ತನ್ನ ಬಳಿಯಿಂದ ಹಾದು ಹೋಗುವ ವಾಹನಗಳಿಗೆ ಶ್ರೀರಕ್ಷೆಯನ್ನು ನೀಡುತ್ತಾಳೆ ದೇವಿಮನೆ ಘಾಟ್ ನ ಈ ದೇವಿ..!!

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಒಂದೂರಿನಿಂದ ಇನ್ನೊಂದು ಊರಿಗೆ ಮುಟ್ಟಿಸುವ ದಾರಿಗಳು ಆಯಾ ಪ್ರದೇಶದ ಜೀವ ನಾಡಿಗಳು ಆಗಿರುತ್ತವೆ. ಪ್ರತಿಯೊಂದು ಊರಿನ ರಸ್ತೆಯು ಒಂದೊಂದು ಕಥೆಯನ್ನು ಹೊಂದಿರುತ್ತದೆ. ಆದ್ರೆ ನಾವು ಇವತ್ತು ನಿಮಗೆ ಮಾಹಿತಿಯನ್ನು ನೀಡೋಕೆ ಹೊರಟಿರುವ ರಸ್ತೆ ಕಥೆ ತುಂಬಾನೇ ಭಿನ್ನವಾಗಿದೆ. ಅದ್ರಲ್ಲೂ ಈ ಮಾರ್ಗದಲ್ಲಿ ಯಾವುದೇ ವಾಹನಗಳು ಸಂಚರಿಸಬೇಕು ಅಂದ್ರೆ ಈ ದೇವಿಯ ಅನುಗ್ರಹ ಪಡೆಯದೇ ಮುಂದಕ್ಕೆ ಹೋಗುವುದಿಲ್ಲ ವಂತೆ. ಹಾಗಾದ್ರೆ ಆ ರಸ್ತೆ ಯಾವುದು? ವಾಹನ ಸವಾರರನ್ನು ರಕ್ಷಿಸುತ್ತಿರುವ ಮಂದಿರ ಆದ್ರೂ ಯಾವುದು? ಬನ್ನಿ ಇದೆಲ್ಲದರ ಕುರಿತು ಇಂದಿನ ಲೇಖನದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳೋಣ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ಹಸಿರಿನ ವನಸಿರಿ, ಸ್ವಚ್ಛಂದವಾದ ಗಾಳಿ, ಅಂಕುಡೊಂಕಾದ ದಾರಿ, ಸಾಗುವ ದಾರಿಯುದ್ದಕ್ಕೂ ಕಾಣಿಸುವ ಅಪಾರ ಪ್ರಮಾಣದ ಮರಗಳ ಸಾಲುಗಳನ್ನು ತನ್ನ ಒಡಲೊಳಗೆ ಹುದುಗಿಸಿ ಇಟ್ಟುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ ಎಂದೇ ಕರೆಯುವ ದೆವಿಮನೆ ಘಾಟ್ ಅಥವಾ ದೇವೀಮನೆ ಘಟ್ಟವು ಪ್ರಾಕೃತಿಕ ಸೌಂದರ್ಯ ದಿಂದ ಹಾಗೂ ದೇವಿಯ ಮಹಿಮೆಯಿಂದ ಜಾಗೃತವಾದ.

 

 

ಒಂದು ಪುಣ್ಯ ಸ್ಥಳವಾಗಿದ್ದು, ಶಿರಸಿ ಹಾಗೂ ಕುಮಟವನ್ನು ಸಂಪರ್ಕಿಸುವ ಈ ರಸ್ತೆಯನ್ನು ದೇವಿಮನೇ ಘಟ್ಟ ಎಂದು ಹೇಳಲಾಗುತ್ತದೆ. ದಾರಿಯ ಒಂದು ಭಾಗದಲ್ಲಿ ದೇವಿಮನೆಯನ್ನು ರಕ್ಷಿಸುತ್ತ ಇರುವ ಶ್ರೀ ಕ್ಷೇತ್ರ ಪಾಲೇಶ್ವರ ದೇವರ ಸನ್ನಿಧಿ ಇದ್ದು, ಪುಟ್ಟದಾಗಿದ್ದು, ಈ ಕ್ಷೇತ್ರದ ಮಹಿಮೆ ಅಪಾರವಾದದ್ದು. ಇಲ್ಲಿನ ಗರ್ಭ ಗುಡಿಯಲ್ಲಿ ಜಟಕೇಶ್ವರ ಶ್ರೀ ಮಹಾ ಸತಿ ಅಮ್ಮನವರು ಶ್ರೀ ಯಕ್ಷಿ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಈ ಮೂರು ದೇವರು ದೆವಿಮನೆಯನ್ನು ಕಾಯುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ದೆವಿಮನೇ ಸುತ್ತಮುತ್ತಲಿನ ಅರಣ್ಯವನ್ನು ಕೂಡ ಇಲ್ಲಿನ ಕ್ಷೇತ್ರ ಪಾಲಕರು ಕಾಯುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ಇನ್ನೂ ದೇವೀಮನೇ ಘಟ್ಟದ ಮಾರ್ಗ ಮೂಲಕವಾಗಿ ಸಂಚರಿಸುವ ವಾಹನ ಸವಾರರು ಈ ಕ್ಷೇತ್ರ ಪಾಲಕರಿಗೆ ನಮಸ್ಕರಿಸಿ ಅಪಘಾತ ಆಗದಂತೆ ಹಾಗೂ ವಾಹನಕ್ಕೆ ಯಾವುದೇ ತೊಂದರೆ ಉಂಟಾಗದೇ ಇರುವಂತೆ ಕಾಪಾಡು ಎಂದು ದೇವರಲ್ಲಿ ಕೈ ಮುಗಿದು ದೇವರಿಗೆ ಹಣವನ್ನು ಇಟ್ಟು ಮುಂದೆ ಸಾಗುತ್ತಾರೆ. ಹೀಗೆ ಈ ದೇವರ ಬಳಿ ಬಂದು ಯಾರು ಭಕ್ತಿಯಿಂದ ಬೇಡಿಕೊಂಡು ಹೋಗುತ್ತಾರೋ ಅವರ ವಾಹನಕ್ಕೆ ಯಾವುದೇ ಅಪಘಾತ ಆಗುವುದಿಲ್ಲ ಎಂಬ ನಂಬಿಕೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಲ್ಲಿದ್ದು, ಬಸ್ ಲಾರಿ ಮೋಟಾರ್ ಬೈಕ್ ರಿಕ್ಷಾ ಕಾರ್ ಹೀಗೆ ಎಲ್ಲ ಬಗೆಯ ವಾಹನಗಳು ಈ ಕ್ಷೇತ್ರ ಪಾಲಕರಿಗೆ ನಮಿಸಿ ವಾಹನವನ್ನು ಮುಂದೆ ಚಲಾಯಿಸುತ್ತಾರೆ.

 

 

ಅಲ್ಲದೆ ಸಾಕಷ್ಟು ಜನರು ಹೂವು ಹಣ್ಣು ಕಾಯಿ ಕೊಟ್ಟು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಂಪು ಕಲ್ಲನ್ನು ಲಾರಿಯಲ್ಲಿ ಹೇರಿಕೊಂಡು ಬರುವ ಡ್ರೈವರ್ ಗಳು ದೇವರಿಗೆ ಒಂದು ಎರೆಡು ಕೆಂಪು ಕಲ್ಲನ್ನು ಕೊಟ್ಟು ಹೋಗುವ ಪದ್ಧತಿ ಕೂಡ ಇಲ್ಲಿ ತಲತಲಾತರದಿಂದ ಇದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ದೇಗುಲದ ಹೊರ ಭಾಗದಲ್ಲಿ ವ್ಯೂ ಪಾಯಿಂಟ್ ಇದ್ದು, ಅಲ್ಲಿ ನಿಂತು ನೋಡಿದ್ರೆ ಹಚ್ಚ ಹಸುರಿನ ದೃಶ್ಯ ವೈಭವ ಕಣ್ಣನ್ನು ತಂಪು ಮಾಡುತ್ತೆ. ಸರ್ವ ಋತುವಿನಲ್ಲಿ ಹಚ್ಚ ಹಸುರಿನ ನಿಂದಾ ಕಂಗೊಳಿಸುವ ದೇವಿಮನೇ ಘಟ್ಟದಲ್ಲಿ ಚಳಿಗಾಲದಲ್ಲಿ ಇಬ್ಬನಿಯ ಹನಿಗಳು ಇಳೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ನಾನಾ ಭಾಗಗಳಿಂದ ಪ್ರವಾಸಿಗಳು ಆಗಮಿಸುತ್ತಾರೆ. ನಿತ್ಯವೂ ನೂರಾರು ಮಂದಿ ಭೇಟಿ ನೀಡುವ ದೇವಿ ಮನೆಯ ಮಂದಿರವನ್ನು ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ದೇವಿಮನೆ ಘಟ್ಟವೂ ಶಿರಸಿಯಿಂದ 36 ಕಿಮೀ, ಕುಮಟಾ ಇಂದ 27 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಈ ಕಡೆ ಹೋದಾಗ ತಪ್ಪದೇ ಈ ಕ್ಷೇತ್ರ ಪಾಲಕರ ಹಾಗೂ ದೇವಿಯ ದರ್ಶನ ಪಡೆಯಿರಿ. ಶುಭದಿನ.

Leave a comment

Your email address will not be published. Required fields are marked *