ಬೆಳಿಗ್ಗೆ ಉಪಹಾರ ಮಾಡುವ ಮುಂಚೆ ಮೊಳಕೆ ಕಾಳು ಸೇವನೆ ಮಾಡಿದರೆ ಏನಾಗುತ್ತೆ ಗೊತ್ತಾ..???

ಬೆಳಿಗ್ಗೆ ಉಪಹಾರ ಮಾಡುವ ಮುಂಚೆ ಮೊಳಕೆ ಕಾಳು ಸೇವನೆ ಮಾಡಿದರೆ ಏನಾಗುತ್ತೆ ಗೊತ್ತಾ..???

ನಮಸ್ತೆ ಪ್ರಿಯ ಓದುಗರೇ, ಉತ್ತಮವಾದ ಆರೋಗ್ಯವಂತ ಜೀವನ ನಡೆಸಲು ಈಗಿನ ಕಾಲದಲ್ಲಿ ಬಹಳ ಕಷ್ಟಕರ ಆಗಿದೆ. ಅದ್ರಲ್ಲಿ ಸಸ್ಯಾಹಾರಿಗಳಿಗೆ ಅಗತ್ಯವಾದ ಪೌಷ್ಟಿಕಾಂಶಗಳು ಸಿಗಬೇಕು ಅಂದ್ರೆ ಉತ್ತಮ ಆಹಾರ ಸೇವನೆ ಮಾಡುವುದು ಅನಿವಾರ್ಯ ಆಗಿದೆ. ಆದ್ರೆ ಇಂದಿನ ದಿನಗಳಲ್ಲಿ ನಮ್ಮ ಆಹಾರದಲ್ಲಿ ಕಲಬೆರಕೆ ಹೆಚ್ಚಾಗಿದೆ. ಯಾವ ತುತ್ತಿನಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಎಂದು ಹುಡುಕುವುದು ಅಸಾಧ್ಯವಾಗಿದೆ. ಆದ್ರೆ ನಾವು ಧಾನ್ಯಗಳನ್ನು ಆಹಾರ ಪದಾರ್ಥದಲ್ಲಿ ಬಳಸದಂತೆ ಅದನ್ನು ನೆನೆಸಿ ಮೊಳಕೆ ಬರಿಸಿ ಸೇವನೆ ಮಾಡುವುದರಿಂದ ಅರೋಗ್ಯವಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಹಲವಾರು ಸಂಶೋಧನೆಗಳು ಮೊಳಕೆ ತರಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಪೌಷ್ಟಿಕಾಂಶಗಳು ದೊರೆಯುತ್ತದೆ ಎಂದು ಸಾಬೀತು ಪಡಿಸಿದೆ. ಅಷ್ಟಕ್ಕೂ ಈ ಕಾಳಿನಲ್ಲಿ ಏನಿದೆ ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನ ತಿಳಿಸಿಕೊಡುತ್ತದೆ. ಈ ಮೊಳಕೆ ಬಂದಿರುವ ಕಾಳಿನಲ್ಲಿ ಅಗತ್ಯವಾಗಿರುವ ಪ್ರೊಟೀನ್ ಹಾಗೂ ಪೌಷ್ಟಿಕಾಶಗಳು ಒಳಗೊಂಡಿರುತ್ತದೆ. ಹೆಸರು ಕಾಳು, ಹುರುಳಿ ಕಾಳು, ಕಡ್ಲೆ ಮುಂತಾದ ಕಾಳುಗಳನ್ನು ಮೊಳಕೆ ಕಟ್ಟಿ ಸೇವನೆ ಮಾಡಬಹುದು.

 

 

ಈ ರೀತಿ ಮೊಳಕೆ ಬಂದಿರುವ ಕಾಳುಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಖನಿಜಗಳು ಮತ್ತು ವಿಟಮಿನ್ಗಳು, ಪೌಷ್ಟಿಕಾಂಶಗಳು, ಪ್ರೊಟೀನ್ ಗಳು ಆಹಾರದ ರೂಪದಲ್ಲಿ ನಮ್ಮ ದೇಹವನ್ನು ಸೇರುತ್ತದೆ. ಈ ರೀತಿ ಮೊಳಕೆ ಬಂದಿರುವ ಕಾಳುಗಳನ್ನು ಬೆಳಗಿನ ಉಪಹಾರಕ್ಕೆ ಸೇವನೆ ಮಾಡುವುದು ತುಂಬಾ ಒಳ್ಳೆಯದು. ಈ ಮೊಳಕೆ ಬಂದಿರುವ ಕಾಳುಗಳನ್ನು ಸೇವನೆ ಮಾಡುವುದರಿಂದ ನಮ್ಮ ಮಾಂಸ ಖಂಡಗಳು ಸದೃಢ ಆಗುತ್ತದೆ. ಅಲ್ಲದೆ ಮಾಂಸ ಖಂಡಗಳ ಬೆಳವಣಿಗೆಗೆ ಸಹಾಯ ಮಾಡುತ್ತೆ. ಜೊತೆಗೆ ನಮ್ಮ ಬೊಜ್ಜನ್ನು ನಿವಾರಣೆ ಮಾಡುತ್ತದೆ. ಇದು ಡಯೆಟ್ ಮಾಡುವವರಿಗೆ ತುಂಬಾ ಒಳ್ಳೆಯದು. ಈ ಕಾಳುಗಳು ಸುಲಭವಾಗಿ ಜೀರ್ಣವಾಗುವ ಶಕ್ತಿಯನ್ನು ಹೊಂದಿರುತ್ತವೆ. ಇದರಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮಲಬದ್ದತೆ ಸಮಸ್ಯೆ ಕಾಡುವುದಿಲ್ಲ. ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್ ಗಳು ದೊರೆಯುತ್ತವೆ. ವಿಟಮಿನ್ ಕೆ, ಸಿ ದೊರೆಯುತ್ತವೆ. ಈ ವಿಟಮಿನ್ ಗಳು ನಮ್ಮ ದೇಹದ ಜೀರ್ಣತೆಯನ್ನು ಪಚನತೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ನಿಷಕ್ತಿಯನ್ನು ಕಡಿಮೆ ಮಾಡುತ್ತದೆ. ಮೊಳಕೆ ಕಾಳಿನಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟು ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 

 

ರೋಗ ನಿರೋಧಕ ಶಕ್ತಿ ಇರುವುದರಿಂದ ನಿಶ್ಯಕ್ತಿ ಕಡಿಮೆ ಆಗುತ್ತದೆ. ಮಕ್ಕಳಿಗೆ ದಿನವೂ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಮಕ್ಕಳ ದೇಹ ಹಾಗೂ ಬುದ್ಧಿಯ ಬೆಳವಣಿಗೆ ಉತ್ತಮವಾಗಿರುತ್ತದೆ. ಮತ್ತು ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು. ಮೊಳಕೆ ಒಡೆದ ಕಾಳುಗಳಲ್ಲಿ ವಿಟಮಿನ್ ಏ ಸಮೃದ್ಧವಾಗಿ ಇರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಹಾಗೂ ದೃಷ್ಟಿ ಸುಧಾರಿಸಲು ನೆರವಾಗುತ್ತದೆ. ಅಲ್ಲದೆ ಈ ಮೊಳಕೆ ಒಡೆದ ಕಾಳುಗಳ ಸೇವನೆಯಿಂದ ಕಣ್ಣಿನ ಜೀವಕೋಶಗಳಿಗೆ ಫ್ರೀ ರಾಡಕಲ್ ಎಂಬ ಕಣಗಳಿಂದ ಎದುರಾಗುವ ಅಪಾಯಗಳಿಂದ ತಪ್ಪಿಸಬಹುದು. ಮೊಳಕೆ ಕಾಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿ ಕಾಳನ್ನು ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶ ಸಿಗುತ್ತದೆ. ಈ ಮೊಳಕೆ ಕಾಳುಗಳಲ್ಲಿ ತಾಜಾ ಇರುವಾಗಲೇ ಸೇವನೆ ಮಾಡುವುದು ಉತ್ತಮ. ಇಂದಿನ ದಿನಗಳಲ್ಲಿ ಉತ್ತಮವಾದ ತಾಜಾ ತರಕಾರಿಗಳು ಹಣ್ಣುಗಳು ಸಿಗುವುದು ಕಷ್ಟಕರ. ನಾವು ತಿನ್ನುವ ಆಹಾರ ಪದಾರ್ಥಗಳನ್ನು ರಾಸಾಯನಿಕ ಗೊಬ್ಬರಗಳನ್ನು ಸಿಂಪಡಿಸಿ ಬೆಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇಂತಹ ವಾತಾವರಣದಲ್ಲಿ ಪೌಷ್ಟಿಕಾಂಶದ ಕೊರತೆ ಇಂದಾಗಿ ಆರೋಗ್ಯದಲ್ಲಿ ಏರುಪೇರು ಆಗುವುದನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಮೊಳಕೆ ಒಡೆದ ಧಾನ್ಯಗಳು ಅಥವಾ ಕಾಳುಗಳನ್ನು ಹಸಿಯಾಗಿ ಸೇವಿಸುತ್ತಾ ಸ್ವಲ್ಪ ಮಟ್ಟಿಗೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸಬಹುದು. ನೋಡಿದ್ರಲ್ವ ಸ್ನೇಹಿತರೆ ಮೊಳಕೆ ಕಾಳು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆಹಾರ