ಮೊಟ್ಟೆ ಬೇಯಿಸಿ ತುಂಬಾ ಹೊತ್ತು ಇಡ್ತಿರಾ??? ಮೊಟ್ಟೆ ತಿನ್ನುವಾಗ ಈ ತಪ್ಪು ಎಂದಿಗೂ ಮಾಡಬೇಡಿ.

ಮೊಟ್ಟೆ ಬೇಯಿಸಿ ತುಂಬಾ ಹೊತ್ತು ಇಡ್ತಿರಾ??? ಮೊಟ್ಟೆ ತಿನ್ನುವಾಗ ಈ ತಪ್ಪು ಎಂದಿಗೂ ಮಾಡಬೇಡಿ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮೊಟ್ಟೆಯ ಬಗ್ಗೆ ಒಂದು ಹೊಸ ವಿಷಯವನ್ನು ತಿಳಿದುಕೊಳ್ಳೋಣ. ಅದು ಏನು ಎಂದು ತಿಳಿಯಲು ಹಾಗೂ ನೀವು ಮೊಟ್ಟೆ ತಿನ್ನುವವರಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಲೇಬೇಕು. ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಆರೋಗ್ಯವಾಗಿ ಇರಬೇಕು ಅಂದ್ರೆ ದಿನಕ್ಕೆ ಒಂದು ಮೊಟ್ಟೆ ತಿನ್ನಿ ಎಂದು ವೈದ್ಯರೇ ಹೇಳುತ್ತಾರೆ. ಆದ್ರೆ ನಿಮಗೊಂದು ವಿಷಯ ಗೊತ್ತಾ? ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಹೊತ್ತಿನ ಒಳಗೆ ತಿನ್ನಬೇಕು? ತುಂಬಾ ಹೊತ್ತು ಹಾಗೆ ಬಿಟ್ರೆ ಏನಾಗುತ್ತೆ? ಅರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ನೀವು ಮೊಟ್ಟೆಯನ್ನು ಬೇಯಿಸಿ ತಕ್ಷಣ ತಿನ್ನಲ್ಲ, ಒಂದುವೇಳೆ ತಕ್ಷಣ ಮೊಟ್ಟೆ ತಿನ್ನದೇ ಇದ್ರೆ ಅದರ ಸಿಪ್ಪೆಯನ್ನು ತೆಗೆಯಬೇಡಿ. ನೀವು ಮೊಟ್ಟೆ ತಿನ್ನುವಾಗ ಮಾತ್ರ ಸಿಪ್ಪೆ ತೆಗೆದು ತಿನ್ನಿ. ಮೊಟ್ಟೆ ಬೇಯಿಸಿದ ಮೇಲೆ ಅದನ್ನು ಹೆಚ್ಚು ಹೊತ್ತು ಇಡಬಾರದು. ತಕ್ಷಣ ಅದನ್ನು ತಿನ್ನಬೇಕು. ಯಾಕಂದ್ರೆ ಮೊಟ್ಟೆಗೆ ಬೇಗ ಬ್ಯಾಕ್ಟೀರಿಯಾ ಅಟ್ಟ್ಯಾಕ್ ಮಾಡುತ್ತೆ. ಜೊತೆಗೆ ಇದರಿಂದ ಮೊಟ್ಟೆ ಬೇಗ ಹಾಳಾಗುತ್ತೆ.

 

 

ಹಾಗೆಯೇ ಬೇಯಿಸಿದ ಮೊಟ್ಟೆಯನ್ನು ಯಾವುದೇ ಕಾರಣಕ್ಕೂ ಫ್ರಿಡ್ಜ್ ಅಲ್ಲಿಡಬೇಡಿ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇನ್ನೂ ಡೈಲಿ ಮೊಟ್ಟೆ ತಿಂದರೂ ನಿಮಗೆ ಏನು ತೊಂದರೆ ಆಗಲ್ಲ. ಯಾಕೆ ಅಂದ್ರೆ ಮೊಟ್ಟೆಯಲ್ಲಿ ತುಂಬಾ ಪೋಷಕಾಂಶಗಳು ಇರುತ್ತೆ. ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಇಂದ ಮೊಟ್ಟೆ ಸಮೃದ್ಧವಾಗಿ ಇರುತ್ತೆ ಹೀಗಾಗಿ ಪ್ರತಿನಿತ್ಯ ಮೊಟ್ಟೆ ಸೇವಿಸಿದರೆ ನಿಮಗೆ ಆರೋಗ್ಯದ ಮೇಲೆ ತುಂಬಾ ಪ್ರಯೋಜನ ಆಗುತ್ತೆ. ಹೆಚ್ಚಿನವರು ಮೊಟ್ಟೆಯನ್ನು ಬೇಯಿಸಿ ತಿಂತಾರೆ ಅಂದ್ರೆ ಬಾಯಿಲ್ಡ್ ಎಗ್ ನ ತಿಂತಾರೆ. ನೀವು ಬಯಿಲ್ಡ್ ಎಗ್ ತಿಂದ್ರೇನೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಯಿಲ್ದ ಎಗ್ ತಿಂದ್ರೆ ಮಾತ್ರ ನಿಮಗೆ ಪೋಷಕಾಂಶಗಳು ಹೆಚ್ಚಿನದಾಗಿ ನಿಮ್ಮ ಆರೋಗ್ಯಕ್ಕೆ ಸಿಗುತ್ತೆ. ಕೆಲವರು ಆಮ್ಲೆಟ್, ಎಗ್ ಬುರ್ಜಿ ಮಾಡಿ ತಿಂತಾರೆ ಇದು ಒಳ್ಳೆಯದಲ್ಲ. ಒಳ್ಳೆಯದಲ್ಲ ಎನ್ನುವುದಕ್ಕಿಂತ ಇದರಲ್ಲಿ ಪೋಷಕಾಂಶಗಳು ಹೆಚ್ಚಿನದಾಗಿ ದೊರೆಯುವುದಿಲ್ಲ. ಹೀಗಾಗಿ ವೈದ್ಯರು ಕೂಡ ಬಾಯಿಲ್ ಎಗ್ ನೇ ತಿನ್ನಿ ಅಂತ ಸಲಹೆ ಕೊಡುತ್ತಾರೆ. ನಿಮಗೆ ಇಷ್ಟ ಆದ್ರೆ ದಿನಕ್ಕೆ ಒಂದು ಮೊಟ್ಟೆ ತಿನ್ನಿ, ಮೊಟ್ಟೆಯಲ್ಲಿ ಸಾಕಷ್ಟು ಪ್ರೊಟೀನ್ ಇದೆ.

 

 

 

ಮೊಟ್ಟೆಯಲ್ಲಿ ಸೆಲೆನಿಯಮ್ ಎಂಬ ಅಂಶ ಇರುತ್ತೆ. ಇದು ದೇಹದ ರೋಗ ನಿರೋಧಕ ಶಕ್ತಿ ಅಂದ್ರೆ ನಿಮ್ಮ ದೇಹದ ಇಮ್ಮ್ಯು ನೈಟಿ ಪವರ್ ನ ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತೆ. ಇನ್ನೂ ಮೊಟ್ಟೆಯಲ್ಲಿ ಕೊಲಿನ್ ಎಂಬ ಪೋಷಕಾಂಶ ಇರುತ್ತೆ ಇದು ನಿಮ್ಮ ಮೆದುಳನ್ನು ಸದೃಢವಾಗಿ ಇಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ನಿಮ್ಮ ಮೆದುಳು ತುಂಬಾ ತೀಕ್ಷ್ಣವಾಗಿ ಆಕ್ಟೀವ್ ಇರುತ್ತೆ. ಇನ್ನೂ ಮೊಟ್ಟೆಯಲ್ಲಿ ಒಮೆಗಾ 3, ವಿಟಮಿನ್ ಗಳು ಹಾಗೂ ಫ್ಯಾಟಿ ಆಸಿಡ್ ಗಳು ನಿಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾ ಮುಖ್ಯವಾಗಿದೆ. ಇನ್ನೂ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಮೊಟ್ಟೆ ಸುಲಭ ಪರಿಹಾರ. ಮೊಟ್ಟೆಯ ಹಳದಿ ಭಾಗವನ್ನು ತಿನ್ನಬೇಡಿ. ಹಳದಿ ಭಾಗವನ್ನು ತೆಗೆದು ಬಿಳಿ ಭಾಗವನ್ನು ಅಷ್ಟೇ ತಿನ್ನಿ. ಇದು ದೇಹಕ್ಕೆ ಬೇಕಾಗುವ ಶಕ್ತಿಯನ್ನು ಒದಗಿಸಿ ನಿಮ್ಮ ತೂಕವನ್ನು ಇಳಿಸುತ್ತೆ. ಹೀಗಾಗಿ ದಿನ ಮೊಟ್ಟೆ ತಿನ್ನಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಾಗೇನೇ ಮೊಟ್ಟೆಯನ್ನು ಬೇಯಿಸಿ ಜಾಸ್ತಿ ಹೊತ್ತು ಇಡಬೇಡಿ. ನೀವು ಯಾವಾಗ ತಿನ್ನುತ್ತಿರ ಆಗ ಮಾತ್ರ ಬೇಯಿಸಿ ಹಿಂದೆಯೇ ತಿಂದುಬಿಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆಹಾರ