ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಆಂಟಿ ಬಯೋಟಿಕ್ ಪ್ರತಿರೋಧನ ಶಕ್ತಿ ಕುಂಠಿತ ಆಗುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ಈ ಆಂಟಿ ಬಯೋಟಿಕ್ ಪ್ರತಿರೋಧಕ ಶಕ್ತಿ ಎನ್ನುವುದನ್ನು ತಿಳಿದುಕೊಳ್ಳುವ ಮೊದಲು ಆಂಟಿ ಬಯೋಟಿಕ್ ಅಂದ್ರೆ ಏನು ಅಂತ ತಿಳಿದುಕೊಳ್ಳೋಣ. ಇದನ್ನು ನಾವು ಯಾಕೆ ಬಳಸುತ್ತೇವೆ ಎಂದ್ರೆ. ಸಾಮಾನ್ಯವಾಗಿ ಮಕ್ಕಳಲ್ಲಿ ರೋಗವನ್ನು ನಿರ್ಮಾಣ ಮಾಡಲು ಬಳಸುತ್ತೇವೆ. ಈ ಆಂಟಿ ಬಯೋಟಿಕ್ ಅನ್ನು ಯಾವುದೇ ಒಂದು ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆದಲ್ಲಿ ಇದನ್ನು ಬಳಸುತ್ತೇವೆ. ನೀವು ನಿಮ್ಮ ಮಕ್ಕಳಿಗೆ ಜ್ವರ ಬಂದಾಗ ವೈದ್ಯರ ಬಳಿ ಕರೆದೊಯ್ದಾಗ ವೈದ್ಯರು ಈ ಜ್ವರ ಬ್ಯಾಕ್ಟೀರಿಯಾ ಅಥವಾ ವೈರಸ್ ಇಂದಲೋ ಎಂದು ನೋಡುತ್ತಾರೆ. ಹೀಗೆ ಆದಾಗ ಆ ಜ್ವರ ಬ್ಯಾಕ್ಟೀರಿಯಾ ಇಂದ ಬಂದಿದೆ ಎಂದಾಗ ಮಾತ್ರ ವೈದ್ಯರು ಆಂಟಿ ಬ್ಯಾಕ್ಟೀರಿಯಾ ನ್ನ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ವೈರಸ್ ಇಂದ ಜ್ವರ ಬಂದಿದ್ದೆ ಆದ್ರೆ ಇದನ್ನು ಸೂಚಿಸುವುದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಆಂಟಿ ಬಯೋಟಿಕ್ ನ ಬಳಕೆ ಹೆಚ್ಚಾಗುತ್ತಿದೆ. ಇದಕ್ಕೆ ಏನು ಕಾರಣ ಅಂದ್ರೆ ಪ್ರಥಮವಾಗಿ ತುಂಬಾ ಜನ ಪೋಷಕರು ಯಾವುದೋ ಒಂದು ನುರಿತ ಅಲ್ಲದ ವೈದ್ಯರ ಬಳಿ ಮಕ್ಕಳನ್ನು ಕರೆದೊಯ್ದಾಗ ಅವರು ಆಂಟಿ ಬಯೋಟಿಕ್ ಕೊಡುತ್ತಾರೆ.
ಅಲ್ಲದೆ ವೈದ್ಯರು ಆಂಟಿ ಬಯೋಟಿಕ್ ಇಷ್ಟೇ ದಿನ ಮಾತ್ರ ತೆಗೆದುಕೊಳ್ಳಿ ಎಂದಾಗ ಪೋಷಕರು ಅವನ್ನು ಜಾಸ್ತಿ ಮಕ್ಕಳಿಗೆ ಕೊಡುವುದು, ಜ್ವರ ಹೋದ ಮೇಲೆ ಕೂಡ ಮಾತ್ರೆ ಉಳಿದಿತ್ತು ಅಂದ್ರೆ ಅದನ್ನು ಕೊಡುವುದು, ಕೆಲವೊಮ್ಮೆ ಜಾಣ ಪೋಷಕರು ರೋಗವನ್ನು ತಾವೇ ಗುಣ ಪಡಿಸಿಕೊಳ್ಳಲು ವೈದ್ಯರ ಬಳಿ ನಮಗೆ ಆಂಟಿ ಬಯೋಟಿಕ್ ಕೊಡಿ ಇನ್ಫೆಕ್ಷನ್ ಇದೆ ಎಂದು ಹೇಳುತ್ತಾರೆ, ಒಂದು ಬಾರಿ ಜ್ವರ ಬಂದಾಗ ಕೊಟ್ಟ ಮಾತ್ರೆಗಳು ಉಳಿದಾಗ ಮತ್ತೆ ಜ್ವರ ಬಂದಾಗಲೂ ಅವನ್ನೆ ಕೊಡುವುದು, ಪಕ್ಕದ ಮನೆಯಲ್ಲಿ ಯಾರಿಗೂ ಜ್ವರ ಬಂದರೆ ಅವರಿಗೆ ಇವರೇ ಆ ಉಳಿದ ಮಾತ್ರೆಗಳನ್ನು ಕೊಡುವುದು ಆಗುತ್ತದೆ. ಈ ರೀತಿ ಆಂಟಿ ಬಯೋಟಿಕ್ ಮಾತ್ರೆಗಳನ್ನು ಹೆಚ್ಚು ಬಳಕೆ ಮಾಡುವುದು ಮಾಡಬಾರದು. ಇದರಿಂದ ಆಂಟಿ ಬಯೋಟಿಕ್ ನ ಮೀರಿ ಸೂಕ್ಷ್ಮ ಜೀವಿಗಳು ನಮ್ಮ ದೇಹದಲ್ಲಿ ಬೆಳೆಯಲು ಸಾಧ್ಯ ಆಗುತ್ತೆ. ಇದರಿಂದ ನಾವು ಯಾವುದೇ ಆಂಟಿ ಬಯೋಟಿಕ್ ಬಳಕೆ ಮಾಡಿದರೂ ಅದನ್ನು ಮೀರಿ ಬ್ಯಾಕ್ಟೀರಿಯಾ ಗಳು ಬೆಳೆಯಲು ಶುರು ಆಗುತ್ತದೆ. ಹೀಗಾದಾಗ ನೀವು ಎಷ್ಟೇ ಆಂಟಿ ಬಯೋಟಿಕ್ ಮಾತ್ರೆ ತೆಗೆದುಕೊಂಡರೂ ಅದು ಕೆಲಸ ಮಾಡುವುದಿಲ್ಲ. ಹೀಗೆ ಆದಾಗ ನಿಮ್ಮ ಸಮಸ್ಯೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಆಂಟಿ ಬಯೋಟಿಕ್ ಮಾತ್ರೆಗಳನ್ನು ಬಳಕೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು? ಅಂದ್ರೆ ಮೊದಲನೆಯದಾಗಿ ನೀವು ಯಾವುದೇ ಒಂದು ದಿನ ಜ್ವರ, ನೆಗಡಿ, ಕೆಮ್ಮು, ಬೇಧಿ ಆಯಿತು ಎಂದಾಗ ತಕ್ಷಣ ಮೊದಲನೆಯ ದಿನವೇ ನೀವು ಆಂಟಿ ಬಯೋಟಿಕ್ ಮಾತ್ರೆ ತೆಗೆದುಕೊಳ್ಳುವುದನ್ನು ಬಿಡಿ. ನಿಮಗೆ ಏನಾದರೂ ಅರೋಗ್ಯದ ಸಮಸ್ಯೆ ಆದಾಗ ನೀವೇ ಮೆಡಿಕಲ್ ಶಾಪ್ ಗೆ ಹೋಗಿ ಅಂಟಿ ಬಯಾಟಿಕ್ ಮಾತ್ರೆ ತೆಗೆದುಕೊಳ್ಳುವುದನ್ನು ಅವಾಯ್ಡ್ ಮಾಡಿ.
ಎರಡನೆಯದು ಏನು ಅಂದ್ರೆ ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ ಆದಾಗ ಮಕ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗಿ. ಇಲ್ಲ ಮಕ್ಕಳ ತಜ್ಞರು ಇಲ್ಲ ಎಂದಾಗ ಬೇರೆ ವೈದ್ಯರ ಬಳಿ ಆಂಟಿ ಬಯೋಟಿಕ್ ಮಾತ್ರೆಗಳ ಅವಶ್ಯಕತೆ ಇದೆಯೇ ಎಂದು ಕೇಳಿ ಧೃಢ ಪಡಿಸಿಕೊಳ್ಳಿ. ಯಾವಾಗಲೋ ವೈದ್ಯರು ಕೊಟ್ಟ ಆಂಟಿ ಬಯೋಟಿಕ್ ಮಾತ್ರೆಗಳನ್ನು ಹೊಸದಾಗಿ ಬಂದಿರುವ ಇನ್ಫೆಕ್ಷನ್ ಗೆ ಕೊಡುವುದನ್ನು ಬಳಕೆ ಮಾಡುವುದನ್ನು ಬಿಡಿ. ನೀವು ವೈದ್ಯರ ಬಳಿ ಹೋದಾಗ ಆಂಟಿ ಬಯೋಟಿಕ್ ಕೊಡಿ ಎಂದು ಕೇಳಬೇಡಿ. ವೈದ್ಯರ ಬಳಿ ಹೋದಾಗ ನಿಮಗೆ ಆಗಿರುವ ತೊಂದರೆ ವೈರಸ್ ಅಥವಾ ಬ್ಯಾಕ್ಟೀರಿಯಾ ಇಂದ ಆಗಿದ್ದ ಎಂದು ಕೇಳುವ ಹಕ್ಕು ನಿಮಗಿದೆ. ಒಂದುವೇಳೆ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಇದ್ರೆ ಮಾತ್ರ ಮಾತ್ರೆಗಳನ್ನು ಕೊಳ್ಳಿ. ಇದಲ್ಲದೆ ನೀವು ತರುವ ತರಕಾರಿ ಮಾಂಸದಲ್ಲಿ ಸಹ ಆಂಟಿ ಬ್ಯಾಕ್ಟೀರಿಯಾ ವನ್ನಾ ಬಳಕೆ ಇರುತ್ತವೆ ಇದನ್ನು ಸಹ ಮನೆಗೆ ತಂಡ ಬಳಿಕ ಚೆನ್ನಾಗಿ ಉಪ್ಪು ನೀರಿನಲ್ಲಿ ತೊಳೆದು ಬಳಸಿದರೆ ಒಳ್ಳೆಯದು. ಈ ಎಲ್ಲಾ ವಿಷಯಗಳನ್ನೂ ನೀವು ತಿಳಿದುಕೊಂಡರೆ ಆಂಟಿ ಬಯೋಟಿಕ್ ನ ಅಬ್ಯೂಸ್ ನ ತಡೆಗಟ್ಟಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