಪ್ರಿಯ ಓದುಗರೇ, ಜಗದೀಶ, ಸರ್ವೇಶ, ಮಲ್ಲೇಶ, ಗೌರೀಶ, ಮಹೇಶ, ಸುರೇಶ ಹೀಗೆ ನಾನಾ ಹೆಸರುಗಳಿಂದ ಕರೆಯುವ ಪರಮೇಶ್ವರನನ್ನು ಸುಮ್ಮನೆ ಮನಸ್ಸಿನಲ್ಲಿ ಸ್ಮರಿಸಿದರೆ ಸಾಕು ಆತ ನಮಗೆ ಸಕಲ ಚರಾಚರ ಜೀವಿಗಳಲ್ಲಿ ಕಾಣ ಸಿಗುತ್ತಾನೆ. ಭಕ್ತರ ಭಕ್ತಿಗೆ ಬೇಗನೆ ಒಲಿಯುವ ಆ ದೇವ ನೆಲೆನಿಂತ ಸ್ಥಳಗಳಿಗೆ ಲೆಕ್ಕವೇ ಇಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಕೋಟಿ ಲಿಂಗೇಶ್ವರ ದೇಗುಲವನ್ನು ದರ್ಶನ ಮಾಡಿ ಪುನೀತ ರಾಗೋಣ. ಎತ್ತ ನೋಡಿದರೂ ಬರೀ ಲಿಂಗಗಳು ಕಾಣಿಸುವ ಕ್ಷೇತ್ರವಾದ ಕೋಟಿ ಲಿಂಗೇಶ್ವರ ದಲ್ಲೀ ಜಗತ್ತಿನಲ್ಲೇ ಅತೀ ದೊಡ್ಡದಾದ ಶಿವನ ಮೂರ್ತಿ ಇದೆ. 108 ಅಡಿಗಳ ಬೃಹತ್ ಶಿವಲಿಂಗ ಹಾಗೂ 32 ಅಡಿಗಳಷ್ಟು ಎತ್ತರವಿರುವ ಅತೀ ದೊಡ್ಡ ಬಸವನ ಮೂರ್ತಿಯು ಈ ದೇಗುಲದ ಪ್ರಮುಖ ಆಕರ್ಷಣೆ ಆಗಿದೆ. ತ್ರೇತಾಯುಗ ದಿಂದಲೂ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗಿರುವ ಈ ಸ್ಥಳದಲ್ಲಿ ಬೃಹತ್ ಲಿಂಗವನ್ನು ಸ್ಥಾಪನೆ ಮಾಡಲು ಕಾರಣಿಕರ್ಥ ಆದವರು ದಿವಂಗತ ಶ್ರೀ ಸಾಂಬಾ ಶಿವಮೂರ್ತಿ ಅವರು. 13 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಕೋಟಿ ಲಿಂಗವನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಸ್ವಾಮೀಜಿ ಅವರು 1980 ಅಕ್ಟೋಬರ್ 10 ರಂದು ಮೊದಲ ಲಿಂಗವನ್ನು ಸ್ಥಾಪನೆ ಮಾಡಿ ಪೂಜೆ ಮಾಡಲು ಪ್ರಾರಂಭ ಮಾಡಿದರು.

 

 

ಇದುವರೆಗೂ 90 ಲಕ್ಷದಷ್ಟು ಈಶ್ವರನ ಲಿಂಗವನ್ನು ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಕೋಟಿ ಲಿಂಗೇಶ್ವರ ದೇಗುಲದ ವಿಶೇಷತೆ ಏನೆಂದರೆ ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಮನೋಭಿಲಾಷೆಗೆ ತಕ್ಕಂತೆ ಲಿಂಗವನ್ನು ಸ್ಥಾಪನೆ ಮಾಡಿ, ಅದಕ್ಕೆ ತಮ್ಮ ಕೈಯಾರೆ ಪೂಜೆ ಮಾಡಬಹುದು. ಅಲ್ಲದೆ ತಾವು ಸ್ಥಾಪನೆ ಮಾಡಿರುವ ಲಿಂಗವನ್ನು ವರ್ಷದ ಯಾವುದೇ ಸಮಯದಲ್ಲಿ ಬೇಕಾದ್ರೂ ಪೂಜೆ ಮಾಡಬಹುದು. ಇಲ್ಲಿಗೆ ಬಂದು ಲಿಂಗಗಳನ್ನು ಸ್ಥಾಪನೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಹೀಗಾಗಿ ನಿತ್ಯ ಸಾವಿರಾರು ಮಂದಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಶಿವಲಿಂಗವನ್ನು ಸ್ಥಾಪನೆ ಮಾಡಿ ಪುನೀತಾಗುತ್ತಾರೆ. ಜನಸಾಮಾನ್ಯರು ಮಾತ್ರವಲ್ಲ ಮಾಜಿ ಮುಖ್ಯ ಮಂತ್ರಿ ಆದ ಧರ್ಮ ಸಿಂಗ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಕೇಂದ್ರ ಸಚಿವ ಕೆ. ಹೆಚ್ ಮುನಿಯಪ್ಪ, ಚಿತ್ರನಟ ಚಿರಂಜೀವಿ ಹೀಗೆ ಹಲವಾರು ಗಣ್ಯರು ಇಲ್ಲಿಗೆ ಬಂದು ಲಿಂಗವನ್ನು ಸ್ಥಾಪನೆ ಮಾಡಿ ಕೃತಾರ್ಥರಾದರು.

