ಹೆಣ್ಣುಮಕ್ಕಳು ಕಾಲುಂಗುರ ಹಾಕೋದು ವೈಜ್ಞಾನಿಕವಾಗಿ ಈ ಕಾರಣಕ್ಕೆ..!!!

ಹೆಣ್ಣುಮಕ್ಕಳು ಕಾಲುಂಗುರ ಹಾಕೋದು ವೈಜ್ಞಾನಿಕವಾಗಿ ಈ ಕಾರಣಕ್ಕೆ..!!!

ನಮಸ್ತೆ ಪ್ರಿಯ ಓದುಗರೇ, ಸನಾತನ ಎಷ್ಟು ಪುರಾತನ ವೂ ಅಷ್ಟು ನಿತ್ಯ ವಿನೂತನ. ಸನಾತನ ಸಂಸ್ಕೃತಿಯಲ್ಲಿ ಮುತ್ತೈದೆ ಅಂದ್ರೆ ನಮ್ಮ ಕಣ್ ಮುಂದೆ ಬರುತ್ತೆ ಆಕೆ ಹೆಗಿರುತ್ತಾಳೆ ಅಂತ. ಹಣೆಗೆ ಕುಂಕುಮ, ಕೈಗೆ ಬಳೆ, ಮೂಗುತಿ, ಕಿವಿಗೆ ಓಲೆ, ಕಾಲ್ಗೆಜ್ಜೆ, ಕಾಲುಂಗುರ. ಇದೆಲ್ಲ ಹಾಕಿಕೊಂಡರೆ ಎಷ್ಟು ಲಕ್ಷಣ ಅಲ್ವಾ? ಹಾಗೆ ನಾವು ಪ್ರತಿ ಬಾರಿಯೂ ಹೇಳುವ ಹಾಗೆ ಸನಾತನ ದಲ್ಲೀ ಮಾಡಿರುವ ಸಂಪ್ರದಾಯ ಸುಮ್ನೆ ಮಾಡಿರುವುದು ಅಲ್ಲ. ಎಲ್ಲದಕ್ಕೂ ಒಂದು ವೈಜ್ಞಾನಿಕ ಕಾರಣ ಇದೆ ಅಂತ. ಈಗಾಗಲೇ ನಾವು ನಿಮಗೆ ಕೈ ಮುಗಿದು ನಮಸ್ಕಾರ ಯಾಕೆ ಮಾಡಬೇಕು, ಕಿವಿ ಮೂಗು ಚುಚ್ಚುವುದು ಯಾಕೆ ಅನ್ನುವುದನ್ನು ಹೇಳಿದ್ದೇವೆ. ಈ ಲೇಖನದಲ್ಲಿ ನಿಮಗೆ ಕಾಲುಂಗುರ ಯಾಕೆ ಹಾಕಬೇಕು ಎಂದು ತಿಳಿಯೋಣ. ಸನಾತನ ಸಂಪ್ರದಾಯದಲ್ಲಿ ಕಾಲುಂಗುರ ಕೆ ತುಂಬಾನೇ ಬೆಲೆ ಕೊಡುತ್ತಾರೆ. ಮದುವೆ ಆಗಿರುವ ಹೆಣ್ಣು ಮಕ್ಕಳು ಕಂಪಲ್ಸರಿ ಕಾಲುಂಗುರ ಹಾಕಬೇಕು. ಹಾಕಿದರೆ ಒಳ್ಳೆಯದು ಅಂತಾರೆ. ಸಾಧಾರಣ ಎಲ್ಲಾ ಹಿಂದೂ ಮಹಿಳೆಯರು ಕಾಲುಂಗುರ ಹಾಕುತ್ತಾರೆ.

 

ಹಾಗೇನೇ ಈ ಕಾಲುಂಗುರ ಹಾಕುವ ಪದ್ಧತಿ ಬಂದಿದ್ದು, 200-300 varshagaa ಹಿಂದೆ ಅಲ್ಲ. ರಾಮಾಯಣದಲ್ಲಿ ಕಾಲುಂಗುರ ಒಂದು ಕಡೆ ಬರುತ್ತೆ ಗೊತ್ತಿದೆಯಾ? ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋದಾಗ ಆಗ ಸೀತೆ ರಾಮನಿಗೆ ಹುಡುಕಲು ತನ್ನ ಕುರುಹನ್ನು ಬಿಡುವ ಕಾರಣದಿಂದ ಒಂದು ಆಲೋಚನೆ ಮಾಡಿ ತನ್ನ ಕಾಲುಂಗುರ ವನ್ನಾ ದಾರಿಯಲ್ಲಿ ಎಸೆದು ಹೋಗುತ್ತಾಳೆ. ಆ ಕಾಲುಂಗುರ ನೋಡಿದರೆ ಪತಿ ಶ್ರೀರಾಮ ನಿಗೆ ಗೊತ್ತಾಗುತ್ತೆ ಅಂತ. ಹಾಗಾದ್ರೆ ಕಾಲುಂಗುರವನ್ನು ಆ ಕಾಲದಿಂದಲೂ ಬಳಸುತ್ತಿದ್ದರು ಇಂಥ ಅಲ್ವಾ. ಕಾಲುಂಗುರವನ್ನು ಯಾಕೆ ಚಿನ್ನದಲ್ಲಿ ಅಂದ್ರೆ ಬಂಗಾರದಲ್ಲಿ ಮಾಡುವುದಿಲ್ಲ ಅಂತ ಕೆಲವರಿಗೆ ಪ್ರಶ್ನೆ ಇರಬಹುದು. ಅದು ಯಾಕೆ ಅಂದ್ರೆ ಹಿಂದೂ ಸಂಪ್ರದಾಯದಲ್ಲಿ ಸೊಂಟದಿಂದ ಕೆಳಗೆ ಚಿನ್ನವನ್ನು ಯಾರೋ ಧರಿಸುವುದಿಲ್ಲ.

 

ಯಾಕೆ ಅಂದ್ರೆ ಲಕ್ಷ್ಮೀ ದೇವಿಯ ಸಂಕೇತ ಅಂತ. ಕಾಲುಂಗುರ ಬೆಳ್ಳಿಯಲ್ಲಿ ಇರುವುದಕ್ಕೆ ಒಂದು ವೈಜ್ಞಾನಿಕ ಕಾರಣ ಇದೆ. ಕಾಲುಂಗುರ ಲೋಹದಲ್ಲಿ ಇದ್ರೆ ದೇಹದ ರಕ್ತದೊತ್ತಡ ಅಂದ್ರೆ ಬಿಪಿ ನಿಯಂತ್ರಿಸುತ್ತದೆ. ಹಾಗಾದ್ರೆ ಕಾಲುಂಗುರ ಧರಿಸುವುದರಿಂದ ಏನೇನು ಉಪಯೋಗ ಇದೆ ಎನ್ನುವುದು ನೋಡೋಣ ಸ್ನೇಹಿತರೆ. ಕಾಲುಂಗುರ ಹಾಕುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಆಗ್ಲೇ ಹೇಳಿದ ಹಾಗೆ ಕಾಲಿನ ಎರಡನೇ ಬೆರಳಿನಲ್ಲಿ ಪ್ರೆಶರ್ ಪಾಯಿಂಟ್ ಇದೆ. ಈ ಬೆರಳಿಗೆ ಉಂಗುರ ಹಾಕುವುದರಿಂದ ಮುಟ್ಟಿನ ಸಮಸ್ಯೆ ಬರುವುದಿಲ್ಲ. ಕಾಲುಂಗುರ ಹಾಕುವುದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತೆ. ಇದರಿಂದ ಗರ್ಭಕೋಶ ಆರೋಗ್ಯವಾಗಿ ಇರುತ್ತೆ. ಇದು ಸನಾತನ ಧರ್ಮದಲ್ಲಿ ಮಹಿಳೆಯರು ಕಾಲುಂಗುರ ಹಾಕುವ ಹಿಂದಿರುವ ವೈಜ್ಞಾನಿಕ ಕಾರಣ. ಈಗ ನಿಮಗೆ ಗೊತ್ತಾಗಿರಬೇಕು ಅಲ್ವಾ ಮದುವೆ ಆದ ಮಹಿಳೆಯರು ಕಾಲುಂಗುರ ಯಾಕೆ ಹಾಕಬೇಕು ಅಂತ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು