ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕ ರಾಜ್ಯವು ಕೇವಲ ಪ್ರಾಕೃತಿಕ ಸೌಂದರ್ಯ ಕ್ಕ್ ಮಾತ್ರವಲ್ಲದೆ ಹಲವಾರು ಪುರಾತನವಾದ ದೇಗುಲಗಳಿಗೆ ಆಶ್ರಯ ತಾಣವಾಗಿದೆ. ದೇವಾಲಯಗಳು ಕೇವಲ ಭಕ್ತಿಯ ಪರಾಕಾಷ್ಠೆಗೆ ನಮ್ಮನ್ನು ಕೊಂಡೊಯ್ಯುವುದು ಅಲ್ಲದೆ ನಮ್ಮ ಪೂರ್ವಜರು ನಿರ್ಮಿಸಿ ಹೋದ ಅದ್ಭುತವಾದ ವಾಸ್ತುಶಿಲ್ಪ ಕಲೆಯನ್ನು ನಮಗೆ ಪರಿಚಯ ಮಾಡಿ ಕೊಡುತ್ತವೆ. ಬನ್ನಿ ಇವತ್ತಿನ ಲೇಖನದಲ್ಲಿ ಅನೇಕ ವಿಶೇಷತೆಗಳಿಂದ ಕೂಡಿದ ಚೌಡಯ್ಯ ದಾನಾಪುರದ ಮುಖ್ತೇಶ್ವರ ದೇವಾಲಯವನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ಅದ್ಭುತವಾದ ಕಲಾ ಕೆತ್ತನೆಗಳಿಂದ ಕೂಡಿರುವ ಚೌಡಯ್ಯ ದಾನಪುರದ ಮುಕ್ತೇಶ್ವರಾ ದೇವಾಲಯವು ಸುಮಾರು 12 ನೇ ಶತಮಾನದಲ್ಲಿ ಕಲ್ಯಾಣದ ಚಾಲುಕ್ಯರು ನಿರ್ಮಿಸಿದ ದೇವಾಲಯ ಆಗಿದ್ದು, ಈ ಕ್ಷೇತ್ರದಲ್ಲಿ ಪರಮೇಶ್ವರನು ಸ್ವಯಂಭೂ ಆಗಿ ನೆಲೆಸಿ ಭಕ್ತರನ್ನು ಹರಿಸುತ್ತಿದ್ದಾರೆ. ತುಂಗಭದ್ರಾ ನದಿಯ ತಟದ ಮೇಲಿರುವ ಈ ದೇಗುಲವು ಪ್ರವೇಶ್ವ ದ್ವಾರ, ಮುಖ ಮಂಟಪ, ಗರ್ಭಗೃಹ, ಅಂತರಾಳ ಒಳಗೊಂಡಿದೆ.
ತುಂಗಭದ್ರಾ ನದಿಯಲ್ಲಿ ಮಿಂದೆದ್ದು ಇಲ್ಲಿರುವ ಮುಕ್ತೇಶ್ವರನ ದರ್ಶನ ಮಾಡಿದರೆ ಸಕಲ ಪಾಪಗಳು ಕಳೆದುಹೋಗುತ್ತದೆ ಎನ್ನುವ ನಂಬಿಕೆ ಇದೆ. ಶಿವರಾತ್ರಿಯಂದು ಇಲ್ಲಿಗೆ ಹೆಚ್ಚಿನ ಜನರು ಭೇಟಿ ನೀಡಿ ಪರಮಾತ್ಮನ ಆಶೀರ್ವಾದ ಪಡೆಯುತ್ತಾರೆ. ಇನ್ನೂ ಜಕಣಾಚಾರಿ ಶೈಲಿಯಲ್ಲಿ ಇರುವ ಏಕೈಕ ಕೋಟೆ ದೇವಾಲಯ ಆದ ಮೂಕ್ತೇಷ್ವರ ದೇವಾಲಯದ ಅಂತರಾಳದಲ್ಲಿ ಜಾಲ ರಂದ್ರದ ಕೆತ್ತನೆಯನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ನವರಂಗ ತಲುಪಲು ಎರಡು ದ್ವಾರಗಳನ್ನು ಕಲ್ಪಿಸಲಾಗಿದೆ. ಇಲ್ಲಿನ ಗರ್ಭ ಗೃಹ ಬಹು ಕೊನಾಕರಾದ ತಳ ವಿನ್ಯಾಸ ಹೊಂದಿದೆ. ಎತ್ತರವಾದ ಪಾಣಿಪೀಠವನ್ನು ಹೊಂದಿದೆ. ಶಿವನ ಮುಂದೆ ನಂದಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ನಂದಿಗೋ ಕೂಡ ಪೂಜೆ ಸಲ್ಲಿಸಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಗರ್ಭ ಗೃಹದ ಮುಂಭಾಗದ ಬಾಗಿಲಿನ ಮೇಲೆ ಸಣ್ಣ ಸಣ್ಣ ಹೂ ಬಳ್ಳಿಗಳನ್ನು ಕೆತ್ತಲಾಗಿದೆ. ಮೇಲ್ಛಾವಣಿಯ ಮೇಲೆ ನಕ್ಷತ್ರ ಆಕಾರದ ಕಲಾ ಕುಸಿರಿಗಳನ್ನೂ ಕೆತ್ತಲಾಗಿದೆ. ದೇವಾಲಯದ ಹೊರ ಗೋಡೆಯ ಮೇಲೆ ಮಂಟಪಗಳ ಕೆತ್ತನೆ, ಕಾಲ ಭೈರವ, ಉಗ್ರ ನರಸಿಂಹ, ಶಿವ ಗಣೇಶ, ಸರಸ್ವತಿ, ಸೂರ್ಯ, ಕೃಷ್ಣ, ಹಾಗೂ ಅನೇಕ ದೇವರ ಮೂರ್ತಿಗಳ ಕೆತ್ತನೆಯನ್ನು ಮಾಡಲಾಗಿದೆ.
ಈ ದೇವಾಲಯದ ಸಮೀಪದಲ್ಲಿ ಶ್ರೇಷ್ಟ ವಚನಕಾರ ಆದ ಅಂಬಿಗರ ಚೌಡಯ್ಯನವರ ಸಮಾಧಿ ಸ್ಥಳವಿದು. ಆ ಸ್ಥಳವನ್ನು ಕೂಡ ಈ ದೇವಾಲಯಕ್ಕೆ ಭೇಟಿ ನೀಡಿದವರು ಕಣ್ಣು ತುಂಬಿಕೊಂಡು ಬರಬಹುದು. ಮೊದಲು ಶಿವಪುರ ಎಂಬ ಹೆಸರಿನಿಂದ ಕರೆಯುತ್ತಿದ್ದ ಈ ಊರನ್ನು 12 ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯ ರುಗೆ ದಾನವಾಗಿ ನೀಡಲಾಯಿತು ಹೀಗಾಗಿ ಶಿವಪುರ ಎಂಬ ಹೆಸರಿದ್ದು ಈ ಊರಿಗೆ ಮುಂದೆ ಚೌಡಯ್ಯ ದಾನಾಪೂರ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಮುಕ್ತಿಯನ್ನು ದಯಪಾಲಿಸುವ ಮೂಕ್ತೇಶ್ವರಾ ಸ್ವಾಮಿಗೆ ನಿತ್ಯವೂ ಪೂಜೆ ಮಾಡಲಾಗುತ್ತಿದ್ದು, ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ಈ ಪುಣ್ಯ ಕ್ಷೇತ್ರವನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ವಾಸ್ತುಶಿಲ್ಪ ದ ಕಲಾ ಕೆತ್ತನೆಗಳಿಗೆ ಹೆಸರು ವಾಸಿಯಾದ ಈ ದೇಗುಲವು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚೌಡಯ್ಯ ದಾನಾಪುರ ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಿರಿ. ಶುಭದಿನ.