ವರ್ಷದಲ್ಲಿ ಬರೀ 36 ಘಂಟೆ ಅಷ್ಟೇ ದರ್ಶನ ನೀಡೋ ಜಗನ್ಮಾತೆ ಈಕೆ..!!

ವರ್ಷದಲ್ಲಿ ಬರೀ 36 ಘಂಟೆ ಅಷ್ಟೇ ದರ್ಶನ ನೀಡೋ ಜಗನ್ಮಾತೆ ಈಕೆ..!!

ನಮಸ್ತೆ ಪ್ರಿಯ ಓದುಗರೇ, ಬದುಕಿನಲ್ಲಿ ಯಾವುದೇ ಕಷ್ಟಗಳು ಬರಲಿ ತಾಯಿ ನಿನ್ನ ದಯೆ ನಮ್ಮ ಮೇಲೆ ಸದಾ ಇರಲಿ ಯಾವತ್ತಿಗೂ ನಮ್ಮನ್ನು ಕೈ ಬಿಡಬೇಡ ಎಂದು ಈ ಸನ್ನಿಧಿಗೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಈ ಜಗನ್ಮಾತೆ ಸದಾ ಪೋರೆಯುತ್ತಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ಕೋಟಿ ಕೋಟಿ ಭಕ್ತರ ಆರಾಧ್ಯ ದೇವಿಯಾಗಿ ಪೂಜಿಸಲ್ಪಡುವ ಹೆಮ್ಮನಹಳ್ಳಿ ಚೌಡೇಶ್ವರಿ ದೇವಿಯನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ಸಾಮಾನ್ಯವಾಗಿ ನಾವು ಬೇರೆ ಎಲ್ಲಾ ದೇವಸ್ಥಾನದಲ್ಲಿ ವರ್ಷದ ಎಲ್ಲಾ ದಿನದಲ್ಲಿ ದೇವರನ್ನು ನೋಡಬಹುದು ಆದ್ರೆ ಈ ಶಕ್ತಿ ಪ್ರದಾಯಿನಿ ತಾಯಿ ಚೌಡೇಶ್ವರಿ ದೇವಿಯನ್ನು ನಾವು ವರ್ಷದ ಒಂದು ದಿನ ಮಾತ್ರ ದರ್ಶನ ಮಾಡಬಹುದು ಎನ್ನುವುದು ಈ ದೇಗುಲದ ವಿಶೇಷತೆ ಆಗಿದೆ. ಪ್ರತಿವರ್ಷ ಹೋಳಿ ಹುಣ್ಣಿಮೆ ನಂತರ ಬರುವ ಗುರುವಾರ 12 ಗಂಟೆಯಿಂದ ಈ ದೇಗುಲವನ್ನು ತೆರೆಯಲಾಗುತ್ತದೆ. ದೇಗುಲವು 36 ಗಂಟೆ ಮಾತ್ರ ತೆರೆದಿರುತ್ತದೆ ಹೀಗಾಗಿ ಈ ಸಮಯದಲ್ಲಿ ಸರ್ವಾಲಂಕೃತಾ ಈ ದೇವಿಯನ್ನು ನೋಡೋಕೆ ಲಕ್ಷಾಂತರ ಮಂದಿ ಇಲ್ಲಿಗೆ ಬರುತ್ತಾರೆ. ದೇವಾಲಯ ತೆಗೆದ ಮುಂದಿನ ದಿನ ಶುಕ್ರವಾರ ಬೆಳಗಿನ ಜಾವ ಕೆಂಡೋತ್ಸವ ಸೇವೆ ನಡೆಯುತ್ತೆ.

 

ಈ ಸೇವೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ದೇವಿಗೆ ಕೆಂಡೋತ್ಸವ ಸೇವೆ ಸಲ್ಲಿಸಿ ತಮ್ಮ ಬದುಕಿನಲ್ಲಿ ಬೆಳಕನ್ನು ನೀಡುಣೆಂದು ದೇವಿಯನ್ನು ಬೇಡುತ್ತಾರೆ. ಮದುವೆ ಆಗದವರು ಮಕ್ಕಳು ಇಲ್ಲದವರು ಮನೆ ಕಟ್ಟದವರು ವ್ಯಾಪಾರ ಸಮಸ್ಯೆ ಇರುವವರು ಹೀಗೆ ಬಗೆ ಬಗೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೇವಿಯ ನಂದಾ ದೀಪಕ್ಕೆ ಎಣ್ಣೆಯನ್ನು ಹಾಕಿ ಉರುಳು ಸೇವೆ ಹರಕೆ ಸಲ್ಲಿಸುತ್ತೇವೆ ಎಂದು ಆ ತಾಯಿಯ ಬಳಿ ಬೇಡಿಕೊಂಡರೆ ಅವಳು ನಮ್ಮೆಲ್ಲ ಕಷ್ಟಗಳಿಗೆ ಪರಿಹಾರವನ್ನು ಒದಗಿಸುತ್ತಾರೆ. ಇಲ್ಲಿನ ದೇವಿಯನ್ನು ಅಮೃತ ಮಣ್ಣಿನಿಂದ ಮುಚ್ಚಲಾಗಿದೆ, ಇಲ್ಲಿ ಹಚ್ಚುವ ನಂದಾದೀಪ ವರ್ಷದ 365 ದಿನವೂ ಉರಿಯುತ್ತದೆ. ಒಮ್ಮೆ ಈ ದೇವಾಲಯದ ಬಾಗಿಲು ಹಾಕಿದ್ರೆ ಅದನ್ನು ತೆಗೆಯುವುದು ಮುಂದಿನ ವರ್ಷದ ಹೋಳಿ ಹುಣ್ಣಿಮೆ ನಂತರ ಬರುವ ಗುರುವಾರ. ಸಾಮಾನ್ಯವಾಗಿ ದೇವಸ್ಥಾನ ವನ್ನಾ ಕಲ್ಲಿನಿಂದ ಸಿಮೆಂಟ್ ಇಟ್ಟಿಗೆ ಇಂದ ನಿರ್ಮಿತ ಆಗಿರುವುದನ್ನು ನಾವು ನೋಡಿರುತ್ತೇವೆ. ಆದ್ರೆ ಇಲ್ಲಿನ ದೇಗುಲದ ಗೋಡೆಯನ್ನು ಅಮೃತ ಮಣ್ಣಿನಿಂದ ನಿರ್ಮಾಣ ಮಾಡಲಾಗಿದೆ. ಎಳೆನೀರನ್ನು ಬಳಸಿ ಕಟ್ಟುವ ಇಲ್ಲಿನ ಮಣ್ಣಿನ ಗೋಡೆ ವರ್ಷ ಪೂರ್ತಿ ಗಟ್ಟಿಯಾಗಿ ಇರುತ್ತದೆ.

