ಹಾಸನಾಂಬೆಯ ಸಹೋದರಿಯಾದ ಈ ತಾಯಿಯ ಮಹಿಮೆ ಎಂಥದ್ದು ಗೊತ್ತಾ???

ಹಾಸನಾಂಬೆಯ ಸಹೋದರಿಯಾದ ಈ ತಾಯಿಯ ಮಹಿಮೆ ಎಂಥದ್ದು ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ಆದಿಶಕ್ತಿ ಜಗನ್ಮಾತೆ ಭಕ್ತರನ್ನು ಸಲಹಲು ಮೈಸೂರಿನಲ್ಲಿ ಚಾಮುಂಡೇಶ್ವರಿ ಆಗಿ ಮಂಗಳೂರಿನಲ್ಲಿ ಮಂಗಳಾದೇವಿ ಆಗಿ ಶಿರಸಿಯಲ್ಲಿ ಮಾರಿಕಾಂಬೆ ಆಗಿ ಸವದತ್ತಿಯಲ್ಲೀ ಯಲ್ಲಮ್ಮನಾಗಿ, ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ಆಗಿ ಬೆಂಗಳೂರಿನಲ್ಲಿ ಅಣ್ಣಮ್ಮ ದೇವಿಯಾಗಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಅದ್ರಲ್ಲೂ ಹಾಸನ ಎನ್ನುವ ಊರಿಗೆ ಹೆಸರು ಬರಲು ಕಾರಣವಾದ ಹಾಸನಾಂಬೆ ದೇವಿಯ ಸಹೋದರಿಯು ಈ ಕ್ಷೇತ್ರದಲ್ಲಿ ಕೆಂಚಾಂಬಿಕೆ ಆಗಿ ನೆಲೆ ನಿಂತು ತನ್ನ ಬಳಿ ಬರುವ ಭಕ್ತರ ಸರ್ವ ಸಂಕಷ್ಟಗಳನ್ನು ನೀಗಿಸುತ್ತಿದ್ದಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ಕೆಂಚಾಂಬಿಕ ಅಮ್ಮನವರ ದರ್ಶನ ಪಡೆದು ಕೃತಾರ್ಥರಾಗೋಣ. ಹಚ್ಚ ಹಸಿರಿನಿಂದ ಕೂಡಿದ ಸುಂದರವಾದ ಪ್ರದೇಶದಲ್ಲಿ ಶ್ರೀ ಕೆಂಚಾಂಬ ದೇವಿಯ ಪುಣ್ಯ ಆಲಯವಿದೆ. ಈ ದೇವಿಯನ್ನು ಹಾಸನಾಂಬೆ ಯ ಸಹೋದರಿ ಎಂದೇ ಕರೆಯಲಾಗುತ್ತದೆ.

 

ಚಂದವಾದ ಕೊಳ ಪುಟ್ಟದಾದ ಗೋಪುರ, ಪ್ರದಕ್ಷಿಣಾ ಪಥ, ಗರ್ಭ ಗೃಹ ಒಳಗೊಂಡಿರುವ ಈ ಆಲಯದಲ್ಲಿ ಕೆಂಚಾಂಬಾ ದೇವಿಯು ಸೌಮ್ಯ ರೂಪೀನಿ ಆಗಿ ನಿಂತು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಲೆ. ಈ ತಾಯಿಯ ಸನ್ನಿಧಾನಕ್ಕೆ ಬಂದು ಭಕ್ತಿಯಿಂದ ಏನನ್ನೇ ಬೇಡಿದರೂ ಅಮ್ಮನವರು ಅದನ್ನು ದಯಪಾಲಿಸುತ್ತಾರೆ ಎಂಬ ನಂಬಿಕೆ ಈ ದೇವಿಯನ್ನು ಆರಾಧಿಸುವ ಭಕ್ತರ ಮನದ ಮಾತಾಗಿದೆ. ಈ ಭಾಗದ ರೈತರು ತಮ್ಮ ಬೆಳೆಗಳನ್ನು ರಕ್ಷಿಸು ಎಂದು ಬೇಡಿಕೊಂಡರು ,ಸಾಕಷ್ಟು ಜನ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ದೇವಿಯ ಬಳಿ ಇಟ್ಟು ಪೂಜೆ ಮಾಡಿಸಿಕೊಂಡು ತಮಗೆ ಉತ್ತಮ ಫಲಿತಾಂಶ ನೀಡುವಂತೆ ಕೊರಿಕೊಳ್ಳುತ್ತರೆ. ಸುತ್ತಮುತ್ತಲಿನ ಸುಮಾರು 48 ಹಳ್ಳಿಗಳಿಗೆ ಗ್ರಾಮ ದೇವತೆ ಆಗಿರುವ ಈ ತಾಯಿಯ ದರ್ಶನ ಮಾಡಿ ಮಾಡಿದ ಪಾಪಗಳು ಎಲ್ಲವೂ ಪರಿಹಾರ ಆಗುತ್ತೆ ಎಂಬ ನಂಬಿಕೆ ಕೂಡ ಇದೆ. ಕೆಂಚಂಬಿಕ ದೇವಿ ಕೆಂಚಮ್ಮ ದೇವಿ ಎಂಬೆಲ್ಲ ಹೆಸರಿನಿಂದ ಕರೆಯುವ ಈ ಜಗದ ಜನನಿಯು ಈ ಕ್ಷೇತ್ರಕ್ಕೆ ಬಂದು ನೆಲೆ ನಿಲ್ಲುವುದು ಹಿಂದೆ ಒಂದು ಕಥೆ ಕೂಡ ಇದೆ.

