ನೇತ್ರಾವತಿ – ಕುಮಾರಧಾರ ನದಿಗಳ ಸಂಗಮದಲ್ಲಿದೆ ಈ ಪುಣ್ಯ ಕ್ಷೇತ್ರ..!!

ನೇತ್ರಾವತಿ – ಕುಮಾರಧಾರ ನದಿಗಳ ಸಂಗಮದಲ್ಲಿದೆ ಈ ಪುಣ್ಯ ಕ್ಷೇತ್ರ..!!

ನಮಸ್ತೆ ಪ್ರಿಯ ಓದುಗರೇ, ಮನುಷ್ಯ ಆದವನು ಬದುಕಿನ ಎಲ್ಲ ಮಜಲುಗಳನ್ನು ದಾಟಿದ ಮೇಲೆ ಭಗವಂತನಲ್ಲಿ ಬೇಡುವುದು ಮೋಕ್ಷವನ್ನು. ನಾವೆಷ್ಟೇ ತಪ್ಪುಗಳನ್ನು ಮಾಡಿದರೂ ಆ ತಪ್ಪುಗಳನ್ನು ಮನ್ನಿಸುವುದು ದಾಯಾಮಯನಾದ ಪರಮಾತ್ಮ ಮಾತ್ರ. ಅವನಿಲ್ಲದ ಜಗತ್ತು ಶೂನ್ಯ. ಬನ್ನಿ ಇವತ್ತಿನ ಲೇಖನದಲ್ಲಿ ಸಕಲರ ಪಾಪವನ್ನು ಮಾನ್ಯ ಮಾಡುವ ಸಹಸ್ರ ಲಿಂಗೇಶ್ವರ ನನ್ನು ದರ್ಶನ ಮಾಡಿ ಕೃತಾರ್ಥರಾಗೋನ. ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮದಲ್ಲಿ ಇರುವ ಈ ತೀರ್ಥ ಕ್ಷೇತ್ರವನ್ನು ದಕ್ಷಿಣದ ಪ್ರಯಾಗ ಎಂದೇ ಕರೆಯಲಾಗುತ್ತದೆ. ಈ ನದಿಗಳ ಅಪೂರ್ವ ಸಂಗಮದಲ್ಲಿ ಮಿಂದೆದ್ದ ಭಗವಂತನ ದರ್ಶನ ಮಾಡಿದರೆ ಮೋಕ್ಷ ದೊರಕುತ್ತದೆ ಎನ್ನುವುದು ಈ ಕ್ಷೇತ್ರಕ್ಕೆ ಬರುವ ಭಕ್ತರ ಅಚಲವಾದ ನಂಬಿಕೆ ಆಗಿದೆ.

 

ಭಕ್ತಿ ಮುಕ್ತಿ ಎರಡನ್ನೂ ಕರುಣಿಸುವ ಈ ಸಹಸ್ರ ಲಿಂಗೇಶ್ವರ ದೇವರು ಭಕ್ತಿಯಿಂದ ಬೇಡಿದ ಎಲ್ಲ ವರಗಳನ್ನು ಶೀಘ್ರವಾಗಿ ಕರುಣಿಸುತ್ತಾನೆ. ಇನ್ನೂ ಈ ಕ್ಷೇತ್ರದಲ್ಲಿ ಸಹಸ್ರ ಲಿಂಗೇಶ್ವರ ನ ಜೊತೆ ಮಹಾಕಾಳಿ ಕೂಡ ನೆಲೆ ನಿಂತಿದ್ದಾರೆ. ಮಹಕಾಳಿಯೂ ತನ್ನ ಕೈಯಲ್ಲಿ ಕಪಾಲ, ತ್ರಿಶೂಲ, ಡಮರು, ಖಡ್ಗ ಹಿಡಿದು ನಿಂತಿದ್ದಾಳೆ. ಈ ದೇವಿಗೆ ಕುಂಕುಮಾರ್ಚನೆ ಹಾಗೂ ತಂಬಿಲ ಸೇವೆ ಬಹಳ ಪ್ರಿಯವಾಗಿದ್ದ, ಯಾವುದೇ ರೋಗ ಬಂದರೂ ಈ ದೇವಿಗೆ ಸೇವೆ ಮಾಡುವುದಾಗಿ ಹರಕೆ ಹೊತ್ತರೆ ಆ ರೋಗಗಳು ಎಲ್ಲವೂ ದೂರವಾಗುತ್ತದೆ. ಹೀಗಾಗಿ ಬಹಳಷ್ಟು ಜನರು ಈ ದೇವಸ್ಥಾನಕ್ಕೆ ಬಂದು ದೇವಿಗೆ ಹರಸಿಕೊಂಡು ತಮ್ಮ ರೋಗಗಳಿಂದ ಮುಕ್ತಿ ಪಡೆಯುತ್ತಾರೆ. ಪ್ರತಿ ವರ್ಷ ಫೆಬ್ರವರಿ ಮಾರ್ಚ್ ತಿಂಗಳ ಮಾಘ ಮಾಸದಲ್ಲಿ ಮೂರು ಜಾತ್ರೆಗಳು ಇಲ್ಲಿ ಅದ್ಧೂರಿಯಾಗಿ ನಡೆಯುತ್ತವೆ.

 

ಈ ದಿನ ಮಾಘ ಸ್ನಾನ ಮಾಡಿ ಇಲ್ಲಿರುವ ಸಹಸ್ರ ಲಿಂಗೇಶ್ವರ ನ ಉದ್ಭವ ಲಿಂಗವನು ಪೂಜೆ ಮಾಡಿದರೆ ಕೋಟಿ ಜನ್ಮದ ಪಾಪ ದೂರವಾಗುತ್ತದೆ. ಅಲ್ಲದೆ ಇಲ್ಲಿ ನಡೆಯುವ ರಥೋತ್ಸವ ದಿನ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಮಾಡಲಾಗುತ್ತೆ. ಈ ದಿನ ಸರ್ವಾಲಂಕೃತ ದೇವನನ್ನು ನೋಡುವುದು ಒಂದು ಸೌಭಾಗ್ಯ. ಈ ಕ್ಷೇತ್ರದಲ್ಲಿ ನಡೆಯುವ ಭೂತ ಬಲಿ ರಥೋತ್ಸವ ಪೀಠ ಪೂಜೆ ಸರ್ವ ವಾದ್ಯ ಸೇವೆ ನೋಡುತ್ತಿದ್ದರೆ ನಮ್ಮ ಮನಸ್ಸಿನ ಅಂಧಕಾರ ಪರಮಾತ್ಮನ ಸಾನಿಧ್ಯದಲ್ಲಿ ಕರಗಿ ಹೋಗುವುದು ಸತ್ಯ. ಮನುಷ್ಯನ ಅಹಂಕಾರ ದೂರ ಮಾಡುವ ಈ ಪರಮಾತ್ಮನನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.30 ರ ವರೆಗೆ, ಸಂಜೆ 5 ರಿಂದ 8 ರ ವರೆಗೆ ದರ್ಶನ ಮಾಡಬಹುದಾಗಿದೆ. ಬೆಳಿಗ್ಗೆ 7.30, ಮಧ್ಯಾನ 12 ಗಂಟೆಗೆ ಸಂಜೆ 7 ಗಂಟೆಗೆ ದೇವರಿಗೆ ಮಹಾ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ಪುಣ್ಯ ಕ್ಷೇತ್ರವೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಎಂಬ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವನನ್ನು ದರ್ಶನ ಮಾಡಿ ಕೃತಾರ್ಥರಾಗಿ. ಶುಭದಿನ.

ಭಕ್ತಿ