ನರದೋಷದಿಂದ ಕಣ್ಣಿನ ಸಮಸ್ಯೆಗಳು ಬರಬಹುದು ಎಚ್ಚರ..!!!

ನರದೋಷದಿಂದ ಕಣ್ಣಿನ ಸಮಸ್ಯೆಗಳು ಬರಬಹುದು ಎಚ್ಚರ..!!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನರಗಳ ಸಮಸ್ಯೆಯಿಂದ ಕಣ್ಣು ಮಂಜಾಗುವುದೂ, ಅಥವಾ ಕಣ್ಣು ಕಾಣಿಸದೇ ಹೋಗುವುದು. ಸಾಮಾನ್ಯವಾಗಿ ನಾವು ಯಾರಿಗಾದರೂ ಕಣ್ಣು ಚೆನ್ನಾಗಿ ಕಾಣುತ್ತಿಲ್ಲ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದ್ರೆ ನಾವು ಕಣ್ಣಿನ ವೈದ್ಯರ ಬಳಿ ಹೋಗುತ್ತೇವೆ. ಸರಿ ಕಣ್ಣಿನ ವೈದ್ಯರ ಬಳಿ ಹೋದ್ರೆ ಅಲ್ಲಿ ಕಣ್ಣಿನ ಎಷ್ಟೋ ಸಮಸ್ಯೆಗಳು ಅಂದ್ರೆ ಕೆಟರಾಕ್ಟ್, ಬೇರೆ ಏನೇ ಸಮಸ್ಯೆ ಬಂದಾಗ ಅವರಲ್ಲಿ ಅಂದ್ರೆ ಕಣ್ಣಿನ ವೈದ್ಯರು ಚಿಕಿತ್ಸೆ ಕೊಡುತ್ತಾರೆ. ಕಣ್ಣಿನ ಗುಡ್ಡೆ ಸಂಬಂಧ ಪಟ್ಟ ಏನೇ ಸಮಸ್ಯೆಗಳು ಇದ್ರೆ ಅವರು ನಿಮ್ಮ ತೊಂದರೆಗೆ ಅನುಗುಣವಾಗಿ ಚಿಕಿತ್ಸೆ ಕೊಡುತ್ತಾರೆ. ಆದ್ರೆ ಎಷ್ಟೋ ಸಾರಿ ಕಣ್ಣು ಕಾಣಿಸದೇ ಇರುವ ತೊಂದರೆ ಬರೀ ಕಣ್ಣಿನ ಗುಡ್ಡೆ ಇಂದ ಮಾತ್ರ ಆಗಿರುವುದಿಲ್ಲ. ಕಣ್ಣಿಂದ ನರಗಳು ಕನೆಕ್ಟ್ ಆಗಿ ಬ್ರೈನ್ ಗೆ ಹೋಗುತ್ತವೆ ಆ ನರಗಳ ಸಮಸ್ಯೆ ಇರಬಹುದು ಅಥವಾ ಬ್ರೈನ್ ಮೆದುಳಿನ ಸಮಸ್ಯೆ ಇರಬಹುದು, ಇಲ್ಲ ಎರಡೂ ಸೇರಿ ಕಣ್ಣು ಕಾಣಿಸದೇ ಹೋಗಬಹುದು. ಎಷ್ಟೋ ಸರೀ ಕಣ್ಣಿಗೆ ಸಂಭಂದಿಸಿದ ಸಮಸ್ಯೆ ಇದ್ರೆ ಕಣ್ಣಿನ ವೈದ್ಯರಿಗೂ ತೋರಿಸಿ ಸಾಧ್ಯ ಆದ್ರೆ ಒಮ್ಮೆ ನ್ಯೂರಲಾಜಿಸ್ಟ್ ಅಂದ್ರೆ ನರಗಳ ತಜ್ಞರಿಗೂ ತೋರಿಸಿ.

 

ಯಾಕೆ ಅಂದ್ರೆ ಒಂದುವೇಳೆ ನಿಮಗೆ ಕಣ್ಣಿನ ಪೊರೆಯ ಸಮಸ್ಯೆ ಆಗಿದ್ರೆ ಹಂತದಿಂದ ಹಂತಕ್ಕೆ ಸಮಸ್ಯೆ ಕಾಣಿಸುತ್ತ ಹೋಗುತ್ತೆ. ಒಂದೇ ವೇಳೆಗೆ ಆಗಲ್ಲ. ಸಡನ್ ಆಗಿ ಕಣ್ಣು ಕಾಣಿಸದೇ ಹೋಗುವುದು ಆಗಲ್ಲ. ಅದೇ ನರಗಳ ಸಮಸ್ಯೆ ಇದ್ರೆ ಸ್ಟ್ರೋಕ್ ಆಗಿದ್ದರೆ, ಕಣ್ಣಿನ ನರಗಳು ಹಾದು ಹೋಗುವ ಜಾಗದಲ್ಲಿ ಸ್ಟ್ರೋಕ್ ಆಗಿ ರಕ್ತ ಹೆಪ್ಪುಗಟ್ಟಿದ ರೀತಿ ಆಗಿದ್ರೆ ಸಡನ್ ಆಗಿ ಕಣ್ಣು ಕಾಣಿಸದೇ ಹೋಗುತ್ತದೆ. ಹೀಗೆ ಆದಾಗ ಒಂದು ಕಣ್ಣು ಕಾಣಿಸದೇ ಹೋಗಬಹುದು. ಅಂದ್ರೆ ಸ್ಟ್ರೋಕ್ ದೇಹದ ಯಾವ ಕಡೆಯ ಭಾಗದಲ್ಲಿ ಆಗಿದೆಯೋ ಆ ಭಾಗಕ್ಕೆ ಇರುವ ಕಣ್ಣು ಕಾಣಿಸದೇ ಹೋಗಬಹುದು. ಇದಕ್ಕೆ ಮತ್ತೆ ನರಗಳ ಮೇಲೆ ಹಾನಿ ಆಗಿರುವುದು ಕಾರಣ ಆಗಿರುತ್ತದೆ. ಹೀಗೆ ಆದಾಗ ಕಣ್ಣಿನ ವೈದ್ಯರ ಬಳಿ ತೋರಿಸಿಯು ಪರಿಹಾರ ಆಗದೆ ಹೋದ್ರೆ ನರಗಳ ತಜ್ಞರಿಗೆ ತೋರಿಸುವುದು ಒಳ್ಳೆಯದು. ಕಣ್ಣಿನ ಸಮಸ್ಯೆಗಳು ನರಗಳ ದೌರ್ಬಲ್ಯದಿಂದ ಯಾವ ರೀತಿ ಬರಬಹುದು ಅಂದ್ರೆ, ಸ್ಟ್ರೋಕ್ ಆದಾಗ ಸಡನ್ ಆಗಿ ಕಣ್ಣು ಕಾಣಿಸದೇ ಅಥವಾ ಯಾವುದೋ ಒಂದು ಭಾಗ ಕಣ್ಣಿನ ಬಲ ಎಡ ಮೇಲೆ ಅಥವಾ ಕೆಳಗಿನ ಒಂದು ಕಡೆ ಕಾಣಿಸುವುದಿಲ್ಲ. ಕಣ್ಣಿನ ಗುಡ್ಡೆ ಗಳು ಸಾಕಷ್ಟು ನರಗಳನ್ನು ಮುಷ್ಟಿಯಲ್ಲಿ ಹಿಡಿದುಕೊಂಡಿರುತ್ತದೆ. ಆ ನರಗಳಿಗೆ ಸತ್ವ ಶಕ್ತಿ ಇರುವುದರಿಂದ ಕಣ್ಣಿನ ಚಲನೆ ವಲನೆ ಆಗುತ್ತೆ.

 

ಕೆಲವೊಮ್ಮೆ ಕಣ್ಣಿನ ನರಗಳು ವೀಕ್ ಆಗುತ್ತವೆ ಆಗ ಕಣ್ಣಿನ ಚಾಲನಾ ವಲನ ಸರಿಯಾಗಿ ಆಗುವುದಿಲ್ಲ. ಒಂದು ವಸ್ತು ಎರಡು ಎರಡು ಆಗಿ ಕಾಣಿಸಲು ಶುರು ಆಗುತ್ತೆ. ಬ್ಲರ್ ಆಗಿ ಸಹ ಕಾಣಿಸಬಹುದು. ಅದು ಜಾಸ್ತಿ ಆಗುವುದು ಡಯಾಬಿಟಿಸ್ ಇರುವವರಿಗೆ. ಕೆಲವೊಮ್ಮೆ ಮೆದುಳಿಗೆ ರಕ್ತ ಕೊಂಡೊಯ್ಯುವ ರಕ್ತ ನಾಳಗಳ ವೀಕ್ ಆದಾಗ ಸಹ ವಸ್ತುಗಳು ಎರಡೆರಡು ಕಾಣುತ್ತದೆ. ಮೆದುಳಿಗೆ ಹಾಗೂ ಕಣ್ಣಿಗೆ ಕನೆಕ್ಟ್ ಮಾಡಲು ಇರುವ ನರಗಳಲ್ಲಿ ಸಮಸ್ಯೆ ಆದ್ರೆ ಅಂದ್ರೆ ಆ ನರಗಳಿಗೆ ಇನ್ಫೆಕ್ಷನ್, ಇಲ್ಲ ವಿಟಮಿನ್ ಬೀ 12 ಕೊರತೆ ಇಂದ ನರಗಳು ವೀಕ್ ಆಗಿದ್ರೆ ಸಹ ಕಣ್ಣು ಸಡನ್ ಆಗಿ ಮಾಂಜಾಗುವುದು ಆಗುತ್ತದೆ. ಈ ಸಂದರ್ಭದಲ್ಲಿ ನಮಗೆ ಮುಂದಿನ ದೃಶ್ಯ ನೋಡುತ್ತೇವೆ ಹೊರತು ಬಣ್ಣಗಳ ವರ್ಗೀಕರಣ ಅಥವ ಬಣ್ಣಗಳನ್ನು ಗುರುತಿಸಲು ಆಗುತ್ತಾ ಇರುವುದಿಲ್ಲ. ಒಟ್ಟಾರೆ ಹೇಳುವುದಾದರೆ ಕಣ್ಣಿನ ಯಾವುದೇ ಸಮಸ್ಯೆ ಬಂದಾಗ ಖಂಡಿತ ಕಣ್ಣಿನ ವೈದ್ಯರಿಗೆ ತೋರಿಸಿ, ಅದರಿಂದ ಪರಿಹಾರ ಆದ್ರೆ ಒಳ್ಳೆಯದು. ಪರಿಹಾರ ಆಗಿಲ್ಲ ಅಂದ್ರೆ ಕೆಲವೊಮ್ಮೆ ಕಣ್ಣಿನ ವೈದ್ಯರೇ ನರಗಳ ತಜ್ಞರ ಭೇಟಿ ಮಾಡಿ ಎಂದಾಗ ದಯವಿಟ್ಟು ನರಗಳ ತಜ್ಞರನ್ನು ಭೇಟಿ ಮಾಡಿದಾಗ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು