ಶ್ರೀರಾಮಚಂದ್ರ ನಿಂದಾ ಸ್ಥಾಪಿಸಲ್ಪಟ್ಟ ಪರಶಿವನ ಪುಣ್ಯ ಕ್ಷೇತ್ರವಿದು..!!

ಶ್ರೀರಾಮಚಂದ್ರ ನಿಂದಾ ಸ್ಥಾಪಿಸಲ್ಪಟ್ಟ ಪರಶಿವನ ಪುಣ್ಯ ಕ್ಷೇತ್ರವಿದು..!!

ನಮಸ್ತೆ ಪ್ರಿಯ ಓದುಗರೇ, ಶ್ರೀರಾಮ ಇವನನ್ನು ಮರ್ಯಾದಾ ಪುರುಷೋತ್ತಮ ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಪಿತೃ ವಾಕ್ಯ ಪಾಲನೆಯ ಮಹತ್ವವನ್ನು ಲೋಕಕ್ಕೆ ತಿಳಿಸಿದವನು ಈ ದೇವಾ. ಕಷ್ಟಗಳು ಮಾನವರಿಗೆ ಮಾತ್ರವಲ್ಲ ದೇವತೆಗಳನ್ನು ಬಿಟ್ಟಿಲ್ಲ ಎಂಬ ಮಾತಿಗೆ ಉದಾಹರಣೆ ಈ ರಘು ವಂಶ ತಿಲಕ. ಬನ್ನಿ ಇವತ್ತಿನ ಲೇಖನದಲ್ಲಿ ಸ್ವತಃ ಶ್ರೀರಾಮಚಂದ್ರ ನಿಂದಾ ಪ್ರತಿಷ್ಠಾಪನೆ ಆದ ತೀರ್ಥ ರಾಮೇಶ್ವರ ದ ಬಗ್ಗೆ ಮಾಹಿತಿ ಪಡೆದುಕೊಂಡು ಬರೋಣ. ಬಯಲುಸೀಮೆಯ ನಡುವಿನ ಬೆಟ್ಟದ ಪ್ರಕೃತಿಯ ರಮಣೀಯವಾದ ಪ್ರಶಾಂತವಾದ ವಾತಾವರಣ ಮಧ್ಯದಲ್ಲಿ ನೆಲೆ ನಿಂತಿದ್ದಾರೆ ಈ ರಾಮೇಶ್ವರ ಸ್ವಾಮಿ. ದಕ್ಷಿಣ ಕಾಶಿ ಎಂದೇ ಕರೆಯುವ ಈ ಕ್ಷೇತ್ರಕ್ಕೆ ಬಂದು ಇಲ್ಲಿನ ತೀರ್ಥದಲ್ಲಿ ಮಿಂದೇದ್ದರೆ ಕಾಶಿಯ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಪುಣ್ಯ ಬರುತ್ತಂತೆ. ಅಲ್ಲದೆ ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿ ಆಗುತ್ತೆ ಎಂದು ಹೇಳಲಾಗುತ್ತದೆ. ಈ ತೀರ್ಥದ ವಿಶೇಷತೆ ಏನು ಅಂದ್ರೆ ನಾವು ಎಷ್ಟೇ ಬಾರಿ ನೀರನ್ನು ಬಗೆದು ಸ್ನಾನ ಮಾಡಿದರೂ ತೀರ್ಥದ ನೀರು ಕಡಿಮೆ ಆಗುವುದೇ ಇಲ್ಲ.

 

 

ಈ ತೀರ್ಥ ಕುಂಡಕ್ಕೆ ಶೋಭೆ ಎನಿಸುವ ಕಲ್ಲಿನ ಮಂಟಪ ಆ ಮಂಟಪದ ಮೇಲೆ ಮೊಸಳೆಯ ಮೇಲೆ ನೀರಿನ ಕಳಸ ಹಿಡಿದಿರುವ ಗಂಗಾ ಮಾತೆಯನ್ನು ಕುಳಿತಿರುವ ಭಂಗಿಯಲ್ಲಿ ಕೆತ್ತಲಾಗಿದೆ. ಈ ಅದ್ಭುತ ಕಲಾಕೃತಿ ನಮ್ಮ ಮನ ಸೆಳೆಯುತ್ತದೆ. ಇಷ್ಟು ಮಾತ್ರವಲ್ಲ ಪುಟ್ಟದಾದ ತೀರ್ಥದ ನೀರಿನಿಂದ ಸ್ನಾನ ಮಾಡಿ ರಾಮೇಶ್ವರ ನ ದರ್ಶನ ಮಾಡಿದರೆ ನಮ್ಮೆಲ್ಲ ಮನದ ಕೋರಿಕೆಗಳನ್ನು ಮಾನ್ಯ ಮಾಡುತ್ತಾನೆ ಚಿನ್ಮಯ ರೂಪಿಯಾದ ಈ ಭಗವಂತ. ಇಲ್ಲಿನ ಮುಖ್ಯ ದೇಗುಲದಲ್ಲಿ ಕಂಡು ಬರುವ ಶಿವ ಲಿಂಗವು ಉದ್ಭವ ಮೂರ್ತಿ ಆಗಿದ್ದು, ಈ ಕ್ಷೇತ್ರಕ್ಕೆ ತೀರ್ಥ ರಾಮೇಶ್ವರ ಎಂದು ಹೆಸರು ಬರಲು ಕಾರಣವಾದ ಕಥೆ ಇದೆ. ಹಿಂದೆ ಶ್ರೀರಾಮ ಮತ್ತು ಸೀತೆ ವನವಾಸದ ಸಮಯದಲ್ಲಿ ಈ ಸ್ಥಳಕ್ಕೆ ಬಂದಿದ್ದರು ಆಗ ಸೀತಾ ಮಾತೆಗೆ ವಿಪರೀತವಾದ ಬಾಯಾರಿಕೆ ಉಂಟಾಗಿ ಶ್ರೀರಾಮನಲ್ಲಿ ನೀರನ್ನು ಯಾಚಿಸುತ್ತಾಳೆ. ಆಗ ಶ್ರೀರಾಮ ಯಾವ ಸ್ಥಳದ ನೀರು ಬೇಕು ಎಂದು ಕೇಳಿದಾಗ, ಮಾತೆಯು ನನಗೆ ಕಾಶಿಯ ನೀರು ಬೇಕೆಂದು ಕೇಳುತ್ತಾಳೆ. ಆಗ ರಾಮನು ಈಗಿರುವ ಹೊಂಡವನ್ನು ನಿರ್ಮಿಸಿ ಹೊಂಡಕ್ಕೆ ಕಾಶಿ ಇಂದ ಗಂಗಾ ಮಾತೆಯ ನೀರು ಹರಿದು ಬರುವಂತೆ ಮಾಡುತ್ತಾನೆ.

 

 

ಜೊತೆಗೆ ಸೀತಾ ಮಾತೆಯ ಇಷ್ಟದಂತೆ ಶ್ರೀರಾಮನು ಇಲ್ಲಿ ಲಿಂಗೋದ್ಭವ ಮಾಡಿದ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ನಮ್ಮ ಹಿಂದೂ ಧರ್ಮದಲ್ಲಿ ಬ್ರಾಹ್ಮಣ ದೇವಾಲಯಗಳನ್ನು ನಾವು ನೋಡೋದು ತುಂಬಾ ವಿರಳ. ಆದ್ರೆ ಈ ತೀರ್ಥ ರಾಮೇಶ್ವರಕ್ಕೆ ಬಂದರೆ ಬ್ರಹ್ಮ ದೇವನ ಪುಟ್ಟ ದೇವಸ್ಥಾನವನ್ನು ನೊಡಬಹುದು. ಇಲ್ಲಿನ ಬ್ರಹ್ಮ ದೇವನು ಮೂರು ಮುಖಗಳನ್ನು ಹೊಂದಿದ್ದು, ದೇವರ ನಾಲ್ಕನೆಯ ಮುಖವೂ ಹಿಂದೆ ಇರುವ ದರ್ಪಣದಲ್ಲಿ ಗೋಚರಿಸುತ್ತದೆ. ಇತಿಹಾಸದ ಪ್ರಕಾರ ಈ ದೇವಾಲಯವನ್ನು 1999 ರಲ್ಲೀ ವಿಜಯನಗರದ ಅರಸರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ಇರುವ ಈ ದೇವಸ್ಥಾನದಲ್ಲಿ ಶಿವರಾತ್ರಿ, ಮಕಲ ಸಂಕ್ರಾಂತಿ, ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಸಹಸ್ರಾರು ಭಕ್ತರು ಇಲ್ಲಿನ ತೀರ್ಥದಲ್ಲಿ ಮಿಂದೆದ್ದು ರಾಮೇಶ್ವರ ಅನುಗ್ರಹ ಪಡೆಯುತ್ತಾರೆ. ಭಕ್ತರ ಮನದ ಎಲ್ಲಾ ಅಭೀಶ್ಟೆಗಳನ್ನು ನೆರವೇರಿಸುವ ಈ ರಾಮೇಶ್ವರ ದೇವರನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಈ ಪುರಾತನ ದೇವಾಲಯ ದಾವಣಗೆರೆ ಜಿಲ್ಲೆಯ ಬೆಳಗುತ್ತಿ ಸಮೀಪ ತೀರ್ಥ ರಾಂಪುರ ಎಂಬ ಪುಟ್ಟ ಗ್ರಾಮದಲ್ಲಿದೆ. ಸಾಧ್ಯವಾದರೆ ಪ್ರಕೃತಿಯ ಸೌಂದರ್ಯ ಹಾಗೂ ದೇವರ ದರ್ಶನ ಪಡೆಯುವಂತಹ ಈ ತೀರ್ಥ ರಾಮೇಶ್ವರಕ್ಕೆ ನೀವು ಒಮ್ಮೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಿರಿ. ಶುಭದಿನ.

ಭಕ್ತಿ