ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಈ ಶಾಲೆಗೆ ಹೋಗುವ ಮಕ್ಕಳಲ್ಲಿ ನೆನಪಿನ ಶಕ್ತಿ ಕಡಿಮೆ ಇದ್ದರೆ ಆ ಬುದ್ಧಿ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ಎನ್ನುವ ವಿಷಯದ ಚರ್ಚೆ ಮಾಡೋಣ ಸ್ನೇಹಿತರೆ. ಎಷ್ಟೋ ಸಾರಿ ಮಕ್ಕಳು ನಾನು ತುಂಬಾ ಓದುತ್ತಿನಿ ಆದ್ರೆ ನೆನಪಲ್ಲಿ ಇರೋದೇ ಇಲ್ಲ, ಮತ್ತೆ ಮತ್ತೆ ತಿರುಗಿಸಿ ಓದಬೇಕಾಗುತ್ತದೆ ಅಂತ ಹೇಳುತ್ತಾ ಇರುತ್ತಾರೆ. ಹಾಗಾಗಿ ಅಂಥವರು ಹೇಗೆ ನೆನಪಿನ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳಬಹುದು ಎಂದು ನೋಡೋಣ. ಹಾಗೆ ಮಕ್ಕಳಿಗೆ ಓಡುವ ಅಭ್ಯಾಸದಲ್ಲಿ ಬದಲಾವಣೆ ತರುವುದರಿಂದ ಕೆಲವೊಮ್ಮೆ ಒಳ್ಳೆಯ ನೆನಪಿನ ಶಕ್ತಿ ಉಂಟಾಗುತ್ತದೆ. ನೆನಪಿನ ಶಕ್ತಿ ಎಂದರೇನು ಅಥವಾ ಅದು ಹೇಗೆ ಒಂದಕ್ಕೊಂದು ಜೋಡಣೆ ಆಗಿರುತ್ತೆ ಎಂದು ತಿಳಿದುಕೊಳ್ಳೋಣ. ಶಾರ್ಟ್ ಟೈಂ ಮೆಮೊರಿ ಲಾಂಗ್ ಟರ್ಮ್ ಮೆಮೊರಿ ಅಂತ ಇರುತ್ತೆ. ಲಾಂಗ್ ಟರ್ಮ್ ಮೆಮೊರಿ ಅಂದ್ರೆ ಹಳೆಯದು. ಸಾಕಷ್ಟು ತಿಂಗಳು ಹಾಗೆ ವರ್ಷಗಳ ಹಿಂದಿನದು ನೆನಪಲ್ಲಿ ಇರುವುದು.
ಶಾರ್ಟ್ ಟರ್ಮ್ ಮೆಮೊರಿ ಅಂದ್ರೆ ಇವತ್ತು ಅಂದ್ರೆ ಸ್ವಲ್ಪ ನಿಮಿಷ ಗಂಟೆಗಳ ಹಿಂದೆ ಅಥವಾ ನಿನ್ನೆ ಆಗಿರುವುದು ನಡೆದಿರುವ ವಿಷಯ ನಮ್ಮ ಶಾರ್ಟ್ ಟರ್ಮ್ ಮೆಮೊರಿ ಅಲ್ಲಿ ಇರುತ್ತೆ ಎಂದು ಹೇಳಲಾಗುತ್ತದೆ. ಅದರಲ್ಲಿ ಎರಡು ವಿಧ ವರ್ಬಲ್ ಮೆಮೊರಿ, ವಿಶುವಲ್ ಮೆಮೊರಿ ಅಂತ. ಯಾವ ಯಾವ ವಸ್ತುಗಳನ್ನು ನಾವು ನೋಡ್ತೀವಿ ಅವುಗಳನ್ನು ನೆನಪಲ್ಲಿ ಇಟ್ಟುಕೊಳ್ಳುವುದನ್ನೂ ವಿಶುವಲ್ ಮೆಮೊರಿ ಅಂತ ಹೇಳ್ತೀವಿ. ಯಾವುದನ್ನು ನಾವು ಓದುತ್ತೇವೆ ಅದನ್ನು ನೆನಪಲ್ಲಿ ಇಟ್ಟುಕೊಳ್ಳುವುದು ವರ್ಬಲ್ ಮೆಮೊರಿ ಅಂತ ಹೇಳ್ತೀವಿ. ಇವೆಲ್ಲಾ ನೆನಪಿನ ಶಕ್ತಿಗಳು ನಮ್ಮ ಮೆದುಳಿನ ಬೇರೆ ಬೇರೆ ಭಾಗದಲ್ಲಿ ಅವೆಲ್ಲ ಸ್ಟೋರ್ ಆಗುತ್ತಾ ಇರುತ್ತದೆ. ಆದ್ರೆ ಶಾರ್ಟ್ ಟರ್ಮ್ ಮೆಮೊರಿ ಯ ಒಂದು ಲಕ್ಷಣ ಏನು ಅಂದ್ರೆ ಪೂರ್ತಿಯಾಗಿ ಯಾವುದೇ ವಿಷ್ಯ ನೋಡಿದಾಗ ಓದಿದಾಗ ಅದು ಒಂದೇ ಸರಿಗೆ ನೆನಪಲ್ಲಿ ಉಳಿಯೋದಿಲ್ಲ. ಉದಾಹರಣೆಗೆ ಏನೋ ಒಂದು ವಿಷಯ ಓದಿದ್ದೀರಾ ಅಂದ್ರೆ ಅದು ಕೇವಲ ತಾತ್ಕಾಲಿಕವಾಗಿ ಇರುತ್ತೆ. ಅದು ಇನ್ನೂ ಪೂರ್ತಿಯಾಗಿ ಮೇದುಳಲ್ಲಿ ಕುಳಿತಿರುವುದಿಲ್ಲ. ಅದನ್ನೇ ನಾವು 24 ಗಂಟೆಯ ನಂತರ ಓದಿದಾಗ 80% ಅದಕ್ಕಿಂತ ಕಡಿಮೆ ಆಗುತ್ತೆ.
ಯಾಕಂದ್ರೆ ಅದು ಶಾಶ್ವತವಾಗಿ ಸ್ಟೋರ್ ಆಗಿರಲ್ಲ ಎಂದರ್ಥ. ಅದೇ 24 ಗಂಟೆಯ ಒಳಗಡೆ ಮತ್ತೆ ಅದನ್ನು ರೆಪಿಟ್ ಮಾಡಿದ್ರೆ ಅದು ಹೊಸ ಹೊಸ ಜೊಡನೆಗಳಿಂದ ಲಾಂಗ್ ಟರ್ಮ್ ಮೆಮೊರಿ ಗೆ ಹೋಗುತ್ತೆ. ಆದಷ್ಟು ಮಕ್ಕಳು ಇವತ್ತು ಓದಿರುವುದನ್ನು ಉದಾಹರಣೆಗೆ ಇವತ್ತು ಬೆಳಿಗ್ಗೆ ಓದಿದ ವಿಷಯವನ್ನು ಸಂಜೆ ಅಥವಾ ಮುಂದಿನ 24 ಗಂಟೆ ಒಳಗೆ ಇನ್ನೊಮ್ಮೆ ಓದಿದರೆ ಅದು ಜಾಸ್ತಿ ನಿಮ್ಮ ನೆನಪಲ್ಲಿ ಉಳಿಯುತ್ತೆ. ನೀವು ರಿಪೀಟ್ ಮಾಡಿಲ್ಲ ಅಂದ್ರೆ 80% ಅಷ್ಟು ನೆನಪು ಅಥವಾ ಓದಿದ ವಿಷಯ ನೆನಪಿನಿಂದ ಹೊರತು ಹೋಗುತ್ತೆ. ಇವತ್ತು ಓದಿ ಮುಂದಿನ 24 ಗಂಟೆಯೊಳಗೆ ಓದಿ ಮತ್ತೆ 3-4 ದಿನ ಬಿಟ್ಟು ಓದಿದರೆ ಅದು ಆಗ ನಿಮ್ಮ ಲಾಂಗ್ ಟರ್ಮ್ ಮೆಮೊರಿ ಗೆ ಹೋಗಲ್ಲ. ಯಾಕೆ ಈ ಥರ ಆಗುತ್ತೆ ಅಂದ್ರೆ ಮದುಳಲ್ಲಿ ಶಾರ್ಟ್ ಟರ್ಮ್ ಮೆಮೊರಿ ಕೇವಲ ಒಂದೇ ಭಾಗದಲ್ಲಿ ಅಥವಾ ಸ್ಥಳದಲ್ಲಿ ಸ್ಟೋರ್ ಆಗುತ್ತೆ. ಅದೇ ಲಾಂಗ್ ಟರ್ಮ್ ಮೆಮೊರಿ ಪೂರ್ತಿ ಮೆದುಳಲ್ಲಿ ಹರಡಿಕೊಂಡು ಇರುತ್ತದೆ. ಅದಕ್ಕೆ ಅಷ್ಟು ಬೇಗ ನೆನಪಿನಿಂದ ಹೊರತು ಹೋಗಲ್ಲ. ಅದ್ರಲ್ಲಿ ಮಕ್ಕಳಿಗೆ ಓಡಿಸುವಾಗ ಬರೀ ಅಕ್ಷರಗಳನ್ನು ಬಿಟ್ಟು ಅದರ ಜೊತೆಗೆ ಸ್ವಲ್ಪ ಚಿತ್ರಗಳನ್ನು ತೋರಿಸುತ್ತಾ ಓದಿಸಿದರೆ ಆವಾಗ ವರ್ಬಲ್ ಹಾಗೂ ವಿಶುವಲ್ ಮೆಮೊರಿ ಅನ್ನುವುದು ಕೆಲ್ಸ ಮಾಡುತ್ತೆ. ಆಗ ಅವರಿಗೆ ಓದಿದ್ದು ಅಷ್ಟು ನೆನಪಲ್ಲಿ ಇರದೇ ಹೋದ್ರೂ ಯಾವ ಚಿತ್ರಗಳನ್ನು ನೋಡಿರುತ್ತಾರೆ ಅದನ್ನಾದರೂ ನೆನಪಲ್ಲಿ ಇಟ್ಟುಕೊಳ್ಳುತ್ತಾರೆ. ಈ ಸಿಸ್ಟಮ್ ಕೇವಲ ಮಕ್ಕಳಿಗೆ ಅಂತ ಅಲ್ಲ. ಎಲ್ಲಾ ವಯಸ್ಸಿನವರಿಗೂ ಹೀಗೆ ಇರುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.