ಹಿರಿಯರು ಈ ಆಹಾರವನ್ನು ಸೇವನೆ ಮಾಡಿ ರೋಗವಿಲ್ಲದೇ ನೂರಾರು ಕಾಲ ವರ್ಷ ಬದುಕುತ್ತಿದ್ದರು. ನಿಮ್ಮ ಆರೋಗ್ಯವೂ ಚೆನ್ನಾಗಿರಬೇಕು ಅಂದ್ರೆ ನೀವು ಈ ಆಹಾರವನ್ನು ಸೇವನೆ ಮಾಡಿ.!

ನಮಸ್ತೆ ಪ್ರಿಯ ಓದುಗರೇ, ಹಿಂದಿನ ಕಾಲದಿಂದಲೂ ಕೂಡ ರಾಜ ಮಹಾರಾಜರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ತರಕಾರಿಗಳನ್ನು ಬಳಸುತ್ತಿದ್ದರು. ಅಷ್ಟಕ್ಕೂ ಆ ತರಕಾರಿಗಳು ಯಾವುದು ಅಂದ್ರೆ ಸಿಹಿಗೆಣಸು. ಇದು ಗಟ್ಟಿ ಜಾತಿಯ ತರಕಾರಿಗಳಲ್ಲಿ ನ ಪ್ರಮುಖವಾದದ್ದು, ದಕ್ಷಿಣ ಅಮೇರಿಕ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ಹಾಗೂ ಬಹು ಪ್ರಾಚೀನ ಕಾಲದಿಂದಲೂ ಬೇಸಾಯದಲ್ಲಿ ಇರುವ ಒಂದು ಮುಖ್ಯ ಹಾಗೂ ಸುಪ್ರಸಿದ್ಧ ಆಹಾರ ಸಸ್ಯ ಕುಟುಂಬಕ್ಕೆ ಸೇರಿದೆ. ಈ ಸಿಹಿ ಗೆಣಸು ರುಚಿಕರ ಹಾಗೂ ಪೌಷ್ಟಿಕ ದಾಯಕ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಮೆಗ್ನೀಸಿಯಂ, ಮೊದಲಾದ ಅಂಶಗಳನ್ನು ಒದಗಿಸುತ್ತದೆ. ಅಲ್ಲದೆ ಇದರಲ್ಲಿರುವ ಉತ್ತಮ ಪ್ರಮಾಣದ ನಾರಿನ ಅಂಶ ವಿಟಮಿನ್ ಸಿ ಮತ್ತು ವಿಟಮಿನ್ ಏ ಸಹ ಇದ್ದೂ, ಹಲವು ತೊಂದರೆಗಳಿಗೆ ರಕ್ಷಣೆ ನೀಡುತ್ತದೆ. ಇವತ್ತಿನ ಲೇಖನದಲ್ಲಿ ಸಿಹಿ ಗೆಣಸಿನಿಂದಾ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಎಂದು ತಿಳಿದುಕೊಳ್ಳೋಣ.

 

 

ಮೊದಲನೆಯದಾಗಿ ಈ ಗೆಣಸಿನಲ್ಲಿ ರಾಸಾಯನಿಕ ಸಂಯೋಜನೆ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ. ತೇವಾಂಶ ಶೇಕಡಾ 68.5%, ಕಾರ್ಬೋಹೈಡ್ರೇಟ್ 28.2%, ಕೊಬ್ಬು 0.3%, ಪ್ರೊಟೀನ್ 1.2%, ಲೋಹಾಂಶ 1.0%, ನಾರಿನಂಶ 0.8% , ಅಲ್ಲದೆ ಪ್ರತಿ 100 ಗ್ರಾಂ ಗೆಣಸಿನಲ್ಲಿ 50 ಮಿಲಿ ಗ್ರಾಂ ರಂಜಕ, 30 ಮಿಲಿ ಗ್ರಾಂ ಸೋಡಿಯಮ್, 20 ಮಿಲಿ ಗ್ರಾಂ ಕ್ಯಾಲ್ಸಿಯಂ, 2.8 ಮಿಲಿ ಗ್ರಾಂ ಕಬ್ಬಿಣ, 393 ಮಿಲಿ ಗ್ರಾಂ ಪೊಟ್ಯಾಸಿಯಂ, 24 ಮಿಲಿ ಗ್ರಾಂ ಬಿ ವಿಟಮಿನ್ ಹಾಗೂ ಲಘು ಪ್ರಮಾಣದಲ್ಲಿ ಬಿ ಹಾಗೂ ಏ ವಿಟಮಿನ್ ಗಳು ಕೂಡ ಇವೆ. ನೋಡಿ ಇಷ್ಟೆಲ್ಲಾ ರಾಸಾಯನಿಕ ಸಂಯೋಜನೆ ಈ ಗೆಣಸಿ ನಲ್ಲಿ ಇದೆ ಅಂದ್ರೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನೂ ಹೇಗೆ ವೃದ್ಧಿ ಮಾಡಿಕೊಳ್ಳಬೇಕು. ಹಾಗೆ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದುಕೊಳ್ಳೋಣ ಬನ್ನಿ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದರ ಸೇವನೆಯಿಂದ ಮಲಬದ್ದತೆ ಕೂಡ ನಿವಾರಣೆ ಆಗುತ್ತದೆ. ಶೀತ ಜ್ವರ ಇದ್ದಾಗ ಸೋಂಕು ಹರಡದಂತೆ ತಡೆಗಟ್ಟುತ್ತದೆ. ಇದರಲ್ಲಿರುವ ವಿಟಮಿನ್ ಸಿ ಜೀವಸತ್ವ ಮೂಳೆ ಮತ್ತು ಹಲ್ಲುಗಳ ರಚನೆ ಹಾಗೂ ಜೀರ್ಣಕ್ರಿಯೆ ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಿಹಿ ಗೆಣಸಿನಲ್ಲೀ ನಮ್ಮ ದೇಹಕ್ಕೆ ಅಗತ್ಯವಾದ ಖನಿಜಗಳು ಇವೆ. ನಮ್ಮ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಜೀವಕೋಶದ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.

 

 

ಇದು ಹೃದಯದ ಬಡಿತವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ದೇಹದ ಸ್ನಾಯುಗಳು, ನರ ಕಾರ್ಯಗಳನ್ನು ಸುಲಬಗೊಳಿಸುತ್ತದೆ. ಇದನ್ನು ಸೇವನೆ ಮಾಡುವುದರಿಂದ ಯೌವ್ವನದ ಸ್ಥಿತಿ ಸ್ಥಾಪಕತ್ವ ಗುಣವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಸಕ್ಕರೆ ಖಾಯಿಲೆ ಇದ್ದವರು ವೈದ್ಯರು ಹೇಳಿರುವ ಔಷಧಿ ಮುಖ್ಯ ಆಗದಿದ್ದರೂ ಸಹ ನೈಸರ್ಗಿಕವಾಗಿ ಸಕ್ಕರೆ ಕಾಯಿಲೆಯನ್ನು ಸರಿ ದಾರಿಗೆ ತರುವುದು ಕೂಡ ಅಷ್ಟೇ ಮುಖ್ಯ. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ನೈಸರ್ಗಿಕ ಆಹಾರ ವಸ್ತುಗಳನ್ನು ಪರಿಗಣಿಸುವಾಗಾ ಸಿಹಿ ಗೆಣಸು ಅಲ್ಲಿರುವ ಸಕ್ಕರೆ ಕಾಯಿಲೆ ಸಂಬಂಧ ಪ್ರಯೋಜನೆಗಳ ಕುರಿತು ಹೆಚ್ಚು ಹೆಚ್ಚು ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಬೀಟಾ ಕೆರೋಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸು ಅರೋಗ್ಯದ ದೃಷ್ಟಿಯಿಂದ ಸಕ್ಕರೆ ಕಾಯಿಲೆ ಇರುವವರಿಗೆ ಇದು ಉತ್ತಮ ಆಹಾರ ಎಂದು ಹೇಳಲಾಗುತ್ತದೆ. ಈ ಸಿಹಿ ಗೆಣಸು ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಇದು ಮಧುಮೇಹ ಕಡಿಮೆ ಮಾಡಿ ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿ ಇಡಲು ಸಹಾಯವಾಗುತ್ತದೆ. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಾಯ್ದುಕೊಳ್ಳುತ್ತದೆ. ಮಧುಮೇಹಿಗಳು ಇದನ್ನು ಸೇವನೆ ಮಾಡುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸ್ತನ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಶಕ್ತಿ ಕೊಡುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *