ತನ್ನನ್ನು ನಂಬಿ ಬಂದ ಭಕ್ತರಿಗೆ ಕನಸಿನಲ್ಲಿ ಬಂದು ಜಾಗೃತಿ ಮೂಡಿಸುತ್ತಾಳೆ ಅರಕೆರೆಯ ಕರಿಯಮ್ಮ ದೇವಿ..!

ತನ್ನನ್ನು ನಂಬಿ ಬಂದ ಭಕ್ತರಿಗೆ ಕನಸಿನಲ್ಲಿ ಬಂದು ಜಾಗೃತಿ ಮೂಡಿಸುತ್ತಾಳೆ ಅರಕೆರೆಯ ಕರಿಯಮ್ಮ ದೇವಿ..!

ನಮಸ್ತೆ ಪ್ರಿಯ ಓದುಗರೇ, ಆದಿಶಕ್ತಿ ಜಗನ್ಮಾತೆ ದುಷ್ಟರನ್ನು ಸಂಹರಿಸಲು ಎತ್ತಿದ ಅವತಾರಗಳಿಗೆ ಲೆಕ್ಕವೇ ಇಲ್ಲ. ಅಲ್ಲದೆ ಆ ತಾಯಿ ಅನೇಕ ಊರುಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ನೆಲೆ ನಿಂತು ಇಂದಿಗೂ ಭಕ್ತರನ್ನು ಪೋರೆಯುತ್ತಿದ್ದಾಳೆ. ಅದ್ರಲ್ಲೂ ಈ ಕ್ಷೇತ್ರದಲ್ಲಿ ನೆಲೆ ನಿಂತಿರುವ ದೇವಿಯು ಭಕ್ತ ಜನರ ಸಕಲ ಸಂಕಷ್ಟಗಳಿಗೆ ಕಿವಿಯಾಗಿ ಸಂಕಷ್ಟಗಳನ್ನು ಪರಿಹರಿಸುವ ದಿವ್ಯ ಮೂರ್ತಿಯಾಗಿ ತನ್ನ ಬಳಿ ಬರುವ ನಿಷ್ಕಲ್ಮಶ ಮನಸ್ಸು ಇರುವ ಮಗುವಿನಂತಹ ಹೃದಯವನ್ನು ಹೊಂದಿರುವ ಭಕ್ತ ಜನರನ್ನು ಉದ್ಧರಿಸುತ್ತಿದ್ದಾಳೇ. ಬನ್ನಿ ಇವತ್ತಿನ ಲೇಖನದಲ್ಲಿ ಮಕ್ಕಳ ತಾಯಿ ಎಂದೇ ಕರೆಯುವ ಅರಕೆರೆ ಶ್ರೀ ಕರಿಯಮ್ಮ ದೇವಿಯ ದರ್ಶನ ಮಾಡಿ ಇಂದಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಅರಕೆರೆಯ ಊರಿನ ಹೊರ ಭಾಗದ ಕೆರೆಯ ದಡದ ಮೇಲೆ ಶಕ್ತಿ ಸ್ವರೂಪಿಣಿ ಆದ ಜಗನ್ಮಾತೆ ಕರಿಯಮ್ಮ ದೇವಿ ಆಗಿ ನೆಲೆ ನಿಂತು ಸುತ್ತಲಿನ ಏಳು ಹಳ್ಳಿಗಳಿಗೆ ಈ ದೇವಿ ಗ್ರಾಮ ದೇವತೆ ಆಗಿದ್ದಾಳೆ. ದಕ್ಷಿಣಾಭಿಮುಖವಾಗಿ ಇರುವ ತಾಯಿಯ ಆಲಯವು ಪ್ರವೇಷ್ವ ದ್ವಾರ, ಪ್ರದಕ್ಷಿಣಾ ಪಥ, ಪಡಸಾಲೆ, ಗರ್ಭ ಗೃಹವನ್ನು ಒಳಗೊಂಡಿದೆ.

 

 

ಹಲವು ದಶಕಗಳ ಹಿಂದೆ ಮಣ್ಣಿನ ಆಲಯವಾಗಿದ್ದ ಈ ಪುಣ್ಯ ಕ್ಷೇತ್ರವನ್ನು ಕಳೆದ 40 ವರ್ಷಗಳ ಈಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಗರ್ಭ ಗುಡಿಯ ಒಳಗಡೆ ಕಪ್ಪು ವರ್ಣದ ಅಮೃತ ಶಿಲೆಯಲ್ಲಿ ಕೆತ್ತಿರುವ 3 ಅಡಿ ಎತ್ತರದ ಅಮ್ಮನವರ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಚತುರ್ಭುಜ ಆದ ದೇವಿ ಕೈಯಲ್ಲಿ ತ್ರಿಶೂಲ ಡಮರು ಕತ್ತಿ ಹಾಗೂ ಅಕ್ಷಯ ಪಾತ್ರೆ ಹಿಡಿದು ಬಲಗಾಲನ್ನು ಇಳಿ ಬಿಟ್ಟು ಎಡಗಾಲನ್ನು ಮಡಚಿ ಆನೆ ಮೇಲೆ ಕುಳಿತ ಕರಿಯಮ್ಮ ದೇವಿಯು ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ತ್ರಿಶೂಲ ಮತ್ತು ಢಮರುಗ ಹಿಡಿದಿರುವ ಈಕೆಯನ್ನು ಶಿವಶಕ್ತಿ ಸ್ವರೂಪಿಣಿ ಎಂದೇ ಕತ್ತಿ ಹಿಡಿದಿರುವುದರಿಂದ ದುರ್ಗಾ ದೇವಿ ಎಂದೇ ಅಕ್ಷಯ ಪಾತ್ರೆ ಹಿಡಿದಿರುವುದರಿಂದ ಅನ್ನಪೂರ್ಣೆ ಎಂದು ಮೊಗದಲ್ಲಿ ಮಂದಹಾಸ ಹೊತ್ತಿರುವುದರಿಂದ ಶಾರದಾಂಬೆ ಎಂದು ಆನೆಯ ಮೇಲೆ ಕುಳಿತಿರುವುದರಿಂದ ಗಜಲಕ್ಷ್ಮಿ ಸ್ವರೂಪ ಎಂದು ತಾಯಿಯನ್ನು ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ತಾಯಿಯು ಆನೆ ಮೇಲೆ ಕುಳಿತಿರುವುದರಿಂದ ಅಮ್ಮನವರನ್ನು ಗಜ ಕರಿಯಮ್ಮ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಕರಿಯಮ್ಮ ನ ಜೊತೆ ಚಿಕ್ಕಮ್ಮ ದೊಡ್ಡಮ್ಮ ಅಮ್ಮನ ಮಕ್ಕಳಾದ ಬ್ಯಾತಾಳ ದೇವರು ನೆಲೆ ನಿಂತಿದ್ದಾರೆ. ಇವರು ತಾಯಿಯು ನೀಡಿದ ಅಪ್ಪಣೆಗಳನ್ನು ಶಿರಸಾ ವಹಿಸಿ ಪಾಲಿಸುತ್ತಾರೆ ಎಂದು ಹೇಳಲಾಗುತ್ತದೆ. ದೇವಿಯ ಈ ಸನ್ನಿಧಾನದಲ್ಲಿ ಪರಿಹಾರ ಆಗದ ಸಮಸ್ಯೆಗಳು ಇಲ್ಲ, ಮಾಟ ಮಂತ್ರದ ಸಮಸ್ಯೆ, ಕೌಟುಂಬಿಕ ಕಲಹ, ವಿದ್ಯೆ, ಆರೋಗ್ಯ, ವ್ಯಾಪಾರದ ಸಮಸ್ಯೆ, ದುಷ್ಟ ಶಕ್ತಿ ಕಾಟ, ಆರ್ಥಿಕ ಸಮಸ್ಯೆ, ವಿವಾಹ ವಿಳಂಬ ಸಮಸ್ಯೆ, ಸಂತಾನ ಸಮಸ್ಯೆ ಹೀಗೆ ಎಲ್ಲಾ ಬಗೆಯ ಸಮಸ್ಯೆಗಳು ಈ ತಾಯಿಯ ಬಳಿ ಪರಿಹಾರವಿದೆ.

