ಈ ಕ್ಷೇತ್ರದಲ್ಲಿ ನಡೆಯುತ್ತೆ ಕಹಿ ಬೇವಿನ ಎಲೆಗಳು ಸಿಹಿಯಾಗುವ ವಿಶೇಷ ಚಮತ್ಕಾರ..!!

ಈ ಕ್ಷೇತ್ರದಲ್ಲಿ ನಡೆಯುತ್ತೆ ಕಹಿ ಬೇವಿನ ಎಲೆಗಳು ಸಿಹಿಯಾಗುವ ವಿಶೇಷ ಚಮತ್ಕಾರ..!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ನಮ್ಮ ಮನಸಿಗೆ ನೆಮ್ಮದಿ ಬೇಕು ಅನಿಸಿದಾಗ ನಾವೆಲ್ಲ ಹುಡುಕಿಕೊಂಡು ಹೋಗೋದು ಪ್ರಶಾಂತವಾದ ವಾತಾವರಣ. ಅದ್ರಲ್ಲೂ ದೇವರ ಸಾನಿಧ್ಯದಲ್ಲಿ ಕ್ಷಣಕಾಲ ಇದ್ದು ಬಂದರೂ ಸಾಕು ಮನಸ್ಸು ಹಗುರವಾಗುತ್ತದೆ. ದೇವಸ್ಥಾನ ಇವೆ ಅಂದ್ರೆ ಅಲ್ಲಿ ದೇವರ ಜಾತ್ರಾ ಮಹೋತ್ಸವ ಕೂಡ ನೆರವೇರಿಸಲಾಗುತ್ತದೆ. ಸಾಮಾನ್ಯವಾಗಿ ಜಾತ್ರಾ ಮಹೋತ್ಸವ ಸಮಯದಲ್ಲಿ ತೇರನ್ನು ಕಟ್ಟುವುದು ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿಕೊಂಡು ಪೂಜೆ ಮಾಡುವುದು ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯುವುದನ್ನು ನಾವು ನೀವು ನೋಡಿಯೇ ಇರ್ತೀವಿ ಆದ್ರೆ ನಾವು ಇವತ್ತು ಹೊತ್ತು ತಂದಿರುವ ದೇವಾಲಯದಲ್ಲಿ ಜಾತ್ರಾ ಸಮಯದಲ್ಲಿ ಕಹಿ ಬೇವಿನ ಎಲೆಗಳು ಸಿಹಿಯಾಗುತ್ತವಂತೆ ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಕಹಿ ಬೇವಿನ ಎಲೆಗಳನ್ನು ಸಿಹಿ ಆಗಿಸುವ ಆ ಪುಣ್ಯ ಕ್ಷೇತ್ರ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ತಿಳಿದುಕೊಂಡು ಬರೋಣ.

 

ಮಿಣಕನ ಗುರ್ಕಿಯ ಹಸಿರು ವನರಾಶಿ ನಡುವೆ ಸುಮಾರು 350 ವರ್ಷಗಳಷ್ಟು ಪುರಾತನವಾದ ಮಹೇಶ್ವರಿ ಅಮ್ಮನವರ ಪುಣ್ಯ ಆಲಯ ಇದ್ದು, ಈ ಕ್ಷೇತ್ರದಲ್ಲಿ ಅಮ್ಮನವರು ಉದ್ಭವ ಮೂರ್ತಿಯಾಗಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಕುಳಿತ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿರುವ ಅಮ್ಮನವರನ್ನು ಒಂದು ಬಾರಿ ಕಣ್ಣು ತುಂಬಿಕೊಂಡರು ಸಾಕು ಮಾಡಿದ ಪಾಪಗಳು ಕಳೆದುಹೋಗುತ್ತದೆ ಎಂದು ಈ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಮನದ ಮಾತಾಗಿದೆ. ಭಕ್ತಿಯಿಂದ ಪ್ರಾರ್ಥಿಸಿದರೆ ಅಮ್ಮನವರು ಸಕಲ ಇಷ್ಟಾರ್ಥಗಳು ಸಿದ್ಧಿ ಆಗುವಂತೆ ವರವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದ ವಿಶೇಷತೆ ಏನೆಂದರೆ ದೇವಾಲಯದ ಸುತ್ತ ಸುಂದರವಾದ ಉದ್ಯಾನವನ ನಿರ್ಮಿಸಲಾಗಿದ್ದು, ಉದ್ಯಾನವನದ ಮಧ್ಯದಲ್ಲಿ ನವಗ್ರಹ ವನ ರಾಶಿ ವನ ಶಿವ ಪಂಚಾಯ ವನ, ದೇವಿ ವನ , ಧನ್ವಂತರಿ ವನ, ಪಂಚ ಬೃಂದಾವನ ಒಳಗೊಂಡ ತುಳಸಿ ವನ, ಶ್ರೀ ಕೊಂಡಾರ್ಯ ವನ, ಶ್ರೀ ಸುಬ್ರಮಣ್ಯ ವನ ಇವೆ. ಇಲ್ಲಿನ ರಾಶಿ ವನದಲ್ಲಿ ರಾಶಿ ಮಂಡಲಗಳನ್ನು ತೋರಿಸಲಾಗಿದೆ. ಪ್ರತಿ ರಾಶಿಯನ್ನು ಪ್ರತ್ಯೇಕವಾಗಿ ಚಿತ್ರ ಸಮೇತ ಚಿತ್ರಿಸಿ ಆಯಾ ರಾಶಿಗಳಿಗೆ ಅನ್ವಯಿಸುವ ಮರಗಳನ್ನು ಬೆಳೆಸಲಾಗಿದೆ. ಅಲ್ಲದೆ ಪ್ರತಿ ರಾಶಿ ಅಡಿ ಬರುವ ನಕ್ಷತ್ರದ ಹೆಸರುಗಳನ್ನು ಕೂಡ ಬರೆಯಲಾಗಿದೆ. ಹೀಗಾಗಿ ರಾಶಿವನಕ್ಕೆ ಭೇಟಿ ನೀಡಿದರೆ 12 ರಾಶಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ, ಇಲ್ಲಿನ ಧನ್ವಂತರಿ ವನದಲ್ಲಿ 500 ಕೂ ಹೆಚ್ಚು ಔಷಧೀಯ ಸಸ್ಯ ಪ್ರಬೇಧಗಳು ಬೆಳೆಸಲಾಗಿದೆ. ಇಲ್ಲಿಗೆ ಹೋದರೆ ಮನಸ್ಸು ಪ್ರಫುಲ್ಲ ಆಗುತ್ತೆ.

 

ಇನ್ನೂ ತಾಯಿ ಮಹೇಶ್ವರಿ ಉದ್ಭವ ರೂಪಿಯಾಗಿ ನೆಲೆಸಿರುವುದರಿಂದ ಈ ಕ್ಷೇತ್ರವು ಹೆಚ್ಚು ಜಾಗೃತ ಸ್ಥಳ ಎಂದು ಸಾಕಷ್ಟು ಮಂದಿ ಅಮ್ಮನವರಿಗೆ ಇಷ್ಟಾರ್ಥ ಸಿದ್ಧಿ ಮಾಡುವಂತೆ ಹರಕೆ ಹೊರುತ್ತಾರೆ. ಪ್ರತಿ ವರ್ಷ ಚೈತ್ರ ಪೌರ್ಣಮಿಯಂದು ಈ ಕ್ಷೇತ್ರದಲ್ಲಿ ಮಹೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವ ನಡೆಯುತ್ತದೆ. ರಥೋತ್ಸವ ದ ಸಮಯದಲ್ಲಿ ಕಹಿ ಬೇವಿನ ಗಿಡದ ಎಲೆಗಳು ಸಿಹಿ ಆಗುತ್ತೆ ಎಂದು ನಂಬಿಕೆ ಇದ್ದು, ಸಾವಿರಾರು ಜನರು ಬೇವಿನ ಎಲೆಗಳನ್ನು ಕಿತ್ತುಕೊಳ್ಳಲು ಮುಗಿ ಬೀಳುತ್ತಾರೆ. ಕಹಿ ಬೇವಿನ ಎಲೆಗಳು ಕೂಡ ಸಿಹಿ ಆಗುವುದು. ಮಹೇಶ್ವರಿ ಅಮ್ಮನವರ ಪವಾಡ ಎಂದೇ ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಮನದ ಮಾತಾಗಿದೆ. ಮಂಗಳವಾರ ಶುಕ್ರವಾರ ದಿನದಂದು ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನವರಾತ್ರಿಯ ಒಂದೊಂದು ದಿನಗಳು ಮಹೇಶ್ವರಿ ಅಮ್ಮನವರಿಗೆ ಒಂದೊಂದು ಬಗೆಯ ಅಲಂಕಾರ ಮಾಡಲಾಗುತ್ತದೆ. ಅನುದಿನವೂ ಪೂಜೆಗೊಳ್ಳುತ್ತಿರುವ ಇಲ್ಲಿನ ಮಹೇಶ್ವರಿ ಅಮ್ಮನವರನ್ನು ನಿತ್ಯ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಈ ಕ್ಷೇತ್ರಕ್ಕೆ ಬಂದರೆ ಅಮ್ಮನವರ ದರ್ಶನದ ಜೊತೆಗೆ ಹಚ್ಚ ಹಸುರಿನ ವನಸಿರಿಯ ನೋಡಿದಂತೆ ಆಗುತ್ತದೆ. ಭಕ್ತರು ಬೇಡಿದ ವರಗಳನ್ನು ಕರುಣಿಸುವ ಮಹೇಶ್ವರಿ ಆಮ್ಮನವರು ನೆಲೆಸಿರುವ ಈ ಕ್ಷೇತ್ರವೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಬಿದನೂರು ತಾಲೂಕಿನ ಮಿಣಕನ ಗುರ್ಕಿ ಎಂಬಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ. ಶುಭದಿನ.

ಭಕ್ತಿ