 

ಹೀಗಾಗಿ ಈ ದೇಗುಲವನ್ನು ಅತ್ಯಂತ ವಿಶೇಷವಾದ ಪುಣ್ಯ ಸ್ಥಳ ಎಂದು ಹೇಳಲಾಗುತ್ತದೆ. ಇನ್ನೂ ಇಲ್ಲಿ ನೀಡುವ ಮಣ್ಣಿನ ಪ್ರಸಾದವನ್ನು ತೆಗೆದುಕೊಂಡರೆ ಸಕಲವೂ ಶುಭ ಆಗುತ್ತೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಅಚಲವಾದ ನಂಬಿಕೆ. ಅಲ್ಲದೆ ಇಲ್ಲಿ ಉರಿಯುವ ನಂದಾದೀಪ ನೋಡಿದ್ರೆ ನಮ್ಮೆಲ್ಲ ಅಭೇಷ್ಟೆಗಳು ಶೀಗ್ರಾವಾಗಿ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಈ ಚೌಡೇಶ್ವರಿ ದೇವಿ ಈ ಕ್ಷೇತ್ರದಲ್ಲಿ ನೆಲೆಸಿರುವ ಹಿಂದೆ ಒಂದು ಕಥೆ ಇದೆ. ಹೆಮ್ಮನಹಳ್ಳಿ ಹಾಗೂ ಸುತ್ತ ಮುತ್ತ ಅರಣ್ಯ ಪ್ರದೇಶದಲ್ಲಿ ಹಲವಾರು ಹುತ್ತಗಳು ಇದ್ವು ಇದರಲ್ಲಿ ಚೌಡೇಶ್ವರಿ ದೇವಿ ನೆಲೆಯಾಗಿದ್ದಳು. ಇದಕ್ಕೆ ಕಾರಣ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಪರಮಾತ್ಮನು ದೇವಿಯ ವಸ್ತ್ರಾಪಹರಣ ಮಾಡಿದ ಹೀಗಾಗಿ ದೇವಿ ಹುತ್ತದಲ್ಲಿ ಹುದುಗಿಕೊಂಡು ವರ್ಷದಲ್ಲಿ ಒಂದು ಬಾರಿ ಮಾತ್ರ ದರ್ಶನ ನೀಡುತ್ತಾಳೆ ಎಂದು ಹೇಳಲಾಗುತ್ತದೆ. ಅಲ್ಲದೆ ಸಿಗಂದೂರು ಚೌಡೇಶ್ವರಿ ದೇವಿ ಈ ದೇವಿಯ ಸಹೋದರಿ ಎಂಬ ಮಾತುಗಳು ಕೇಳಿಬರುತ್ತಿವೆ. ಕೋಟ್ಯಂತರ ಭಕ್ತರ ಸಂಕಷ್ಟಗಳನ್ನು ತನ್ನ ಅಭಯ ಹಸ್ತದಿಂದ ಸಲಹುತ್ತಿರುವ ಈ ದೇವಿಯ ಸುಕ್ಷೇತ್ರ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಅಲ್ಲಿದೆ. ವರ್ಷದಲ್ಲಿ ಕೇವಲ 36 ಗಂಟೆ ದರ್ಶನ ನೀಡುವ ಈ ತಾಯಿಯ ದರ್ಶನವನ್ನು ಸಾಧ್ಯವಾದರೆ ನೀವು ಒಮ್ಮೆ ಮಾಡಿ ಅವಳ ಅನುಗ್ರಹಕ್ಕೆ ಪಾತ್ರರಾಗಿ. ಶುಭದಿನ.

ಭಕ್ತಿ