 

 

ಈ ದೇಗುಲಕ್ಕೆ ಬಂದು ಇಲ್ಲಿ ನೀಡುವ ತೆಂಗಿನಕಾಯಿ ಅಥವಾ ನಿಂಬೆ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋದ್ರೆ ಸಾಕು ಮಾಟ ಮಂತ್ರ ಹಾಗೂ ದುಷ್ಟ ಶಕ್ತಿ ಸಮಸ್ಯೆ ದೂರವಾಗುತ್ತದೆ. ಹೂವಿನ ಪ್ರಸಾದ ಕೇಳುವ ಭಕ್ತರಿಗೆ ತನ್ನ ಎಡ ಬಲದಿಂದ ಹೂವನ್ನು ಬೀಳಿಸುವ ಮೂಲಕ ಅಂದುಕೊಂಡ ಕಾರ್ಯಗಳು ಸಿದ್ಧಿ ಆಗುತ್ತೋ ಇಲ್ಲವೋ ಎಂದು ಈ ದೇವಿ ಉತ್ತರವನ್ನು ನೀಡುತ್ತಾಳೆ. ಇನ್ನೂ ತಾಯಿಯ ಬಳಿ ಪ್ರಶ್ನೆಗಳನ್ನು ಕೇಳಿದ್ರೆ ಆ ಕೆಲ್ಸ ಆಗುತ್ತೆ ಅನ್ನುವುದಾದರೆ ಮುಟ್ಟಿ ಖಾತರಿ ಪಡಿಸುವುದರ ಮೂಲಕ, ಗೋಡೆಯ ಮೇಲೆ ಬರೆದು ತಿಳಿಸುವುದರ ಮೂಲಕ ಉತ್ತರವನ್ನು ನೀಡುತ್ತಾಳೆ. ಎಷ್ಟೋ ಜನ ಭಕ್ತರಿಗೆ ಅಮ್ಮನವರು ಕನಸಿನಲ್ಲಿ ಬಂದು ಮುಂದೆ ಆಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುವ ಮೂಲಕ ಅವರನ್ನು ಸಂಕಷ್ಟಗಳಿಂದ ಪಾರು ಮಾಡಿದ್ದಾಳೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಭಕ್ತರು ಜಮೀನಿನಲ್ಲಿ ಕೊಳವೆ ಬಾವಿ ತೊಡಿಸಲು ಈ ದೇವಿ ನೀರಿನ ಜಾಗವನ್ನು ತೋರಿಸುತ್ತಾಳೆ. ಹೆಣ್ಣು ಮಕ್ಕಳು ಇಲ್ಲಿಗೆ ಬಂದು ಯಾರ ಬಳಿಯೂ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ತಾಯಿ ಬಳಿ ಹೇಳಿಕೊಂಡರೆ ಅಮ್ಮನವರು ಆ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಾಳೆ. ಇಂಥ ಪುಣ್ಯ ದೇಗುಲವು ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಗೆ ಸೇರಿದ್ದು ಈ ಕ್ಷೇತ್ರವು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಸಮೀಪದ ಅರಕೆರೆ ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ಈ ಶಕ್ತಿ ದೇವತೆಯನ್ನು ನೀವು ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಅವಳ ಅನುಗ್ರಹ ಪಡೆಯಿರಿ. ಶುಭದಿನ.

ಭಕ್ತಿ