ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಇನ್ಫೆಕ್ಷನ್. ಈ ನ್ಯುಮೋನಿಯಾ ಎಂದರೇನು ಮತ್ತು ಅದು ಯಾವ ರೀತಿ ಹರಡುತ್ತದೆ? ಅದರ ಲಕ್ಷಣಗಳು ಏನು? ನ್ಯುಮೋನಿಯಾ ವನ್ನಾ ಹೇಗೆ ಪತ್ತೆ ಮಾಡಬಹುದು, ಮತ್ತೆ ಅದನ್ನು ಹೇಗೆ ಆರೈಕೆ ಮಾಡಬಹುದು, ನ್ಯುಮೋನಿಯಾ ರೋಗವನ್ನು ನಿಯಂತ್ರಿಸಲು ಯಾವುದಾದರೂ ಚಿಕಿತ್ಸೆ ರಕ್ಷಣೆ ಇದೀಯಾ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ಈಗ ಮಕ್ಕಳಲ್ಲಿ ಕಾಡುವ ನ್ಯುಮೋನಿಯಾ ಎಂದರೇನು ಎಂದು ಮೊದಲು ನೋಡೋಣ. ನ್ಯುಮೋನಿಯಾ ಅಂದ್ರೆ ಶ್ವಾಸಕೋಶದ ಸೋಂಕು ಅಥವಾ ಶ್ವಾಸಕೋಶದ ಇನ್ಫೆಕ್ಷನ್ ಎಂದು ಹೇಳಬಹುದು. ಈ ಸೋಂಕು ಬ್ಯಾಕ್ಟೀರಿಯಾ ಇಂದ ಬರಬಹುದು, ವೈರಸ್ ಅಥವ ಶಿಲೀಂದ್ರ ದಿಂದ ಬರಬಹುದು, ಅಥವ ಇತರೆ ನಾನ್ ಇನ್ಫೆಕ್ಷನ್ ಕಾಸ್ ಗಳಿಂದ ಸಹ ಬರಬಹುದು.
ಹಾಗಾದ್ರೆ ಈ ನ್ಯುಮೋನಿಯಾ ಹೇಗೆ ನಮ್ಮ ದೇಹವನ್ನು ಪ್ರವೇಶಿಸುತ್ತದೆ ಎಂದು ತಿಳಿಯೋಣ. ಉಸಿರಾಡುವುದರ ಮೂಲಕ, ಬೇರೆ ವ್ಯಕ್ತಿಗೆ ಈ ನ್ಯುಮೋನಿಯಾ ಇದ್ದರೆ ಅವರ ಗಾಳಿ ನಮಗೆ ತಗುಲಿ ಉಸಿರಾಟ ಪ್ರಕ್ರಿಯೆಯಿಂದ ಸಹ ಇದು ದೇಹದ ಶ್ವಾಸಕೋಶ ವನ್ನಾ ಪ್ರವೇಶ ಮಾಡುತ್ತೆ. ಹಾಗಾಗಿ ಈ ಶಾಲೆಗೆ ಹೋಗುವ ಮಕ್ಕಳಲ್ಲಿ ಒಂದು ಮಗೂಗೆ ನೆಗಡಿ ಶೀತ ಆಗಿದ್ರೆ ಇನ್ನೊಂದು ಮಗುವಿಗೂ ಬ್ಯಾಕ್ಟೀರಿಯಾ ಪಾಸ್ ಆಗಿ ಈ ತರಹದ ಸಮಸ್ಯೆ ಉಂಟಾಗಿ ಅದು ನ್ಯುಮೋನಿಯಾ ಆಗುವ ಸಾಧ್ಯತೆ ಇದೆ. ಹಾಗಾದ್ರೆ ಈ ನ್ಯುಮೋನಿಯಾ ದ ಲಕ್ಷಣಗಳು ಏನೇನು ? ಮೇಲೆ ಹೇಳಿದ ರೀತಿ ವೈರಸ್, ಅಥವಾ ಬ್ಯಾಕ್ಟೀರಿಯಾ ಇಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇನ್ನೂ ಲಕ್ಷಣಗಳನ್ನೂ ನೋಡುವುದಾದರೆ, ಅತಿಯಾದ ಜ್ವರ, ಉಸಿರಾಟ ಪ್ರಕ್ರಿಯೆ ಜಾಸ್ತಿ ಆಗುವಂಥದ್ದೂ, ಸುಸ್ತು ಆಗುವುದು, ತಲೆ ನೋವು, ಪಕ್ಕೆಲುಬುಗಳ ಊತ ಬರುವುದು, ಬೇಧಿ ಆಗುವುದು, ಹೀಗೆ ಆಗಿ ಅದು ಶ್ವಾಸಕೋಶಗಳಿಗೆ ಕೀವು ಆಗುವಂತಹ ಸಾಧ್ಯತೆ ಇರುತ್ತದೆ. ಈ ನ್ಯುಮೋನಿಯಾ ನಿಮ್ಮ ಮಗುವನ್ನು ಕಾಡುತ್ತಿದೆ ಎಂದು ಹೇಗೆ ಪತ್ತೆ ಮಾಡುವುದು ಎಂದು ನೋಡುವುದಾದರೆ, ಅತಿಯಾದ ಜ್ವರ ಬಂದು ಪಕ್ಕೇಲುಬುಗಳ ಎಳೆತ ಆಗಿ, ಮಗು ಜಾಸ್ತಿ ಏದುಸಿರು ತೆಗೆದುಕೊಳ್ಳುತ್ತಾ ಇದೆ ಅಂದ್ರೆ ನೀವು ಮಕ್ಕಳ ವೈದ್ಯರ ಬಳಿ ತುರ್ತಾಗಿ ಕರೆದುಕೊಂಡು ಹೋಗಬೇಕು.
