ದೇವರ ಮುಂದೆ ಕುಳಿತು ಅಳುವುದು ಶುಭವೋ? ಅಶುಭವೋ???

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ದೇವರ ಮನೆಯಲ್ಲಿ ಕುಳಿತು ಪೂಜೆ ಮಾಡುವಾಗ ಕೆಲವೊಮ್ಮೆ ಮನಸ್ಸು ದುಃಖದಿಂದ ಅಳುತ್ತೆ. ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಮನೆಗೆ ಶುಭವೋ ಅಶುಭವೋ ಎಂದು ತಿಳಿಯೋಣ. ಮನೆಗೆ ಒಂದು ದ್ವಾರ ಬಾಗಿಲು ಎಷ್ಟು ಮುಖ್ಯವೋ ಹಾಗೆ ಮನೆಯಲ್ಲಿ ದೇವರ ಕೋಣೆ ಇರುವುದು ಅಷ್ಟೇ ಮುಖ್ಯ ಸ್ಥಳ. ಪೂಜೆ ಮಾಡುವ ವ್ಯಕ್ತಿಗಳು, ಹೆಣ್ಣಾಗಲೀ ಗಂಡಾಗಲೀ ಅವರಲ್ಲಿ ಕೆಲವೊಂದು ಗೊಂದಲಗಳು ಇರುತ್ತವೆ ಹಾಗೆ ಮಾನಸಿಕವಾಗಿ ನರಳುತ್ತಾ ಇರ್ತಾರೆ. ಕೆಲವೊಂದಿಷ್ಟು ಮಾಹಿತಿಗಳನ್ನು ತಿಳಿದುಕೊಂಡು ಕೆಲವೊಂದಿಷ್ಟು ಮಾಹಿತಿಯನ್ನು ಬೇರೆಯವರಿಗೆ ತಿಳಿಸಿ. ನಮ್ಮ ಮನೆ ಒಂದು ದೇಗುಲ ಆಗಿರಬೇಕು ಹೊರತು ಸ್ಮಶಾನ ಆಗಿರಬಾರದು. ಮನೆ ಅನ್ನುವುದು ಭಗವಂತನ ವಾಸಸ್ಥಳ ಆಗಿರಬೇಕು. ಕೆಲವರು ದೇವರ ಪೂಜೆ ಮಾಡುವಾಗ ಬಹಳಷ್ಟು ಜನರು ಈ ತಪ್ಪು ಮಾಡ್ತೀರಾ. ನೀವು ದೇವಸ್ಥಾನದಲ್ಲಿ ತಪ್ಪು ಮಾಡಿದ್ರೆ ನಿಮ್ಮ ವ್ಯವಸ್ಥೆಗೆ ನಿಮ್ಮ ತಪ್ಪಿಗೆ ದುಃಖಕ್ಕೆ ಬೆಲೆ ಸಿಗುತ್ತೆ. ಆದ್ರೆ ನೀವು ನಿಮ್ಮ ಮನೆಯಲ್ಲಿ ಅದೇ ತಪ್ಪುಗಳನ್ನು ಮಾಡುವುದರಿಂದ ಸರ್ವ ನಾಶ ಆಗುವ ಸಂಭವ ಇರುತ್ತೆ.

 

