ನಮಸ್ತೆ ಪ್ರಿಯ ಓದುಗರೇ, ಸನಾತನ ಎಷ್ಟು ಪುರಾತನ ವೂ ಅಷ್ಟು ನಿತ್ಯ ವಿನೂತನ. ಇದೆ ಇವತ್ತಿನ ಲೇಖನದ ವಿಶೇಷ. ಸನಾತನ ವಿನೂತನ. ನಮ್ಮ ದೇಶದ ಕಥೆ ಹೇಗಾಗಿದೆ ಅಂದ್ರೆ ನಮ್ಮದೇ ಸಂಸ್ಕೃತಿ ತಿಳಿದುಕೊಳ್ಳೋಕೆ ಗೂಗಲ್ ಮಾಡಬೇಕಾಗಿದೆ. ಈಗಿನ ಯುವ ಜನತೆಗೆ ಆಚಾರ ವಿಚಾರ ಗಳು ತುಂಬಾ ದೂರ. ದೂರ ಅನ್ನುವುದಕ್ಕಿಂತಲೂ ಅದನ್ನು ಯಾಕೆ ಮಾಡಬೇಕು? ಹಾಗೆ ಮಾಡಿದ್ರೆ ಎನ್ ಉಪಯೋಗ? ಇದು ಯಾರಿಗೋ ಗೊತ್ತಿಲ್ಲ. ಹಾಗಂತ ಅದನ್ನು ನಾವು ನೀವು ತಿಳಿದುಕೊಳ್ಳದೆ ಇದ್ರೆ ಸನಾತನ ಧರ್ಮದ ಆಚಾರ ವಿಚಾರಗಳು ಗೂಗಲ್ ಅಲ್ಲಿ ಕೂಡ ಸಿಗಲ್ಲ. ಜೊತೆಗೆ ಈಗಲೋ ಅದನ್ನು ತಿಳಿಸುವ ಪ್ರಯತ್ನ ಮಾಡದೇ ಹೋದ್ರೆ ಅದು ನಮ್ಮ ತಪ್ಪು ಕೂಡ ಆಗುತ್ತೆ. ಸೋ ಸನಾತನ ಧರ್ಮದ ಒಂದೊಂದು ಆಚರಣೆಗಳು ನಾವು ಯಾಕೆ ಮಾಡ್ತೀವಿ ಯಾಕ್ ಮಾಡ್ಬೇಕು ಅನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಇವತ್ತಿನ ವಿಷ್ಯ ಹೈ ಹಲೋ ಹೇಕುವ ಬದಲು ಕೈ ಮುಗಿದು ನಮಸ್ಕರಿಸುವುದು.
ಕರೋನ ಬಂದ ಮೇಲೆ ಸ್ವಲ್ಪ ಈ ಪದ್ಧತಿಯನ್ನು ನಾವು ನೀವು ಅನುಸರಿಸಿದೇವು ಅಷ್ಟೇ,ಆದ್ರೆ ಕೈ ಮುಗಿದು ನಮಸ್ಕಾರ ಹೇಳುವುದು ಒಳ್ಳೆಯದು ಅಂತ ಹೇಳೋಕೆ ಕೋವಿಡ್ ಬರಬೇಕಾಯಿತು. ಆದ್ರೆ ಇದನ್ನು ನಾವು ಎಷ್ಟರ ಮಟ್ಟಿಗೆ ಬಳಸುತ್ತಿದ್ದಿವಿ ? ಸ್ಟೈಲ್ ಆಗಿ ಹೈ ಬೈ ಹೇಳಿಕೊಂಡು ಶೇಕ್ ಹ್ಯಾಂಡ್ ಮಾಡಿಕೊಂಡು ವಿಶ್ ಮಾಡ್ತೀವಿ. ಮೊದಲು ಕೈ ಮುಗಿದು ನಮಸ್ಕಾರ ಮಾಡ್ತಾ ಇದ್ರು ಈಗ ಕೈ ಕುಲುಕಿ ವಿಷ್ ಮಾಡ್ತೀವಿ. ಹೀಗಂತ ಕಡೆಗಣಿಸಬೇಡಿ. ಎರಡೂ ಬೇರೆ ಬೇರೆ. ಕೈ ಮುಗಿದು ನಮಸ್ಕಾರ ಮಾಡುವುದು ಸನಾತನ ಧರ್ಮದ ಸಂಸ್ಕೃತಿ. ಶೇಕ್ ಹ್ಯಾಂಡ್ ಕೊಡೋದು ನಮ್ ಆಚಾರ ಅಲ್ಲ. ಹಾಗಾದ್ರೆ ಕೈ ಮುಗಿದು ನಮಸ್ಕಾರ ಮಾಡುವ ಉದ್ದೇಶವನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡ್ತಾ ಇದೀವಿ. ಆತ್ಮ ಪರಮಾತ್ಮ ನಮ್ಮೊಳಗೆ ಇರುವ ಆತ್ಮವೇ ಪರಮಾತ್ಮ ಅಂತ ಸನಾತನ ಧರ್ಮ ಹೇಳಿಕೊಡುತ್ತದೆ. ಅಂದ್ರೆ ಪ್ರತಿಯೊಬ್ಬರಲ್ಲಿ ದೇವರು ಇದ್ದಾನೆ ನನ್ನೊಳಗೆ ದೇವರು ಇದ್ದಾನೆ ನಿಮ್ಮೊಳಗೆ ಸಹ ದೇವರು ಇದ್ದಾನೆ. ಅಂದ್ರೆ ನಿಮ್ಮೊಳಗೆ ಇರುವ ದೇವರನ್ನು ನಾನು ಕೈ ಮುಗಿದು ನಮಸ್ಕಾರ ಮಾಡುತ್ತಿದ್ದೇನೆ ಎನ್ನುವುದು ಇದರ ಅರ್ಥ.
ಹೀಗೆ ನಮಸ್ಕಾರ ಮಾಡುವುದರಿಂದ ನಮ್ಮ ಪಾಸಿಟಿವಿಟಿ ಹೆಚ್ಚುತ್ತೆ. ಅದಕ್ಕಾಗಿ ಇದನ್ನು ಆನಂದ ಮುದ್ರೆ ಅಂತಲೂ ಕರಿತಿವಿ. ಅಷ್ಟೇ ಅಲ್ಲ ಎರಡೂ ಕೈಗಳು ಮುಗಿದಾಗ ಎರಡೂ ಕೈಗಳ ಮಧ್ಯೆ ಶಕ್ತಿ ತರಂಗ ಉತ್ಪತ್ತಿ ಆಗುತ್ತೆ. ಈ ಶಕ್ತಿ ತರಂಗದ ಮೂಲಕ ನಾವು ತೋರುವ ಗೌರವ ಆ ವ್ಯಕ್ತಿಯನ್ನು ತಲುಪುತ್ತದೆ. ಇನ್ನೂ ಯಾಕೆ ಕೈ ಕುಲುಕ ಬಾರದೆಂದು ಕರೋನ ಟೈಂ ಅಲ್ಲಿ ಎಲ್ಲರಿಗೂ ಗೊತ್ತಾಗಿದೆ. ಶೇಕ್ ಹ್ಯಾಂಡ್ ಮಾಡುವುದರಿಂದ ಬ್ಯಾಕ್ಟೀರಿಯಾ ಒಬ್ಬರಿಂದ ಇನ್ನೊಬ್ಬರಿಗೆ ಹರದುತ್ತೆ. ಹೀಗಾಗಿ ಕೊರೋನ ಬಂದಾಗ ಇಬ್ಬರಿಗೆ ಇಬ್ಬರು ಕೈಗಳನ್ನು ಶೇಕ್ ಹ್ಯಾಂಡ್ ಕೊಡೋದು ನಿಲ್ಲಿಸಿದರು. ಕೈ ಮುಗಿದು ನಮಸ್ಕಾರ ಮಾಡುವುದನ್ನು ಅಭ್ಯಾಸ ಮಾಡಿಕೊಂಡರು. ಮತ್ತೆ ಪುನಃ ಅದನ್ನು ಮರೆತರು. ಕೈ ಮುಗಿದು ನಮಸ್ಕಾರ ಮಾಡುವುದರಿಂದ ಇಷ್ಟೆಲ್ಲಾ ಲಾಭ ಇರಬೇಕಾದರೆ ಯಾಕೆ ನಾವು ನೀವು ಇದನ್ನು ಅಭ್ಯಾಸ ಮಾಡಿಕೊಳ್ಳಬಾರದು? ಒಂದು ಸಲ ಯೋಚನೆ ಮಾಡಿ ನಾವು ಹೇಳುವುದರಲ್ಲಿ ಏನಾದರೂ ತಪ್ಪು ಇದೆಯಾ? ಸನಾತನ ಸಂಸ್ಕೃತಿ ಪದ್ಧತಿ ಯಾವಾಗಲೋ ಶ್ರೇಷ್ಠ. ಈ ಪದ್ಧತಿಗಳ ಜೊತಗೆ ಬದುಕೋಣ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.