ಸಂಜೆಯ ವೇಳೆಗೆ ಟೀ ಜೊತೆ ಒಂದು ಹೊಸ ರೀತಿಯ ಸಬ್ಬಕ್ಕಿ ಇಂದ ಮಾಡುವ ಸ್ನಾಕ್ಸ್.

ಸಂಜೆಯ ವೇಳೆಗೆ ಟೀ ಜೊತೆ ಒಂದು ಹೊಸ ರೀತಿಯ ಸಬ್ಬಕ್ಕಿ ಇಂದ ಮಾಡುವ ಸ್ನಾಕ್ಸ್.

ನಮಸ್ತೆ ಪ್ರಿಯ ಓದುಗರೇ, ಸಬ್ಬಕಿ ಒಂದು ಪೌಷ್ಟಿಯುತ ಆಹಾರ. ಇದನ್ನು ಆಗಾಗ ಮನೆಯಲ್ಲಿ ಬಳಸುತ್ತಾ ಇದ್ದರೆ ನಮ್ಮ ದೇಹಕ್ಕೆ ಬೇಕಾದ ಖನಿಜಾಂಶಗಳು ಪೌಷ್ಟಿಕ ಅಂಶ ಸಿಗುತ್ತದೆ. ಈ ಮೊದಲೇ ರೆಸಿಪಿಯನ್ನು ತಿಳಿಸಿದ ಹಾಗೆ ಸಬ್ಬಕ್ಕಿ ಕಿಚಡಿಯನ್ನ ವಾರದಲ್ಲಿ ಒಂದು ದಿನ ಆದ್ರೂ ಮಾಡಿಕೊಂಡು ತಿಂದರೆ ಅದರಲ್ಲೂ ಕೆಲವು ಶಕ್ತಿಯುತ ಖನಿಜ ಸಂಪತ್ತು ಇರುತ್ತೆ ಅದು ನಮ್ಮ ದೇಹಕ್ಕೆ ಸೇರಿದ ಹಾಗೆ ಆಗುತ್ತೆ. ಈ ಸಬ್ಬಕ್ಕೀಯನ್ನು ಸಾಬುದಾನೀ ಅಂತಲೂ ಕರೀತಾರೆ. ಹಾಗಾದ್ರೆ ಬನ್ನಿ ತಡ ಮಾಡದೆ ಇಂದಿನ ರೆಸಿಪಿ ಸಂಜೆಯ ವೇಳೆಗೆ ಟೀ ಜೊತೆ ಸವಿಯಲು ಸಬ್ಬಕ್ಕಿ ಬಳಸಿ ಒಂದು ಸ್ನಾಕ್ಸ್ ಮಾಡುವ ವಿಧಾನ ತಿಳಿಯೋಣ. ಮೊದಲು ಒಂದು ಪಾನ್ ಓಲೆ ಮೇಲಿಟ್ಟು ಬಿಸಿ ಮಾಡಿ ನಂತರ ಅದಕ್ಕೆ ಒಂದು ಕಪ್ ಅಷ್ಟು ಸಬ್ಬಕ್ಕಿ ಹಾಕಿ ಬಣ್ಣ ಬದಲು ಆಗದೇ ಇರುವ ಮಟ್ಟಕ್ಕೆ ಅಂದ್ರೆ 2 ನಿಮಿಷ ಡ್ರೈ ರೋಸ್ಟ್ ಮಾಡ್ರಿ. ಅವನ್ನು ಒಂದು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.

 

ತಣ್ಣಗಾದ ಮೇಲೆ ಮಿಕ್ಸಿ ಕಾರಿನಲ್ಲಿ ತರಿ ತರಿಯಾಗಿ ರುಬ್ಬಿ ರವೆ ರೀತಿ ಪುಡಿ ಮಾಡಿಟ್ಟುಕೊಳ್ಳಿ. ಈಗ ಇದನ್ನು ಒಂದು ಮಿಕ್ಸಿಂಗ್ ಬೌಲ್ ಗೆ ವರ್ಗಾಯಿಸಿ ಅದಕ್ಕೆ ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಹಸಿ ಶುಂಠಿ, ಅರ್ಧ ಚಮಚ ಹಚ್ಚ ಖಾರದ ಪುಡಿ, 2 ಚಮಚ ಹುರಿದು ಉಪ್ಪು ಖಾರ ಪುಡಿ ಹಾಕದೇ ಇರುವ ತರಿ ತರಿಯಾಗಿ ರುಬ್ಬಿ ದ ಶೇಂಗಾ ಪುಡಿಯನ್ನು ಹಾಕಿ, ಚಿಕ್ಕದಾಗಿ ಕತ್ತರಿಸಿದ 2 ಹಸಿ ಮೆಣಸಿನಕಾಯಿ, ಒಂದು ಮೀಡಿಯಮ್ ಈರುಳ್ಳಿಯನ್ನು ಸಣ್ಣದಾಗಿ ಕಟ್ ಮಾಡಿ ಸೇರಿಸಿ, ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಪಾವ್ ಭಾಜಿ ಮಸಾಲ ಇದ್ರೆ ಹಾಕಿ ಇದರ ಟೇಸ್ಟ್ ತುಂಬಾ ಚೆನ್ನಾಗಿ ಕೊಡುತ್ತೆ. ಇಲ್ಲ ಅಂದ್ರೆ ಗರಂ ಮಸಾಲ ಅಥವ ಮ್ಯಾಗಿ ಮ್ಯಾಜಿಕ್ ಮಸಾಲ ಪುಡಿಯನ್ನು ಸಹ ಹಾಕಬಹುದು.

 

 

ಈಗ ಒಂದು ದೊಡ್ಡ ಆಲೂಗೆಡ್ಡೆಯನ್ನು ಬೇಯಿಸಿ ತುರಿದು ಬೈಂಡಿಂಗ್ ಸಲುವಾಗಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಯಾವುದೇ ನೀರು ಬಳಸದೆ ಆಲೂಗಡ್ಡೆ ಹಾಗೂ ಈರುಳ್ಳಿಯಲ್ಲಿುವ ನೀರಿನಿಂದ ಇದು ಚೆನ್ನಾಗಿ ಬೈಂಡ್ ಆಗುತ್ತದೆ. ಈಗ ಗ್ಯಾಸ್ ಮೇಲೆ ಎಣ್ಣೆ ಕಾಯಲು ಇಟ್ಟು, ಈ ಕಲಸಿದ ಮಿಶ್ರಣವನ್ನು ದುಂಡಗೆ ಅಥವಾ ಕಟ್ಲೇಟ್ ಅಥವಾ ನೆಗೆಟ್ಸ್ ರೀತಿ ಶೇಪ್ ಗೆ ಇವುಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ. ಎಣ್ಣೆ ಕಾದ ನಂತರ ಮೀಡಿಯಮ್ ಫ್ಲೇಮ್ ಆಲ್ಲಿಟ್ಟು ಹೊಂಬಣ್ಣ ಬರುವರೆಗೂ ಫ್ರೈ ಮಾಡಿದರೆ ಕೆಚಪ್ ಅಥವಾ ಟೊಮೆಟೊ ಸಾಸ್ ಜತೆ ಈ ಸಬ್ಬಕ್ಕಿ ಪಕೋಡ ಸ್ನಾಕ್ಸ್ ಸವಿಯಲು ಸಿದ್ಧ. ಇದನ್ನು ನೀವು ಉಪವಾಸ ಇರುವ ಸಮಯದಲ್ಲಿ ಈರುಳ್ಳಿ ಬೆಳ್ಳುಳ್ಳಿ ಸೇರಿಸದೆ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಈ ರುಚಿಯಾದ ಸ್ನಾಕ್ಸ್ ಮಾಡಿಕೊಂಡು ಸವಿಯಬಹುದು. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆಹಾರ