ವೇರಿಕೋಸ್ ವೇನ್ಸ್ ಸಮಸ್ಯೆಗೆ ಸುಲಭ ಮನೆಮದ್ದು…!!

ವೇರಿಕೋಸ್ ವೇನ್ಸ್ ಸಮಸ್ಯೆಗೆ ಸುಲಭ ಮನೆಮದ್ದು…!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ವೇರಿಕೊಸ್ ವೆನ್ಸ್ ಯಾರಿಗೆ ಬರುತ್ತೆ ಹಾಗೂ ಅದಕ್ಕಿರುವ ಮನೆಮದ್ದುಗಳು ಏನೇನು ಎಂದು ತಿಳಿದುಕೊಂಡು ಬರೋಣ. ಈ ಕಾಯಿಲೆ ಸಾಮಾನ್ಯವಾಗಿ ಟೀಚರ್ಸ್, ಬಸ್ ಡ್ರೈವರ್, ಕಂಡಕ್ಟರ್, ಪೊಲೀಸ್ ಮೆನ್, ವಿಶೇಷವಾಗಿ ಟ್ರಾಫಿಕ್ ಪೊಲೀಸ್, ಕ್ಯಾಮೆರಾ ಮೆನ್ ಗಳಿಗೆ ತುಂಬಾ ಜಾಸ್ತಿ ಕಾಣಿಸಿಕೊಳ್ಳುತ್ತದೆ. ಯಾಕೆ ಅವರಲ್ಲೇ ಜಾಸ್ತಿ ಕಾಣಿಸುತ್ತೆ ಅಂದ್ರೆ ಒಂದೇ ಕಾರಣ ಅವರು ಜಾಸ್ತಿ ನಿಂತುಕೊಂಡು ಇರ್ತಾರೆ. ವೆರಿಕೋಸ್ ವೆನ್ ಅಂದ್ರೆ ಕಾಲುಗಳಲ್ಲಿ ಇರುವ ರಕ್ತ ನಾಳಗಳು ಕಾಲಿನ ಕೆಳಗಡೆ ಇಂದ ರಕ್ತವನ್ನು ಹೃದಯಕ್ಕೆ ತೆಗೆದುಕೊಂಡು ಹೋಗುವ ನಾಳಗಳಲ್ಲಿ ರಕ್ತ ಉಳಿದುಕೊಂಡು ಮೇಲೆ ಬರಲು ಆಗದೆ ಇದ್ರೆ ಅಲ್ಲಿ ರಕ್ತನಾಳ ಊದಿಕೊಂಡು ರಕ್ತ ಹೆಪ್ಪುಗಟ್ಟಿ ರಕ್ತ ಹಿಂದೆ ಮುಂದೆ ಸರಿದಾಡಲು ಜಾಗ ಮಾಡಿಕೊಡುವುದಿಲ್ಲ, ಹೀಗೆ ಯಾಕೆ ಆಗುತ್ತೆ ಅಂದ್ರೆ ಭೂಮಿಯ ಗುರುತ್ವಾಕರ್ಷಣೆ ವಿರುದ್ಧ ನಮ್ಮ ರಕ್ತ ಕೆಳಗಿನಿಂದ ಮೇಲಕ್ಕೆ ಚಲಿಸಬೇಕು ಆದ್ರೆ ವಯಸ್ಸು ಇರುವಾಗ ರಕ್ತ ಮೇಲಕ್ಕೆ ಹೋಗುತ್ತದೆ ಆಂಡ್ರೆ ವಯಸ್ಸು ಆದಂತೆ ತುಂಬಾ ಹೊತ್ತು ನಿಂತು ಕೆಲಸ ಮಾಡುವವರಿಗೆ ಈ ತೊಂದರೆ ಉಂಟಾಗುತ್ತದೆ.

 

 

