ಪ್ರತಿದಿನ ಈ ಕ್ಷೇತ್ರದಲ್ಲಿ ರಾಮಾನುಜಾಚಾರ್ಯರು ಆದಿಶೇಷನ ರೂಪದಲ್ಲಿ ಸಂಚರಿಸುತ್ತಾರಂತೆ..!

ಪ್ರತಿದಿನ ಈ ಕ್ಷೇತ್ರದಲ್ಲಿ ರಾಮಾನುಜಾಚಾರ್ಯರು ಆದಿಶೇಷನ ರೂಪದಲ್ಲಿ ಸಂಚರಿಸುತ್ತಾರಂತೆ..!

ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಶದಲ್ಲಿ ನಿರ್ಮಿಸಲಾಗಿರುವ ಒಂದೊಂದು ದೇಗುಲಗಳು ಒಂದೊಂದು ಬಗೆಯ ವಿಶೇಷತೆಗಳನ್ನು ಒಳಗೊಂಡಿವೆ. ಅದ್ರಲ್ಲೂ ನಾವು ಇವತ್ತು ಮಾಹಿತಿ ನೀಡಲು ಹೊರಟಿರುವ ದೇಗುಲವು ಧಾರ್ಮಿಕವಾಗಿ ಮಾತ್ರವಲ್ಲದೆ ವಾಸ್ತುಶಿಲ್ಪದ ಅಪರೂಪದ ಕೆತ್ತನೆಗಳಿಂದ ಜನ ಮನವನ್ನು ಸೆಳೆಯುತ್ತದೆ. ಅಲ್ಲದೆ ಸರ್ಪ ದೋಷಗಳಿಗೆ ಈ ಕ್ಷೇತ್ರದಲ್ಲಿ ಪರಿಹಾರ ಸಿಗುತ್ತದೆ. ಬನ್ನಿ ಹಾಗಾದರೆ ಆ ಪುಣ್ಯ ಕ್ಷೇತ್ರ ಯಾವುದು ಅಲ್ಲಿನ ವೈಶಿಷ್ಟ್ಯತೆ ಏನು ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಪಂಚ ನಾರಾಯಣ ಕ್ಷೇತ್ರಗಳಲ್ಲಿ ಮೊದಲನೆಯ ನಾರಾಯಣ ಕ್ಷೇತ್ರವೆಂದು ಖ್ಯಾತವಾದ ತೊಂಡೂರಿನ ನಂಬಿ ನಾರಾಯಣ ದೇಗುಲವನ್ನು ಹೊಯ್ಸಳ ರಾಜ ವಿಷ್ಣುವರ್ಧನ ನಿರ್ಮಿಸಿದ ಎಂಬ ಐತಿಹ್ಯ ಇದ್ದು, ಈ ಕ್ಷೇತ್ರದಲ್ಲಿ ಶ್ರೀ ರಾಮಾನುಜಾಚಾರ್ಯರು ಬರೋಬ್ಬರಿ 12 ವರ್ಷಗಳ ಕಾಲ ತಪಸ್ಸನ್ನು ಆಚರಿಸಿ ಭಗವಂತನ ಕೃಪೆಗೆ ಪಾತ್ರರಾದ ಪುಣ್ಯ ಸ್ಥಳವಾಗಿದ್ದು, ತೊಂಡೂರಿನ ನಂಬಿ ಎಂಬ ರಾಮಾನುಜಾಚಾರ್ಯರ ಭಕ್ತರಿಗೆ ನಾರಾಯಣನು ಅನುಗ್ರಹಿಸಿದ ಕಾರಣ ಇಲ್ಲಿರುವ ನಾರಾಯಣನನ್ನು ನಂಬಿ ನಾರಾಯಣ್ ಎಂದು ಕರೆಯಲಾಗುತ್ತದೆ.

 

 

ಲಕ್ಷ್ಮೀ ನಾರಾಯಣ ಎಂಬ ಹೆಸರಿನಿಂದಲೂ ಕರೆಯುತ್ತಿರುವ ಇಲ್ಲಿರುವ ನಂಬಿ ನಾರಾಯಣ ಸ್ವಾಮಿಯು ಭಕ್ತರ ಪಾಲಿನ ಕಾಮಧೇನು ಆಗಿದ್ದು, ಈ ಕ್ಷೇತ್ರಕ್ಕೆ ಬಂದು ಸ್ವಾಮಿಯನ್ನು ನಂಬಿ ಕಷ್ಟಗಳನ್ನು ಹೇಳಿಕೊಂಡರೆ ಆ ಕಷ್ಟಗಳು ಎಲ್ಲವೂ ದೂರವಾಗುತ್ತದೆ. ಸಂತಾನ ಸಮಸ್ಯೆ, ವಿಧ್ಯಾಭ್ಯಾಸ ಸಮಸ್ಯೆ, ಕೋರ್ಟ್ ಕಚೇರಿ ಸಮಸ್ಯೆ, ಕೌಟುಂಬಿಕ ಸಮಸ್ಯೆ ಹೀಗೆ ಯಾವುದೇ ಸಮಸ್ಯೆ ಇರಲಿ ಇಲ್ಲಿ ನೆಲೆಸಿರುವ ನಾರಾಯಣನನ್ನು ನಂಬಿದ್ರೆ ಆ ಸಮಸ್ಯೆಗಳು ಎಲ್ಲವೂ ಮಂಜಿನಂತೆ ದೂರವಾಗುತ್ತದೆ ಇಲ್ಲಿಗೆ ಭೇಟಿ ನೀಡಿ ಒಳಿತನ್ನು ಕಂಡ ಭಕ್ತ ಜನರ ಮನದ ಮಾತಾಗಿದೆ. ಪುರಾಣಗಳ ಪ್ರಕಾರ ದೇವತೆಗಳ ರಾಜನಾದ ದೇವೇಂದ್ರನು ಬ್ರಹ್ಮ ಹತ್ಯೆ ದೋಷ ನಿವಾರಣೆಗೆ 5 ನಾರಾಯಣನ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿ ಪೂಜಿಸಿದರು ಎಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ನಂಬಿ ನಾರಾಯಣ ವಿಗ್ರಹವಿರುವ ಈ ದೇಗುಲವು ಮೊದಲನೆಯ ನಾರಾಯಣ ಕ್ಷೇತ್ರವೆಂದು ಪರಿಗಣಿಸಿದ್ದು. ಕಲಿಯುಗದಲ್ಲಿ ಶ್ರೀ ರಾಮಾನುಜಾಚಾರ್ಯರು ತೊಂಡುರಿನ ನಂಬಿ ನಾರಾಯಣ ಮೇಲುಕೋಟೆಯ ಚೆಲುವ ನಾರಾಯಣ, ಗದುಗಿನ ವೀರನಾರಯಣ, ವಲೋರಿನ ವಿಜಯ ನಾರಾಯಣ ಅಥವಾ ಚನ್ನಕೇಶವ, ತಲಕಾಡಿನ ನಾರಾಯಣ ಎಂಬ 5 ನಾರಾಯಣನ ಕ್ಷೇತ್ರ ಇರುವ ನಾರಾಯಣನ ವಿಗ್ರಹವನ್ನು ಲೋಕ ಕಲ್ಯಾಣಕ್ಕಾಗಿ ಪುನರ್ ಪ್ರತಿಷ್ಠಾಪನೆ ಮಾಡಿದ್ರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿಸಲಾಗಿದೆ.

 

 

ಅತ್ಯದ್ಭುತ ಕಲಾ ಕೆತ್ತನೆಗಳನ್ನು ಒಳಗೊಂಡಿರುವ ಈ ದೇಗುಲವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಆಲಯವು ಸುಖಾಸೀನ, ಮುಖ ಮಂಟಪ, ಪಾಥಲಂಕಣ, ಪ್ರದಕ್ಷಿಣಾ ಪಥ, ಅರ್ಧ ಮಂಟಪ, ಗರ್ಭ ಗೃಹ ಮತ್ತು 50 ಕಂಬಗಳಿಂದ ಕೂಡಿದ ಮಹರಂಗ ಮಂಟಪವನ್ನು ಒಳಗೊಂಡಿದೆ. ಇಲ್ಲಿ 45 ಎತ್ತರದ ಗರುಡ ಗಂಬ ಇದ್ದು ಇದು ತುಂಬಾ ವಿಶೇಷವಾಗಿ ಇದೆ. ಇಲ್ಲಿರುವ ರಾಮಾನುಜಾಚಾರ್ಯರ ಮೂರ್ತಿ ನಿತ್ಯ ಬೇವರುತ್ತೆ ಎಂದು ಹೇಳಲಾಗುತ್ತದೆ. ತಮಿಳುನಾಡಿಗೆ ಹೊರಟು ನಿಂತ ರಾಮಾನುಜಾಚಾರ್ಯರ ಬಳಿ ಅವರ ಅನುಯಾಯಿಗಳು ನಿಮ್ಮನ್ನ ನಾವು ಹೇಗೆ ದರ್ಶನ ಮಾಡಬೇಕು ಎಂದು ಕೇಳಿದಾಗ, ರಾಮಾನುಜರು ನೀವೇನೋ ಚಿಂತೆ ಮಾಡಬೇಡಿ, ನಾನು ಈ ಸ್ಥಳದಲ್ಲಿ ಜೀವಂತವಾಗಿ ವಿಗ್ರಹ ರೂಪದಲ್ಲಿ ವಾಸವಿರುತ್ತೇನೆ ಎಂದು ಅಭಯವನ್ನು ನೀಡಿದ್ರು. ಸರ್ಪ ದೋಷದಿಂದ ಬಳಲುವವರು ಇಲ್ಲಿಗೆ ಬಂದು ರಾಮಾನುಜರ ಮೂರ್ತಿಗೆ ಅಭಿಷೇಕ ಸೇವೆ ಮಾಡುವುದಾಗಿ ಹರಕೆ ಹೊತ್ತರೆ ಅವರ ಎಲ್ಲಾ ಬಗೆಯ ಸರ್ಪ ದೋಷ ನಿವಾರಣೆ ಆಗುತ್ತದೆ. ಪ್ರತಿದಿನ ಸಂಜೆ 5.30 ರ ನಂತರ ರಾಮಾನುಜರು ಆದಿಶೇಷನ ರೂಪದಲ್ಲಿ ಸಂಚಾರ ಮಾಡುತ್ತಾರೆ ಎಂಬ ಪ್ರತೀತಿ ಇದೆ. ಈ ಪುಣ್ಯ ದೇಗುಲವು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತೊಂಡನೂರು ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಿ. ಶುಭದಿನ.

ಭಕ್ತಿ