ಏನು ಅಂದ್ರೆ ನಿಮ್ಮ ದೇವರ ಕೋಣೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಕೂತು ಅಳಬೇಡಿ. ಕೆಲವು ಹೆಣ್ಣು ಮಕ್ಕಳು ಕಣ್ಣೀರು ಹರಿಸಿ ದೇವರ ಮುಂದೆ ಗೊಳಾಡಿ ಪೂಜೆ ಮಾಡುತ್ತ ಇರ್ತಾರೆ. ಆಳುವ ಲಕ್ಷಣದ ಹೆಣ್ಣು ಮಹಾ ದರಿದ್ರಳು ಆಗಿರುತ್ತಾಳೆ. ಅಳ್ತಾ ಪೂಜೆ ಮಾಡುವ ಗಂಡು ಮಹಾ ನತದೃಷ್ಟ ಆಗಿರುತ್ತಾನೆ. ಗಂಡು ದೈವವನ್ನು ಎಂದಿಗೂ ಮನೆಯಲ್ಲಿ ಪೂಜೆ ಮಾಡಬೇಕಾದ್ರೆ ಅಳಬಾರದು. ಅಳುವುದರಿಂದ ನತದೃಷ್ಟ ಆಗುತ್ತಾನೆ. ಲಕ್ಷ್ಮೀ ಪ್ರಾಪ್ತಿ ಆಗೋಲ್ಲ, ವ್ಯವಹಾರದಲ್ಲಿ ತೊಂದರೆ ಅನುಭವಿಸುವುದು, ಆರೋಗ್ಯದಲ್ಲಿ ನಶ್ವರ ಆಗುವಂಥದ್ದು ಮನೆಯಲ್ಲಿ ಅಶಾಂತಿ ಉಂಟಾಗುವುದು ಮನೆಯ ದೈವ ವಿಧಿ ಎರಡರ ನಡುವೆ ಇವನ ಗೋಳಾಟ ಪ್ರಾರಂಭ ಆಗುತ್ತೆ. ದಯಮಾಡಿ ಗಂಡು ಪೂಜೆ ಮಾಡುವ ಸಮಯದಲ್ಲಿ ಅಳಬೇಡ. ಹೆಣ್ಣು ಮಕ್ಕಳೂ ಸಹ ಇಂತಹ ತಪ್ಪುಗಳನ್ನು ಮಾಡಬೇಡಿ. ಒಂದು ನೀವು ಕೆಂಪು ಬಟ್ಟೆಯನ್ನು ಧರಿಸಬೇಡಿ, ತಲೆಯ ಕೂದಲನ್ನು ಮೇಲ್ಮುಖವಾಗಿ ಎತ್ತಿ ಕಟ್ಟಬಾರದು, ಕಪ್ಪು ಬಳೆಗಳನ್ನು ಹಾಕಿ ಪೂಜೆ ಮಾಡಬೇಡಿ.

 

ನೀವು ಇಂತಹ ತಪ್ಪು ಮಾಡುತ್ತಾ ದೇವರ ಮುಂದೆ ಅಳ್ತಾ ಇರ್ಥಿರ. ಕಷ್ಟಗಳನ್ನು ದೇವರ ಮುಂದೆ ಹೇಳುವಾಗ ಅಳು ಸಹಜವಾಗಿ ಬರುತ್ತೆ. ಆದ್ರೆ ಪೂಜೆ ಮಾಡುವಾಗ ಆಳುವುದರಿಂದ ಮನೆಗೆ ದರಿದ್ರ ಬರುತ್ತೆ. ನೀವು ಅಳುವುದಾರಿಂದ ನಿಮ್ಮ ಮಕ್ಕಳು ಯಜಮಾನರು ಒಂದೊಂದು ರೀತಿಯ ಕಷ್ಟಕ್ಕೆ ಸಿಲುಕುತ್ತಾರೆ ಮತ್ತೆ ಅವರಿಂದ ನೀವು ದುಃಖಕ್ಕೆ ಗುರು ಆಗಿತ್ತಿರ. ದಯವಿಟ್ಟು ಅಂತಹ ಕೆಲಸಗಳನ್ನು ಮಾಡಬೇಡಿ. ಗೃಹ ನಿಮ್ಮ ಮೆನೆಯ ಚೌಕಟ್ಟಲ್ಲಿ ನಿಮ್ಮ ದೇವರನ್ನು ಪ್ರೀತಿಯಿಂದ ಪೂಜಿಸಬೇಕು. ಭಕ್ತಿಯಿಂದ ಆರಾಧಿಸಬೇಕು. ನೀವು ಅಳುವಂತಹ ವ್ಯವಸ್ಥೆ ನಿಮ್ಮ ದುಃಖವನ್ನು ತೋಡಿಕೊಳ್ಳಬೇಕು ಅಂದ್ರೆ ಭಗವಂತನ ಪ್ರಾಣ ಪ್ರತಿಷ್ಟಾಪನೆ ಆಗಿರುವ ದೈವ ಶಿಲೆಯ ಮುಂದೆ ಕುಳಿತು ಕಣ್ಣೀರು ಹಾಕಿ. ಅಲ್ಲಿ ನಿಮ್ಮ ಸಂಕಷ್ಟ ನಿವಾರಣೆ ಆಗುತ್ತೆ ಅಂದ್ರೆ ಒಂದು ದೇವಸ್ಥಾನದಲ್ಲಿ. ದೇವಸ್ಥಾನದಲ್ಲಿ ಕುಳಿತು ಅತ್ತು ನಿಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವುದು ರಿಂದ ಖಂಡಿತ ನಿಮಗೆ ದುಃಖ ನಿವಾರಣೆ ಆಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *