ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಅದೃಷ್ಟವಂತ ಹೆಣ್ಣು ಮಕ್ಕಳಿಗೆ ಈ 6 ಲಕ್ಷಣಗಳು ಇರುತ್ತವೆ ಎನ್ನುವ ಕುತೂಹಲಕಾರಿ ಹಾಗೂ ರಹಸ್ಯ ಮಾಹಿತಿ ತಿಳಿಯೋಣ ಸ್ನೇಹಿತರೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸಾಮುದ್ರಿಕಾಶಾಸ್ತ್ರದ ಲ್ಲಿ ಮಹಿಳೆಯರ ಮುಖ, ದೇಹದ ಅಂಗಗಳು ಹಾಗೂ ಲಕ್ಷಣಗಳ ಮೂಲಕ ಅವರ ಅದೃಷ್ಟದ ಬಗ್ಗೆ ತಿಳಿಯಬಹುದು. ಅದರ ಬಾಗೆಗೆಗಿನ ಸಂಪೂರ್ಣ ಮಾಹಿತಿಯನ್ನು ಇಂದು ತಿಳಿದುಕೊಳ್ಳೋಣ. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವ ಇದೆ. ಹೆಣ್ಣನ್ನು ದೇವಿಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಇನ್ನೂ ಪುರಾಣಗಳ ಕಾಲದಿಂದ ಮನೆಯಲ್ಲಿ ವಾಸ ಮಾಡುವ ಮಹಿಳೆಯರು ಲಕ್ಷ್ಮಿಯ ರೂಪ ಎಂದು ಹೇಳಲಾಗುತ್ತದೆ. ಮಹಿಳೆಯರು ಮನೆಗೆ ಸಂತೋಷ ಸಮೃದ್ಧಿಯನ್ನು ತರುತ್ತಾರೆ. ಮನೆಯ ಹೆಣ್ಣು ಮಕ್ಕಳು ಖುಷಿಯಾಗಿ ಇದ್ರೆ ಇಡೀ ಕುಟುಂಬ ಆರೋಗ್ಯ ಮತ್ತು ಸಂತೋಷದಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ. ಒಂದು ಮನೆಯ ಸುಖ ಸಮೃದ್ಧಿ ನಿಂತಿರುವುದು ಆ ಮನೆಯ ಯಜಮಾನಿ ಮೇಲೆ ಅಂತ ಹೇಳಿದ್ರೆ ಖಂಡಿತ ತಪ್ಪಲ್ಲ. ಮನೆ ಯಜಮಾನಿ ಆ ಮನೆಗೆ ಲಕ್ಷ್ಮೀ ಆಗಿರುತ್ತಾಳೆ ಎಂದು ಹೇಳಲಾಗುತ್ತದೆ. ಪುರುಷ ಅಥವಾ ಮಹಿಳೆ ಯಾರೇ ಆಗಲಿ ಪ್ರತಿಯೊಬ್ಬರ ಸ್ವಭಾವ ವಿಭಿನ್ನವಾಗಿ ಇರುತ್ತೆ.
ಹಾಗೆ ಎಲ್ಲರ ಅದೃಷ್ಟವೂ ಒಂದೇ ರೀತಿ ಇರುವುದಿಲ್ಲ. ಕೆಲವೊಂದು ಮುಖ್ಯವಾದ ವಿಷಯಗಳನ್ನು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ. ಇದರಿಂದ ಮಹಿಳೆಯರು ಹಾಗೂ ಪುರುಷರ ಅದೃಷ್ಟದ ಬಗ್ಗೆ ಸಾಕಷ್ಟು ಮಾಹಿತಿ ಪಡೆಯಬಹುದು. ಸಾಮುದ್ರಿಕಾಶಾಸ್ತ್ರದಲ್ಲಿ ಮಹಿಳೆಯರು ಮತ್ತು ಪುರುಷರ ದೇಹ ರಚನೆಯ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಈ ಗ್ರಂಥದ ಸಹಾಯದಿಂದ ಯಾವುದೇ ವ್ಯಕ್ತಿಯ ಆಲೋಚನೆ ಮತ್ತು ತಿಳುವಳಿಕೆ ಬಗ್ಗೆ ಕೂಡ ನಾವು ತಿಳಿಯಬಹುದು. ಬನ್ನಿ ಹಾಗಾದ್ರೆ ಆ 6 ಲಕ್ಷಣಗಳು ಯಾವುವು ನೋಡೋಣ.. ಮಹಿಳೆಯರ ಯಾವ ಅಂಗ ದೊಡ್ಡದಾಗಿದ್ದರೆ ಆಕೆ ಅದೃಷ್ಟವಂತೆ ಆಗಿರುತ್ತಾಳೆ ಅಂತ ತಿಳಿಯೋಣ. 1. ಸಾಮುದ್ರಿಕಾಶಾಸ್ತ್ರದ ಪ್ರಾಕಾರ ಹಣೆಯು ಅಗಲವಾಗಿ ಇರುವ ಹುಡುಗಿಯರನ್ನು ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಈ ಹುಡುಗಿಯರು ಮದುವೆಯಾಗಿ ಹೋಗುವ ಮನೆಯ ಭವಿಷ್ಯ ಬಹಳ ಉಜ್ವಲವಾಗಿ ಇರುತ್ತೆ ಎಂದು ನಂಬಲಾಗಿದೆ. ಆ ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಉಂಟಾಗುವುದಿಲ್ಲ. 2. ಸಾಮುದ್ರಿಕಾಶಾಸ್ತ್ರದ ಪ್ರಕಾರ ಉದ್ದನೆಯ ಬೆರಳುಗಳನ್ನು ಹೊಂದಿರುವ ಹುಡುಗಿಯರನ್ನು ಬಹಳ ಬುದ್ಧಿವಂತೆ ಮತ್ತು ವಿವೇಕವಂತೆ ಅಂದು ಪರಿಗಣಿಸಲಾಗುತ್ತದೆ. ಈ ಹುಡುಗಿಯರು ಸಹ ಮದುವೆಯಾಗಿ ಹೋಗೋ ಮನೆಯ ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ಹೇಳಲಾಗುತ್ತದೆ. ಉದ್ದನೆಯ ಬೆರಳುಗಳನ್ನು ಹೊಂದಿರುವ ಹುಡುಗಿಯರ ತನ್ನ ಗಂಡಂದಿರಿಗೆ ಅದೃಷ್ಟವನ್ನು ತಂದು ಕೊಡುತ್ತಾರೆ ಎಂದು ಭಾವಿಸಲಾಗಿದೆ.
3. ಯಾವ ಹೆಣ್ಣು ಉದ್ದನೆಯ ಕುತ್ತಿಗೆಯನ್ನು ಹೊಂದಿದರೆ ಸಂಪತ್ತಿನ ದೃಷ್ಟಿಯಿಂದ ಅವಳನ್ನು ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಈ ಹುಡುಗಿಯರು ಹುಟ್ಟಿದ ಹಾಗೆ ಮೆಟ್ಟಿದ ಮನೆಯಲ್ಲಿ ಸಂತೋಷ ಸಮೃದ್ಧಿ ತರುತ್ತಾರೆ. ಹಾಗಾಗಿ ಗಂಡ ಕೂಡ ಸಾಕಷ್ಟು ಪ್ರಗತಿ ಹೊಂದುತ್ತಾನೆ. 4. ಮಹಿಳೆಯರು ಉದ್ದನೆಯ ಹಾಗೂ ನೇರ ತೋಳನ್ನು ಹೊಂದಿದರೆ ಅಂತಹ ಮಹಿಳೆಯರನ್ನು ಅವರ ಗಂಡಂದಿರು ಹೆಚ್ಚು ಪ್ರೀತಿಸುತ್ತಾರೆ. ಒಂದುವೇಳೆ ಈ ರೀತಿಯ ಮಹಿಳೆಯರು ದಪ್ಪವಾಗಿ ಇದ್ರೆ ಅವರು ಆರ್ಥಿಕವಾಗಿ ಸಮಸ್ಯೆಗಳನ್ನು ಹೆದರಿಸುವ ಸಾಧ್ಯತೆ ಇರುತ್ತದೆ. 5. ಅದೇ ರೀತಿ ಸಾಮುದ್ರಿಕಾಶಾಸ್ತ್ರದ ಪ್ರಕಾರ ದೊಡ್ಡ ಕಣ್ಣುಗಳು ಉಳ್ಳ ಮಹಿಳೆಯರು ಯಾವಾಗಲೋ ಖುಷಿಯಾಗಿ ಇರುತ್ತಾರೆ ಎಂದು ಹೇಳಲಾಗುತ್ತದೆ. ಈ ಮಹಿಳೆಯರು ಯಾವಾಗಲೋ ತಮ್ಮ ಮನೆಯಲ್ಲಿ ಆಹ್ಲಾದಕರ ವಾತಾವರಣ ವನ್ನಾ ಕಾಪಾಡಿಕೊಳ್ಳುತ್ತಾರೆ. ತಮ್ಮ ಕುಟುಂಬವನ್ನು ಸಂಪೂರ್ಣವಾಗಿ ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಾರೆ. 6. ದುಂಡನೆಯ ಮುಖ ಹಾಗೂ ಪ್ರಕಾಶಮಾನವಾದ ಕಣ್ಣುಗಳನ್ನು ಹೊಂದಿರುವ ಮಹಿಳೆಯರನ್ನು ಅತ್ಯಂತ ಕರುಣಾಳು ಹಾಗೂ ಅತ್ಯಂತ ಒಳ್ಳೆಯ ಸ್ವಭಾವದವಳು ಎಂದು ಹೇಳಲಾಗುತ್ತದೆ. ಇನ್ನೂ ಇಂತಹ ಮಹಿಳೆಯರು ತಮ್ಮ ಗಂಡನ ಜೊತೆ ತುಂಬಾ ನಿಷ್ಠೆಯಿಂದ ಇರುತ್ತಾರೆ ಎಂದು ಹೇಳಲಾಗುತ್ತದೆ. ಹಾಗೆ ಇವರು ಮದುವೆಯಾಗಿ ಯಾವ ಮನೆಗೆ ಹೋಗುತ್ತಾರೋ ಅಲ್ಲಿ ಎಂದೆದಿಗೊ ಸಂತೋಷ ತುಂಬಿರುತ್ತದೆ. ಇಂತಹ ಹೆಣ್ಣಿನ ಆಗಮನ ಕುಟುಂಬದ ಭವಿಷ್ಯವನ್ನು ಬೆಳಗುತ್ತೆ ಎಂದು ಹೇಳಲಾಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.