ಸೋಲು ಎದುರಾಗಿ ಜೀವನವೇ ಬೇಡ ಎನಿಸಿದಾಗ ಚಾಣಕ್ಯನ ಈ 16 ಮಾತುಗಳನ್ನು ನೆನಪಿಸಿಕೊಳ್ಳಿ..!!

ಸೋಲು ಎದುರಾಗಿ ಜೀವನವೇ ಬೇಡ ಎನಿಸಿದಾಗ ಚಾಣಕ್ಯನ ಈ 16 ಮಾತುಗಳನ್ನು ನೆನಪಿಸಿಕೊಳ್ಳಿ..!!

ನಮಸ್ತೆ ಪ್ರಿಯ ಓದುಗರೇ, ಜೀವನ ಅಂದ್ರೆ ಎರಡು ದಿನಗಳದ್ದು ಅಲ್ಲ. ಒಂದು ದಿನ ಗೆಲುವು ಒಂದು ದಿನ ಸೋಲು ಇದ್ದೆ ಇರುತ್ತದೆ. ಹಾಗಂತ ಗೆಲುವಾದರೆ ಹಿಗ್ಗುವುದು ಸೋಲಾದರೆ ಕುಗ್ಗುವುದು ಸರಿ ಅಲ್ಲ. ಹೀಗಾಗಿ ಜೀವನದಲ್ಲಿ ಪ್ರತಿ ಬಾರಿ ಸೋಲುಗಳನ್ನು ಉಂಡು ಇನ್ನೂ ಜೀವನವೇ ಬೇಡ ಅಂತ ಅನಿಸಿದಾಗ ಚಾಣಕ್ಯ ನೀತಿ ನಿಯಮಗಳನ್ನು ಪಾಲಿಸಿದರೆ ನಿಮ್ಮ ಮನಸ್ಸಿಗೆ ಶಾಂತಿ ಸಮಾಧಾನ ದೊರಕಿ ಎಲ್ಲಾ ಸೋಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ತಾಕತ್ತು ಬರುವುದು ಖಂಡಿತ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಆ ಚಾಣಕ್ಯನ ಹದಿನಾರು ನಿಯಮಗಳು ಯಾವುವು ಎಂದು ನೋಡೋಣ. 1. ಬೇರೊಬ್ಬರ ತಪ್ಪುಗಳಿಂದ ಕಲಿಯಿರಿ, ಎಲ್ಲಾ ತಪ್ಪುಗಳನ್ನು ನೀವೊಬ್ಬರೇ ಮಾಡಲು ನಿಮ್ಮ ಆಯಸ್ಸು ಸಾಲದು. 2. ಅತೀ ಪ್ರಾಮಾಣಿಕರು ಆಗದಿರಿ. ನೇರವಾದ ಮರಗಳು ಮೊದಲು ನೆಲಕ್ಕೆ ಉರುಳುತ್ತವೆ. ಆ ಬಳಿಕ ದೊಂಕುಮರದ ಸರದಿ. 3. ಒಂದು ಹಾವು ವಿಷಯುಕ್ತ ಅಲ್ಲದಿದ್ದರೂ ವಿಷಯುಕ್ತ ದಂತೆ ಬುಸುಗುಡಬೇಕು.

 

 

4. ಅತ್ಯಂತ ದೊಡ್ಡ ಗುರುಮಂತ್ರ – ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತದೆ. 5. ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥರಹಿತ ಸ್ನೇಹವೇ ಇಲ್ಲ. ಇದೊಂದು ಕಹಿಸತ್ಯ. 6. ಪ್ರತಿ ಕಾರ್ಯಕ್ಕೆ ತೊಡಗುವ ಮುನ್ನ ತಮಗೆ ತಾವೇ ಈ ಮೂರು ಪ್ರಶ್ನೆಗಳನ್ನು ಕೆಳಿಕೊಳ್ಳಿರಿ. ಅ. ಈ ಕಾರ್ಯ ನಾನೇಕೆ ಮಾಡುತ್ತಿದ್ದೇನೆ? ಆ. ಈ ಕಾರ್ಯದ ಫಲಗಳು ಏನು ಮತ್ತು ಇ. ಈ ಕಾರ್ಯದಲ್ಲಿ ನಾನು ಸಫಲ ಆಗುತ್ತೇನೆಯೇ? ಈ ಮೂರು ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಸ್ಪಷ್ಟ ಉತ್ತರ ಸಿಕ್ಕರೆ ಮಾತ್ರ ಮುಂದುವರೆಯಿರಿ. ಇಲ್ಲದಿದ್ದರೆ ಆ ಪ್ರಯತ್ನ ವ್ಯರ್ಥ. 7. ಭಯ ನಿಮ್ಮನ್ನು ಆವರಿಸಲು ಹತ್ತಿರ ಬರುತ್ತಿದ್ದಂತೆ ಅದರ ಮೇಲೆ ಆಕ್ರಮಣ ಮಾಡಿ ಅದನ್ನು ವಿನಾಶಗೊಳಿಸಿಬಿಡಿ. 8. ವಿಶ್ವದ ಅತ್ಯಂತ ದೊಡ್ಡ ಶಕ್ತಿಯೆಂದರೆ ಯುವಶಕ್ತಿ ಹಾಗೂ ಯುವತಿಯ ಸೌಂದರ್ಯ. 9. ಒಂದು ಕಾರ್ಯ ಕೈಗೆತ್ತಿಕೊಂಡ ಬಳಿಕ ವಿಫಲವಾಗುವ ಭಯದಿಂದ ಮಧ್ಯಕೆ ನಿಲ್ಲಿಸಬೇಡಿ. ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಸುವವರೆ ಅತ್ಯಂತ ಸುಖಿಗಳು. 10. ಹೂವಿನ ಸುಗಂಧ ಗಾಳಿಯಿರುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ. ಆದರೆ ಓರ್ವ ವ್ಯಕ್ತಿಯ ಒಳ್ಳೆಯತನ ಎಲ್ಲಾ ದಿಕ್ಕುಗಳಲ್ಲಿ ಪಸರಿಸುತ್ತದೆ.

 

 

11. ದೇವರು ವಿಗ್ರಹದ ಒಳಗಿಲ್ಲ. ನಿಮ್ಮ ಭಾವನೆಗಳೇ ನಿಮ್ಮ ದೇವರು. ನಿಮ್ಮ ಆತ್ಮವೇ ದೇವಸ್ಥಾನ. 12. ಓರ್ವ ವ್ಯಕ್ತಿ ತನ್ನ ಕರ್ಮಗಳಿಂದ ದೊಡ್ಡವನಾಗುತ್ತಾನೆ ವಿನಃ ಹುಟ್ಟಿನಿಂದಲ್ಲ. 13. ನಿಮ್ಮ ಅಂತಸ್ತಿಗೆ ಮೇಲಿರುವ ಅಥವಾ ಕೆಳಗಿರುವ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಬೇಡೀ. ಆ ಸ್ನೇಹ ಎಂದಿಗೂ ಸಂತೋಷ ನೀಡುವುದಿಲ್ಲ. 14. ನಿಮ್ಮ ಮಗುವನ್ನು ಮೊದಲ ಐದು ವರ್ಷಗಳ ವರೆಗೆ ಮುದ್ದಾಗಿ ಸಾಕಿರಿ. ಆ ಬಳಿಕ ಐದು ವರ್ಷಗಳಲ್ಲಿ ಮಗು ಎಸಗುವ ತಪ್ಪುಗಳನ್ನು ಬೆದರಿಸಿ ತಿದ್ದಿರಿ. ಹದಿನಾರು ಆಯಿತೋ ಸ್ನೇಹಿತನಂತೆ ಕಾಣಿ. ಬೆಳೆದ ಮಕ್ಕಳು ನಿಮ್ಮ ಅತ್ಯಂತ ನಿಕಟ ಸ್ನೇಹಿತರಾಗುತ್ತಾರೆ. 15. ಮೂರ್ಖ ವ್ಯಕ್ತಿಗೆ ಪುಸ್ತಕಗಳು ಅಂದ ವ್ಯಕ್ತಿಗೆ ಕನ್ನಡಿಗೆ ಇರುವಷ್ಟೇ ನಿರುಪಯೋಗಿ. 16. ವಿದ್ಯೆಯೇ ನಿಜವಾದ ಸ್ನೇಹಿತ, ವಿದ್ಯಾವಂತರಿಗೆ ಎಲ್ಲೂ ಮನ್ನಣೆಯಿದೆ. ವಿದ್ಯೆಯೇ ನಿಜವಾದ ಭೂಷಣ , ವಿದ್ಯೆ ಎಂದಿಗೂ ಯೌವ್ವನ. ನೊಡಿದ್ರಲ್ವಾ ಸ್ನೇಹಿತರೆ ಈ 16 ಚಾಣಕ್ಯ ನ ಮಾತುಗಳನ್ನು ಅರಿತರೆ ಜೀವನವೇ ಸುಖಮಯ ಆಗುತ್ತೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು