19 ವರ್ಷಕ್ಕಿಂತ ಮೇಲ್ಪಟ್ಟ ಗರ್ಭಿಣಿ/ಬಾಣಂತಿಯರಿಗೆ ಇರುವಂತಹ ಯೋಜನೆ ಯಾವುದು ಗೊತ್ತಾ..?

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಈ ಯೋಜನೆ 19 ವರ್ಷಕ್ಕಿಂತ ಮೇಲ್ಪಟ್ಟ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿ ರಿ ಗೆ, ಮೊದಲ ನೇರ ಹೆರಿಗೆಗೆ, ಮೊದಲ ನೇರ ನಗದು ಪ್ರಯೋಜನವನ್ನು ಒದಗಿಸಲು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು 2017 ರಲ್ಲ್ಲಿ ಜಾರಿಗೊಳಿಸಲಾಯಿತು. ಈ ಯೋಜನೆಯ ಉದ್ದೇಶಗಳು ಏನೆಂದರೆ, ಮೊದಲ ಜೀವಂತ ಮಗುವಿನ ಹೆರಿಗೆಯ ಮೊದಲು ಮತ್ತು ನಂತರ ತಾಯಿ ಸಾಕಷ್ಟು ವಿಶ್ರಾಂತಿ ಪಡೆಯುವುದು ಅತ್ಯಗತ್ಯ. ಅದಕ್ಕಾಗಿಯೇ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಯಾವುದೇ ವೇತನ ನಷ್ಟದ ವಿರುದ್ಧ ನಗದು ಪರಿಹಾರವನ್ನು ಒದಗಿಸುವುದನ್ನು ಖಚಿತ ಪಡಿಸುತ್ತದೆ. ರೋಗದ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಆರೋಗ್ಯಕ್ಕೆ ಮತ್ತು ಸಾಂಸ್ಥಿಕ ಆರೈಕೆ ಅತ್ಯಗತ್ಯ. ಶಿಶು ಮರಣ ಪ್ರಮಾಣ ಮತ್ತು ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಉತ್ತಮ ಪೋಷಣೆ ಮತ್ತು ಆಹಾರ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಗರ್ಭಿಣಿ ಹಾಗೆ ಹಾಲುಣಿಸುವ ತಾಯಂದಿರಲ್ಲಿ ಆರೋಗ್ಯಕರ ನಡವಳಿಕೆಯನ್ನು ಉತ್ತೇಜಿಸುವುದು. ಇನ್ನೂ ಈ ಯೋಜನೆಯನ್ನು ಯಾರು ಪಡೆಯಬಹುದು ಎಂದು ನೋಡೋಣ.

 

 

ಸರ್ಕಾರಿ ಉದ್ಯೋಗದಲ್ಲಿ ಇರುವವರನ್ನು ಹೊರತು ಪಡಿಸಿ ಎಲ್ಲ ಗರ್ಭಿಣಿಯರು ಹಾಗೆ ಹಾಲುಣಿಸುವ ಮಹಿಳೆಯರು ಅಥವಾ ಸಧ್ಯಕ್ಕೆ ಬೇರೆ ಯಾವುದಾದರೂ ಆಯೋಜನೆಯ ಅಡಿಯಲ್ಲಿ ಇದೆ ರೀತಿ ಪ್ರಯೋಜನಗಳನ್ನು ಪಡೆಯುವವರು ಈ ಯೋಜನೆಯ ಅನುಕೂಲವನ್ನು ಪಡೆಯಬಹುದು. ಕುಟುಂಬದಲ್ಲಿ ಮೊದಲ ಮಗುವಾಗಿರುವ ಗರ್ಭಿಣಿ ಮಹಿಳೆಯರಿಗೆ ಮಾತ್ರ ಇದು ಅನ್ವಯ ಆಗುತ್ತೆ. ಈ ಯೋಜನೆಗೆ ಆಫ್ ಲೈನ್ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅಗತ್ಯವಾದ ದಾಖಲೆಗಳನ್ನು ಹೇಳುವುದಾದರೆ, ತಾಯಿ ಮತ್ತು ಮಕ್ಕಳ ರಕ್ಷಣಾ ಕಾರ್ಡ್ ಅಥವಾ ಎಂಸಿಪಿ ಯ ಪ್ರತಿ. ಫಲಾನುಭವಿ ಮತ್ತು ಆಕೆಯ ಗಂಡನ ಗುರುತಿನ ಪುರಾವೆಯ ಪ್ರತಿ. ಬ್ಯಾಂಕ್ ಖಾತೆಯ ಅಥವಾ ಪೋಸ್ಟ್ ಆಫೀಸ್ ಖಾತೆಯ ಪಾಸ್ ಬುಕ್ ನ ಪ್ರತಿ. ಈ ಎಲ್ಲಾ ದಾಖಲಾತಿಗಳನ್ನು ಬಳಸಿ ಆನ್ಲೈನ್ ಮೂಲಕ ಯಾವ್ ರೀತಿ ಅಪ್ಲೈ ಮಾಡಬಹುದು ಎಂದು ನೋಡೋಣ. ಮೊದಲಿಗೆ www.pmmvy-kas.nic.in ವೆಬ್ಸೈಟ್ ಗೆ ಹೋಗಿ, ನಂತರ ಅಲ್ಲಿ ಕಾಣುವ ಫಾರ್ ರಿಜಿಸ್ಟ ರಿಂಗ್ ನ್ಯೂ ಯೂಸರ್ ಅಂತ ಕ್ಲಿಕ್ ಹಿಯರ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಕೇಳುವ ಹೆಸರು, ಮೊಬೈಲ್ ನಂಬರ್ ಎಂಟ್ರಿ ಮಾಡಿ.

 

 

ಅದೇ ಪೇಜ್ ಅಲ್ಲಿ ಬಲ ಭಾಗದಲ್ಲಿ ಹಿಂಟ್ ಕೋಷನ್, ಹಿಂಟ್ ಆನ್ಸರ್ ಅಂತ ಇರುತ್ತೆ, ಅಲ್ಲಿ ಸಾಮಾನ್ಯವಾಗಿ ಪ್ರಶ್ನೆ ಉತ್ತರ ಬರೆಯಿರಿ, ನಂತರ ಪಾಸ್ವರ್ಡ್ ಅಂಡ್ ಕನ್ಫರ್ಮ್ ಪಾಸ್ವರ್ಡ್ ಇರುವಲ್ಲಿ ಪಾಸ್ ವರ್ಡ್ ಕ್ರಿಯೇಟ್ ಮಾಡಿ. ನಂತರ ಇಮೇಲ್ ಐಡಿ ತುಂಬಿ, ಸೆಂಡ್ ಒಟಿಪೀ ಟೂ ಈಮೇಲ್ ಐಡಿ ಅಂತ ಕ್ಲಿಕ್ ಮಾಡಿ. ನಂತರ ಅಲ್ಲೇ ಇರುವ ವ್ಯಾಲಿ ಡೇಟ್ ಮೇಲೆ ಕ್ಲಿಕ್ ಮಾಡಿ, ಇದಾದ ಮೇಲೆ ನಿಮ್ಮ ಈಮೇಲ್ ಐಡಿ ಗೆ ಬಂದಿರುವ ಓಟಿಪಿ ನ ಎಂಟ್ರಿ ಮಾಡಿ, ಅಪ್ಲೈ ಫಾರ್ ಫಸ್ಟ್ ಲೈವ್ ಚೈಲ್ಡ್ ಇರುವಲ್ಲಿ ಎಸ್ ಎಂದು ಸೆಲೆಕ್ಟ್ ಮಾಡಿ. ನಂತರ ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ, ಆಗ ನಿಮಗೆ ಯುಸರ್ ನೇಮ್ ಸೇವ್ ಸಕ್ಸೆಸ್ಫುಲ್ ಎಂದು ಬರುತ್ತೆ. ಇದೆಲ್ಲ ಆದಮೇಲೆ ನಿಮ್ಮ ಮೊಬೈಲ್ ಫೋನ್ ಗೆ ಸಂದೇಶ ಮೂಲಕ ರಿಜಿಸ್ಟ್ರೇಷನ್ ಐಡಿ ಬರುತ್ತೆ, ಮೊದಲಿಗೆ ಹೇಳಿದ ವೆಬ್ಸೈಟ್ ಗೆ ಹೋಗಿ ಲಾಗ್ ಇನ್ ಆಗಿ ಅಷ್ಟೇ. ನೊಡಿದ್ರಲ್ಲಾ ಎಷ್ಟು ಸುಲಭವಾಗಿ ಈ ಯೋಜನೆಯ ಫಲಾನುಭವಿಗಳು ಆಗಬಹುದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *