ಈ ದೇವಾಲಯದಲ್ಲಿ ಇದೆ ಜನಮೇಜಯ ರಾಜನ ಚರ್ಮರೋಗವನ್ನು ಗುಣಪಡಿಸಿದ ಚಮತ್ಕಾರಿ ಕೊಳ..!!!

ಈ ದೇವಾಲಯದಲ್ಲಿ ಇದೆ ಜನಮೇಜಯ ರಾಜನ ಚರ್ಮರೋಗವನ್ನು ಗುಣಪಡಿಸಿದ ಚಮತ್ಕಾರಿ ಕೊಳ..!!!

ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯದ ರಾಜಧಾನಿ ಆದ ಬೆಂಗಳೂರು ಹಲವಾರು ಅಚ್ಚರಿಗಳ ತವರೂರು. ಕಾಂಕ್ರೀಟ್ ಕಟ್ಟಗಳಿಂದ ಹಿಡಿದು ಪುರಾತನ ದೇವಾಲಯ ಗಳು ನಮ್ಮ ಉದ್ಯಾನ ನಗರಿಯಲ್ಲಿ ಇವೆ. ಅದ್ರಲ್ಲೂ ಮಹಾಭಾರತದ ನಂಟನ್ನು ಹೊಂದಿರುವ ಈ ದೇವಾಲಯದ ಮಹಿಮೆಯೇ ಅಪಾರವಾದದ್ದು. ಬನ್ನಿ ಇವತ್ತಿನ ಲೇಖನದಲ್ಲಿ ಬೆಂಗಳೂರಿನಲ್ಲಿರುವ ಆ ಪುರಾತನವಾದ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ತಿಳಿದುಕೊಂಡು ಬರೋಣ. ಭನ್ನೇರು ಘಟ್ಟದ ಸಮೀಪದಲ್ಲಿರುವ ಬೃಹತ್ ಏಕಶಿಲಾ ಬೆಟ್ಟದ ಮೇಲೆ ಚಂಪಕಾಧಾಮ ಸ್ವಾಮಿ ದೇವಾಲಯ ಇದ್ದು, ಸುಮಾರು 800-1000 ವರ್ಷಗಳ ಇತಿಹಾಸ ಇರುವ ಈ ದೇವಾಲಯವನ್ನು ಹೊಯ್ಸಳರ ಸಾಮಂತನಾಗಿದ್ದ ಪೂರ್ವಾದಿರಾಮ ಎಂಬ ತಮಿಳರ ಸ ನಿರ್ಮಿಸಿದನು ಎಂದು ಇಲ್ಲಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಈ ಆಲಯವು ಏಳು ಅಂತಸ್ತಿನ ಸುಮಂದರವಾದ ಗೋಪುರ ಗರ್ಬಹೃಹ, ಗರುಡ ಗಂಬ, ಹಾಗೂ ಪ್ರದಕ್ಷಿಣಾ ಪಥಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿನ ಗೋಪುರದ ಮೇಲೆ ವಿಷ್ಣುವಿನ ದಶಾವತಾರದ ಕೆತ್ತನೆಗಳು ಹಾಗೂ ಮಹಾ ವಿಷ್ಣುವಿನ ಬಗೆ ಬಗೆಯ ಮೂರ್ತಿಗಳನ್ನು ಕೆತ್ತಲಾಗಿದೆ. ಬೆಟ್ಟದ ಮೇಲೆ ನಿಂತು ನೋಡಿದ್ರೆ ಅರ್ಧ ಬೆಂಗಳೂರು ಕಾಣಿಸುತ್ತೆ.

 

 

ಹಿಂದಿನ ಕಾಲದಲ್ಲಿ ಅತೀ ಹೆಚ್ಚು ಚಂಪಕ ಅಂದ್ರೆ ಸಂಪಿಗೆ ಹೂವು ಈ ಸ್ಥಳದಲ್ಲಿ ಬೆಳೆಯುತ್ತಿದ್ದ ಕಾರಣದಿಂದ ಈ ಸ್ಥಳಕ್ಕೆ ಚಂಪಕದಾಮ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಅಲ್ಲದೆ ಚಂಪಕಾಧಾಮ ದಲ್ಲಿ ಶ್ರೀಮನ್ ನಾರಾಯಣನು ಶ್ರೀದೇವಿ ಭೂದೇವಿ ಸಮೇತನಾಗಿ ನೆಲೆಸಿರುವ ಕಾರಣ ಇಲ್ಲಿರುವ ಸ್ವಾಮಿಯನ್ನು ಚಂಪಕಾಧಾಮ ಸ್ವಾಮಿ ಎಂದೇ ಕರೆಯಲಾಗುತ್ತದೆ. ಈ ಕ್ಷೇತ್ರಕ್ಕೆ ಬಂದು ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲು ಇಟ್ಟು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಹೋದ್ರೆ ಸ್ವಂತ ಮನೆ ಕಟ್ಟುವ ಆಸೆ ಪೂರ್ಣ ಆಗುತ್ತೆ ಹಾಗೂ ಈ ದೇವನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಮನದಲ್ಲಿನ ಎಲ್ಲ ಆಸೆಗಳು ಶೀಗ್ರವಾಗೀ ಈಡೇರುತ್ತವೆ ಎಂಬ ಪ್ರತೀತಿ ಇದೆ. ಇನ್ನೂ ತಿರುಪತಿ ತಿಮ್ಮಪ್ಪ ಸಪ್ತಗಿರಿ ಯಲ್ಲಿ ನೇಲೆಸುವ ಮುನ್ನ ಈ ಕ್ಷೇತ್ರದಲ್ಲಿ ಇರುವ ಬೆಟ್ಟದ ಮೇಲೆ ಪಾದವನ್ನು ಊರಿದ್ದ ಎಂಬ ಮಾತುಗಳಿವೆ. ಈ ದೇವಾಲಯದ ಹಿಂಬದಿಯ ಬೆಟ್ಟದಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಸಂಪಂಗಿ ರಾಮನ ದೇವಾಲಯ ಇದೆ. ಅಲ್ಲದೆ ದೇವಾಲಯದಿಂದ ಸುಮಾರು ಕಿಮೀ ದೂರದಲ್ಲಿ ಸುವರ್ಣಮುಖಿ ನದಿಯ ಉಗಮ ಸ್ಥಾನ ಇದ್ದು, ಈ ನದಿಯ ಉಗಮಸ್ಥಾನ ಇರುವ ಕಲ್ಯಾಣಿಯನ್ನು ಪವಿತ್ರ ತೀರ್ಥ ಎಂದೇ ಕರೆಯಲಾಗುತ್ತದೆ. ಮೂರು ಹುಣ್ಣಿಮೆ, ಮೂರು ಅಮಾವಾಸ್ಯೆ ಈ ಕೊಳದಲ್ಲಿ ಮಿಂದೆದ್ದು, ಚಂಪಾಕಾಧಾಮ ಸ್ವಾಮಿಯನ್ನು ದರ್ಶನ ಮಾಡಿದ್ರೆ ಸಕಲ ಚರ್ಮರೋಗಗಳು ದೂರವಾಗುತ್ತದೆ ಹಾಗೂ ಸಕಲ ದೋಷಗಳು ನಿವಾರಣೆ ಆಗುತ್ತದೆ ಎಂಬ ಪ್ರತೀತಿ ಇದೆ.

 

 

ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಇಲ್ಲಿರುವ ಸುವರ್ಣಮುಖಿ ಕಲ್ಯಾಣಿಗೆ ಹಾಗೂ ಮಹಾಭಾರತಕ್ಕೆ ಒಂದು ನಂಟಿದೆ. ಮಹಾಭಾರತದ ಕಾಲದಲ್ಲಿ ಪರೀಕ್ಷಿತ ಮಹಾರಾಜನನ್ನು ಸರ್ಪವೊಂದು ಕಚ್ಚಿ ಸಾಯಿಸಿದ್ದರಿಂದ ಪರಿಕ್ಷಿತನ ಮಗನಾದ ಜನಮೇಜಯ ನು ಕೋಪಗೊಂಡು ಎಲ್ಲಾ ಸರ್ಪಗಳನ್ನು ಕೊಂದು ಹಾಕುವ ಕಾರಣದಿಂದ ಸರ್ಪ ಯಾಗವನ್ನು ಮಾಡಿದನು. ಅನೇಕ ಸರ್ಪಗಳನ್ನು ಕೊಂದಿದ್ದರಿಂದ ಜನಮೇಜಯ ನಿಗೇ ಸರ್ಪ ದೋಷ ಉಂಟಾಗಿ ಅವನಿಗೆ ಕಷ್ಟ ರೋಗ ಬಂದಿತು. ಹೀಗಾಗಿ ತನ್ನ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದಕ್ಕೆ ತೀರ್ಥಯಾತ್ರೆ ಕೈಗೊಳ್ಳುತ್ತಾನೆ. ಹಾಗೆ ತಾನು ಸಂದರ್ಶಿಸಿದ ಸ್ಥಳದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾನೆ. ಹೀಗೆ ಜನಮೇಜಯ ನು ಒಂದೊಂದೇ ತೀರ್ಥ ಕ್ಷೇತ್ರಗಳ ದರ್ಶನ ಮಾಡಿ ಈ ಪ್ರದೇಶಕ್ಕೆ ಬಂದಾಗ ಜನಮೇಜಯ ನೊಂದಿಗೆ ಬಂದಿದ್ದ ನಾಯಿಯು ಬಾಯಾರಿಕೆಯಿಂದ ಅಲ್ಲಿಯೇ ಇರುವ ನೀರಿನ ಕೊಳದಲ್ಲಿ ಮಿಂದೆದ್ದು ಮೈಯನ್ನು ಕೊಡವಿದಾಗ ಅದರ ಮೈಯಿಂದ ಹಾರಿದ ನೀರು ರಾಜನ ಮೈ ಮೇಲೆ ಬಿದ್ದು ಜನಮೇಜಯ ರಾಜನ ಕುಷ್ಟ ರೋಗವು ಸಂಪೂರ್ಣ ವಾಸಿಯಾಗಿ ಆತನು ಸುವರ್ಣ ಅಂದ್ರೆ ಬಂಗಾರ ವರ್ಣದ ಶರೀರವನ್ನು ಹೊಂದಿದನಂತೆ. ಮತ್ತೆ ಮೂಲ ಶರೀರ ಪಡೆದ ರಾಜನು ಆ ಹೊಂಡದ ಸುತ್ತಲೂ ಕಟ್ಟೆಯನ್ನು ನಿರ್ಮಿಸಿದನು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಪುಣ್ಯ ಕ್ಷೇತ್ರವೂ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವನ ದರ್ಶನ ಪಡೆದು ಬನ್ನಿ. ಶುಭದಿನ.

ಆರೋಗ್ಯ