ನಮಸ್ತೇ ಆತ್ಮೀಯ ಗೆಳೆಯರೇ, ನಾವು ಆರೋಗ್ಯವಾಗಿ ಇರಬೇಕೆಂದರೆ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಆಹಾರಗಳು ಕಡ್ಡಾಯವಾಗಿ ಇರಲೇ ಬೇಕಾಗುತ್ತದೆ ಅದರಲ್ಲಿ ಇಂಗು ಕೂಡ ಒಂದಾಗಿದೆ. ನಾವು ಮನೆಯಲ್ಲಿ ಉಪ್ಪಿನಕಾಯಿ ಹಾಗೂ ಬೇಳೆ ಸಾರು ಮಾಡುವಾಗ ನಮಗೆ ಇಂಗು ನೆನಪಿಗೆ ಬರುತ್ತದೆ. ಇದನ್ನು ಬಿಟ್ಟು ನಮಗೇನಾದರು ಗ್ಯಾಸ್ಟ್ರಿಕ್ ಸಮಸ್ಯೆ ಅಸಿಡಿಟಿ ಸಮಸ್ಯೆ ಉಂಟಾದಾಗ ಇಂಗು ನಮ್ಮ ಆಹಾರದಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ. ನಿಸರ್ಗದತ್ತ ಗುಣಗಳು ಈ ಇಂಗು ಪದಾರ್ಥದಲ್ಲಿ ಇರುವುದರಿಂದ ಇದು ಅನೇಕ ಬಗೆಯ ಕಾಯಿಲೆಗಳನ್ನು ಗುಣಪಡಿಸಲು ತುಂಬಾನೇ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ನಿತ್ಯವೂ ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಇಂಗು ಬಳಕೆ ಮಾಡಿಕೊಳ್ಳುತ್ತಾ ಬಂದರೆ ನಿಮ್ಮ ಆರೋಗ್ಯವೂ ವೃದ್ಧಿ ಆಗುವುದರ ಜೊತೆಗೆ ಹಲವಾರು ಬಗೆಯ ಅನಾರೋಗ್ಯದ ಸಮಸ್ಯೆಗಳಿಂದ ದೂರವಿರಬಹುದು.
ನಮಗೆ ಯಾವುದೇ ಕಾಯಿಲೆಗಳು ಬಂದರೆ ನಾವು ಇಂಗ್ಲಿಷ್ ಔಷಧಗಳ ಮೊರೆ ಹೋಗುವ ಅವಶ್ಯಕತೆ ಏನಿಲ್ಲ ಗೆಳೆಯರೇ.
ಬದಲಾಗಿ ನಮ್ಮ ಹಿರಿಯರು ಬಹಳ ಹಿಂದಿನ ಕಾಲದಿಂದಲೂ ಹಲವಾರು ಗಿಡಮೂಲಿಕೆಗಳ ಉಪಯೋಗ ಮಾಡಿಕೊಂಡು ತಮ್ಮ ಆರೋಗ್ಯ ಸಮಸ್ಯೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ನೂರಾರು ವರ್ಷಗಳ ಕಾಲ ಬದುಕಿ ತೋರಿಸಿದ್ದಾರೆ.ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಪ್ರತಿನಿತ್ಯವೂ ಚಿಟಿಕೆ ಇಂಗು ಬಳಕೆ ಮಾಡುವುದರಿಂದ ಏನೆಲ್ಲ ಲಾಭಗಳು ಉಂಟಾಗುತ್ತವೆ ಅಂತ ತಿಳಿಯೋಣ ಬನ್ನಿ. ಇತ್ತೀಚಿನ ದಿನಗಳಲ್ಲಿ ಅಸಿಡಿಟಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಎಲ್ಲರಲ್ಲೂ ಕಂಡು ಬರುತ್ತಿದೆ. ಇದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಅಂತ ಹೇಳಿದರೆ ತಪ್ಪಾಗಲಾರದು. ಇದಕ್ಕೆ ಕಾರಣಗಳು ಯಾವುದು ಅಂತ ಹೇಳುವುದಾದರೆ, ಬದಲಾದ ಜೀವನ ಶೈಲಿ ಹಾಗೂ ಜಂಕ್ ಫುಡ್ ಎಣ್ಣೆಯ ಅಂಶ ಅಧಿಕವಾಗಿರುವ ಆಹಾರಗಳು ಮಸಾಲೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಅಸಿಡಿಟಿ ಗ್ಯಾಸ್ಟ್ರಿಕ್ ತೀವ್ರವಾಗಿ ಕಾಡುತ್ತಿದೆ. ಹೊಟ್ಟೆಗೆ ಸಂಭಂದಿಸಿದ ಅನಾರೋಗ್ಯಗಳ ನಿವಾರಣೆಗಾಗಿ ದಿನನಿತ್ಯದ ಆಹಾರದಲ್ಲಿ ಚಿಟಿಕೆ ಇಂಗು ಬಳಕೆ ಮಾಡಿಕೊಂಡು ಬಂದರೆ ಉತ್ತಮವಾದ ಫಲಿತಾಂಶ ಕಾಣಬಹುದು. ಇಂಗು ಪದಾರ್ಥಗಳಲ್ಲಿ ಉರಿ ಊತ ಶಮನ ಯಥೇಚ್ಛವಾಗಿ ಅಡಗಿದೆ.
ಇದರಿಂದ ಕೆಲವು ಪದಾರ್ಥಗಳಿಂದ ಕಾಡುವ ಅಜೀರ್ಣತೆ ಸಮಸ್ಯೆಯಿಂದ ಪಾರಾಗಬಹುದು. ಜೊತೆಗೆ ನೈಸರ್ಗಿಕವಾಗಿ ಕಡಿಮೆ ಮಾಡುತ್ತದೆ. ಇನ್ನೂ ಮಧುಮೇಹ ಕಾಯಿಲೆ ಈ ಕಾಯಿಲೆ ಬಂದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಅದಕ್ಕಾಗಿ ಇದನ್ನು ನಿಯಂತ್ರಣ ಮಾಡಬಹುದೇ ಹೊರತು ಬೇರೆ ದಾರಿ ಕಾಣದೂ. ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವೂ ಏರುತ್ತಲೇ ಇದೆ. ಅದಕ್ಕಾಗಿ ಇದನ್ನು ನಿಯಂತ್ರಣ ಮಾಡಲು ಸರಿಯಾದ ಆಹಾರ ಪದ್ಧತಿಯನ್ನು ಅಳವಡಿಸಿ ಕೊಳ್ಳುವುದು ಬಹಳ ಒಳ್ಳೆಯದು. ಅದಕ್ಕಾಗಿ ನಿತ್ಯವೂ ಚಿಟಿಕೆ ಇಂಗು ಬಳಕೆ ಮಾಡುವುದರಿಂದ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.ಯಾರಿಗೆ ಅತಿಯಾದ ಅಸ್ತಮಾ ಕೆಮ್ಮು ಮತ್ತು ಶೀತ ಇರುತ್ತದೆ ಅಂತಹವರು ತಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಇಂಗು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬಹುದು.ಯಾರಿಗೆ ಆಗಾಗ ತಲೆನೋವು ಬರುತ್ತದೆ ಅಥವಾ ಮೈಗ್ರೇನ್ ಸಮಸ್ಯೆ ಎದುರಾಗುತ್ತದೆ, ಅಂತಹವರು ಪ್ರತಿ ದಿನ ನೀರಿಗೆ ಸ್ವಲ್ಪ ಇಂಗು ಪುಡಿ ಹಾಕಿ ದಿನದಲ್ಲಿ ಎರಡು ಬಾರಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ತಲೆ ನೋವಿನ ಸಮಸ್ಯೆ ದೂರವಾಗುವುದು. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಕಾಡುವ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಅತಿಯಾಗಿ ಬಳಕೆ ಮಾಡದೆ ಕೇವಲ ಚಿಟಿಕೆ ಅಷ್ಟು ಮಾತ್ರ ಇಂಗು ಬಳಕೆ ಮಾಡಿದರೆ ನಾನಾ ಬಗೆಯ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬಹುದು. ಶುಭದಿನ.