ಮನೆಯಲ್ಲಿ ಅಪ್ಪಿತಪ್ಪಿಯೂ ಈ ಮೂರು ಫೋಟೋಗಳನ್ನು ಹಾಕಬಾರದು..!!

ಮನೆಯಲ್ಲಿ ಅಪ್ಪಿತಪ್ಪಿಯೂ ಈ ಮೂರು ಫೋಟೋಗಳನ್ನು ಹಾಕಬಾರದು..!!

ನಮಸ್ತೆ ಪ್ರಿಯ ಓದುಗರೇ, ನೀವು ನಿಮ್ಮ ಮನೆಯಲ್ಲಿ ಅಪ್ಪಿತಪ್ಪಿಯೂ ಕೂಡ ಈ ಮೂರು ಫೋಟೋಗಳನ್ನು ಹಾಕಬಾರದು. ಹಾಕಿದ್ರೆ ನೀವು ಕಷ್ಟಕ್ಕೆ ಗುರಿ ಆಗುತ್ತಿರ ಎನ್ನುವ ವಿಷಯವನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತದೆ. ಮನೆ ಸುಂದರವಾಗಿ ಕಾಣಬೇಕು ಅಂತ ನೀವು ಚೆಂದದ ಫೋಟೋಗಳನ್ನು ಹಾಕುವುದು ಸಹಜ ಅಲ್ವಾ? ಆದ್ರೆ ಫೋಟೋಗಳು ಚೆನ್ನಾಗಿವೆ ಅಂತ ಹಿಂದೆ ಮುಂದೆ ಯೋಚನೆ ಮಾಡದೆ ಕೈಗೆ ಸಿಕ್ಕ ಫೋಟೋ ಹಾಕಿದ್ರೆ ಮುಂದೆ ನೀವೇ ಅನಾಹುತಗಳನ್ನು ಎದುರಿಸಬೇಕು ಎನ್ನುವ ರಹಸ್ಯ ಬಹಳಷ್ಟು ಜನಕ್ಕೆ ಗೊತ್ತೇ ಇರಲ್ಲ. ಕೆಲವರು ತಾವಾಗಿಯೇ ಇಷ್ಟ ಪಟ್ಟು ತಂದು ಮನೆಯಲ್ಲಿ ಫೋಟೋಗಳನ್ನು ನೇತು ಹಾಕಿದರೆ ಮತ್ತೆ ಕೆಲವರು ಯಾರೋ ಕೊಟ್ಟ ಗಿಫ್ಟ್ ಅಂತ ನೇತು ಹಾಕುತ್ತಾರೆ. ಆದ್ರೆ ನಾವು ಹಾಕುವ ಫೋಟೋ ಎಂಥದ್ದು ಎನ್ನುವ ಅರಿವು ಇರಬೇಕು. ನೀವು ನಿಮ್ಮ ಮನೆಯಲ್ಲಿ ಯಾವ ಫ್ಟೊಟ್ ಹಾಕಿದ್ರೆ ಶುಭ ಯಾವ ಫೋಟೋ ಹಾಕಿದ್ರೆ ಅಶುಭ ಎನ್ನುವುದರ ಬಗ್ಗೆ ವಿಷ್ಣು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿ ತೂಗು ಹಾಕುವ ಫೋಟೋಗಳ ಬಗ್ಗೆ ಭಗವಂತ ಶ್ರೀ ಕೃಷ್ಣ ವಿವರಣೆ ಕೊಟ್ಟಿದ್ದಾನೆ ಎಂದು ಹೇಳಲಾಗುತ್ತದೆ.

 

ಹಾಗಿದ್ರೆ ಮನೆಯಲ್ಲಿ ನಾವು ಯಾವ ಫೋಟೋಗಳನ್ನು ಹಾಕಿದ್ರೆ ಅಶುಭ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. 1. ಮಹಾಭಾರತದ ದೃಶ್ಯ ಬೇಡವೇ ಬೇಡ. ಮಹಾಭಾರತದ ಯುದ್ಧದ ದೃಶ್ಯದಲ್ಲಿ ರಥದ ಮೇಲೆ ಅರ್ಜುನ ಮತ್ತು ಕೃಷ್ಣ ಇರುವ ಫೋಟೋವನ್ನು ಕೆಲವರು ತಮ್ಮ ಮನೆಯಲ್ಲಿ ಹಾಕಿಕೊಂಡಿರುತ್ತಾರೆ. ಮಹಾಭಾರತದಲ್ಲಿ ಕುಟುಂಬ ಕಲಹದ ಬಗ್ಗೆ ತೋರಿಸಿದ್ದು, ಕೌರವರ ಪರಿವಾರ ನಾಶವಾಗುತ್ತದೆ. ಇದರಿಂದ ಮಹಾಭಾರತದ ಯುದ್ಧದ ಸನ್ನಿವೇಶದ ಫೋಟೋಗಳನ್ನು ಬಳಸಿದ್ರೆ ಕುಟುಂಬ ಕಲಹ ಹೆಚ್ಚಾಗುತ್ತೆ. ವಾಸ್ತು ಪ್ರಕಾರ ಮನೆಯಲ್ಲಿ ಯುದ್ಧ ಅಥವಾ ಶಸ್ಥ್ರಶ್ರಗಳನ್ನು ಹೊಂದಿರುವ ಫೋಟೋಗಳನ್ನು ಹಾಕಬಾರದು. 2. ಅಳುತ್ತಿರುವ ಮಕ್ಕಳು ಅಳುತ್ತಿರುವ ಹೆಂಗಸರ ಚಿತ್ರಗಳು ಇದ್ರೆ ತೆಗೆದುಬಿಡಿ. ಹೌದು ನಿಮ್ಮ ಮನೆಯಲ್ಲಿ ಅಳುತ್ತಿರುವ ಮಕ್ಕಳ ಚಿತ್ರ ಕಣ್ಣೀರು ಹಾಕಿ ರೋಧಿಸುತ್ತಿರುವ ಹೆಣ್ಣಿನ ಚಿತ್ರ ಇದ್ರೆ ಕೂಡಲೇ ಅದನ್ನು ತೆಗೆದು ಹಾಕಿ.

 

ಈ ಚಿತ್ರಗಳಿಂದ ಮನೆಯಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತದೆ. ಕುಟುಂಬಸ್ಥರ ನಡುವೆ ಯಾವಾಗಲೋ ದುಃಖ ತುಂಬಿಕೊಂಡಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಕಣ್ಣೀರು ಹಾಕಿ ರೋಧಿಸುತ್ತೀರುವ ಚಿತ್ರಗಳನ್ನು ಹಾಕಬೇಡಿ. ನಗುತ್ತಿರುವ ಮಕ್ಕಳ ಫೋಟೋ ಹಾಕಿದ್ರೆ ಕುಟುಂಬವು ಸದಾ ನಗು ನಗುತ್ತಾ ಇರುತ್ತದೆ. 3. ನಿಂತಿರುವ ಭಂಗಿಯ ಲಕ್ಷ್ಮಿಯ ಚಿತ್ರದಿಂದ ಸಂಕಷ್ಟ. ಎಲ್ಲರ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿ ವಾಸ ಮಾಡಬೇಕು ಅಂತ ಎಲ್ಲರೂ ಬಯಸುತ್ತಾರೆ ಅದರಂತೆ ನಿಂತಿರುವ ಭಂಗಿಯ ಮಹಾಲಕ್ಷ್ಮಿ ಫೋಟೋವನ್ನು ಮನೆಯಲ್ಲಿ ಹಾಕಿದ್ರೆ ಹೇಳದೆ ಕೇಳದೆ ಲಕ್ಷ್ಮೀ ಯಾವಾಗ ಬೇಕಾದರೂ ನಿಮ್ಮ ಮನೆಯಿಂದ ಜಾಗ ಖಾಲಿ ಮಾಡಬಹುದು. ಜೊತೆಗೆ ಮನೆಯ ಮುಖ್ಯ ದ್ವಾರದ ಎದುರಿಗೇ ಲಕ್ಷ್ಮೀ ದೇವಿಯ ಫೋಟೋವನ್ನು ಹಾಕಬಾರದು. ಲಕ್ಷ್ಮೀ ದೇವಿಯನ್ನು ಚಂಚಲೆ ಅನ್ನುತ್ತಾರೆ. ಹಾಗಾಗಿ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮೀ ದೇವಿಯ ಫೋಟೋವನ್ನು ಮಾತ್ರ ಮನೆಯಲ್ಲಿ ಹಾಕಬೇಕು. ಆಗ ಮಾತ್ರ ನಿಮ್ಮ ಮನೆಯಲ್ಲಿ ಸದಾ ಧನಲಕ್ಷ್ಮಿ ನೆಲೆಸುತ್ತಾರೆ. ಎಂದು ಹೇಳುತ್ತ ವಾಸ್ತುಶಾಸ್ತ್ರ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು