ಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವವರಿಗಾಗಿ ಈ ಸಬ್ಬಕ್ಕಿ ಅಥವಾ ಸಾಬುದಾನಿ ಕಿಚಡಿ..!!!

ಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವವರಿಗಾಗಿ ಈ ಸಬ್ಬಕ್ಕಿ ಅಥವಾ ಸಾಬುದಾನಿ ಕಿಚಡಿ..!!!

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಶಿವರಾತ್ರಿ ದಿನ ಎಲ್ಲರೂ ಉಪವಾಸ ವ್ರತ ಮಾಡ್ತಾರೆ. ಆಗ ಆ ಉಪವಾಸದ ಸಮಯದಲ್ಲಿ ತುಂಬಾ ಬೇಯಿಸಿದ ಈರುಳ್ಳಿ ಬೆಳ್ಳುಳ್ಳಿ ಸೇವನೆ ಯಾರೋ ಮಾಡುವುದಿಲ್ಲ. ಹಾಗಾಗಿ ಅಂಥವರಿಗೆ ಎಂದೇ ಇಂದಿನ ಲೇಖನದಲ್ಲಿ ಸಾಬುದಾನ ಅಥವಾ ಸಬ್ಬಕ್ಕಿ ಕಿಚಡಿ ಮಾಡುವ ವಿಧಾನ ತಿಳಿಯೋಣ ಸ್ನೇಹಿತರೆ. ಬರೀ ಉಪವಾಸ ದಿನ ಅಲ್ಲದೆ ಬೇರೆ ದಿನಗಳಲ್ಲಿ ಕೂಡ ಬೆಳಗಿನ ಉಪಹಾರಕ್ಕೆ ಅತ್ಯಂತ ರುಚಿಕರ ಹಾಗೂ ದೇಹಕ್ಕೆ ಶಕ್ತಿ ಕೊಡುವ ಈ ಸಬ್ಬಕ್ಕಿ ಕಿಚಡಿ ಮಾಡಿ ಮನೆ ಮಂದಿಯೆಲ್ಲ ಸಂತೋಷದಿಂದ ತಿನ್ನಿ ಎಂಜಾಯ್ ಮಾಡಿ. ಈ ಸಬ್ಬಕ್ಕಿ ಕಿಚಡಿ ಗೆ ಬೇಕಾದ ಪದಾರ್ಥಗಳನ್ನು ನೋಡೋಣ ಸ್ನೇಹಿತರೆ. ಮೊದಲನೆಯದು ಸಬ್ಬಕ್ಕಿ ಒಂದು ಕಪ್, ಒಂದು ಕಪ್ ಅಳತೆಯ ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಉಪ್ಪು ಹಾಕಿ ಬೇಯಿಸಿ ಇಟ್ಟುಕೊಳ್ಳಿ.

 

 

ನೆಲಗಡಲೆ ಅಥವಾ ಶೇಂಗಾ ಕಾಳು ಅರ್ಧ ಕಪ್, ತುಪ್ಪ 2 ಚಮಚ, ಹಸಿ ಮೆಣಸಿನ ಕಾಯಿ 4, ಕೊತ್ತಂಬರಿ ಸೊಪ್ಪು, ಕರಿಬೇವು, ಒಂದು ಚಮಚ ನಿಂಬೆ ರಸ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು. ತುಂಬಾ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ಸಬ್ಬಕ್ಕಿ ಕಿಚಡಿ ಹೇಗೆ ಮಾಡುವುದು ನೋಡೋಣ ಬನ್ನಿ. ಮೊದಲು ಹಿಂದಿನ ದಿನ ರಾತ್ರಿ ಒಂದು ಕಪ್ ಸಬ್ಬಕ್ಕಿಯನ್ನು ಒಂದು ಬಾರಿ ತೊಳೆದು, ಅದೇ ಕಪ್ ನಲ್ಲಿ ಮುಕ್ಕಾಲು ಅಥವಾ ಒಂದು ಕಪ್ ನೀರು ಹಾಕಿ ಸರಿ ಸುಮಾರು 5-6 ಗಂಟೆ ಕಾಲ ನೆನೆಸಿ ಇಡಬೇಕು. ನೆಂದ ನಂತರ ಸಬ್ಬಕ್ಕಿ ಉಬ್ಬಿ ಚೆನ್ನಾಗಿ ಬಿಡಿ ಬಿಡಿ ಆಗಿ ಮೆತ್ತಗೆ ಆಗಿರುತ್ತದೆ. ಈಗ ಒಂದು ಬಾಣಲೆ ಬಿಸಿಗೀಟ್ಟು ಅದಕ್ಕೆ ನಾವು ತೆಗೆದುಕೊಂಡ ಅರ್ಧ ಕಪ್ ಶೇಂಗಾ ಕಾಳನ್ನು ಸಣ್ಣನೆಯ ಉರಿಯಲ್ಲಿ ಉರಿಯಿರಿ. ನಂತರ ಅವುಗಳು ತಣ್ಣಗಾದ ನೆಲೆ ಸಣ್ಣ ಮಿಕ್ಸಿ ಜಾರ್ ಅಲ್ಲಿ ದೊಡ್ಡ ತರಿ ತರಿಯಾಗಿ ಮಿಕ್ಸಿ ಮಾಡಿ. ಈಗ ಸಬ್ಬಕ್ಕಿ ಕಿಚಡಿ ಗೆ ಬೇಕಾದ ಒಗ್ಗರಣೆಯನ್ನು ಮಾಡೋಣ.

 

ಬಾಣಲೆ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ತುಪ್ಪ ಕಾದ ನಂತರ 4-5 ಚಮಚದಷ್ಟು ಶೇಂಗಾ ಕಾಳನ್ನು ಹಾಕಿ ಕರಿದು ತೆಗೆದು ಪಕ್ಕಕ್ಕೆ ಇಡೀ. ನಂತರ ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ರುಚಿಗೆ ತಕ್ಕ ಉಪ್ಪು ಹಾಕಿ ಮೊದಲೇ ಬೇಯಿಸಿ ಇಟ್ಟ ಒಂದು ಕಪ್ ಆಲೂಗಡ್ಡೆ ಸೇರಿಸಿ 2 ನಿಮಿಷ ಫ್ರೈ ಮಾಡಿ. ಅವುಗಳನ್ನು ಮೊದಲೇ ಬೇಯಿಸಿದ ಕಾರಣ ಜಾಸ್ತಿ ಬೇಯಿಸುವ ಅವಶ್ಯಕತೆ ಇಲ್ಲ. ಆಲೂಗೆಡ್ಡೆ ಫ್ರೈ ಆದ ಮೇಲೆ ನೆನೆಸಿಟ್ಟ ಸಬ್ಬಕ್ಕಿ ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಕಲಸಿ ಕೈಯಾಡಿಸುತ್ತಾ ಸಬ್ಬಕ್ಕಿ ಟ್ರಾನ್ಸ್ಪರೆಂಟ್ ಆಗುವ ವರೆಗೆ ಬೇಯಿಸಿ. ಈಗ ಸಬ್ಬಕ್ಕಿ ಬಣ್ಣ ಬದಲಾದ ಮೇಲೆ ನಿಂಬೆ ರಸ ಹಾಗೂ ಶೇಂಗಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ ಗ್ಯಾಸ್ ಆಫ್ ಮಾಡಿ. ಈ ಶೇಂಗಾ ಪುಡಿ ಸಬ್ಬಕ್ಕಿ ಹಾಗೂ ಆಲೂಗೆಡ್ಡೆ ಜೊತೆ ಚೆನ್ನಾಗಿ ಬೆರೆತು ಹೊಂದಿಕೊಳ್ಳುತ್ತದೆ. ಹಾಗಾಗಿ ಈ ಸಬ್ಬಕ್ಕಿ ರುಚಿ ಹೆಚ್ಚುತ್ತದೆ. ಈಗ ಬಿಸಿಬಿಸಿಯಾದ ಸಬ್ಬಕ್ಕಿ ಕಿಚಡಿ ಸವಿಯಲು ಸಿದ್ಧ. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆಹಾರ