ಸಾಕ್ಷಾತ್ ಉಗ್ರ ನರಸಿಂಹ ಸ್ವಾಮಿಯೇ ಇಷ್ಟಪಟ್ಟು ಸ್ವಯಂಭೂ ಆಗಿ ಬಂದು ನೆಲೆಸಿದ ದಿವ್ಯ ಕ್ಷೇತ್ರವಿದು..!!

ಸಾಕ್ಷಾತ್ ಉಗ್ರ ನರಸಿಂಹ ಸ್ವಾಮಿಯೇ ಇಷ್ಟಪಟ್ಟು ಸ್ವಯಂಭೂ ಆಗಿ ಬಂದು ನೆಲೆಸಿದ ದಿವ್ಯ ಕ್ಷೇತ್ರವಿದು..!!

ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡಿನಲ್ಲಿ ಮೊಟ್ಟ ಮೊದಲ ಸಾಮ್ರಾಜ್ಯವನ್ನು ಸ್ಥಾಪಿಸಿದ ಕದಂಬರು ಈ ನಾಡಿಗೆ ಅನೇಕ ಕೊಡುಗೆಗಳನ್ನು ಕೊಟ್ಟು ಹೋಗಿದ್ದಾರೆ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ನಿರ್ಮಿಸಿದ ಕದಂಬರು ಈ ಊರಿನಲ್ಲಿ ಭವ್ಯ ಆಲಯವೊಂದನ್ನು ನಿರ್ಮಿಸಿ ಹೋಗಿದ್ದಾರೆ. ಬನ್ನಿ ಹಾಗಾದರೆ ಕದಂಬರ ಕೀರ್ತಿ ಪತಾಕೆಯನ್ನು ಇನ್ನಷ್ಟು ಹೆಚ್ಚಿಸಿದ ಆ ದೇವಾಲಯ ಯಾವುದು ಅಲ್ಲಿನ ಮಹಿಮೆಗಳನ್ನು ಏನೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಬನವಾಸಿಯ ನಂತರ ಕದಂಬರ ಎರಡನೇ ರಾಜಧಾನಿ ಆಗಿದ್ದ ಹಲಸಿ ಯಲ್ಲಿ ಪುರಾತನವಾದ ಭೋ ವರಾಹ ಸ್ವಾಮಿ ದೇಗುಲವಿದೆ. ಈ ಕ್ಷೇತ್ರವನ್ನು ಬಹಳ ಹಿಂದೆ ಪಾಲಾಸಿಕ ಕ್ಷೇತ್ರ, ಪಲಾಶಿ ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಭೂವರಾಹ ಸ್ವಾಮಿ ಸ್ವಯಂಭೂ ಬಾಲ ನರಸಿಂಹ ಹಾಗೂ ಕುಳಿತ ಭಂಗಿಯಲ್ಲಿರುವ ಮಹಾವಿಷ್ಣುವಿನ ಮೂರ್ತಿಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ದೇಗುಲವು ನವರಂಗ, ಮುಖ ಮಂಟಪ, ಪ್ರದಕ್ಷಿಣಾ ಪಥ ಹಾಗೂ ಸುಂದರವಾದ ಗೋಪುರವನ್ನು ಒಳಗೊಂಡಿದೆ. ಇಲ್ಲಿರುವ ಬಾಲ ನರಸಿಂಹನ ವಿಗ್ರಹವು ಸ್ವಯಂಭೂ ವಿಗ್ರಹ ಆಗಿದ್ದು, ಈ ಕ್ಷೇತ್ರಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಬಾಲ ನರಸಿಂಹ ಸ್ವಾಮಿಯು ಮನದ ಅಭೀಷ್ಟೆಗಳನ್ನು ನೆರವೇರಿಸುತ್ತಾರೆ ಎಂಬ ಪ್ರತೀತಿ ಇದೆ. ಹೀಗಾಗಿ ನಿತ್ಯ ನೂರಾರು ಮಂದಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯುತ್ತಾರೆ.

 

 

