ದಿನೇ ದಿನೇ ಬೆಳೆಯುತ್ತಿದ್ದಾನೇ ಈ ಕ್ಷೇತ್ರದಲ್ಲಿರುವ ಶ್ರೀನಿವಾಸ ಸ್ವಾಮಿ..!!!

ದಿನೇ ದಿನೇ ಬೆಳೆಯುತ್ತಿದ್ದಾನೇ ಈ ಕ್ಷೇತ್ರದಲ್ಲಿರುವ ಶ್ರೀನಿವಾಸ ಸ್ವಾಮಿ..!!!

ನಮಸ್ತೆ ಪ್ರಿಯ ಓದುಗರೇ, ತಿರುಪತಿಯಲ್ಲಿ ನೆಲೆನಿಂತ ಶ್ರೀ ಶ್ರೀನಿವಾಸ ಸ್ವಾಮಿ ಯನ್ನ ದರ್ಶನ ಮಾಡೋಕೆ ಯಾರು ತಾನೇ ಬಯಸಲ್ಲ ಹೇಳಿ, ಮನಸ್ಸಿನಲ್ಲಿ ಆಸೆ ಇದ್ದವರು ಕೆಲವೊಮ್ಮೆ ಈ ದೇವರನ್ನು ನೋಡೋಕೆ ಆಗೋದೇ ಪರಿತಪಿಸುತ್ತಾರೆ. ತಿರುಪತಿಗೆ ಹೋಗೋಕೆ ಆಗದೆ ಇರುವವರು ಈ ಕ್ಷೇತ್ರಕ್ಕೆ ಹೋದ್ರೆ ತಿರುಪತಿಯ ವೆಂಕಟೇಶ್ವರ ನ ದರ್ಶನ್ ಮಾಡಿದಷ್ಟೂ ಪುಣ್ಯ ಬರುತ್ತಂತೆ. ಬನ್ನಿ ಹಾಗಾದರೆ ಆ ಪುರಾಣ ಪ್ರಸಿದ್ಧ ದೇವಾಲಯ ಯಾವುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಮಾ ಎಂದರೆ ಲಕ್ಷ್ಮೀ ಗಡಿ ಎಂದರೆ ನಿವಾಸ ಎಂಬರ್ಥ ಆಗಿದ್ದು, ಈ ಮಾಗಡಿ ಕ್ಷೇತ್ರವನ್ನು ಮಾಂಡವ್ಯ ಕ್ಷೇತ್ರವೆಂದು ಕರೆಯಲಾಗುತ್ತದೆ. ಹಿಂದೆ ಇಲ್ಲಿ ಕಣ್ವ ಮತ್ತು ಶುಖ ಮುನಿಗಳು ಕೂಡ ತಪಸ್ಸನ್ನು ಆಚರಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ಪ್ರದೇಶದಲ್ಲಿ ಮಾಂಡವ್ಯರು ಪ್ರತಿಷ್ಠಾಪನೆ ಮಾಡಿದ್ದ ವೆಂಕಟೇಶ್ವರನ ಮೂರ್ತಿಯನ್ನು ನಾವು ಕಣ್ಣು ತುಂಬಿಕೊಳ್ಳಬಹುದು. ಈ ದೇಗುಲದಲ್ಲಿ ಹಲವಾರು ವಿಗ್ರಹಗಳು ಪೂರವಭಿಮುಕವಾಗಿ ಇವೆ ಆದ್ರೆ 4.5 ಅಡಿ ಎತ್ತರವಿರುವ ಶ್ರೀ ರಂಗನಾಥನ ಮೂರ್ತಿ ಮಾತ್ರ ಪಶ್ಚಿಮಾಭಮುಖವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ ಇದೇ ಕಾರಣಕ್ಕೆ ಈ ದೇವರನ್ನು ಪಶ್ಚಿಮ ವೆಂಕಟಾಚಲಪತಿ ಎಂದೇ ಕರೆಯಲಾಗುತ್ತದೆ.

 

 

ಈ ಕ್ಷೇತ್ರಕ್ಕೆ ಬಂದರೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಇಲ್ಲಿ ಮಾಂಡವ್ಯರು ಆರಾಧಿಸುತ್ತಿದ್ದ ಸ್ವಯಂಭೂ ರೂಪದ ಸಾಲಿಗ್ರಾಮ ಇದ್ದು, ಇಲ್ಲಿ ಎಷ್ಟು ಕೂಡ ನೀರು ಅಭಿಷೇಕ ಮಾಡಿದ್ರೂ ಅಭಿಷೇಕದ ನೀರು ಒಂದು ಹನಿಯೂ ಇರದಂತೆ ಇಂಗಿ ಹೋಗುವುದು ಈ ಕ್ಷೇತ್ರದ ಮಹಿಮೆ ಆಗಿದೆ. ಆ ನೀರು ಎಲ್ಲಿಗೆ ಹರಿದು ಹೋಗುತ್ತೆ ಎಂದು ಇದುವರೆಗೂ ರಹಸ್ಯವಾಗಿ ಉಳಿದುಕೊಂಡಿದೆ. ಅಲ್ಲದೆ ಚೈತ್ರ ಮಾಸದ ಉತ್ತರಾಯಣ ಸೂರ್ಯಾಸ್ತ ದ ಸಮಯದಲ್ಲಿ ಸೂರ್ಯನ ಕಿರಣಗಳು ಮೊದಲು ಮೂರ್ತಿಯ ಕಿರೀಟವನ್ನು ಸ್ಪರ್ಶಿಸಿ ನಂತರ ರಂಗನಾಥನ ಮೂರ್ತಿಯ ಮೇಲೆ ಚುಂಬಿಸುತ್ತವೆ. ಇಂತಹ ವಿಸ್ಮಯಕಾರಿ ಘಟನೆಯನ್ನು ಕೇವಲ ಈ ದೇವಾಲಯದಲ್ಲಿ ನೋಡಬಹುದು. ಉತ್ತರಾಯಣ ಕಾಲದಲ್ಲಿ ನಡೆಯುವ ಈ ವೈಶಿಷ್ಟ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿದೆ. ಈ ಕ್ಷೇತ್ರದಲ್ಲಿ ರಂಗನಾಥನ ಜೊತೆಗೆ ಅಮ್ಮನವರು, ಸೀತಾದೇವಿ, ಶ್ರೀರಾಮ, ರಾಮಾನುಜಾಚಾರ್ಯರು, ವೈಷ್ಣವ ಭಕ್ತರ ಪ್ರತಿಮೆಗಳು, ಆಳ್ವರು, ಗರುಡನ ಮೂರ್ತಿಗಳನ್ನು ಕೆತ್ತಲಾಗಿದೆ.

 

 

ಇಲ್ಲಿನ ಗೋಡೆ ಮೇಲೆ ಮಲಗಿರುವ ಭಂಗಿಯಲ್ಲಿ ರಂಗನ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ಮಕ್ಕಳ ರಂಗ, ಮಾಗಡಿ ರಂಗ, ಬೆಳೆಯುವ ರಂಗ ಎಂಬ ಹೆಸರಿನಿಂದ ಕರೆಯುವ ಈ ದೇವರು ದಿನೇ ದಿನೇ ಬೆಳೆಯುತ್ತಿದ್ದಾರೆ. ಹೀಗಾಗಿ ಇಲ್ಲಿಗೆ ಬಂದು ಈ ದೇವರಿಗೆ ತೊಟ್ಟಿಲು ಸೇವೆಯ ಹರಕೆ ಹೊತ್ತರೆ ಉತ್ತಮವಾದ ಸಂತಾನ ಭಾಗ್ಯ ದೊರಕುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಇಲ್ಲಿರುವ ರಂಗನಾಥ ಸ್ವಾಮಿಗೆ ಮೈಸೂರಿನ ನವಕೋಟಿ ನಾರಾಯಣ ಎಂಬ ಬಿರುದನ್ನೂ ಹೊಂದಿರುವ ಚಿಕ್ಕದೇವರಾಜ ಒಡೆಯರು ಬಂಗಾರದ ಕಿರೀಟವನ್ನು ಸಮರ್ಪಣೆ ಮಾಡಿದ್ದು, ಇವರು ಮಾಂಡವ್ಯ ತೀರ್ಥಕ್ಕೆ ಕಟ್ಟೆಯನ್ನು ಸಹ ಕಟ್ಟಿಸಿದ್ದಾರೆ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ 15 ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಇನ್ನೂ ಧನುರ್ಮಾಸದಲ್ಲಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಬಂದು ದೇವರಿಗೆ ಪ್ರಾರ್ಥನೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಅತ್ಯಂತ ಶಕ್ತಿಶಾಲಿ ಆದ ಈ ದೇವನನ್ನು ಬೆಳಿಗ್ಗೆ 8.30 ರಿಂದ ಮಧ್ಯಾನ 1.30 ರ ವರೆಗೆ, ಸಂಜೆ 4.30-7.30 ರ ವರೆಗೆ ದರ್ಶನ ಮಾಡಬಹುದಾಗಿದೆ. ಶನಿವಾರ ಭಾನುವಾರ ಇಲ್ಲಿ ಉಚಿತ ಅನ್ನ ಸಂತರ್ಪಣೆ ನಡೆಯುತ್ತದೆ. ಈ ಪುಣ್ಯ ದೇಗುಲವು ಮಾಗಡಿ ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಶ್ರೀ ರಂಗನಾಥನ ದರ್ಶನ ಮಾಡಿ ಕೃತಾರ್ಥರಾಗಿ. ಶುಭದಿನ.

ಭಕ್ತಿ