ನಮಸ್ತೆ ಪ್ರಿಯ ಓದುಗರೇ, ಪ್ರಕೃತಿಯ ಸುಂದರ ಮಡಿಲಲ್ಲಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ ಈ ಸ್ವಾಮಿ. ಋಷಿಮುನಿಗಳ ತಪೋಶಕ್ತಿಯಿಂದ ಪವಿತ್ರವಾದ ಈ ಸ್ಥಳಕ್ಕೆ ಬಂದರೆ, ಮನಸ್ಸಿನ ದುಗುಡ ಎಲ್ಲಾ ದೂರವಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಕಿಗ್ಗಾದ ಋಷ್ಯ ಶೃಂಗ ದೇವಸ್ಥಾನವನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ಕಣ್ಣಿಗೆ ತಂಪನ್ನು ನೀಡೋ ಹಸಿರು ಪರ್ವತಗಳು, ಜುಳು ಜುಳು ಹರಿಯುವ ತುಂಗ ನದಿಯ ನೀರು, ಹಕ್ಕುಗಳ ಇಂಪಾದ ನಾದ ಇಂತಹ ಸುಂದರವಾದ ರಮಣೀಯ ಪ್ರದೇಶದಲ್ಲಿ ಚಿನ್ಮಯ ರೂಪೀಯಾಗಿ ನೆಲೆ ನಿಂತಿದ್ದಾನೆ ರುಷ್ಯ ಶೃಂಗೇಶ್ವರ ಸ್ವಾಮಿ. ಸುಂದರ ಪ್ರಾಂಗಣ, ಎತ್ತರವಾದ ದೀಪ ಸ್ತಂಭ, ಗೋಪುರವನ್ನು ಹೊಂದಿರುವ ಈ ದೇವಸ್ಥಾನಕ್ಕೆ ಬಂದ್ರೆ ಮನಸ್ಸು ಪ್ರಫುಲ್ಲ ಆಗುತ್ತೆ. ಈ ದೇಗುಲಕ್ಕೆ ಬರುವ ಯಾತ್ರಿಗಳು ಮೊದಲು ಇಲ್ಲಿ ನೆಲೆಸಿರುವ ನಂದಿಯನ್ನು ದರ್ಶನ ಮಾಡಬೇಕು ಎನ್ನುವ ಪ್ರತೀತಿ ಇದೆ. ಈ ನಂದಿಗೆ ಬೆಣ್ಣೆ ಸೇವೆ ಮಾಡಿಸುತ್ತೇವೆ ಎಂದು ಹರಕೆ ಹೊತ್ತರೆ ಮಕ್ಕಳು ಹಠ ಮಾಡುವ ಸಮಸ್ಯೆ ದೂರವಾಗುತ್ತದೆ. ಹೀಗಾಗಿ ಸಾಕಷ್ಟು ಮಂದಿ ಈ ನಂದಿಗೆ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಇಲ್ಲಿಗೆ ಬಂದು ದೇವರಿಗೆ ಪೂಜೆ ಸಲ್ಲಿಸಿದರೆ ಸಂತಾನ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಸಾಕ್ಷಾತ್ ಪರಮೇಶ್ವರನು ಪ್ರತ್ಯಕ್ಷನಾಗಿ ರುಶ್ಯ ಶೃಂಗ ಮುನಿಗಳಲ್ಲಿ ಐಕ್ಯವಾದ ಸ್ಥಳದಲ್ಲಿ ಋಷ್ಯಾ ಶೃಂಗ ಮಹರ್ಷಿಗಳ ತಪೋ ಶಕ್ತಿ ಇಂದಿಗೂ ಜಾಗೃತವಾಗಿ ಇದೆ. ಹೀಗಾಗಿ ಪುಣ್ಯ ಕ್ಷೇತ್ರವನ್ನು ಕಣ್ಣು ತುಂಬಿಕೊಳ್ಳಲು ನಿತ್ಯ ನೂರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ರುಷ್ಯಾ ಶೃಂಗ ಮುನಿಗಳ ಜನನದ ಕಥೆಯೇ ಒಂದು ಅದ್ಭುತ ದೃಶ್ಯ ಕಾವ್ಯ. ಶೃಂಗರ ತಂದೆಯಾದ ವಿಭಂಡಕ ಮಹರ್ಷಿಗಳು ಮಹತಪಸ್ವಿ ಆಗಿದ್ದು, ಇವರ ಉಗ್ರವಾದ ತಪಸ್ಸಿನ ಫಲವಾಗಿ ಅವರ ಶಿರದಿಂದ ಬುಗಿಲೆದ್ದ ತಪೋ ಜ್ವಾಲೆ ಇಡೀ ವಿಶ್ವವನ್ನು ವ್ಯಾಪಿಸುತ್ತದೆ. ಆಗ ಇವರ ತಪಸ್ಸನ್ನು ಭಂಗ ಮಾಡಲು ಅಪ್ಸರೆ ಸ್ತ್ರೀಯರು ಧರೆಗಿಳಿದು ಬರುತ್ತಾರೆ.
ತುಂಗಾ ನದಿಯಲ್ಲಿ ನೃತ್ಯ ಮಾಡ್ತಾ ಇದ್ದ ಅಪ್ಸರೆಯಾರನ್ನು ನೋಡಿದ ಕೂಡಲೇ ವಿಭಂಡಕಾ ಮಹರ್ಷಿಗಳ ತಪೋ ಭಂಗ ಆಗುತ್ತೆ. ಆಗ ತಮ್ಮ ದೇಹದಲ್ಲಿ ಉತ್ಪತ್ತಿಯಾದ ರೆತಸ್ಸನ್ನು ಋಷಿಗಳು ತುಂಗಾ ನದಿಯಲ್ಲಿ ಹರಿದು ಬಿಡುತ್ತಾರೆ. ಆ ರೇತಸ್ಸನ್ನು ಒಂದು ಜಿಂಕೆ ಸೇವನೆ ಮಾಡುತ್ತೆ ಇದರಿಂದಾಗಿ ಜಿಂಕೆ ನವ ಮಾಸಗಳನ್ನು ಪೂರೈಸಿ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತದೆ. ಜಿಂಕೆಯ ಗರ್ಭದಲ್ಲಿ ಜನಿಸಿದ ಈ ಮಗುವಿನ ತಲೆಯಲ್ಲಿ ಎರಡು ಕೋಡುಗಳು ಇರುತ್ತೆ. ಋಷಿಗಳ ಮೂಲಕ ಎರಡು ಶೃಂಗಗಳನ್ನು ಹೊತ್ತ ಮಗುವಿಗೆ ರುಶ್ಯಾ ಶೃಂಗ ಎಂದು ನಾಮಕರಣ ಮಾಡಲಾಗುತ್ತೆ. ಇಂತಹ ಮಹಾ ತಪಸ್ವಿಗಳು ನಮ್ಮ ಕರ್ನಾಟಕದ ಈ ಕಿಗ್ಗಾ ಎಂಬ ಕ್ಷೇತ್ರದಲ್ಲಿ ತಪಸ್ಸು ಮಾಡಿದರು ಎನ್ನುವುದೇ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಈ ಪುಣ್ಯ ದೇವಾಲಯವು ಚಿಕ್ಕಮಗಳೂರು ಜಿಲ್ಲೆಯ ಕಿಗ್ಗಾ ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ಈ ಮಳೆ ದೇವನ ಸನ್ನಿಧಿಗೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಿರಿ. ಶುಭದಿನ.