ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಇಂಗಳಕಾಯಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ಈ ಲೇಖನವನ್ನು ಯಾರಾದ್ರೂ ಹಿರಿಯರು ಓದುತ್ತಾ ಇದ್ದರೆ ಅವರಿಗೆ ಚೆನ್ನಾಗಿ ನೆನಪಿರುತ್ತದೆ. ಈ ಇಂಗಳಕಾಯು ಗಿಡವನ್ನು ಪ್ರಾಚೀನ ಕಾಲದಿಂದಲೂ ಕೂಡ ಉಪ್ಪಿನ ಭರಣಿಗಳಲ್ಲಿ ಇಡುವಂತಹ ರೂಢಿ ಇತ್ತು. ಈ ಕಾಯಿಯನ್ನು ಉಪ್ಪಿನ ಭಾರಣಿಯಲ್ಲಿ ಇಡುವುದರಿಂದ ಗಂಟಲಿಗೆ ಸಂಬಂಧ ಪಟ್ಟ ಯಾವುದೇ ರೋಗಗಳು ಬರುವುದಿಲ್ಲ ಎಂಬ ನಂಬಿಕೆ ಮತ್ತು ಥೈರಾಯ್ಡ್ ಗೆ ಸಂಬಂಧ ಪಟ್ಟ ಸಮಸ್ಯೆಗಳು ಕೂಡ ಬರುವುದಿಲ್ಲ ಎಂಬ ನಂಬಿಕೆ ಇತ್ತು. ಈ ಗಿಡವೂ ಉಷ್ಣ ಪ್ರದೇಶದ ಎಲ್ಲಾ ಕಡೆ ಅಂದ್ರೆ ಹೊಲ ಬದಿಗಳಲ್ಲಿ ರಸ್ತೆ ಬದಿಗಳಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಈ ಗಿಡಗಳು ಬೆಳೆಯುತ್ತ ಇದ್ದವು.
ಈ ಇಂಗಳಕ್ಕಾಯಿ ಸಿಪ್ಪೆಯನ್ನು ತೆಗೆದರೆ ಒಳಗಡೆ ಮೆಣದಂತಹ ತಿರುಳು ಇರುತ್ತದೆ. ಕಾಯಿ ಬಿರುಸಾಗಿ ಇರುತ್ತದೆ. ಮೊದಲು ಹಸಿರು ಬಣ್ಣದ ಕಾಯಿಗಳಾಗಿ ಒಣಗಿದ ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇನ್ನೂ ಈ ಗಿಡದ ಕಾಯಿಯನ್ನು ಉಪಯೋಗ ಮಾಡಿಕೊಂಡು ಯಾವೆಲ್ಲ ರೋಗಗಳನ್ನು ಗುಣ ಪಡಿಸಬಹುದು ಎಂದು ನೋಡೋಣ. ಕಾಮಾಲೆ ರೋಗ ಇದ್ದವರು ಅಂದ್ರೆ ಜಾಂಡೀಸ್ ಕಾಯಿಲೆ ಇದ್ದವರಿಗೆ ಇದು ಒಂದು ಒಳ್ಳೆಯ ಮನೆಮದ್ದಾಗಿದೆ. ಹೌದು ಸ್ನೇಹಿತರೆ ಕಾಮಾಲೆ ರೋಗ ಇದ್ದವರು ಈ ಇಂಗಳಕಾಯಿ ಮೇಣವನ್ನು ತೆಗೆದುಕೊಂಡು ಅದಕ್ಕೆ ಒಂದಿಷ್ಟು ಬೆಲ್ಲವನ್ನು ಸೇರಿಸಿ ಸೇವನೆ ಮಾಡುತ್ತಾ ಬಂದರೆ ಕಾಮಾಲೆ ರೋಗ ಬೇಗನೆ ನಿವಾರಣೆ ಆಗಲು ಸಹಾಯವಾಗುತ್ತದೆ. ಇನ್ನೂ ಈ ಕಾಯಿಯ ಸಿಪ್ಪೆ ತೆಗೆದು ಅದನ್ನು ಉಪ್ಪಿನ ಭರಣಿಯಲ್ಲೀ ಇಟ್ಟು ಆ ಉಪ್ಪನ್ನು ಬಳಕೆ ಮಾಡುವುದರಿಂದ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಬರುವುದಿಲ್ಲ.
ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಬಾರದೆ ಇರದಂತೆ ಕಾಪಾಡುತ್ತದೆ. ಹಿಂದಿನ ಕಾಲದಲ್ಲಿ ಎಲ್ಲರ ಮನೆಯಲ್ಲಿ ಕೂಡ ಉಪ್ಪಿನಕಾಯಿಯ ಭಾರಣಿಯಲ್ಲಿ ಈ ಇಂಗಳಕಾಯಿ ಗಿಡವನ್ನು ಇಡುತ್ತಿದ್ದರು. ಹಾಗಾಗಿ ಅವರ ಆರೋಗ್ಯ ಕೂಡ ಚೆನ್ನಾಗಿತ್ತು. ಆದ್ರೆ ಈಗಿನ ಕಾಲದಲ್ಲಿ ಎಲ್ಲರೂ ಇದರ ಉಪಯೋಗ ಪ್ರಾಮುಖ್ಯತೆ ಮರೆತು ಹೋಗಿದ್ದಾರೆ. ನಿಮ್ಮ ಮನೆಯಲ್ಲಿ ಯಾರಾದರೂ ಹಿರಿಯರು ಇದ್ರೆ ನೀವು ಅವರಿಗೆ ಕೇಳಿ ನೋಡಿ. ಹಿಂದಿನ ಕಾಲದಲ್ಲಿ ಈ ಉಪ್ಪಿನ ಭರಣಿಯಲ್ಲಿ ಈ ಇಂಗಳಕಾಗಿ ಗಿಡವನ್ನು ಇಡುತ್ತಿದ್ದರು ಅಥವಾ ಇಲ್ಲ ಎಂದು ತಿಳಿದುಕೊಳ್ಳಿ. ಈ ಇಂಗಳಕಾಯಿ ಇಂದ ತೆಗೆದ ಎಣ್ಣೆಯನ್ನು ತ್ವಚೆಯ ರೋಗಕ್ಕೆ ಮತ್ತು ಸುತ್ತ ಗಾಯಕ್ಕೆ ಬಳಕೆ ಮಾಡುತ್ತಾ ಇದ್ರು. ನೋಡಿದ್ರಲ್ವ ಹಳೆಯ ಕಾಲದಲ್ಲಿ ಬಳಕೆಯಲ್ಲಿದ್ದ ಇಂಗಳಕಾಯಿ ಉಪಯೋಗ ಏನು ಅಂತ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.