 

 

ಇನ್ನೂ ಕೋಟಿ ಲಿಂಗೇಶ್ವರ ದಲ್ಲೀ ಪರಮೇಶ್ವರನ ದೇಗುಲ ಮಾತ್ರವಲ್ಲ ಶ್ರೀರಾಮ, ಮಹಾವಿಷ್ಣು,ಆಂಜನೇಯ ಸ್ವಾಮಿ, ಅನ್ನ ಪೂರ್ಣೇಶ್ವರಿ, ಬ್ರಹ್ಮ ದೇವರು, ಕನ್ನಿಕಾ ಪರಮೇಶ್ವರಿ, ವೆಂಕಟರಮಣ ಸ್ವಾಮಿ, 16 ಭುಜದ ಗಣಪತಿ, ಸತ್ಯ ನಾರಾಯಣ ಸ್ವಾಮಿ, ನವದುರ್ಗೆಯರು ಮತ್ತು ಸಪ್ತ ಮಾಥ್ರುಕೆಯರು ಮುಂತಾದ ದೇವರನ್ನು ದರ್ಶನ ಮಾಡಬಹುದು. ಇಲ್ಲಿರುವ ಪ್ರತಿ ದೇವರಿಗೆ ವಿಶೇಷ ಸಂದರ್ಭದಲ್ಲಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಈ ಸಮಯದಲ್ಲಿ ಪುಷ್ಪಾಲಂಕಋತ ದೇವರನ್ನು ನೋಡೋದೇ ಒಂದು ಸೌಭಾಗ್ಯ. ಕೋಟಿ ಲಿಂಗೇಶ್ವರ ದಲ್ಲಿ ಮಹಾಶಿವರಾತ್ರಿಯ ಹಬ್ಬ ವಿಜೃಂಭಣೆ ಇಂದ ಆಚರಿಸಲಾಗುತ್ತದೆ. ಹಾಗೂ ದೇವರ ರಥೋತ್ಸವ ನಡೆಯುತ್ತದೆ. ಅಂದು ಶಿವಲಿಂಗಕ್ಕೆ ಹಾಲಿನ ಅಭಿಷೇಕ, ಟನ್ ಗಟ್ಟಲೇ ಹೂವುಗಳನ್ನು ತಂದು ಸ್ವಾಮಿಯನ್ನು ಅಲಂಕಾರ ಮಾಡಲಾಗುತ್ತದೆ. ಕೋಟಿ ಲಿಂಗೇಶ್ವರ ದೇವರಿಗೆ ಬೆಳಿಗ್ಗೆ 6 ಗಂಟೆ ಮತ್ತು ಸಂಜೆ 6 ಗಂಟೆಯ ಮಹಾ ಪೂಜೆಗಳನ್ನು ಮಾಡಲಾಗುತ್ತದೆ. ಈ ವಿಶಿಷ್ಟ ದೇವಾಲಯವನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಈ ಪುಣ್ಯ ದೇಗುಲವು ಕೋಲಾರ ಜಿಲ್ಲೆಯ ಕಮ್ಮಸಂದ್ರ ಎಂಬ ಊರಿನಲ್ಲಿದೇ. ಸಾಧ್ಯವಾದರೆ ನೀವು ಒಮ್ಮೆ ನಿಮ್ಮ ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಿರಿ. ಶುಭದಿನ.

ಭಕ್ತಿ