ನಿಮಗೆ ಮಲಗಿದ ತಕ್ಷಣ ನಿದ್ದೆ ಬರಬೇಕೇ?  ಹಾಗಾದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

ನಿಮಗೆ ಮಲಗಿದ ತಕ್ಷಣ ನಿದ್ದೆ ಬರಬೇಕೇ? ಹಾಗಾದರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

ನಮಸ್ತೆ ಪ್ರಿಯ ಓದುಗರೇ, ಒಬ್ಬ ಮನುಷ್ಯನ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ಪ್ರತಿನಿತ್ಯ ಕನಿಷ್ಟ ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು ಆದರೆ ಇಂದಿನ ದಿನಗಳಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿರುವ ಕಾರಣ ಅದು ಸಾಧ್ಯ ಆಗುತ್ತಿಲ್ಲ. ಸಾಮಾನ್ಯವಾಗಿ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಇಲ್ಲದೆ ಇರುವುದರಿಂದ ನಿದ್ರಾ ಹೀನತೆ ಅತಿಯಾಗಿ ಕಾಡುತ್ತದೆ. ನಿದ್ರೆ ಸರಿಯಾಗಿ ಆಗದಿದ್ದರೆ ದೇಹ ದಣಿದು ಅನಾರೋಗ್ಯ ಸಮಸ್ಯೆಗಳಿಗೆ ಇಡಾಗಬೇಕಾಗುತ್ತದೆ. ಹೀಗಾಗಿ ಸಂತಸದ ಜೀವನಕ್ಕಾಗಿ ಸುಖಕರ ನಿದ್ರೆ ಮಾಡುವುದು ಅವಶ್ಯಕ. ಇಂದಿನ ಲೇಖನದಲ್ಲಿ ಮಲಗಿದ ತಕ್ಷಣ ನಿದ್ದೆ ಬರಲು ಕೆಲವೊಂದಿಷ್ಟು ಟಿಪ್ಸ್ ಗಳನ್ನು ನೋಡೋಣ. ಅದನ್ನು ಪಾಲಿಸಿದರೆ ನಿಮಗೆ ಚೆನ್ನಾಗಿ ನಿದ್ರೆ ಬರುತ್ತದೆ. ಆ ಟಿಪ್ಸ್ ಯಾವುವು ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಕ್ರಮ ಬದ್ದವಾಗಿ ಜೀವನ ಶೈಲಿಯನ್ನು ನಡೆಸಿ, ಪ್ರತಿನಿತ್ಯ ಒಂದೇ ಸಮಯಕ್ಕೆ ಮಲಗಿ ಮತ್ತು ಏಳುವುದನ್ನು ರೂಢಿ ಮಾಡಿಕೊಳ್ಳಿ.

 

ರಜೆ ಇದ್ದಾಗ ಲೇಟಾಗಿ ಮಲಗುವುದು ಲೇಟಾಗಿ ಏಳುವುದನ್ನು ಮಾಡಬೇಡಿ. ಮತ್ತು ಮಧ್ಯಾನ ಮಲಗಬೇಡಿ. ಹೌದು ಮಧ್ಯಾನ ಮಲಗುವುದರಿಂದ ರಾತ್ರಿ ನಿದ್ರೆ ಸರಿಯಾಗಿ ಬರುವುದಿಲ್ಲ. ಇದಕ್ಕೆ ಸೂಕ್ತ ಪರಿಹಾರ ಏನೆಂದರೆ ಮಧ್ಯಾನ ನದ ವೇಳೆ ಯಾವುದಾದರೂ ಒಂದು ಹವ್ಯಾಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಮದ್ಯಾಹ್ನದ ಸಮಯದಲ್ಲಿ ಮಲಗುವುದರಿಂದ ದೇಹದಲ್ಲಿ ಶಕ್ತಿ ಬಿಡುಗಡೆ ಕುಂಠಿತ ಆಗುತ್ತದೆ ಅದರಿಂದಲೇ ಆಲಸ್ಯ ಹೆಚ್ಚಾಗುತ್ತದೆ. ನಮ್ಮ ಜೀರ್ಣ ಕ್ರಿಯೆ ಚೆನ್ನಾಗಿ ನಡೆಯದೇ ಇದ್ದರೂ ಕೂಡ ನಿದ್ರೆ ಸರಿಯಾಗಿ ಬರುವುದು ಕಷ್ಟ. ಆದ್ದರಿಂದ ರಾತ್ರಿ ವೇಳೆ ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಕೆಲವೊಂದಿಷ್ಟು ನಿಯಮಗಳನ್ನು ಪಾಲಿಸಬೇಕು. ಕೊಬ್ಬು ಮತ್ತು ಮಸಾಲೆ ಪದಾರ್ಥಗಳು ಕಡಿಮೆ ಇರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಉತ್ತಮ. ರಾತ್ರಿ ವೇಳೆ ಊಟಾವನ್ನೂ ನಿಯಮಿತವಾಗಿ ಸೇವಿಸಬೇಕು ಮತ್ತು ಮಲಗುವ ಆರು ತಾಸುಗಳ ಮೊದಲು ಯಾವುದೇ ದುಶ್ಚಟಗಳನ್ನು ಅಂದ್ರೆ ಆಲ್ಕೋಹಾಲ್ ಸೇವನೆ ಮಾಡಬಾರದು. ಹಾಗೂ ಸಾಧ್ಯವಾದಷ್ಟು ಒತ್ತಡದ ಕೆಲಸವನ್ನು ದಿನದ ಆರಂಭದಲ್ಲಿಯೇ ಮಾಡಬೇಕು. ಕಡಿಮೆ ಸವಾಲಿನ ಕೆಲಸಗಳನ್ನು ನಂತರ ಮಾಡಬೇಕು. ಮತ್ತು ಉತ್ತಮವಾದ ಗುಣಮಟ್ಟದ ನಿದ್ದೆ ಬರಬೇಕು ಅಂದ್ರೆ ವ್ಯಾಯಾಮ ಅತ್ಯಗತ್ಯ ಆಗಿದೆ. ನಿಮಗೆ ಸಾಧ್ಯವಾದರೆ ಸಂಜೆಯ ವೇಳೆ ಜಿಮ್, ವಾಕಿಂಗ್ ಮಾಡಿ ಇದರಿಂದ ದೇಹ ಚೆನ್ನಾಗಿ ದಣಿದು ರಾತ್ರಿ ಬೇಗ ನಿದ್ದೆ ಬರುತ್ತದೆ. ಮತ್ತು ಮಲಗುವ ಮುಂಚೆ ಗಾಳಿಯನ್ನು ಎಳೆದುಕೊಂಡು ಉಸಿರಾಟ ಪ್ರಕ್ರಿಯೆ ನಡೆಸಿ ಮಲಗುವುದರಿಂದ ಶರೀರ ಹಗುರವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

 

ನೀವು ಮಲಗುವ ರೂಮಿನಲ್ಲಿ ಗೋಡೆ ಗಡಿಯಾರ ಇದ್ದರೆ, ಅದರಿಂದ ನಿಮಗೆ ನಿದ್ದೆಗೆ ತೊಂದರೆ ಆಗುತ್ತದೆ ಎಂದು ಕೆಲವರು ಹೇಳುತ್ತಾರೆ, ಆಗಾಗ ಗಡಿಯಾರದ ಕಡೆ ನೋಡಬೇಕು ಎನಿಸುತ್ತದೆ ಎಂದೆಲ್ಲ ಹೇಳುತ್ತಾ ಇರುತ್ತಾರೆ. ಹೀಗೆ ನೋಡುವುದರಿಂದ ನಿದ್ರೆಗೆ ಭಂಗ ಆಗುತ್ತದೆ. ಇಂತಹ ಸಂಶಯಗಳು ಮನಸಿನಲ್ಲಿ ಇದ್ರೆ ಗಡಿಯಾರವನ್ನು ಎದುರಿಗೆ ಇರುವ ಬದಲು ಅದರ ಶಬ್ಧ ಕೇಳದ ಹಾಗೆ ದೂರದಲ್ಲಿ ಇಡಬೇಕು. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲನ್ನು ಸೇವಿಸಿ ಮಲಗಿರಿ, ಇದರಿಂದ ಅತಿ ಬೇಗ ನಿದ್ರೆ ಬರುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮೆದುಳಿನಲ್ಲಿ ಮೆಲತೋನಿನ್ ಟೋ ಎಂಬ ಹಾರ್ಮೋನ್ ಅನ್ನು ಉತ್ಪತ್ತಿ ಮಾಡುತ್ತದೆ, ಇದರಿಂದ ಗಾಢ ನಿದ್ದೆಗೆ ಪ್ರೇರೇಪಿಸುತ್ತದೆ. ರಾತ್ರಿ ಊಟಾ ಆದ ಒಂದು ತಾಸಿನ ನಂತರ ಒಂದು ಬಾಳೆ ಹಣ್ಣು ಸೇವನೆ ಮಾಡುವುದು ಉತ್ತಮ. ಇದರಿಂದ ನಮ್ಮ ದೇಹಕ್ಕೆ ಆಯಾಸ ಮತ್ತು ಒತ್ತಡ ಕಡಿಮೆಯಾಗಿ ಒಳ್ಳೆಯ ನಿದ್ದೆ ಬರುತ್ತದೆ. ಮುಖ್ಯವಾಗಿ ನಿಮ್ಮ ಹಾಸಿಗೆ ಹೇಗೆ ಇರಬೇಕು ಅಂದ್ರೆ, ನಿದ್ರೆ ಹಾಗೂ ಲೈಂಗಿಕ ಜೀವನಕ್ಕೆ ಮಾತ್ರ ಅದು ಸೀಮಿತ ಆಗಿರಬೇಕು, ಹೌದು ಅನೇಕ ಜನರು ಹಾಸಿಗೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಾರೆ, ಅಲ್ಲೇ ಊಟಾ ಮಾಡುವುದು ಇನ್ನಿತರೆ ಕೆಲಸಗಳನ್ನು ಅಲ್ಲೇ ಮಾಡುತ್ತಾ ಇರುತ್ತಾರೆ, ಈ ರೀತಿಯ ಅಭ್ಯಾಸ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ. ಎಲ್ಲಾ ಕೆಲಸವನ್ನು ಹಾಸಿಗೆ ಮೇಲೆ ನಡೆಸಿದರೆ ನಿದ್ದೆಗೆ ಆ ನಿಮ್ಮ ಹಾಸಿಗೆ ಬೇಸರ ತರಿಸ್ಬಹುದು. ಹೀಗಾಗಿ ನಿದ್ದೆ ಹಾಗೂ ನಿಮ್ಮ ಲೈಂಗಿಕ ಜೀವನಕ್ಕೆ ಮಾತ್ರ ಆ ನಿಮ್ಮ ಹಾಸಿಗೆ ಸೀಮಿತ ಆಗಿರಲಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು