ಪ್ರತಿನಿತ್ಯ ನಾಗರಾಜನಿಂದಾ ನಡೆಯುತ್ತೆ ಇಲ್ಲಿ ನೆಲೆಸಿರುವ ಪರಮೇಶ್ವರನಿಗೆ ಪ್ರದಕ್ಷಿಣೆಯ ಪೂಜೆ..!!!

ಪ್ರತಿನಿತ್ಯ ನಾಗರಾಜನಿಂದಾ ನಡೆಯುತ್ತೆ ಇಲ್ಲಿ ನೆಲೆಸಿರುವ ಪರಮೇಶ್ವರನಿಗೆ ಪ್ರದಕ್ಷಿಣೆಯ ಪೂಜೆ..!!!

ನಮಸ್ತೆ ಪ್ರಿಯ ಓದುಗರೇ, ಇಡೀ ಜಾಗತ್ತಿಗೆ ಒಡೆಯನಾದ ಪರಮೇಶ್ವರನನ್ನು ಮಹೇಶ್ವರ, ಗಂಗಾಧರ, ಗಜಾಚರ್ಮಾಂಭರ, ಅರ್ಧ ನಾರೀಷ್ವರ, ವಿಶಕಂಟ, ನಂಜುಂಡೇಶ್ವರ ಹೀಗೆ ಬೇರೆ ಬೇರೆ ಹೆಸರುಗಳಿಂದ ಸ್ತುತಿಸುತ್ತೆವೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರು ಯಾವ ಹೆಸರಿನಿಂದ ಕೂಗಿದರೂ ಅವರ ಧನಿಗೆ ತಿರುಗಿ ಭಕ್ತರ ಆಶೋತ್ತರಗಳನ್ನು ನೆರವೇರಿಸುವ ಬೋಲೇನಾಥನ ಪುರಾತನವಾದ ದೇವಾಲಯ ದರ್ಶನ ಮಾಡಿ ಕೃತಾರ್ಥ ಆಗೋಣ. ಸ್ವಚ್ಛ ಹಾಗೂ ಪ್ರಶಾಂತವಾದ ವಾತಾವರಣ ಹೊಂದಿರುವ ಹೊಳಲಿಯಲ್ಲಿ ಪರಮೇಶ್ವರನು ಭೀಮೇಶ್ವರ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾ ಇರುವ ಪುರಾತನವಾದ ದೇವಾಲಯ ಇದ್ದು, ಈ ದೇಗುಲಕ್ಕೆ ಸುಮಾರು 1000 ವರ್ಷಗಳ ಸುಧೀರ್ಘ ಇತಿಹಾಸ ಇದೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದಲ್ಲಿ ಶಿವನು ಉದ್ಭವ ಮೂರ್ತಿಯಾಗಿ ನೆಲೆಸಿದ್ದು, ಇಲ್ಲಿರುವ ದೇವರನ್ನು ಭೀಮ ಲಿಂಗೇಶ್ವರ ಎಂಬ ಹೆಸರಿನಿಂದ ಕೂಡ ಕರೆಯುತ್ತಾರೆ. ಸ್ವಲ್ಪ ವರ್ಷಗಳ ಹಿಂದೆ ನವೀಕರಿಸಲಾಗಿದೆ. ದೇಗುಲವು ಪ್ರವೇಶ ದ್ವಾರ, ಅಂದವಾದ ಕಲ್ಯಾಣಿ, ಮುಖ ಮಂಟಪ, ಪ್ರದಕ್ಷಿಣಾ ಪಥ, ಗರ್ಭಗೃಹ ಹಾಗೂ ಯಾಗ ಶಾಲೆಯನ್ನು ಒಳಗೊಂಡಿದೆ.

 

 

ಈ ಕ್ಷೇತ್ರಕ್ಕೆ ಬಂದು ಭೀಮೇಶ್ವರ ನ ಬಳಿ ಭಕ್ತಿಯಿಂದ ಬೇಡಿದರೆ ಮನದ ಕೋರಿಕೆಗಳು ಸಿದ್ಧಿ ಆಗುತ್ತೆ ಎನ್ನುವುದು ಇಲ್ಲಿಗೆ ಭೇಟಿ ನೀಡಿ ಬದುಕಿನಲ್ಲಿ ಯಶಸ್ಸು ಕಂಡ ಭಕ್ತ ಜನರ ಮನದ ಮಾತಾಗಿದೆ. ಇಲ್ಲಿ ನೆಲೆಸಿರುವ ಪರಮೇಶ್ವರನನ್ನು ಪಾಂಡವರು ಕೂಡ ಅರ್ಚಿಸಿದರು ಎಂಬ ಪ್ರತೀತಿ ಇದ್ದು ಪಾಂಡವರು ಪೂಜಿಸಿದ ಕಾರಣದಿಂದ ಇಲ್ಲಿನ ಶಿವನನ್ನು ಭೀಮೇಶ್ವರ ಅಥವ ಭೀಮ ಲಿಂಗೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಶಿವನ ದೇಗುಲದಲ್ಲಿ ಪಾರ್ವತಿ ಅಮ್ಮನವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತೆ. ಆದ್ರೆ ಈ ದೇಗುಲದಲ್ಲಿ ಗಂಗಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿ ಅದನ್ನು ನೋಡಬಹುದು. ಅಲ್ಲದೆ ಗಣೇಶ ಸುಬ್ರಮಣ್ಯ ಕಾಳ ಭೈರವ, ಹಾಗೂ ನವಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನೂ ಎಲ್ಲಾ ನವಗ್ರಹಗಳಿಗೆ ಪ್ರತ್ಯೇಕವಾದ ಗುಡಿಯನ್ನು ಕಟ್ಟಲಾಗಿದೆ. ಗುಡಿಗಳ ಮೇಲೆ ಆಯಾ ದೇವರಿಗೆ ಸಮರ್ಪಿತವಾದ ಶ್ಲೋಕ ಆಯಾ ಗ್ರಹಗಳ ಕುರಿತಾಗಿ ಇರುವ ವಿಷಯಗಳನ್ನು ಬರೆಯಲಾಗಿದೆ. ಈ ರೀತಿ ನವಗ್ರಹಗಳ ಬಗ್ಗೆ ಮಾಹಿತಿ ನೀಡುವ ದೇಗುಲವನ್ನು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ.

 

 

ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಈ ಕ್ಷೇತ್ರದಲ್ಲಿ ನಿತ್ಯ ಮಹಾ ವಿಸ್ಮಯ ನಡೆಯುತ್ತಂತೆ. ಪ್ರತಿದಿನ ಶಿವನ ಲಿಂಗದ ಸುತ್ತ ರಂಗೋಲಿ ಪುಡಿಯನ್ನು ಉದುರಿಸಿ ರಾತ್ರಿ ದೇಗುಲದ ಬಾಗಿಲನ್ನು ಹಾಕಿ ಮರು ದಿನ ದೇಗುಲದ ಬಾಗಿಲನ್ನು ತೆರೆದು ನೋಡಿದರೆ ಶಿವನ ಲಿಂಗದ ಸುತ್ತ ಇರುವ ರಂಗೋಲಿ ಪುಡಿಯಲ್ಲಿ ನಾಗರ ಹಾವೊಂದು ಓಡಾಡಿದ ಗುರುತುಗಳು ಕಾಣಿಸುತ್ತೆ ಎನ್ನುವುದು ಹಲವಾರು ಜನರ ಅಭಿಪ್ರಾಯ ಆಗಿದೆ. ಲಿಂಗದ ಸುತ್ತ ಹರಿದಾಡುವ ಮೂಲಕ ನಾಗರಾಜ ಪ್ರತಿದಿನ ಶಿವನಿಗೆ ಪ್ರದಕ್ಷಿಣೆ ಹಾಕಿ ತನ್ನ ಭಕ್ತಿಯನ್ನು ಸಮರ್ಪಣೆ ಮಾಡುತ್ತಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿತ್ಯವೂ ಪೂಜೆಗೊಳ್ಳುತ್ತಿರುವ ಭೀಮ ಲಿಂಗೇಶ್ವರನಿಗೆ ಕಾರ್ತಿಕ ಮಾಸ ಹಾಗೂ ಮಹಾಶಿವರಾತ್ರಿಯ ದಿನ ಬಗೆ ಬಗೆಯ ಪೂಜೆ ನಡೆಯುತ್ತದೆ. ಸೋಮವಾರ ಶಿವನಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಅನುದಿನವೂ ಭಕ್ತರಿಗೆ ದರ್ಶನವನ್ನು ನೀಡುವ ಈ ಸ್ವಾಮಿಯನ್ನು ನಿತ್ಯ ಬೆಳಿಗ್ಗೆ 6 ರಿಂದ 9 ರ ವರೆಗೆ ಸಂಜೆ 4 ರಿಂದ 7 ಗಂಟೆವರೆಗೂ ದರ್ಶನ ಮಾಡಬಹುದು. ಅದ್ಭುತವಾದ ಪ್ರಕೃತಿಯ ವಿಹಂಗಮ ನೋಟ ಹೊಂದಿರುವ ಈ ದೇಗುಲ ಕೋಲಾರ ಜಿಲ್ಲೆಯ ಹೊಳಲೀ ಎಂಬ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಕೋಲಾರಕ್ಕೆ ಭೇಟಿ ನೀಡಿದ್ದಾಗ ಈ ದೇಗುಲವನ್ನು ದರ್ಶನ ಮಾಡಿ ಬನ್ನಿ. ಶುಭದಿನ.

ಭಕ್ತಿ