ಈ ಸಮಸ್ಯೆಗೆ ಕಾರಣಗಳನ್ನು ನೋಡುವುದಾದರೆ, ಮೊದಲನೆಯದು ತುಂಬಾ ಹೊತ್ತು ನಿಂತುಕೊಳ್ಳುವುದು, ರಕ್ತನಾಳಗಳು ಹೇರಿಡಿಟಿ ಇಂದ ಬಂದಿರಬಹುದು, ರಕ್ತನಾಳಗಳು ವೀಕ್ ಆಗಿರಬಹುದು, ತುಂಬಾ ತೂಕ ಇದ್ದರೂ ಸಹಿತ ಈ ಸಮಸ್ಯೆ ಕಾಣಿಸುತ್ತೆ. ತುಂಬಾ ತಂಬಾಕು ಸೇವನೆ, ಮಧ್ಯಪಾನ, ಧೂಮಪಾನ ಮಾಡುವುದು, 50 ವರ್ಷಗಳು ಆದವರಿಗೆ ವಯಸ್ಸೂ ಸಹಜವಾಗಿ ಇದು ಕಾಣಿಸುತ್ತೆ. ವ್ಯಾಯಾಮ ಮಾಡದೆ ಇರುವವರಿಗೆ ಸಹ ಈ ತೊಂದರೆ ಉಂಟಾಗುತ್ತದೆ. ಈ ಕಾಯಿಲೆಯ ಲಕ್ಷಣಗಳು ಏನು ಅಂದ್ರೆ, ಮೀನು ಖಂಡದಲ್ಲಿ ಹಸಿರು ಬಣ್ಣದ ನಾಳಗಳು ಕಾಣಿಸಲು ಶುರು ಆಗುತ್ತೆ, ಕಾಲಲ್ಲಿ ಉರಿ ಉಂಟಾಗುತ್ತದೆ, ಕಾಲುಗಳ ನೋವು, ತುಂಬಾ ಸುಸ್ತು ಆಗುವುದು. ಕಾಲುಗಳು ಭಾರ ಅನಿಸುವುದು, ಕಾಲಿನ ಕೆಲ ಭಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹಾಗೆ ಬಿಟ್ರೆ ಅದು ಹೊಡೆದು ಅಲ್ಸರ್ ಆಗಬಹುದು. ಯಾವುದೇ ಕಾರಣಕ್ಕೂ ಈ ಸಮಸ್ಯೆ ಬಾರದೆ ಇರೋ ಹಂಗೆ ನಾವು ನೋಡಿಕೊಳ್ಳಬೇಕು ಒಂದು ವೇಳೆ ಆದ್ರೂ ಅದಕ್ಕೆ ತಕ್ಕ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇದಕ್ಕೆ ಚಿಕಿತ್ಸೆಗಳು ಏನು ಅಂದ್ರೆ ವೀನಸ್ ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಇದು ಯಾವ ಭಾಗದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗುತ್ತದೆ.

 

 

ಇದಕ್ಕೆ ಪರಿಹಾರ ಏನು ಅಂದ್ರೆ ಮೊಟ್ಟ ಮೊದಲನೆಯದಾಗಿ ಒಂದೇ ಕಡೆ ನಿಂತು ಕೆಲಸ ಮಾಡುವವರು ಆಚೆ ಈಚೆ ಓಡಾಡಬೇಕು, ಪೂರ್ವ ತಾಡಾಸನ ಅನ್ನುವ ವ್ಯಾಯಾಮ ಮಾಡಬೇಕು, ಧೂಮಪಾನ, ಮಧ್ಯಪಾನ ಹಾಗೂ ತಂಬಾಕು ಸೇವನೆ ಖಂಡಿತವಾಗಿ ಬಿಟ್ಟು ಬಿಡಬೇಕು. ತುಂಬಾ ಹುಳಿ, ಖಾರ, ಉಪ್ಪಿನಕಾಯಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವುದನ್ನು ಬಿಡಬೇಕು. ದಿನನಿತ್ಯ ವ್ಯಾಯಾಮ ವಾಕಿಂಗ್ ಹೋಗಬೇಕು. ಮಲಗುವಾಗ ಹಿಮ್ಮಡಿ ಕೆಳಗಡೆ ಒಂದು ಅಥವಾ ಎರಡು ಡಿಂಬುಗಳನ್ನು ಇಟ್ಟುಕೊಂಡು ಮಲಗಿದರೆ ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ಸುಲಭವಾಗಿ ಆಗುತ್ತದೆ. ದೇಹದ ತೂಕ ಒಂದುವೇಳೆ ಜಾಸ್ತಿ ಇದ್ರೆ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಗ್ರಭವಸ್ಥೆಯಲ್ಲಿ ಕೆಲವೊಬ್ಬರಿಗೆ ಈ ಸಮಸ್ಯೆ ಬರಬಹುದು, ಒಂದುವೇಳೆ ಬಂದರೆ ಡೆಲಿವರಿ ಆದ ಮೇಲೆ ಕ್ರಮೇಣ ದೂರವಾಗುತ್ತದೆ. ಸರ್ವಾಂಗಾಸನ ವ್ಯಾಯಾಮ ಮಾಡಿದರೂ ಒಳ್ಳೆಯದು. ಶೀರ್ಷಾಸನ ಮಾಡಿ. ವೆರಿಕೊಸ್ ಸಮಸ್ಯೆಗೆ ಒಂದು ಸಾಕ್ಸ್ ಸಿಗುತ್ತೆ ಅದನ್ನು ಮೊಣಕಾಲು ವರೆಗೆ ಅವುಗಳನ್ನು ಹಾಕಿಕೊಳ್ಳಿ. ಈ ಎಲ್ಲಾ ಪರಿಹಾರ ಕ್ರಮಗಳನ್ನು ಅನುಸರಿಸಿ ಖಂಡಿತ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