ಅತ್ಯಂತ ಪ್ರಶಾಂತವಾದ ವಾತಾವರಣ ಹೊಂದಿರುವ ಈ ದೇಗುಲದ ಹೊರ ಆವರಣದಲ್ಲಿ ಸೂಕ್ಷ್ಮ ಕೆತ್ತನೆಯ ಗಣಪತಿ ಶಿವಲಿಂಗ ಆದಿಶಕ್ತಿ ವೀರಭದ್ರೇಶ್ವರ ವಿಠ್ಠಲ ರುಕ್ಮಾಯಿ ದೇವರ ಮೂರ್ತಿಗಳು ಕಣ್ಮನ ಸೆಳಯುವಂತಿದೆ. ಪಶ್ಚಿಮ ಅಭಿಮುಖವಾಗಿ ಪ್ರತಿಷ್ಠಾಪಿಸಿರುವ 5 ಅಡಿ ಎತ್ತರದ ಭುವಾರಾಹ ಸ್ವಾಮಿಯ ಮೂರ್ತಿಯು ಮನೋಹರವಾಗಿದೆ. ಈ ಕ್ಷೇತ್ರದಲ್ಲಿ ಭುವರಾಹ ಸ್ವಾಮಿಯು ನಾಲ್ಕು ಕೈಗಳನ್ನು ಹಿಡಿದು ಕಿವಿಯಲ್ಲಿ ಒಲೆ ಧರಿಸಿ ಎಡ ಕಾಲು ಆಮೆ ಮೇಲೆ ಬಲಗಾಲನ್ನು ಆದಿಶೇಷನ ಮೇಲೆ ಇಟ್ಟು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಎರಡು ಗರ್ಭ ಗುಡಿಯನ್ನು ಒಳಗೊಂಡಿರುವ ಈ ಆಲಯದ ಗರ್ಭ ಗುಡಿಯ ವಾಡೆಯ ಮೇಲೆ ಚಿತ್ತಾಕರ್ಷಕವಾದ ಕಲಾ ಕುಸುರಿಗಳು ಇವೆ. ಮಂದಿರದ ಮುಂಭಾಗದಲ್ಲಿ ಯಾವುದೇ ರೀತಿಯ ದ್ವಾರವನ್ನು ನಿರ್ಮಾಣ ಮಾಡಿಲ್ಲ, ಬದಲಾಗಿ ದೇಗುಲದ ಬಲ ಹಾಗೂ ಎಡ ಭಾಗದಲ್ಲಿ ಪ್ರತ್ಯೇಕವಾಗು ದ್ವಾರವನ್ನು ನಿರ್ಮಿಸಿರುವುದು ಈ ದೇಗುಲದ ವೈಶಿಷ್ಟ್ಯತೆ ಆಗಿದೆ. ಇನ್ನೂ ಪೂರ್ವಾಭಿಮುಖವಾಗಿ ಇರುವ ಗರ್ಬಗುಡಿಯಲ್ಲಿ 5 ಅಡಿ ಎತ್ತರದ ಕುಳಿತ ಭಂಗಿಯ ಏಕಶಿಲಾ ನಾರಾಯಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

 

 

ಕಪ್ಪು ವರ್ಣ ಶಿಲೆಯಲ್ಲಿ ಇರುವ ನಾರಾಯಣನ ವಿಗ್ರಹವನ್ನು ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ಒಂದು ಕೈಯಲ್ಲಿ ಶಂಖ ಇನ್ನೊಂದು ಕೈಯಲ್ಲಿ ಚಕ್ರವನ್ನು ಹಿಡಿದು ಪದ್ಮಾಸನ ಹಾಕಿಕೊಂಡು ನಾರಾಯಣನು ತನ್ನ ದಿವ್ಯ ರೂಪವನ್ನು ತೋರುವಂತೆ ಮೂರ್ತಿಯನ್ನು ಕೆತ್ತಿರುವುದು ಕದಂಬರ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸುಂದರವಾದ ಉದ್ಯಾನವನವನ್ನು ದೇವಸ್ಥಾನದ ಸುತ್ತಲೂ ನಿರ್ಮಿಸಲಾಗಿದೆ. ಈ ದೇವಸ್ಥಾನದ ಮುಂದಿರುವ ಕಲ್ಯಾಣಿಯು ಕಣ್ಮನ ತಣಿಸುತ್ತದೆ. ನಿತ್ಯವೂ ಪೂಜೆಗೊಳ್ಳುತ್ತಿರುವ ಇಲ್ಲಿನ ನರಸಿಂಹ ಹಾಗೂ ಭೂ ವರಾಹ ಸ್ವಾಮಿಗೆ ಪ್ರತಿ ಹುಣ್ಣಿಮೆಯಂದು ಪವಮಾನ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನವೂ ದೇವರಿಗೆ ಬಗೆ ಬಗೆಯ ಅಲಂಕಾರ ಮಾಡಲಾಗುತ್ತದೆ. ಪ್ರತಿ ವರ್ಷ ಆಶ್ವೀಜ ಶುದ್ಧ ಪೂರ್ಣಿಮೆಯಂದು ಸ್ವಾಮಿಯ ರಥೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಬೇರೆ ಬೇರೆ ಊರುಗಳಿಂದ ಜನರು ಬಂದು ಸ್ವಾಮಿಗೆ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಪ್ರತೀ ವರ್ಷ ನರಸಿಂಹನ ಜಯಂತಿ ಹಾಗೂ ವೈಕುಂಠ ಏಕಾದಶಿ ನ್ನೂ ಈ ಕ್ಷೇತ್ರದಲ್ಲಿ ವಿಧಿವತ್ತಾಗಿ ಆಚರಿಸಲಾಗುತ್ತದೆ. ಈ ದೇಗುಲವನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ದರ್ಶನ ಮಾಡಬಹುದು. ಅದ್ಭುತ ವಾಸ್ತುಶಿಲ್ಪ ಕೆತ್ತನೆಗಳ ಜೊತೆಗೆ ಅಪಾರ ಮಹಿಮೆಯುಳ್ಳ ಸ್ವಯಂಭೂ ಬಾಲ ನರಸಿಂಹ ಸ್ವಾಮಿ ವಿಗ್ರಹ ಹೊಂದಿರುವ ಈ ಕ್ಷೇತ್ರವು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಎಂಬ ಪುಟ್ಟ ಗ್ರಾಮದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ಸುಂದರ ಕಲಾಕೃತಿ ಇರುವ ದೇವಾಲಯವನ್ನು ದರ್ಶನ ಮಾಡಿ. ಶುಭದಿನ.

ಭಕ್ತಿ