ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಈ ಮಳೆಗಾಲದಲ್ಲಿ ಸಂಜೆ ಆದರೆ ಸಾಕು ಟೀ ಜೊತೆ ಏನಾದರೂ ಸ್ನಾಕ್ಸ್ ತಿನ್ನಬೇಕು ಅನಿಸುವುದು ಸಹಜ. ಅದಕ್ಕೆ ಹೋಟೆಲ್ ಬೇಕರಿ ತಿಂಡಿಗಳು ಆಗಬೇಕಿಲ್ಲ. ಹೋಟೆಲ್ ಬೇಕರಿ ತಿಂಡಿಗಳನ್ನು ಮರೆಸುವ ಒಂದು ಬಿಸಿ ಬಿಸಿ ರುಚಿಯಾದ ಗೋಧಿ ಹಿಟ್ಟಿನಿಂದ ಮಂಚೂರಿಯನ್ ರೀತಿ ಒಂದು ಹೆಲ್ದಿ ಆದ ಸ್ನಾಕ್ಸ್ ಮಾಡುವ ವಿಧಾನ ತಿಳಿಯೋಣ ಸ್ನೇಹಿತರೆ. ಇದನ್ನು ಬೆಳಗಿನ ಉಪಹಾರಕ್ಕೆ ಸಹ ಮಾಡಿಕೊಳ್ಳಬಹುದು. ಈಗ ತಡ ಮಾಡದೆ ಇವತ್ತಿನ ರೆಸಿಪಿ ಕಲಿಯೋಣ ಬನ್ನಿ. ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ ಅಲ್ಲಿ ಗೋಧಿ ಹಿಟ್ಟನ್ನು ಜರಡಿ ಮಾಡಿ, ಆ ಹಿಟ್ಟಿಗೆ ಸ್ವಲ್ಪ ಉಪ್ಪು, ಎಣ್ಣೆ ಹಾಗೂ ನೀರನ್ನು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಒಂದು 5-10ನಿಮಿಷ ಬಿಟ್ಟು ಇದನ್ನು ದೊಡ್ಡ ಹುರುಳಿ ಮಾಡಿಕೊಂಡು ದಪ್ಪಗೆ ಲಟ್ಟಿಸಿ. ಚಪಾತಿ ಮಾಡುವುದಕ್ಕಿಂತ ಎರಡು ಪಟ್ಟು ದಪ್ಪವಾಗಿ ಲಟ್ಟಿಸಿ. ಈಗ ಲಟ್ಟಿಸಿದ ದಪ್ಪ ಚಪಾತಿಯ ಎರಡೂ ಬದಿಗೆ ಎಣ್ಣೆಯನ್ನು ಸವರಿ. ಕಟ್ಟರ್ ಇಂದ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.
ನೀವು ಸ್ವೀಟ್ ಹಾಗೂ ಖಾರ ಶಂಕರಪೊಳ್ಳಿ ಮಾಡುತ್ತಿರ ಅಲ್ವಾ ಆ ರೀತಿ ಕಟ್ ಮಾಡಿ. ನಾವು ಎರಡೂ ಬಾಡಿಗೆ ಎಣ್ಣೆ ಹಚ್ಚಿರುವುದ ರಿಂದ ಇವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಈಗ ಈ ಚಪಾತಿ ಪೀಸ್ ಗಳನ್ನೂ ಕುದಿಯುವ ನೀರಲ್ಲಿ ಹಾಕಿ. 10-15 ನಿಮಿಷದ ನಂತರ ಇದರ ಬಣ್ಣ ಬದಲಾಗಿ ಚೆನ್ನಾಗಿ ಒಳಗಿನಿಂದ ಬೇಯುತ್ತದೆ. ಈಗ ಇನ್ನೊಂದು ಫ್ರೈ ಪಾನ್ ಅಲ್ಲಿ ಎರಡು ಚಮಚೆ ಎಣ್ಣೆ, ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಹಾಗೂ ಒಣ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ಸಂಜೆ ವೇಳೆಗೆ ಮಾಡುವುದಾದರೆ ಸ್ವಲ್ಪ ಖಾರ ಇದ್ದರೆ ಚಳಿ ಎಲ್ಲಾ ಬಿಟ್ಟು ಹೋಗುತ್ತದೆ. ಎರಡು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಸೇರಿಸಿ ಫ್ರೈ ಮಾಡಿ. ಈಗ ಒಂದು ಚಿಕ್ಕದಾಗಿ ಕತ್ತರಿಸಿದ ಕ್ಯಾಪ್ಸಿಕಂ ಸೇರಿಸಿ.
ನಂತರ ಒಂದು ಚಮಚ ಅಚ್ಚ ಖಾರದ ಪುಡಿ, ಉಪ್ಪು ಸೇರಿಸಿ. ಈಗ ಎರಡು ಮೊಟ್ಟೆ ಒಡೆದು ಹಾಕಿ ಅದು ಡ್ರೈ ಆಗುವ ವರೆಗೆ, ಎಗ್ ಬುರ್ಜಿ ಥರ ಬಾಡಿಸಿ. ನೀವು ವೆಜಿಟೇರಿಯನ್ ಆಗಿದ್ದರೆ, ಮೊಟ್ಟೆ ಹಾಕುವುದನ್ನು ಸ್ಕಿಪ್ ಮಾಡಿ. ರುಚಿ ಅದ್ಭುತವಾಗಿ ಮೂಡಿ ಬರುತ್ತೆ. ಇದಕ್ಕೆ ಈಗ ಟೊಮೆಟೊ ಸಾಸ್, ಅಥವಾ ಟೊಮೆಟೊ ಕೆಚಪ್ ಹಾಗೂ ಎರಡು ಮಿಕ್ಸಿ ಮಾಡಿದ ಟೊಮೆಟೊ ಹಾಕಿ ಮುಚ್ಚಳ ಮುಚ್ಚಿ ಎಣ್ಣೆ ಬಿಡುವ ವರೆಗೆ ಅಂದ್ರೆ ಚೆನ್ನಾಗಿ ಹಸಿ ವಾಸನೆ ಹೋಗುವ ವರೆಗೆ ಬೇಯಿಸಿ. ಚಿಲ್ಲಿ ಸಾಸ್ ಸಹ ಹಾಕಬಹುದು. ಈಗ ಒಂದು ಟೀ ಕಪ್ ಅಲ್ಲಿ ಅರ್ಧದಷ್ಟು ನೀರು ಹಾಕಿ ಬೇಯಿಸಿಟ್ಟ ಗೋಧಿ ಹಿಟ್ಟಿನ ಪೀಸ್ ಗಳನ್ನಾ ಹಾಕಿ ನೀರು ಇಂಗುವಾವರೆಗೆ ಮುಚ್ಚಳ ಮುಚ್ಚಿ ಚೆನ್ನಾಗಿ ಕಲಸಿ. ಈಗ ಎಲ್ಲ ಮಸಾಲ ಗೋಧಿ ಹಿಟ್ಟಿನ ಪೀಸ್ ಗಳಿಗೆ ಹತ್ತಿದ ನಂತರ ಗ್ಯಾಸ್ ಆಫ್ ಮಾಡಿದರೆ ಬಿಸಿ ಬಿಸಿಯಾದ ಗೋಧಿ ಹಿಟ್ಟಿನ ಮಂಚೂರಿಯನ್ ಶೈಲಿಯ ಹೊಸ ಸ್ನಾಕ್ಸ್ ಸವಿಯಲು ಸಿದ್ಧ.