ನಮಸ್ತೆ ಪ್ರಿಯ ಓದುಗರೇ, ಜಗತ್ತು ನಿಂತಿರುವುದು ನಂಬಿಕೆಯ ತಳಹದಿಯ ಮೇಲೆ. ಗುರುವಿನ ಕೃಪಾಕಟಾಕ್ಷ ಒಂದಿದ್ರೆ ಬದುಕಿನಲ್ಲಿ ಎಲ್ಲವೂ ಸಿಗುತ್ತದೆಂದು ಮಾನವ ಜನಾಂಗಕ್ಕೆ ತೋರಿಸಿದ ಯೋಗಿಗಳೊಬ್ಬರ ಅಪರೂಪದ ಸನ್ನಿಧಾನವಿದು. ಕಲ್ಲಿನ ಗವಿಯೊಳಗೆ ಜೀವಂತ ಸಮಾಧಿಯಾದ ಗುರು ಗವಿಸಿದ್ದೇಶ್ವರ ರ ಮಹಿಮೆ ಅಪಾರವಾದದ್ದು. ಬನ್ನಿ ಇವತ್ತಿನ ಲೇಖನದಲ್ಲಿ ಗವಿಮಠದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಸುಮಾರು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗವಿ ಸಿದ್ದೇಶ್ವರ ಮಠವನ್ನು ಗವಿಮಠ ಎಂದೇ ಕರೆಯಲಾಗುತ್ತದೆ. ಕಲ್ಲು ಬಂಡೆಗಳ ಮೇಲೆ ನಿರ್ಮಿಸಿರುವ ಈ ಮಠವು ಪ್ರಶಾಂತವಾದ ವಾತಾವರಣದಲ್ಲಿ ನಮ್ಮನ್ನು ದೇವರ ಸಾನಿಧ್ಯಕೇ ಕೊಂಡೊಯ್ಯುತ್ತದೆ. ಮೂರು ಅಂತಸ್ತಿನಲ್ಲಿ ನಿರ್ಮಿಸಿರುವ ಈ ಮಠವು ಗವಿ ಸಿದೇಶ್ವರ ರ ಜೀವಂತ ಸಮಾಧಿಯ ಜೊತೆಗೆ ಅನ್ನ ಪೂರ್ಣೆಶ್ವರಿ ದೇವಿ, ಗಣಪತಿ ಹಾಗೂ ಶಾಂತ ವೀರ ಶಿವಯೋಗಿಗಳ ಸಮಾಧಿಯನ್ನು ಸಹ ಹೊಂದಿದೆ.
ಈ ಕ್ಷೇತ್ರದ ಮುಖ್ಯ ಆಕರ್ಷಣೆ ಗವಿ ಸಿದ್ದೇಶ್ವರ ರು ಜೀವಂತ ಸಮಾಧಿ ಆಗಿರುವುದು. ಕಪ್ಪು ವರ್ಣದ ಶಿಲೆಯಲ್ಲಿ ಇರುವ ಗುರುಗಳ ಮೂರ್ತಿಯನ್ನು ದರ್ಶನ ಮಾಡಬೇಕು ಅಂದ್ರೆ ಗುಹೆಯಾಕಾರದ ಕಲ್ಲು ಬಂಡೆಗಳ ನಡುವೆ ನುಸುಳಿಕೊಂಡು ಹೋಗಬೇಕು. ಶಕ್ತಿಪೀಠ ಆದ ಈ ಸ್ಥಳಕ್ಕೆ ಬಂದು ಅಜ್ಜಾಯ್ಯನವರ ಮೂರ್ತಿಯನ್ನು ಭಕ್ತಿಯಿಂದ ಮುಟ್ಟಿ ನಮ್ಮ ಮನಸ್ಸಿನ ಕೋರಿಕೆಗಳನ್ನು ಕೇಳಿಕೊಂಡರೆ ನಮ್ಮೆಲ್ಲ ಮನೋ ಕಾಮನೆಯನ್ನು ಪೂರ್ತಿ ಮಾಡ್ತಾರೆ ಗವಿ ಸಿದ್ದೇಶ್ವರ ರು. ಶಾಲಿವಾಹನ ಶಕೆ 1008 ರಲ್ಲೀ ರುದ್ರಮುನಿ ಶಿವಯೋಗಿಗಳಿಂದ ಸ್ಥಾಪಿತವಾದ ಈ ಮಠವು ಇಂದಿಗೂ ಭಕ್ತರನ್ನು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆಳುವಂತೆ ಮಾಡುತ್ತಿದೆ. ಈ ಪವಾಡ ಪುರುಷರಾದ ಗವಿ ಸಿದ್ದೇಶ್ವರ ರು ಮೂಲತಃ ಮಂಗಳಾಪುರ ದವರಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದರು. ಸಿದ್ದೇಶ್ವರ ರ ಮೂಲ ಹೆಸರು ಗುಡ್ಡದಯ್ಯ ಎಂದಾಗಿದ್ದು, ಇವರು ಯಾವಾಗಲೋ ಮಲೆ ಮಹದೇಶ್ವರ ಬೆಟ್ಟದ ಮೇಲೆ ದನವನ್ನು ಮೆಯಿಸುತ್ತ ಧ್ಯಾನ ಮಾಡುತ್ತಿದ್ದರು ಒಂದು ದಿನ ಮಾಲೆಗೌಡ ಎನ್ನುವವರಿಗೆ ಸೇರಿದ ಹಸುವು ಮರಣವನ್ನು ಹೊಂದಿತ್ತು, ಇದರಿಂದ ಎಲ್ಲರೂ ದುಃಖ ಪಡುತ್ತ ಇದ್ರು, ಇದನ್ನು ನೋಡಿದ ಸಿದ್ದೇಶ್ವರ ರು ತಮ್ಮ ಪವಾಡ ಶಕ್ತಿಯಿಂದ ಹಸುವನ್ನು ಪುನಃ ಬದುಕಿಸಿದರಂತೆ.
ಮುಂದೆ ಇದೇ ಮಾಲಿಗೌಡರು ಸಿದ್ದೇಶ್ವರರನ್ನು ಚೆನ್ನಬಸವ ಸ್ವಾಮೀಜಿ ಬಳಿ ತಂದು ಬಿಟ್ಟರಂತೆ. ಪ್ರತಿ ವರ್ಷ ಪುಷ್ಯ ಮಾಸದಲ್ಲಿ ಗವಿ ಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತವಾಗಿರುವ ಈ ಜಾತ್ರೆ ನಡೆಯುವುದರ ಹಿಂದೆ ಒಂದು ಘಟನೆ ಕೂಡ ಇದೆ. ಚನ್ನಬಸವ ಸ್ವಾಮೀಜಿ ಮಠದ ಎಲ್ಲಾ ಜವಾಬ್ದಾರಿಯನ್ನು ವಹಿಸಿ ತಾವು ಲಿಂಗೈಕ್ಯ ಆಗಬೇಕು ಎಂದು ನಿರ್ಧರಿಸುತ್ತಾರೆ. ಇದನ್ನು ತಿಳಿದ ಸಿದ್ದೇಶ್ವರರು ಗುರುಗಳನ್ನು ಆಗಲಲು ಒಪ್ಪದೆ ತಾವೇ ನಿರ್ಮಾಣವಾದ ಸಮಾಧಿ ಮೇಲೆ ಜಪವನ್ನು ಮಾಡುತ್ತಾ ಜೀವಂತ ಸಮಾಧಿ ಆಗುತ್ತಾರೆ. ಸಿದ್ದೇಶ್ವರಸ್ವಾಮಿ ಕಾಲವಾಗಿ ತಮ್ಮ ಗುರುಗಳಿಂದ ಪೂಜಿಸಲ್ಪಟ್ಟ ದಿನದ ನೆನಪಿಗಾಗಿ ಇಲ್ಲಿ ಪ್ರತಿ ವರ್ಷ 15 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಗುರುಗಳ ಪಾದಕ್ಕೆ ಅರ್ಪಿಸಿ ಆಶೀರ್ವಾದ ಪಡೆಯುತ್ತಾರೆ. ಜಾತ್ರೆಯ ದಿನ ಇಲ್ಲಿಗೆ ಬರುವ ಪ್ರತಿ ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಇರುತ್ತದೆ. ಸುಮಾರು 5 ಲಕ್ಷಕ್ಕೂ ಹೆಚ್ಚಿನ ಜನರು ಸೇರುವ ಇಲ್ಲಿನ ದೃಶ್ಯ ವೈಭೋಗವನ್ನು ನಿಜವಾಗಿಯೂ ಕಣ್ಣು ತುಂಬಿಕೊಂಡವರು ಪುಣ್ಯವಂತರು. ಈ ಮಠವು ಕೊಪ್ಪಳ ಜಿಲ್ಲೆಯಲ್ಲಿದೆ. ಸಾಧ್ಯವಾದರೆ ಈ ಪವಾಡ ಪುರುಷರ ಸನ್ನಿಧಿಗೆ ಹೋಗಿ ಸ್ವಾಮಿಗಳ ಆಶೀರ್ವಾದ ಪಡೆಯಿರಿ. ಶುಭದಿನ.