ಆಗ ಮಕ್ಕಳ ವೈದ್ಯರು ಪರೀಕ್ಷಿಸಿ ಶ್ವಾಸಕೋಶ ಎಕ್ಸರೇ ಮಾಡಿ ನ್ಯುಮೋನಿಯಾ ಇದೆಯೋ ಇಲ್ಲವೋ ಎಂದು ತಿಳಿಸಿ ಕೊಡುತ್ತಾರೆ. ಒಂದುವೇಳೆ ನ್ಯೂಮೋನಿಯಾ ಇದೆ ಅಂದಾದರೆ ಏನು ಮಾಡಬೇಕು ಅಂದ್ರೆ. ವೈದ್ಯರು ಸ್ವಲ್ಪ ಪ್ರಮಾಣದ ನ್ಯುಮೋನಿಯಾ ಇದ್ದರೆ ಆಂಟಿ ಬಯೋಟಿಕ್ ಔಷಧಿ ಕೊಟ್ಟು ನಿಮ್ಮ ಮನೆಯಲ್ಲಿ ಆರೈಕೆ ಮಾಡುವ ರೀತಿ ನಿಯಮಗಳನ್ನು ಹೇಳಿಕೊಡುತ್ತಾರೆ. ಇಲ್ಲ ಸೀರಿಯಸ್ ಆಗಿದೆ ಅಂದ್ರೆ, ಮಗು ಊಟಾ ಮಾಡ್ತಾ ಇಲ್ಲ, ನಿಲ್ಲದೆ ವಾಂತಿ ಆಗುತ್ತಿದೆ, ಅಥವಾ ಮಗುವಿನ ಏಕಾಗ್ರತೆ ಕೊರತೆ ಆಗ್ತಿದೆ, ಫಿಡ್ಸ್ಸ್ ಬರುತ್ತಾ ಇದೆ ಅಂದಾಗ ಮಗುವನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ, ಐವಿ ಆಂಟಿ ಬಯೋಟಿಕ್ ಮೂಲಕ ಚಿಕಿತ್ಸೆ ಕೊಡಬಹುದು. ಹಾಗಾದ್ರೆ ನ್ಯುಮೋನಿಯಾ ಬಾರದೆ ರೀತಿ ಹೇಗೆ ಮಕ್ಕಳನ್ನು ಜಾಗೃತ ಮಾಡಬಹುದು ಅಂದ್ರೆ, ನಮ್ಮ ಕೈಗಳನ್ನು ತೊಳೆದುಕೊಳ್ಳುವ ಮೂಲಕ, ರಿಪಿಟೇಡ್ ಆಗಿ ಮುಖ ಕವಚ ಅಂದ್ರೆ ಮಾಸ್ಕ್ ಬಳಸುವುದರ ಮೂಲಕ ನಾವು ಇದನ್ನು ಬಾರದೆ ತಡೆಯಬಹುದು. ಸರ್ಕಾರ ಈಗ ನ್ಯುಮೋನಿಯಾ ವ್ಯಾಕ್ಸಿನೇಷನ್ ಪ್ರಾರಂಭ ಮಾಡಿದೆ. ಈ ವಕ್ಸಿನೇಶನ್ ಹಾಕಿಸುವುದು ಒಂದು ಒಳ್ಳೆಯ ಮಾರ್ಗ ಆಗಿದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.