ಮನೆಯಲ್ಲಿ ಎಂತಹ ಫೋಟೋಗಳನ್ನು ಹಾಕಿದ್ರೆ ಶುಭ???

ನಮಸ್ತೆ ಪ್ರಿಯ ಓದುಗರೇ, ನೀವು ನಿಮ್ಮ ಮನೆಯಲ್ಲಿ ಯಾವ ಫೋಟೋಗಳನ್ನು ಹಾಕಿದರೆ ಶುಭ ಆಗುತ್ತೆ ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಮನೆ ಸುಂದರವಾಗಿ ಕಾಣಬೇಕು ಅಂತ ನೀವು ಚೆಂದದ ಫೋಟೋಗಳನ್ನು ಹಾಕುವುದು ಸಹಜ ಅಲ್ವಾ? ಆದ್ರೆ ಫೋಟೋಗಳು ಚೆನ್ನಾಗಿವೆ ಅಂತ ಹಿಂದೆ ಮುಂದೆ ಯೋಚನೆ ಮಾಡದೆ ಕೈಗೆ ಸಿಕ್ಕ ಫೋಟೋ ಹಾಕಿದ್ರೆ ಮುಂದೆ ನೀವೇ ಅನಾಹುತಗಳನ್ನು ಎದುರಿಸಬೇಕು ಎನ್ನುವ ರಹಸ್ಯ ಬಹಳಷ್ಟು ಜನಕ್ಕೆ ಗೊತ್ತೇ ಇರಲ್ಲ. ಕೆಲವರು ತಾವಾಗಿಯೇ ಇಷ್ಟ ಪಟ್ಟು ತಂದು ಮನೆಯಲ್ಲಿ ಫೋಟೋಗಳನ್ನು ನೇತು ಹಾಕಿದರೆ ಮತ್ತೆ ಕೆಲವರು ಯಾರೋ ಕೊಟ್ಟ ಗಿಫ್ಟ್ ಅಂತ ನೇತು ಹಾಕುತ್ತಾರೆ. ಆದ್ರೆ ನಾವು ಹಾಕುವ ಫೋಟೋ ಎಂಥದ್ದು ಎನ್ನುವ ಅರಿವು ಇರಬೇಕು. ನೀವು ನಿಮ್ಮ ಮನೆಯಲ್ಲಿ ಯಾವ ಫೋಟೋ ಹಾಕಿದ್ರೆ ಶುಭ ಯಾವ ಫೋಟೋ ಹಾಕಿದ್ರೆ ಅಶುಭ ಎನ್ನುವುದರ ಬಗ್ಗೆ ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿ ತೂಗು ಹಾಕುವ ಫೋಟೋಗಳ ಬಗ್ಗೆ ಭಗವಂತ ಶ್ರೀ ಕೃಷ್ಣ ವಿವರಣೆ ಕೊಟ್ಟಿದ್ದಾನೆ ಎಂದು ಹೇಳಲಾಗುತ್ತದೆ.

 

 

ಹಾಗಿದ್ರೆ ಮನೆಯಲ್ಲಿ ನಾವು ಯಾವ ಫೋಟೋಗಳನ್ನು ಹಾಕಿದ್ರೆ ಶುಭ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. 1. ಅದೃಷ್ಟ ತರುತ್ತೆ ಓಡುವ 7 ಕುದುರೆಗಳ ಚಿತ್ರ. ವಾಸ್ತುಪ್ರಕಾರ ಮನೆಯಲ್ಲಿ 7 ಕುದುರೆಗಳು ಓಡುವ ಚಿತ್ರ ಇಡುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಕಡಲ ತೀರದಲ್ಲಿ 7 ಬಿಳಿ ಕುದುರೆಗಳು ಓಡುತ್ತಿರುವ ಚಿತ್ರವನ್ನು ಮನೆಯ ಗೋಡೆಗಳಲ್ಲಿ ಹಾಕಿದ್ರೆ ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಯೊಂದಿಗೆ ಶಾಶ್ವತವಾಗಿ ವಾಸ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಓಡುವ 7 ಕುದುರೆಗಳ ಚಿತ್ರ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುವ ಮೂಲಕ ಸಕಾರಾತ್ಮಕ ಶಕ್ತಿ ಮತ್ತು ಆಲೋಚನೆಯನ್ನು ಸೃಷ್ಟಿಸುತ್ತದೆ. ಈ ಫೋಟೋವನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಹಾಕಿದ್ರೆ ಮಾತ್ರ ಶುಭಕರ ಆಗಿರುತ್ತೆ. ವಾಸ್ತುಪ್ರಕಾರ ಇಂತಹ ಚಿತ್ರವನ್ನು ಪೂರ್ವ ದಿಕ್ಕಿನಲ್ಲಿ ಹಾಕೋದು ಉತ್ತಮ ಎಂದು ಹೇಳಲಾಗುತ್ತದೆ. ಈ ಚಿತ್ರವನ್ನು ವ್ಯಾಪಾರದ ಅಂಗಡಿ ಅಥವಾ ಕಚೇರಿಗಳಲ್ಲಿ ಹಾಕಬಹುದು. ಈ ಓಡುವ ಕುದುರೆಗಳ ಫೋಟೋವನ್ನು ಕಚೇರಿಯ ಅಥವಾ ನಿಮ್ಮ ಕೆಲಸದ ಕೊಠಡಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಹಾಕಿದ್ರೆ ಅದು ನಿಮ್ಮ ಕೆಲಸವನ್ನು ವೇಗ ಮಾಡುತ್ತದೆ ಎಂದು ಹೇಳುತ್ತಾರೆ ವಾಸ್ತು ತಜ್ಞರು.

 

 

2. ಮನೆಯಲ್ಲಿ ಗರ್ಭವತಿಯರು ಇದ್ದರೆ ಯಶೋಧಾ ಕೃಷ್ಣನ ಫೋಟೋ ಇರಲೇಬೇಕು. ಹೌದು. ನಿಮ್ಮ ಮನೆಯಲ್ಲಿ ಗರ್ಭವತಿಯರು ಇದ್ದರೆ ಅವರು ಸದಾ ಕಾಲ ಹಸನ್ಮುಖಿ ಆಗಿರುವಂತೆ ನೋಡಿಕೊಳ್ಳಬೇಕು. ಬಸಿರಿಯರು ಸದಾ ಕಾಲ ಯಾರ ಚಿತ್ರವನ್ನು ನೋಡುತ್ತರೋ ಅವರಂತೆ ಮಗು ಕಾಣಿಸುತ್ತದೆ ಎಂದು ಹೇಳಲಾಗುತ್ತದೆ. ಅದರಂತೆ ಗರ್ಭವತಿ ಮಲಗುವ ಕೋಣೆಯಲ್ಲಿ ಯಶೋಧಾ ಕೃಷ್ಣನ ಫೋಟೋ ನೇತು ಹಾಕಿದ್ರೆ ಬಹಳ ಒಳ್ಳೆಯದು ಎನ್ನುತ್ತೆ ವಾಸ್ತುಶಾಸ್ತ್ರ. ಈ ಫೋಟೋವನ್ನು ನೋಡುವುದರಿಂದ ಕೃಷ್ಣನಂತಹ ಮುದ್ದಾದ ಮಗು ಜನಿಸುತ್ತೆ ಎನ್ನುವುದು ನಂಬಿಕೆ. ಯಶೋಧಾ ಬಾಲಕೃಷ್ಣ ಅಥವಾ ಬೆಣ್ಣೆ ತಿನ್ನುತ್ತಿರುವ ಬಾಲಕೃಷ್ಣ ಇರುವ ಚಿತ್ರಗಳನ್ನು ಹಾಕುವುದರಿಂದ ಅಮ್ಮ ಮತ್ತು ಹುಟ್ಟುವ ಮಗು ಇಬ್ಬರಿಗೂ ಶುಭ ಆಗುತ್ತೆ. 3. ಮನೆಯ ಹಾಲ್ ನಲ್ಲಿ ಶ್ರೀರಾಮನ ದರ್ಬಾರ್ ಚಿತ್ರವಿದ್ದರೆ ಕುಟುಂಬಕ್ಕೆ ಕಷ್ಟವೇ ಇಲ್ಲ. ಹೌದು. ನಮ್ಮ ಮನೆಯ ಹಾಲ್ ಅಥವಾ ಡೈನಿಂಗ್ ರೋಮ್ ಅಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಸೀತಾ ಮಾತೆ ಸಮೇತವಾಗಿ ದರ್ಬಾರ್ ನಡೆಸುತ್ತಿರುವ ಚಿತ್ರ ಹಾಕುವುದರಿಂದ ಕುಟುಂಬದಲ್ಲಿ ಒಗ್ಗಟ್ಟು, ಶಾಂತಿ, ಸಹ ಬಾಳ್ವೆ ಇರುತ್ತದೆ. ಯಾವುದೇ ರೀತಿಯ ಕುಟುಂಬ ಕಲಹಗಳು ನಡೆಯುವುದಿಲ್ಲ. ಕುಟುಂಬದಲ್ಲಿ ಪತಿ ಪತ್ನಿ ಜಗಳವಿಲ್ಲದೆ ಎಲ್ಲರೂ ಹೊಂದಿಕೊಂಡು ಇರುತ್ತಾರೆ ಎನ್ನುತ್ತದೆ ವಾಸ್ತುಶಾಸ್ತ್ರ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡೀ ಶುಭದಿನ

Leave a comment

Your email address will not be published. Required fields are marked *