ಗಿರಿಯಮ್ಮನ ಭಕ್ತಿಗೆ ಒಲಿದ ಶ್ರೀ ರಂಗನಾಥನ ಪುಣ್ಯ ಕ್ಷೇತ್ರವಿದು.!!!

ಗಿರಿಯಮ್ಮನ ಭಕ್ತಿಗೆ ಒಲಿದ ಶ್ರೀ ರಂಗನಾಥನ ಪುಣ್ಯ ಕ್ಷೇತ್ರವಿದು.!!!

ನಮಸ್ತೆ ಪ್ರಿಯ ಓದುಗರೇ, ಪರಮಾತ್ಮ ಮನುಷ್ಯನಿಂದ ಬಯಸುವುದು ಕೇವಲ ನಿಷ್ಕಲ್ಮಶ ಭಕ್ತಿ ಮಾತ್ರ. ಜಾತಿ ಕುಲ ಮತ ಯಾವುದಾದರೇನು? ಆ ಭಗವಂತ ಎಲ್ಲಿ ಯಾವಾಗ ಹೇಗೆ ಬಂದು ಭಕ್ತರ ಕಲ್ಮಶ ರಹಿತವಾದ ಭಕ್ತಿಗೆ ಒಲಿಯುತ್ತಾನೆ ಅಂತ ಹೇಳೋಕೆ ಸಾಧ್ಯವಿಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಗಿರಿಯಮ್ಮನಿಗೆ ತನ್ನ ವಿಶ್ವ ರೂಪವನ್ನು ತೋರಿದ ಹೆಳವನಕಟ್ಟೆ ಶ್ರೀ ರಂಗನಾಥ ಸ್ವಾಮಿಯ ದರ್ಶನ ಮಾಡಿ ಕೃತಾರ್ಥರಾಗೋಣ. ಪ್ರಶಾಂತವಾದ ವಾತಾವರಣ ಮಧ್ಯೆ ನೆಲೆಸಿರುವ ಶ್ರೀ ರಂಗನಾಥನ ದರ್ಶನ ಮಾಡಿ ಕೈ ಮುಗಿದು ಬೇಡಿಕೊಂಡರೆ ನಮ್ಮೆಲ್ಲ ಅಭೀಶ್ಟೆಗಳನ್ನು ಈ ದೇವಾ ಸಂಪೂರ್ಣ ಮಾಡುತ್ತಾನೆ. ಇಲ್ಲಿ ಬಂದು ಸ್ವಾಮಿಗೆ ಪೂಜೆ ಮಾಡಿದ್ರೆ ಭವ ರೋಗಗಳು ದೂರವಾಗುತ್ತದೆ. ಈ ಕ್ಷೇತ್ರಕ್ಕೆ ಹೇಳವನಕಟ್ಟೆ ಎಂದು ಹೆಸರು ಬರುವ ಹಿಂದೆ ಒಂದು ಸ್ವಾರಸ್ಯಕರ ಕಥೆ ಕೂಡ ಇದೆ. ಸೂರ್ಯನ ಶಾಪವಾಗಿದ್ದ ಅರುನಸ್ಥ ಆಗಿ ಇಲ್ಲಿ ಹುಟ್ಟಿದ ಆತ ನಿತ್ಯ ಹಸುಗಳನ್ನು ಮೇಯಿಸಿ ಅವುಗಳನ್ನು ಸ್ನಾನ ಮಾಡಿಸಿ ಶುದ್ದಿ ಮಾಡುತ್ತಾ ಇದ್ದ. ಈತ ದನಗಳಿಗೆ ಮೈ ತೊಳೆಯಲು ಒಂದು ನೀರಿನ ಕಟ್ಟೆಯನ್ನು ಕಟ್ಟಿದ ಹೀಗೆ ಹೇಳವನು ಕಟ್ಟಿದ ಕಟ್ಟೆ ಇರುವುದರಿಂದ ಈ ಸ್ಥಳಕ್ಕೆ ಹೇಳವನಕಟ್ಟೆ ಹೆಸರು ಬಂತು.

ಇಲ್ಲಿನ ರಂಗನಾಥ ಸ್ವಾಮಿಯು ಸ್ವಯಂಭೂ ಆಗಿದ್ದು ಈತನನ್ನು ಹೇಳವನಿಗೆ ತೋರಿಸಿಕೊಟ್ಟಿದ್ದು ಒಂದು ಕಾಮಧೇನು. ಹಸು ಒಂದು ನಿತ್ಯ ಹುತ್ತದ ಬಳಿ ಹೋಗಿ ತನ್ನ ಕೆಚ್ಚಲಿನಿಂದ ಹಾಲನ್ನು ಸುರಿಸಿ ಬರುತ್ತಾ ಇತ್ತು. ಇದನ್ನು ಒಂದು ದಿನ ಗಮನಿಸಿದ ಹೆಳವ ಕುತೂಹಲ ತಡೆಯಲಾರದೆ ಹುತ್ತವನ್ನು ಹೊಡೆದ ಆಗ ಶ್ರೀ ರಂಗನಾಥನು ನನ್ನನ್ನು ಪೂಜಿಸು ನಿನ್ನೆಲ್ಲ ಕಷ್ಟಗಳು ದೂರವಾಗುತ್ತದೆ ಎಂದು ಹೇಳಿ ಈ ಕ್ಷೇತ್ರದಲ್ಲಿ ನೆಲೆ ನಿಂತ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಕ್ಷೇತ್ರವು ಇಂದಿಗೂ ಜನ ಮಾನಸದಲ್ಲಿ ಅಚ್ಚು ಉಳಿಯಲು ಕಾರಣ ಹೇಳವನಕಟ್ಟೆ ಗಿರಿಯಮ್ಮ. ಸಂಸಾರದ ಭವ ಬಂಧನಗಳನ್ನು ತೊರೆದು ತನ್ನ ಉಸಿರು ಭಗವಂತನಲ್ಲಿ ಸೇರುವ ವರೆಗೂ ಶ್ರೀ ರಂಗನಾಥನ ಲ್ಲಿ ತನ್ನ ಆರಾಧ್ಯ ದೈವವಾಗಿ ಪೂಜಿಸಿದ ಸಾಧ್ವಿ ಮಣಿ ಈಕೆ. ತಾಯಿ ಬೃಂದಾವನದ ಮುಂದೆ ಚುಕ್ಕಿ ರಂಗೋಲಿ ಇಟ್ಟರೆ ರಂಗೋಲಿಯ ಮೇಲೆ ಶ್ರೀ ರಂಗನಾಥ ಬಂದು ನೃತ್ಯ ಮಾಡುತ್ತ ಇದ್ದನಂತೆ. ಇಲ್ಲಿಗೆ ಬಂದರೆ ಗಿರಿಯಮ್ಮನ ಭಕ್ತಿಯ ನೆನಪಾಗಿ ನಮ್ಮ ಮನಸ್ಸು ಕೂಡ ಶ್ರೀ ಹರಿ ಚರಣ ಕಮಲದಲ್ಲಿ ತಲ್ಲೀನ ಆಗುತ್ತೆ.

 

ಹೊನ್ನು ತಾ ಗುಬ್ಬಿ ಹೂನ್ನು ತಾ, ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ ಹೊನ್ನು ತಾ ಗುಬ್ಬಿ ಹೊನ್ನು ತಾ, ಆಗಮವನು ತಂದು ಜಗಕಿತ್ತ ಕೈಗೆ, ಸಾಗರವನ್ನು ಮಥಿಸಿ ಸುಧೆ ತಂದ ಕೈಗೆ, ತೂಗಿ ಮಾತಾಡುವ ಸ್ಥೂಲಕಾಯ ನ ಕೈಗೆ, ಹೊನ್ನು ತಾ ಗುಬ್ಬಿ ಹೊನ್ನು ತಾ.. ಹೀಗೆ ಬಗೆ ಬಗೆಯ ಪದಗಳಿಂದ ಸಾವಿರಾರು ರಂಗನ ಗೀತೆಗಳನ್ನು ಈ ಮಹಾತಾಯಿ ರಚಿಸಿದ್ದಾರೆ. ಈ ದೇವಸ್ಥಾನದಲ್ಲಿ ರಂಗನಾಥ ಸ್ವಾಮಿ ಮಾತ್ರವಲ್ಲ ಪರಮೇಶ್ವರನ ಸಾನಿಧ್ಯ ಕೂಡ ಇದೆ. ಹೀಗಾಗಿ ಇಲ್ಲಿಗೆ ಬಂದರೆ ಹರಿ ಹರ ಇಬ್ಬರನ್ನು ಪೂಜೆ ಮಾಡುವ ಸೌಭಾಗ್ಯ ನಮ್ಮದಾಗುತ್ತದೆ. ಇತ್ತೀಚೆಗೆ ಮಹಾಲಕ್ಷ್ಮಿ ದೇವಾಲಯ ವನ್ನಾ ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಈಕೆಯನ್ನು ದರ್ಶನ ಮಾಡಿದರೆ ನಮ್ಮೆಲ್ಲ ಕಾರ್ಯಗಳು ಯಶಸ್ವಿ ಆಗುವಂತೆ ಈ ದೇವಿ ನಮಗೆ ದಯೆ ತೋರುತ್ತಾಳೆ. ಇನ್ನೂ ಇಲ್ಲಿಗೆ ಬಂದರೆ ಆಂಜನೇಯ ಸ್ವಾಮಿಯನ್ನು ಕೂಡ ನಾವು ದರ್ಶನ ಮಾಡಬಹುದು. ನಿತ್ಯ ದೇವರಿಗೆ ಅಭಿಷೇಕ ಮಂಗಳಾರತಿ ಮಾಡಲಾಗುತ್ತದೆ. ಇಲ್ಲಿ ಉಚಿತ ವಸತಿ ಸೌಲಭ್ಯ ಇದೆ. ಈ ದೇಗುಲವು ದಾವಣಗೆರೆಯ ಮಲೇಬೆನ್ನೂರು ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ನಿಮ್ಮ ಜೀವನದಲ್ಲಿ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ. ಶುಭದಿನ.

ಭಕ್ತಿ