 

ಬಹಳ ಹಿಂದೆ ಸಪ್ತ ಮಾಥ್ರುಕೆಯರು ಆದ ಮಹೇಶ್ವರಿ, ಕೌಮಾರಿ, ಭ್ರಹ್ಮೀ ದೇವಿ, ವೈಷ್ಣವಿ, ವರಾಹಿ, ಇಂದ್ರಾಣಿ, ಚಾಮುಂಡಿಯ ರು ಕಾಶಿಯಿಂದ ದಕ್ಷಿಣ ಮಾರ್ಗವಾಗಿ ಸಂಚಾರ ಮಾಡುತ್ತಾ ಇರುತ್ತಾ ಬರುವಾಗ ಈ ಸ್ಥಳದಲ್ಲಿ ರಕ್ತ ಬೀಜಾಸುರ ಎಂಬ ರಾಕ್ಷಸನ ಉಪಟಳ ಹೆಚ್ಚಾಗಿರುತ್ತದೆ ಆಗ ಸಪ್ತ ಮಾಥ್ರುಕೆಯರಲ್ಲಿ ಒಬ್ಬಳಾದ ಬ್ರಾಹ್ಮೀ ದೇವಿಯು ರಕ್ತ ಬೀಜಾಸುರನನ್ನು ಸಂಹರಿಸಲು ತನ್ನ ಉಗ್ರ ರೂಪವನ್ನು ತಾಳಿ ಆತನ ಜೊತೆ ಘೋರ ಯುದ್ಧ ಮಾಡಿ ರಾಕ್ಷಸನನ್ನು ಸಂಹರಿಸಿ ಜನರನ್ನು ರಕ್ಷಿಸುವ ಸಲುವಾಗಿ ಈ ಕ್ಷೇತ್ರದಲ್ಲಿ ನೆಲೆ ನಿಂತಳು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಮಾತ್ರುಕೆಯರು ಲೋಕ ಕಲ್ಯಾಣಕ್ಕಾಗಿ ಹಾಸನದಲ್ಲಿ ನೆಲೆ ನಿಂತರು ಎಂದು ಹೇಳಲಾಗುತ್ತದೆ. ಇನ್ನೂ ಈ ಕ್ಷೇತ್ರದಲ್ಲಿ ವಿಶಾಲವಾದ ಕೊಳ ಇದ್ದು ಸಾಕ್ಷಾತ್ ಅಮ್ಮನವರು ಈ ಕೊಳವನ್ನು ಸೃಷ್ಟಿಸಿದರು ಎಂಬ ಪ್ರತೀತಿ ಇದೆ. ರಾಕ್ಷಸನನ್ನು ಸಂಹರಿಸಿದ ಮೇಲೆ ಆಯಾಸಗೊಂಡು ದೇವಿಯು ನೀರಡಿಕೆ ಆಗಿ ಎಲ್ಲೋ ನೀರು ಸಿಗದೆ ಹೋದಾಗ ತನ್ನ ಮೊಣಕೈ ಇಂದ ನೆಲ ಗುದ್ದಿ ಈ ಕೊಳವನ್ನು ಸೃಷ್ಟಿಸಿ ತನ್ನ ದಾಹವನ್ನು ನೀಗಿಸಿಕೊಂಡಳು ಎಂದು ಇಲ್ಲಿನ ಕ್ಷೇತ್ರ ಮಹಾತ್ಮೆಯಲ್ಲಿ ತಿಳಿಸಲಾಗಿದೆ. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ಅಮ್ಮನವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಜಾತ್ರೆ ಸಮಯದಲ್ಲಿ ಉಯ್ಯಲೋತ್ಸವ ನಡೆಯುವಾಗ ದೇವಿಯ ಪಾದಗಳನ್ನು ಇಟ್ಟು ಉಯ್ಯಾಲೆ ತೊಗಲಾಗುತ್ತದೆ. ಬುಧವಾರ ಶುಕ್ರವಾರ ಹಾಗೂ ರವಿವಾರದಂದು ಮಾತ್ರ ಈ ದೇವಿಯ ದರ್ಶನ ಪಡೆಯಬಹುದು. ಕೇಂಚಾಂಬ ದೇವಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹರಿ ಹಳ್ಳಿ ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಕೆಂಚಂಬಾ ತಾಯಿಯ ದರ್ಶನ ಮಾಡಿ ಬನ್ನಿ. ಶುಭದಿನ.

ಭಕ್ತಿ