ನಿಮ್ಮ ಕಿಡ್ನಿ ಚೆನ್ನಾಗಿರಬೇಕು ಎಂದರೆ ಇಷ್ಟು ಮಾಡಿ ಸಾಕು.

ನಿಮ್ಮ ಕಿಡ್ನಿ ಚೆನ್ನಾಗಿರಬೇಕು ಎಂದರೆ ಇಷ್ಟು ಮಾಡಿ ಸಾಕು.

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವೆಲ್ಲರೂ ಕೂಡ ನಮಗೆ ಯಾವಾಗಲಾದರೂ ರೋಗ ಬಂದರೆ ಅದ ರೋಗ ನಮಗೆ ಹೇಗೆ ಬಂತು ಮತ್ತು ಆ ರೋಗವನ್ನು ತಡೆಗಟ್ಟುವುದು ಹೇಗೆ ಮತ್ತು ರೋಗ ತಡೆಗಟ್ಟಲು ಯಾವ ರೀತಿಯಾಗಿ ಸಲಹೆಗಳನ್ನು ಪಾಲಿಸಬೇಕು ಅಂತ ರೋಗ ಬಂದ ಮೇಲೆ ಎಲ್ಲರನ್ನೂ ಕೇಳುತ್ತೇವೆ ಮತ್ತು ಕೆಲವೊಮ್ಮೆ ಇಂಟರ್ನೆಟ್ ಅಲ್ಲಿ ಕೂಡ ಹುಡುಕಲು ಶುರು ಮಾಡುತ್ತೇವೆ. ಆದರೆ ರೋಗ ಬರುವುದಕ್ಕಿಂತ ಮುಂಚೆಯೇ ರೋಗವನ್ನು ತಡೆಗಟ್ಟಲು ಹಾಗೂ ರೋಗ ಬರದಂತೆ ತಡೆಯಲು ಯಾವುದೇ ರೀತಿ ಸಲಹೆಗಳನ್ನು ನೋಡುವುದಿಲ್ಲ. ಹಾಗಾಗಿ ನಾವು ನಮ್ಮ ಅರೋಗ್ಯದ ಮೇಲೆ ಸಾಕಷ್ಟು ನಿರ್ಲಕ್ಷ್ಯ ವಹಿಸಿ ರೋಗಕ್ಕೆ ತುತ್ತಾಗುತ್ತ ಇರುತ್ತೇವೆ. ಸ್ನೇಹಿತರೆ ಇಂಗ್ಲಿಷ್ ಅಲ್ಲಿ ಒಂದು ನಾಣ್ನುಡಿ ಇದೆ. ಪ್ರಿಕಾಶನ್ ಇಸ್ ಬೆಟ್ಟರ್ ದ್ಯಾನ್ ಕ್ಯೂರ್ ಅಂತ. ಅಂದರೆ ರೋಗ ಬರುವುದಕ್ಕೆ ಮುಂಚೆನೇ ಚಿಕಿತ್ಸೆ ಉತ್ತಮ ಅಂತಾರೆ. ಹಾಗಾಗಿ ನಾವು ಯಾವುದೂ ಒಂದು ರೋಗ ಬರುವುದಕ್ಕೆ ಮುಂಚೆ ನಮ್ಮ ಆರೋಗ್ಯವನ್ನೂ ಸರಿಯಾಗಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಅದರಲ್ಲಿ ನಮ್ಮ ಮೂತ್ರ ಪಿಂಡವನ್ನು ನಾವು ಆರೋಗ್ಯದಿಂದ ಇಟ್ಟುಕೊಂಡರೆ ನಾವು ಸಾಕಷ್ಟು ಚೆನ್ನಾಗಿರುತ್ತವೆ.

 

 

ಇವತ್ತಿನ ಲೇಖನದಲ್ಲಿ ನಮ್ಮ ಕಿಡ್ನಿಗೆ ಯಾವುದೇ ರೀತಿಯ ರೋಗ ಬರದಂತೆ ತಡೆಯಲು ಕೆಲವೊಂದಿಷ್ಟು ಸಲಹೆಗಳನ್ನು ನೀಡಲಾಗಿದೆ. ಆ ಸಲಹೆಗಳನ್ನು ನೀವು ಪಾಲಿಸಿದರೆ ನಿಮ್ಮ ಕಿಡ್ನಿಗೆ ಮುಂದೆ ರೋಗ ಬರದಂತೆ ನೀವು ತಡೆಯಬಹುದು. ಹಾಗಿದ್ರೆ ಆ ಸಲಹೆಗಳನ್ನು ಯಾವುವೆಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ತಲೆನೋವಿಗೆ, ಹೊಟ್ಟೆನೋವಿಗೆ, ಬೆನ್ನುನೋವಿಗೆ ಮತ್ತು ಮೈ ಕೈ ನೋವಿಗೆ ಎಲ್ಲವಕ್ಕೂ ಕೂಡ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇರುತ್ತೇವೆ, ಆದರೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕಿಡ್ನಿಗೆ ಮುಂದೆ ತುಂಬಾ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಮಾನ್ಯವಾದ ತಲೆನೋವು, ಸೊಂಟನೋವು, ಬೆನ್ನುನೋವಿಗೆ ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಸೇವನೆ ಮಾಡುವುದನ್ನು ನಿಲ್ಲಿಸಬೇಕಾಗತ್ತದೇ. ಅದ್ರಲ್ಲೂ ನಿಮ್ಮ ವಯಸ್ಸು ಚಿಕ್ಕದಾಗಿದ್ದರೆ ಸಾಮಾನ್ಯವಾದ ತಲೆನೋವು, ಮೈ ಕೈ ನೋವು ಮತ್ತು ಬೆನ್ನು ನೋವಿಗೆ ನೀವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.  ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ ಇದರಿಂದ ನಿಮಗೆ ಬೆನ್ನು ನೋವು, ಸೊಂಟ ನೋವು ಈ ರೀತಿಯ ಸಮಸ್ಯೆಗಳು ಬರುವುದಿಲ್ಲ. ಇನ್ನೂ ನಿಮಗೇನಾದರೂ ಸಕ್ಕರೆ ಖಾಯಿಲೆ ಇದ್ರೆ ನಿಮ್ಮ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಹೌದು ಸಕ್ಕರೆ ಕಾಯಿಲೆ ಸಮಸ್ಯೆ ಇದ್ದವರಿಗೆ ಕಿಡ್ನಿ ಸಮಸ್ಯೆ ಬರುವುದು ತುಂಬಾನೇ ಸಾಮಾನ್ಯವಾಗಿರುತ್ತದೆ. ದೀರ್ಘ ಕಾಲದ ಕಿಡ್ನಿ ಸಮಸ್ಯೆಗೆ ಡಯಾಬಿಟಿಸ್ ಕೂಡ ಕಾರಣ ಆಗಬಹುದು. ಆದ್ದರಿಂದ ನಿಮ್ಮ ಸಕ್ಕರೆ ಮಟ್ಟವನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ನೀವು ಮಧ್ಯಪಾನ ಧೂಮಪಾನ ದಿಂದ ಕೂಡ ದೂರವಿರಿ.

 

 

ಯಾರು ಮಧ್ಯಪಾನ ಮತ್ತು ಧೂಮಪಾನ ಅತಿಯಾಗಿ ಮಾಡುತ್ತಾರೋ ಅವರಿಗೆ ಹೆಚ್ಚು ಕಿಡ್ನಿ ಸಮಸ್ಯೆಗಳು ಬರುತ್ತವೆ. ಹಾಗಾಗಿ ಇಂತಹ ದುಶ್ಚಟಗಳಿಂದ ದೂರವಿರುವುದು ತುಂಬಾನೇ ಒಳ್ಳೆಯದು. ಮತ್ತು ಜಂಕ್ ಫುಡ್ ಗಳಿಂದ ಕೂಡ ದೂರವಿರಿ. ಅಧಿಕ ಮಸಾಲೆ, ಉಪ್ಪಿನಕಾಯಿ ಮತ್ತು ಕರಿದಿರುವಾ ತಿಂಡಿಗಳನ್ನು ಸೇವನೆ ಮಾಡುವುದು ಅಷ್ಟೊಂದು ಒಳ್ಳೆಯದೆನಲ್ಲ. ಹಾಗಾಗಿ ಫಾಸ್ಟ್ ಫುಡ್ ಹಾಗೂ ಜಂಕ್ ಫುಡ್ ಗಳನ್ನು ಅತಿಯಾಗಿ ಸೇವಿಸುವುದು ಕಡಿಮೆ ಮಾಡಿ ಹಾಗೂ ನಿಮ್ಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಇದು ನಿಮ್ಮ ಕಿಡ್ನಿಯ ಅರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಅತಿಯಾದ ತೂಕವಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಇನ್ನೂ ನಮ್ಮ ದೇಹಕ್ಕೆ ನೀರು ತುಂಬಾನೇ ಮುಖ್ಯವಾಗಿರುತ್ತದೆ. ಯಾರು ಕಡಿಮೆ ನೀರು ಕುಡಿಯುತ್ತಾರೆ ಅವರಿಗೆ ಕಿಡ್ನಿಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಾ ಇರುತ್ತವೆ. ಯಾಕಂದ್ರೆ ನಮ್ಮ ಮೂತ್ರ ಪಿಂಡವು ರಕ್ತವನ್ನು ಸ್ವಚ್ಛಗೊಳಿಸುವ ಮತ್ತು ದೇಹದಿಂದ ಹಾನಿಕಾರಕ ವಸ್ತುವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದಕ್ಕೆ ನೀರು ತುಂಬಾನೇ ಅಗತ್ಯ ಇರುತ್ತದೆ. ನೀವೇನಾದರೂ ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಕಡಿಮೆ ನೀರನ್ನು ಕುಡಿಯುತ್ತಾ ಇದ್ದರೆ ಅಂತಹ ತಪ್ಪುಗಳನ್ನು ಮಾಡಬೇಡಿ. ನಿಮಗೇನಾದರೂ ನೀರು ಕುಡಿಯಲು ನೆನಪಾಗದೆ ಇದ್ದರೆ ನೀವು ನಿಮ್ಮ ಮೊಬೈಲ್ ನಲ್ಲಿ ನೀರು ಕುಡಿಯಲು ಅಲಾರಂ ಇಟ್ಟುಕೊಳ್ಳಿ. ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈಗ ನೀರು ಕುಡಿಯಲು ನಿಮಗೆ ನೆನಪು ಮಾಡಲು ಹಲವಾರು ರೀತಿಯ ಅಪ್ಲಿಕೇಶನ್ ಗಳು ಸಿಗುತ್ತವೆ. ಆ ಅಪ್ಲಿಕೇಶನ್ ಗಳನ್ನು ನೀವು ಇನ್ಸ್ಟಾಲ್ ಮಾಡಿ. ಅವು ನಿಮಗೆ ನೀರು ಕುಡಿಯಲು ನೆನಪು ಮಾಡುತ್ತವೆ. ಇನ್ನೂ ನಿಮ್ಮ ವಯಸ್ಸು 35-40 ವರ್ಷ ಆಗಿದ್ದರೆ, ನೀವು ಕಾಲ ಕಾಲಕ್ಕೆ ಬಿಪಿ ಹಾಗೂ ಸಕ್ಕರೆ ಕಾಯಿಲೆ ಬಗ್ಗೆ ತಪಾಸಣೆ ಮಾಡಿಸುತ್ತಾ ಇರಬೇಕು. ಮತ್ತು ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕಿಡ್ನಿ ಸಮಸ್ಯೆ ಇದ್ದರೆ ನೀವು ಪ್ರತಿ ವರ್ಷ ಇಡೀ ನಿಮ್ಮ ಶರೀರದ ಬಗ್ಗೆ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳಯದು. ಈ ಮಾಹಿತಿ ಉಪಯೋಗಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