ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಕಲಾ ಸಾಧಕಿ ಹಾಗೂ ಬಾಲನಟಿ, ಕನ್ನಡ ಚಿತ್ರರಂಗದ ಅದ್ಭುತ ಟಾಪ್ ಓನ್ ಭರವಸೆಯ ಬಾಲನಟಿ ಆದ ಅಂಕಿತ ಜಯರಾಂ ಬಗ್ಗೆ ತಿಳಿದುಕೊಳ್ಳೋಣ. ಅಂಕಿತ ಜಯರಾಮ್ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತ. ಮುದ್ದಾದ ಮುಖ ನಟನೆಗೆ ಹೋಲುವಂತಹ ಆಕರ್ಷಕ ಕಣ್ಣುಗಳು ಮುದ್ದಾದ ಮಾತುಗಳ ಮೂಲಕ ಮನ ಸೆಳೆಯುವ ಅಂಕಿತ ಅಭಿನಯದಲ್ಲಿ ನವರಸ ಬಾಲನಟಿ. ಅಂಕಿತ ಮೂಲತಃ ಬೆಂಗಳೂರು ನಿವಾಸಿಗಳಾದ ಜಯರಾಮ್ ಹಾಗೂ ಪ್ರೇಮ ಅವರ ಅಚ್ಚು ಮೆಚ್ಚಿನ ಪುತ್ರಿ. ಪ್ರಸ್ತುತ ಬೆಂಗಳೂರಿನ ಶಾಂತಿನಿಕೇತನ ಶಾಲೆಯ 5 ನೆ ತರಗತಿಯ ವಿದ್ಯಾರ್ಥಿ. ಚಿಕ್ಕಂದಿನಿಂದಲೇ ನಟನೆ,ಡಾನ್ಸ್ ಅಂದ್ರೆ ಎಲ್ಲಿಲ್ಲದ ಆಸಕ್ತಿ. ಮಗುವಾಗಿ ಇರುವಾಗ ಟಿವಿ ಲೀ ಹಾಡು ಬಂದ್ರೆ ತನ್ನ ಪುಟ್ಟ ಕಾಲುಗಳಿಂದ ಹೆಜ್ಜೆ ಹಾಕ್ತಾ ಇದ್ರು. ಇವರಿಗೆ ಪುನೀತ್ ರಾಜ್ ಕುಮಾರ್ ಹಾಗಿ ಶಿವಣ್ಣ ಅಂದ್ರೆ ಬಲು ಇಷ್ಟ. ಅವರ ಪುಟ್ಟ ಅಭಿಮಾನಿ ಇವ್ರು. ಇವರ ಅದೃಷ್ಟ ಎಂಬಂತೆ ಸಿನಿಮಾದಲ್ಲಿ ನಟಿಸುವ ಅವಕಾಶ ಅವರನ್ನು ಅರಸಿ ಬಂತು. 2017 ರಲ್ಲೀ ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಅವರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಿರಿಕ್ ಕೀರ್ತಿ ನಿರ್ಮಾಣದ ಸಿಲಿಂಡರ್ ಸತೀಶ ಚಿತ್ರದಲ್ಲಿ ಅಂಕಿತ ಬಾಲನಟಿ ಆಗಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಎಲ್ಲಾ ಮುಗಿದಿದ್ದು, ಸದ್ಯದಲ್ಲಿ ತೆರೆ ಕಾಣಲಿದೆ.
ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆ 7-8 ಕನ್ನಡ ಚಿತ್ರಗಳು ಒಂದರ ಮೇಲೊಂದು ಅಂಕಿತ ಅವರನ್ನು ಅರಸಿ ಬಂದವು. ಅವುಗಳಲ್ಲಿ ಕರುನಾಡ ಕಂಡ ರಾಜಕುಮಾರ, ಕನ್ನಡ ದೇಶದೊಳು, ಶ್ರೀ ಮುರುಳಿಯ ಭರಾಟೆ, ಕಾಳಿದಾಸ ಕನ್ನಡ ಮೇಷ್ಟ್ರು, ಯುವರತ್ನ, ಬ್ರಹ್ಮಚಾರಿ ಹಾಗೂ ಕ್ರೀಮ್ ಬಿಸ್ಕೆಟ್ ವೆಬ್ ಸಿರಿಸ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಗಳಲ್ಲಿ ಕೆಲ ಚಿತ್ರಗಳು ತೆರೆ ಕಂಡಿದ್ದು,ಹಾಗೂ ಕೆಲ ಚಿತ್ರಗಳು ಸಧ್ಯದಲ್ಲಿ ತೆರೆ ಕಾಣಲಿವೆ. ಹಾಗೆ ಮತ್ತೆ ಹೊಸದಾಗಿ ಹಲವು ಚಿತ್ರಗಳು