ಮನೆಯ ಸುತ್ತ ಮುತ್ತ ಪಾರಿವಾಳ ಹಾಗೂ ಗೂಬೇ ಕಾಣಿಸಿಕೊಂಡರೆ ಏನರ್ಥ???

ಮನೆಯ ಸುತ್ತ ಮುತ್ತ ಪಾರಿವಾಳ ಹಾಗೂ ಗೂಬೇ ಕಾಣಿಸಿಕೊಂಡರೆ ಏನರ್ಥ???

ನಮಸ್ತೆ ಪ್ರಿಯ ಓದುಗರೇ, ನಿಮ್ಮ ಮನೆಯ ಸುತ್ತ ಮುತ್ತ ಪಾರಿವಾಳ ಹಾಗೂ ಗೂಬೇ ಕಾಣಿಸಿಕೊಂಡರೆ ಏನರ್ಥ? ಎನ್ನುವ ಕುತೂಹಲಕಾರಿ ಹಾಗೂ ರಹಸ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಅನಾದಿ ಕಾಲದಿಂದಲೂ ಜ್ಯೋತಿಷ್ಯ ಶಾಸ್ತ್ರ ಸೇರಿದಂತೆ ಋಷಮುನಿಗಳು ಕೂಡ ಮನುಷ್ಯನ ಜೀವನದೊಂದಿಗೆ ಪ್ರಾಣಿ ಪಕ್ಷಿಗಳನ್ನು ಅವುಗಳ ನಡತೆಯನ್ನು ತಳುಕಿ ಹಾಕಿದ್ದಾರೆ. ಪಶು ಪಕ್ಷಿಗಳಿಗೂ ಜ್ಯೋತಿಷ್ಯಕ್ಕ ಹತ್ತಿರದ ನಂಟು ಇದೆ ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಪಂಚಾಂಗವನ್ನು ನೋಡಿ ಶುಭ ಘಳಿಗೆ, ಅಶುಭ ಘಳಿಗೆ ಹೇಳುವುದು ಮಾತ್ರವಲ್ಲ, ಪಕ್ಷಿಗಳ ಶಕುನಗಳಿಂದ ಕೂಡ ಶುಭ ಅಶುಭ ಸಮಯವನ್ನು ಹೇಳುವ ಪರಂಪರೆ ಇದೆ. ಪಕ್ಷಿಗಳ ಶಕುನವನ್ನು ಆಧರಿಸಿ ಪಂಚಾಂಗದಲ್ಲಿ ಶುಭ ಮುಹೂರ್ತ ಶುಭ ಸಮಯ ಅಶುಭ ಸಮಯ ಕೆಟ್ಟ ಕಾಲಗಳನ್ನು ಹೇಳಲಾಗುತ್ತದೆ. ಹಾಗೆಯೇ ವಾಸ್ತುಶಾಸ್ತ್ರ ದಲ್ಲು ಸಹ ಪಶು ಪಕ್ಷಿಗಳು, ಹಲ್ಲಿಗಳು, ಹಾವುಗಳು, ಕೀಟಗಳು ಮುಂತಾದವು ಮನೆಗೆ ಹೊಕ್ಕರೆ ಶುಭ ಅಶುಭಗಳು ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

 

 

ಕೋಗಿಲೆಗಳು ಮನೆಯ ಬಳಿ ಬಂದು ಕುಹೂ ಕುಹೂ ಎಂದು ಕೂಗಿದರೆ ಆರ್ಥಿಕವಾಗಿ ಉನ್ನತ ಮಟ್ಟಕ್ಕಿರುವ ಅಶುಭದ ಮುನ್ಸೂಚನೆ ಆಗಿದೆ. ಪಾರಿವಾಳಗಳು ಲಕ್ಷ್ಮಿಗೆ ಪ್ರಿಯ. ಪಾರಿವಾಳಗಳು ಶಾಂತ ಸ್ವಭಾವದ ಪಕ್ಷಿಗಳು. ಈ ಪಾರಿವಾಳಗಳು ದೇವಿ ಮಹಾಲಕ್ಷ್ಮಿಗೆ ಪ್ರಿಯವಾಗಿ ಇರುವುದರಿಂದ ಇವುಗಳನ್ನು ಲಕ್ಷ್ಮಿಯ ಸಂಕೇತ ಎನ್ನುತ್ತಾರೆ. ಆದ್ರೆ ಮನೆಯಲ್ಲಿ ಪಾರಿವಾಳ ತಾನಾಗಿ ಬಂದು ಗೂಡು ಕಟ್ಟಿದರೆ ಅದು ಅಷ್ಟಾಗಿ ಒಳ್ಳೆಯದಲ್ಲ ಎನ್ನಲಾಗುತ್ತದೆ. ಪಾರಿವಾಳಗಳು ರಾಹು ಗ್ರಹದ ಅಂಶಗಳನ್ನು ಹೊಂದಿರುತ್ತವೆ ಹಾಗಾಗಿ ಮನೆಯಲ್ಲಿ ಪಾರಿವಾಳಗಳು ರೆಕ್ಕೆ ಪುಕ್ಕ ಬಿದ್ರೆ ಅದರಿಂದ ರಾಹು ದೋಷ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತೆ. ಜೊತೆಗೆ ಮನೆಯಲ್ಲಿ ನೆಗಟಿವಿಟಿ ಅಂದ್ರೆ ನಕಾರಾತ್ಮಕ ಅಂಶಗಳು ಹೆಚ್ಚಾಗಿ ಕೈ ಹಿಡಿದ ಕೆಲಸಗಳು ನಡೆಯುವುದಿಲ್ಲ ಎನ್ನಲಾಗುತ್ತದೆ. ಗೂಬೆಗಳನ್ನು ಮಹಾಲಕ್ಷ್ಮಿಯ ವಾಹನ ಎನ್ನಲಾಗುತ್ತದೆ. ಅದ್ರಲ್ಲೂ ಬಿಳಿ ಗೂಬೆಗಳು ಲಕ್ಷ್ಮಿಯ ಸ್ವರೂಪ ಅಂತೆ.

 

 

ದೀಪಾವಳಿ ಹೋಳಿ ನವರತ್ರಿಗಳಲ್ಲಿ ಬಿಳಿ ಅಥವಾ ಇನ್ಯಾವುದೇ ಬಣ್ಣದ ಗೂಬೆಗಳನ್ನು ಕಂಡ್ರೆ ಕಲ್ಯಾಣ ಆಗುತ್ತೆ. ಮಾಡುವ ಕೆಲಸಗಳಲ್ಲಿ ಯಶಸ್ಸು, ಏಳಿಗೆ ಸಿಕ್ಕೆ ಸಿಗುತ್ತೆ. ಬಿಳಿ ಹೋಬೇ ನೋಡೋದು ನಮ್ಮ ಮನೆಗೆ ಲಕ್ಷ್ಮಿಯ ಆಗಮನದ ಸಂಕೇತ ಅಂತ ಬಹಳಷ್ಟು ಜನ ನಂಬುತ್ತಾರೆ. ಆದ್ರೆ ಒಂದೇ ದಿಕ್ಕಿನಲ್ಲಿ ಗೂಬೆಗಳು ಕಾಣಿಸಿಕೊಳ್ಳುವುದು ಒಂದೇ ಸ್ವರದಲ್ಲಿ ವಿಚಿತ್ರ ವಿಕಾರವಾಗಿ ಕೂಗುವುದು ಅಶುಭ ಶಕುನಗಳ ಸೂಚನೆ ಆಗಿರುತ್ತೆ. ಈ ವಿಕಾರ ಸ್ವರ ಮನೆಯಲ್ಲಿ ಆರೋಗ್ಯದ ತೊಂದರೆಯ ಸೂಚನೆ ನೀಡುತ್ತದೆ. ಇನ್ನೂ ಗೂಬೆಗಳು ಉಚ್ಚ ಸ್ವರದಲ್ಲಿ ಕೂಗುತ್ತಲೇ ಇದ್ದರೆ ನಮಗೆ ಧನ ಹಾನಿ ಆಗುವ ಸಂದರ್ಭ ಉಂಟಾಗುತ್ತದೆ. ರಾತ್ರಿ ಹೊತ್ತು ನಾವು ಯಾವುದಾದರೂ ಕೆಲಸಕ್ಕೆ ಹೋಗುವಾಗ ಗೋಬೇ ಮಧ್ಯಮ ಸ್ವರದಲ್ಲಿ ಸಂತೋಷವಾಗಿ ಗೂಬೇ ಕೂಗಿದರೆ ಹೋಗುವ ಕೆಲ್ಸ ಸಫಲ ಆಗುತ್ತಂತೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು