ನಮಸ್ತೆ ಪ್ರಿಯ ಓದುಗರೇ, ಸನಾತನ ಎಷ್ಟು ಪುರಾತನವೂ ನಿತ್ಯ ವಿನೂತನ ಇದೆ ಇಂದಿನ ಲೇಖನದ ವಿಶೇಷ. ಸನಾತನ ವಿನೂತನ. ಯಾವತ್ತೋ ನಮಗೆಲ್ಲ ಗೊತ್ತಿರುವ ಹಾಗೆ ಸನಾತನ ಸಂಸ್ಕೃತಿ ಆಚಾರ ವಿಚಾರಗಳನ್ನು ಸುಮ್ನೆ ಮಾಡಿಲ್ಲ. ಎಲ್ಲದಕ್ಕೂ ಒಂದು ಕಾರಣವಿದೆ. ಇದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ. ಆದ್ರೆ ಈಗಿನ ಆಧುನಿಕ ಕಾಲದ ಜನರಿಗೆ ಅದು ಯಾವುದರ ಬಗ್ಗೆಯೇ ಗೊತ್ತಿರುವುದಿಲ್ಲ ಈ ಬ್ಯೂಸಿ ಜೀವನದಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮನಸು ಮಾಡಲ್ಲ. ಆದ್ರೆ ಅದನ್ನು ತಿಳಿದುಕೊಳ್ಳುವುದು ತುಂಬಾನೇ ಅಗತ್ಯ. ಇವತ್ತಿನ ಲೇಖನದಲ್ಲಿ ನಾವು ಹೇಳುವ ವಿಷಯ ಏನೆಂದರೆ ಚಿಕ್ಕ ಮಕ್ಕಳಿಗೆ ಕಿವಿಗೆ ಹಾಗೂ ದೊಡ್ಡವರಿಗೆ ಮೂಗು ಚುಚ್ಚುವುದು ಯಾಕೆ ಅಂತ.? ಈಗಿನ ಎಷ್ಟೋ ತಂದೆ ತಾಯಂದಿರು ಮಕ್ಕಳ ಕಿವಿ ಹಾಗೂ ಮೂಗು ಚುಚಿಸಿವುದನ್ನು ನಿರಾಕರಣೆ ಮಾಡುತ್ತಾರೆ.
ಸುಮ್ನೆ ಇದೆಲ್ಲ ಯಾಕೆ ನೀವು ಅಂತ. ಆದ್ರೆ ನಮ್ಮ ಪೂರ್ವಜರು ಈ ಚಿಕ್ಕ ಮಕ್ಕಳಿಗೆ ಕಿವಿ ಮೂಗು ಚುಚ್ಚಿಸುವುದನ್ನು ಸುಮ್ನೆ ಮಾಡಿಲ್ಲ. ಅದಕ್ಕೂ ಒಂದು ಕಾರಣ ಇದೆ. ಏನು ಅಂದ್ರೆ, ಕಿವಿ ಮನುಷ್ಯನ ದೇಹದ ಅವಿಭಾಜ್ಯ ಅಂಗ ಆಗಿದೆ. ಈ ಕಿವಿ ದೇಹದ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮತ್ತೆ ಕಿವಿ ನೇರವಾಗಿ ಮೆದುಳಿನ ನಂಟನ್ನು ಹೊಡಿರುತ್ತರೆ. ಈ ಕರ್ಮವೇದನ ಅಂದ್ರೆ ಕಿವಿ ಚುಚ್ಚುವುದು ಎಂದರ್ಥ. ವ್ಯಕ್ತಿಯ ಆರೋಗ್ಯವಂತ ಜೀವನಕ್ಕೆ ಬೇಕಾದ ಒಂದು ಮುಖ್ಯ ಧಾರ್ಮಿಕ ಕರ್ಮ. ಮನುಷ್ಯನಿಗೆ ನೀಡುವ 16 ಸಂಸ್ಕಾರ ಕ್ರಮದಲ್ಲಿ ಕಿವಿ ಚುಚ್ಚುವುದು 9 ನೆಯ ಸಂಸ್ಕಾರ ವಿಧಿ.
ಮಗುವಿಗೆ ಮೊದಲು ಅನ್ನ ತಿನಿಸುವ ಸಂಸ್ಕಾರದ ನಂತರ ಇದನ್ನು ಮಾಡಬೇಕು ಅಂದ್ರೆ ಕಿವಿ ಚುಚ್ಚಿಸುವ ಕರ್ಮವನ್ನು ಮಾಡಬೇಕು. ಕಿವಿ ಚುಚ್ಚುವ ಸಂಸ್ಕಾರದ ಉದ್ದೇಶ ನರ ಮಂಡಲಗಳನ್ನು ಸರಿ ಪಡಿಸುವುದು. ಇನ್ನೂ ಮೂಗುತಿ. ಹೆಣ್ಣು ಮಕ್ಕಳು ಮೂಗುತಿ ಹಾಕುವುದರಿಂದ ಲಾಭ ಇದೆ. ಇದು ಕೇವಲ ಸಂಪ್ರದಾಯ ಅಲ್ಲ. ವೈಜ್ಞಾನಿಕವಾಗಿ ಇದು ಒಳ್ಳೆಯದು. ಮೂಗುತಿ ಹಾಕುವುದರಿಂದ ಋತುಚಕ್ರದ ಸಮಯದಲ್ಲಿ ಆಗುವ ನೋವು ಕಡಿಮೆ ಆಗುತ್ತದೆ. ಗರ್ಭಕೋಶ ಮತ್ತು ಇತರ ನರಗಳು ಮೂಗಿನ ಎಡ ಭಾಗಕ್ಕೆ ಕನೆಕ್ಟ್ ಆಗಿದೆ. ಹಾಗಾಗಿ ಇದು ಡೆಲಿವರಿ ಟೈಂ ಅಲ್ಲಿ ಕೂಡ ಹೆಲ್ಪ್ ಆಗುತ್ತೆ. ಹೀಗಾಗಿ ಹೆಣ್ಣು ಮಕ್ಕಳು ಮೂಗಿನ ಎಡ ಭಾಗಕ್ಕೆ ಮೂಗು ಚುಚ್ಚುವ ಸಂಪ್ರದಾಯ ಹಿಂದೂ ಧರ್ಮದಲ್ಲಿ ಇದೆ. ಅದಕ್ಕಾಗಿಯೇ ಹೇಳುವುದು ಸನಾತನ ಧರ್ಮದ ಸಂಸ್ಕೃತಿ, ಪದ್ಧತಿ ಎಲ್ಲವೂ ಶ್ರೇಷ್ಠ ಮತ್ತು ಸತ್ಯ. ಇದೇ ಪದ್ಧತಿ ಗಳೊಂದಿಗೆ ಬದುಕೋಣ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.