ಅಂಕಿತಾ ಅವರ ಕೈ ಸೇರಿವೆ. ಅದರಲ್ಲಿ ಅಂಜು ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಂದರ ಹಿಂದೆ ಒಂದರಂತೆ ಚಿತ್ರದ ಶೂಟಿಂಗ್ ಅಲ್ಲಿ ಬ್ಯುಸಿ ಆಗಿರುವ ಅಂಕಿತ ಶಾಲೆಯಲ್ಲಿ ಓದಿನಲ್ಲಿ ಮುಂದು. ಶಾಲಾ ರಜಾ ದಿನಗಳಲ್ಲಿ ಶೂಟಿಂಗ್ ಮುಗಿಸಕೊಂಡು ಶಾಲೆಯ ಎಲ್ಲಾ ಶಿಕ್ಷಕಿಯರಿಗೆ ಅಚ್ಚು ಮೆಚ್ಚು. ಈ ಎಳೆಯ ಹರೆಯದ ಪುಟಾಣಿ ಯಲ್ಲಿ ಎರಡು ಅದ್ಭುತ ಗುಣಗಳಿವೆ. ಅವನ್ನು ತಿಳಿದರೆ ಖಂಡಿತ ನೀವು ಈ ಪುಟಾಣಿ ಬಗ್ಗೆ ತುಂಬಾ ಹೆಮ್ಮೆ ಪಡ್ತೀರ. ತನ್ನ ಶಾಲೆಯ ಪಾಠದ ಸಮಯದಲ್ಲಿ ಟೀಚರ್ಸ್ ಗೆ ಸಾಧಕರ ಪರಿಚಯ ಮಾಡಿದ್ದನ್ನು ಗಮನವಿಟ್ಟು ಆಲಿಸಿ ಮನೆಗೆ ಬಂದು ತನ್ನ ಅಪ್ಪನ ಜೊತೆ ಅವರ ಬಗ್ಗೆ ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಅವರನ್ನು ಭೇಟಿ ಮಾಡಿ ಮಾತಾಡುವುದು ಅಂಕಿತ ಅವರ ವಿಶೇಷ ಗುಣ.
ಇದೆ ರೀತಿ ಶಾಲೆಯಲ್ಲಿ ಪಟ್ಯೇತರ ವಿಷಯಗಳಲ್ಲಿ ಗುರುಗಳ ಮೂಲಕ ತಿಳಿದು ಸಾಲುಮರದ ತಿಮ್ಮಕ್ಕ, ನಿಸಾರ್ ಅಹಮ್ಮದ್, ಸ್ವಾತಂತ್ರ ಹೋರಾಟಗಾರ ದೊರೆ ಸ್ವಾಮಿ ಹಾಗೂ ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದ ಭಾಗ್ಯವಂತ. ಅನೇಕ ಸಾಧಕರನ್ನು ಈ ಪುಟಾಣಿ ಈಗಲೇ ಭೇಟಿ ಆಗಿದ್ದಾರೆ. ಅಂಕಿತ ಭೇಟಿ ಮಾಡುವ ಮುಂದಿನ ಸಾಧಕಿ ಕ್ರಿಕೆಟ್ ಒಡೆಯ ಸಚಿನ್ ತಂಡೂಲ್ಕರ್ ಇದ್ದರೆ ಎಂಬುದು ನಾವು ಹೆಮ್ಮೆ ಪಡೆಯಬೇಕಾದ ವಿಷಯ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಧಕರನ್ನು ಭೇಟಿ ಮಾಡುವುದು ಅಂದ್ರೆ ಅದೂ ಕೂಡ ಅಂಕಿತಾ ಅವರ ಸಾಧನೆಯೇ ಸರಿ. ಇನ್ನೊಂದು ವಿಶೇಷ ಗುಣ ಅಂದ್ರೆ ಯಾರಾದರೂ ಕೈಲಾಗದವರು, ಅಸಹಾಯಕರು, ಕಷ್ಟದಲ್ಲಿ ಇರುವವರನ್ನು ಕಂಡರೆ ಮರುಗುತ್ತೆ ಈ ಪುಟಾಣಿ. ಅಪ್ಪನ ಜೊತೆ ಹೇಳಿ ತನಗೆ ಬಂದ ಸಂಭಾವನೆ ಹಣದಲ್ಲಿ ಅವರಿಗೆ ಸಹಾಯ ಹಸ್ತ ನೀಡುತ್ತಾರೆ ಈ ಮುದ್ದು ಬಾಲೆ. ತನಗೆ ಬಂದಿರುವ ಸಂಪೂರ್ಣ ಸಂಭಾವನೆ ಹಣವನ್ನು ಕಷ್ಟದಲ್ಲಿ ಇರುವವರಿಗೆ ಮೀಸಲು ಇಟ್ಟಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಅದ್ಭುತ ಗುಣ ಹೊಂದಿರುವ ಅಂಕಿತ ನಿಜಕ್ಕೂ ಗ್ರೇಟ್. ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.