ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಇಂದಿನ ಲೇಖನದಲ್ಲಿ ಉಪ್ಪಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಉಪ್ಪು ಇಲ್ಲದೆ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅನ್ನುವ ಗಾದೆ ಮಾತು ಇದೆ. ಉಪ್ಪು ಇದ್ದರೆ ಮಾತ್ರವೇ ಆಹಾರ ಇಷ್ಟವಾಗುತ್ತದೆ. ಇಲ್ಲವಾದರೆ ಯಾರು ಕೂಡ ಊಟದ ಹತ್ತಿರ ಸುಳಿಯುವುದಿಲ್ಲ. ಆದರೆ ಈ ಉಪ್ಪು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು, ಅತಿಯಾಗಿ ಉಪ್ಪು ಸೇವನೆ ಮಾಡಿದರೆ ಏನಾಗುತ್ತದೆ ಅನ್ನುವುದರ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಉಪ್ಪಿನಲ್ಲಿ ಇರುವ ಸೋಡಿಯಂ ಅಂಶವು ಹೆಚ್ಚಾದರೆ ಹೃದ್ರೋಗದ ಸಮಸ್ಯೆಗಳು ರಕ್ತದೊತ್ತಡ ಹೆಚ್ಚುತ್ತದೆ. ಉಪ್ಪು ಅತಿಯಾಗಿ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಅನೇಕ ಬಗೆಯ ರೋಗ ರುಜಿನಗಳು ಬಂದು ಸೇರುತ್ತವೆ. ಹಾಗೆಯೇ ಮೂತ್ರ ಪಿಂಡಗಳು ಕೂಡ ಹಾನಿಕೊಳ್ಳಗಾಗುತ್ತವೆ. ಹಾಗೂ ಅಧಿಕ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ರಕ್ತದೊತ್ತಡ ಹೆಚ್ಚಾದರೆ ನಮ್ಮ ಹೃದಯದ ಅಪಧಮನಿಗಳು ಗಟ್ಟಿಯಾಗುತ್ತವೆ.
ಇದರಿಂದ ಪೂರ್ತಿ ದೇಹಕ್ಕೆ ಆಮ್ಲಜನಕದ ಪೂರೈಕೆ ಕಡಿಮೆ ಆಗುತ್ತದೆ. ಇದರಿಂದ ಚರ್ಮವೂ ಒಣಗುತ್ತದೆ ಇದರ ಜೊತೆಗೆ ಸುಕ್ಕು ಗಟ್ಟುತ್ತದೆ. ಇದರಿಂದ ವ್ಯಕ್ತಿಯ ವಯಸ್ಸು ಹೆಚ್ಚಿದಂತೆ ಕಾಣುತ್ತದೆ. ಉಪ್ಪುಗಳಲ್ಲಿ ಹಲವಾರು ಬಗೆಯ ವಿಧಗಳಿವೆ, ಕಲ್ಲುಪ್ಪು ಕೆಂಪು ಉಪ್ಪು ದೊಡ್ಡ ಉಪ್ಪು ಹೀಗೆ ನಾನಾ ಬಗೆಯ ವಿಧಗಳು ನಮಗೆ ಸಿಗುತ್ತವೆ. ಇದರಲ್ಲಿ ಮುಖ್ಯವಾಗಿ ಪುಡಿ ಉಪ್ಪು. ಇದು ನಮ್ಮ ದೇಹದ ಮೇಲೆ ಸ್ಲೋ ಪಾಯಿಸನ್ ಹಾಗೆ ಕೆಲಸವನ್ನು ಮಾಡುತ್ತದೆ. ಇದನ್ನು ಬಿಳಿ ಉಪ್ಪು ಎಂದು ಕರೆಯುತ್ತಾರೆ. ಉಪ್ಪು ಬೇರೆ ವಿಧಾನದಲ್ಲಿ ಆರೋಗ್ಯಕ್ಕೆ ಒಳ್ಳೆದಾದರೆ, ಈ ಪುಡಿ ಉಪ್ಪು ಬಳಸುವುದು ಬಹಳ ಅಪಾಯಕಾರಿ. ಏಕೆಂದ್ರೆ ಈ ಉಪ್ಪನ್ನು ಸೋಡಿಯಂ ಕ್ಲೋರೈಡ್ ನಿಂದ ತಯಾರಿಸುತ್ತಾರೆ. ಹಾಗೆಯೇ ಇದು ಯಾವುದೇ ನೈಸರ್ಗಿಕವಾದ ಯಾವುದೇ ಅಂಶಗಳನ್ನು ಒಳಗೊಂಡಿರುವಿದಿಲ್ಲ.ಬದಲಾಗಿ ರುಚಿ ಮಾತ್ರ ಹೊಂದಿರುತ್ತದೆ.ಇದನ್ನು ತಯಾರಿಸುವಾಗ ಹೆಚ್ಚಿನ ತಾಪಮಾನದಲ್ಲಿ ಕಾಯಿಸುತ್ತಾರೆ ಹೀಗಾಗಿ ಇದು 80% ತನ್ನ ಎಲ್ಲ ಸತ್ವಗಳನ್ನು ಕಳೆದುಕೊಳ್ಳುತ್ತದೆ. ಮತ್ತು ಬಣ್ಣದಲ್ಲಿ ಇದು ಬಿಳಿ ಬಣ್ಣದಲ್ಲಿ ಇರುತ್ತದೆ ದೊರೆಯುತ್ತದೆ ಆದರೆ ನೈಸರ್ಗಿಕವಾಗಿ ಸಿಗುವ ಉಪ್ಪು ಅಷ್ಟೊಂದು ಬಿಳಿ ಬಣ್ಣದಲ್ಲಿ ಇರುವುದಿಲ್ಲ. ಹೀಗಾಗಿ ಇದರ ಸೇವನೆ ಅಧಿಕವಾಗಿ ಮಾಡುವುದರಿಂದ ಥೈರಾಯಿಡ್ ಗ್ರಂಥಿಗಳು ತೀವ್ರವಾಗಿ ನಾಶವಾಗುತ್ತವೆ.
ಮತ್ತು ಚಯಾಪಚಯ ಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಿಳಿ ಉಪ್ಪಿನಲ್ಲಿ ಇರುವ ಸಾಕಷ್ಟು ಸೋಡಿಯಂ ಕ್ಲೋರೈಡ್ ನಮ್ಮ ದೇಹದಲ್ಲಿ ಇರುವ ಎಲ್ಲ ಜೀವಕೋಶಗಳ ಮೇಲೆ ಹಾನಿ ಉಂಟು ಮಾಡುತ್ತದೆ. ನಮ್ಮ ದೇಶದಲ್ಲಿ ಉಳಿದ ದೇಶಗಳಿಗೆ ಹೋಲಿಸಿದರೆ 2% ನಷ್ಟು ಅಧಿಕವಾಗಿ ಉಪ್ಪು ಬಳಕೆ ಮಾಡುತ್ತಿದ್ದಾರೆ ಅಂತ ಒಂದು ಸಮೀಕ್ಷೆ ಪ್ರಕಾರ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ನಮ್ಮ ಭಾರತ ದೇಶವು ಉಪ್ಪಿನ ಅಧಿಕವಾದ ಬಳಕೆಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿದೆ ಎಂದು ತಿಳಿದು ಬಂದಿದೆ. ನಾವು ತಿನ್ನುವ ಪಾಸ್ಟ್ ಪುಡ್ ನಲ್ಲಿ ಕೂಡ ಅಧಿಕವಾದ ಉಪ್ಪು ಅಡಗಿದೆ. ಆದ್ದರಿಂದ ಪಾಸ್ಟ್ ಪುಡ್ ಅನ್ನು ಅತಿಯಾಗಿ ಸೇವನೆ ಮಾಡಬೇಡಿ. ಅದ್ಯಾಗೂ ನಾಲಿಗೆಗೆ ರುಚಿಯನ್ನು ನೀಡುತ್ತದೆ ಎಂದು ಅತಿಯಾಗಿ ಉಪ್ಪು ಸೇವನೆ ಮಾಡಿದರೆ ಖಂಡಿತವಾಗಿ ಅನೇಕ ರೋಗಗಳು ಹೆಚ್ಚುತ್ತವೆ. ಆದ್ದರಿಂದ ಮಿತವಾಗಿ ಬಳಸಿ ಸಾಧ್ಯವಾದಷ್ಟು ಪುಡಿ ಉಪ್ಪಿಗಿಂತ ನೈಸರ್ಗಿಕವಾದ ಉಪ್ಪು ಬಳಕೆ ಮಾಡಿ. ಶುಭದಿನ.