ಈ ಕ್ಷೇತ್ರದಲ್ಲಿ ಇದೆ ಭಕ್ತರ ಸರ್ವ ಸಂಕಷ್ಟಗಳನ್ನು ಪರಿಹರಿಸುವ ವಿಸ್ಮಯಕಾರಿ ಕೊಳಗ..!!!

ಈ ಕ್ಷೇತ್ರದಲ್ಲಿ ಇದೆ ಭಕ್ತರ ಸರ್ವ ಸಂಕಷ್ಟಗಳನ್ನು ಪರಿಹರಿಸುವ ವಿಸ್ಮಯಕಾರಿ ಕೊಳಗ..!!!

ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಧರ್ಮದಲ್ಲಿ ಸಂಪತ್ತಿನ ಅಧಿ ದೇವತೆ ಆಗಿ ಶ್ರೀಮನ್ ನಾರಾಯಣನ ಪತ್ನಿಯಾದ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಆಕೆ ಒಲಿದ ಮನೆಯಲ್ಲಿ ಸಂಪತ್ತಿನ ಹೊಳೆ ಹರಿಯುತ್ತದೆ ಏನಲಾಗುತ್ತದೆ. ಸಾಮಾನ್ಯವಾಗಿ ಲಕ್ಷ್ಮೀ ದೇವಿ ದೇವಾಲಯಗಳಲ್ಲಿ ಮಹಾಲಕ್ಷ್ಮಿ ಅಮ್ಮನವರು ವಿಗ್ರಹ ರೂಪದಲ್ಲಿ ನೆಲೆಸಿದರೆ ಈ ಕ್ಷೇತ್ರದಲ್ಲಿ ಅಮ್ಮನವರು ಕೊಳಗದ ರೂಪದಲ್ಲಿ ನೆಲೆ ನಿಂತು ತನ್ನ ಬಳಿ ಬಂದ ಭಕ್ತರ ಸಂಕಷ್ಟಗಳನ್ನು ನೀಗುತ್ತಿದ್ದಾಳೆ. ಬನ್ನಿ ಹಾಗಾದರೆ ಆ ಕ್ಷೇತ್ರಕ್ಕೆ ಹೋದರೆ ಯಾವೆಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತೆ, ಮಹಾಲಕ್ಷ್ಮಿ ದೇವಿ ಕೊಳಗದ ರೂಪದಲ್ಲಿ ನೆಲೆಸಿದ್ದು ಯಾಕೆ ಎಂದು ಇಂದಿನ ಲೇಖನದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳೋಣ. ಸುಮಾರು 850 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿರುವ ಕೊಳಗ ಮಹಾಲಕ್ಷ್ಮಿ ದೇವಾಲಯ ಪಾಳೆಗಾರರ ಕಾಲದಲ್ಲಿ ನಿರ್ಮಿತವಾದ ಆಲಯ ಆಗಿದ್ದು, ಈ ಕ್ಷೇತ್ರದಲ್ಲಿ ಮಹಾಲಕ್ಷ್ಮಿ ತಾಯಿಯು ಕೊಳಗದ ರೂಪದಲ್ಲಿ ನೆಲೆಸಿರುವ ಕಾರಣದಿಂದ ಈ ಕ್ಷೇತ್ರಕ್ಕೆ ಕೊಳಗ ಮಹಾಲಕ್ಷ್ಮಿ ದೇವಾಲಯ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

 

 

ಕಪ್ಪು ವರ್ಣದ ಶಿಲೆಯಲ್ಲಿ ಇರುವ ಮಹಾಲಕ್ಷ್ಮಿ ಅಮ್ಮನವರ ವಿಗ್ರಹದ ಹಿಂದೆ ಕೊಳಗವನ್ನು ಇಟ್ಟು ಪೂಜಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ನಾಗಲಾಂಬಿಕೆ, ನಾಗ ಲಿಂಗೇಶ್ವರ ಹಾಗೂ ಸುಬ್ರಮಣ್ಯ ನ ವಿಗ್ರಹಗಳನ್ನು ಕೂಡ ಮಹಾಲಕ್ಷ್ಮಿ ಅಮ್ಮನವರ ಅಣತಿಯಂತೆ ಪ್ರತಿಷ್ಠಾಪಿಸಲಾಗಿದೆ. ವಿವಾಹ ವಿಳಂಬ ಸಮಸ್ಯೆ, ಅನಾರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ, ವ್ಯವಹಾರ ಸಮಸ್ಯೆ, ಸಂತಾನ ಸಮಸ್ಯೆ, ಕೋರ್ಟ್ ಕಚೇರಿ ಸಮಸ್ಯೆ , ಜಮೀನಿನ ಸಮಸ್ಯೆ, ಹೀಗೆ ಏನೇ ಸಮಸ್ಯೆಗಳು ಇದ್ರೂ ಈ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ತಾಯಿಯ ಎದುರಿನಲ್ಲಿ ನಿಂತು ಬೇಡಿಕೊಂಡು ಹರಕೆ ಹೊತ್ತರೆ ಸಕಲ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಮಹಾಲಕ್ಷ್ಮಿ ಅಮ್ಮನವರು ಕೊಳಗದ ರೂಪದಲ್ಲಿ ನೆಲೆಸಿರುವುದರಿಂದ ಇಲ್ಲಿಗೆ ಬಂದು ತಾಯಿಯ ಬಳಿ ಬೇಡಿಕೊಂಡರೆ ಮನದ ಅಭೀಶ್ಟೆಗಳು ಎಲ್ಲವೂ ಶೀಘ್ರವಾಗಿ ನೆರವೇರುತ್ತದೆ ಎಂದು ಹೇಳಲಾಗುತ್ತದೆ.

 

 

ಕಣ್ಣು ಕಳೆದುಕೊಂಡವರಿಗೆ ಮರಳಿ ದೃಷ್ಟಿಯನ್ನು ನೀಡಿದ್ದು, ಮಕ್ಕಳು ಇಲ್ಲದವರಿಗೆ ಉತ್ತಮ ಸಂತಾನ ಭಾಗ್ಯ, ಹೂವನ್ನು ಮಾರುವಲ್ಲಿ ನಷ್ಟವನ್ನು ಅನುಭವಿಸುತ್ತಿದ್ದ ವ್ಯಕ್ತಿಗೆ ವ್ಯಾಪಾರ ಚೆನ್ನಾಗಿ ಆಗುವಂತೆ ಅನುಗ್ರಹಿಸಿದರು, ಕಂಡ ಕಂಡ ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ವಾಸಿಯಾಗದ ಖಾಯಿಲೆ ನಿವಾರಣೆ ಮಾಡಿದ್ದು, ಹೀಗೆ ತನ್ನ ಬಳಿ ಸಮಸ್ಯೆಗಳನ್ನು ಹೊತ್ತು ತಂದ ಸಾವಿರಾರು ಜನರ ಕಷ್ಟಗಳನ್ನು ಪರಿಹರಿಸಿದಾಳೆ. ತನ್ನನ್ನು ನಂಬಿ ಯಾರೇ ಬಂದು ಏನನ್ನೇ ಬೇಡಿದರೂ ಈ ತಾಯಿ ಕರುಣಿಸುತ್ತಾಳೆ ಎಂಬ ಕಾರಣದಿಂದ ನಿತ್ಯ ನೂರಾರು ಮಂದಿ ಈ ಕ್ಷೇತ್ರಕ್ಕೆ ಬಂದು ಅಮ್ಮನವರನ್ನು ನಂಬಿ ತಮ್ಮ ಕಷ್ಟಗಳನ್ನು ಪರಿಹರಿಸಿಕೊಂಡು ಹೋಗಿದ್ದಾರೆ. ಅಲ್ಲದೆ ಸರ್ಪ ದೋಷ, ರಾಹು ದೋಷ, ಕುಜ ದೋಷ ಸಮಸ್ಯೆಗಳು ಇದ್ದವರು ಈ ದೇಗುಲಕ್ಕೆ ಬಂದು ಇಲ್ಲಿರುವ ಸುಬ್ರಮಣ್ಯ ಸ್ವಾಮಿಗೆ ಪೂಜೆ ಸಲ್ಲಿಸಿದರೆ ಅವರ ದೋಷಗಳು ದೂರ ಆಗುತ್ತೆ ಎಂದು ಹೇಳಲಾಗುತ್ತದೆ. ಕೊಳಗದ ರೂಪದಲ್ಲಿ ನೆಲೆಸಿರುವ ಈ ದಿವ್ಯ ಕ್ಷೇತ್ರವು ತುಮಕೂರು ಜಿಲ್ಲೆಯ ಲಿಂಗಾಪುರ ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಮಹಾಲಕ್ಷ್ಮಿಯ ಈ ದಿವ್ಯ ಸನ್ನಿಧಿಗೆ ಭೇಟಿ ನೀಡಿ. ಶುಭದಿನ.

ಭಕ್ತಿ