ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್ ಮಾಡುವ ವಿಧಾನ ನೋಡೋಣ ಸ್ನೇಹಿತರೆ. ಇದನ್ನು ಮಲೆನಾಡಿನಲ್ಲಿ ಹುಳಿ ಎಂದೂ ಕರೆಯುತ್ತಾರೆ. ಇದನ್ನು ನೀವು ಇಂದು ಸರಿ ಮಾಡಿಕೊಂಡು ತಿಂದ್ರೆ ಮತ್ತೆ ಪದೇ ಮಾಡಿಕೊಂಡು ತಿಂತೀರಾ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದು ಬಿಸಿ ಬಿಸಿ ಅನ್ನದ ಜೊತೆಗೆ ತುಂಬಾ ರುಚಿ ಇರುತ್ತೆ. ಮೊದಲು ಇದಕ್ಕೆ ಬೇಕಾದ ಪದಾರ್ಥಗಳನ್ನು ಜೋಡಿಸಿ ಇಟ್ಟುಕೊಳ್ಳೋಣ ಸ್ನೇಹಿತರೆ. ನುಗ್ಗೆಕಾಯಿ ಎಳೆಯದಾಗಿದ್ದರೆ ಇನ್ನೂ ರುಚಿ ಸಿಗುತ್ತದೆ. ಎರಡು ಚಮಚೆ ಎಣ್ಣೆ, ಹುಣಸೆ ಹಣ್ಣು, ಒಂದು ಚಿಕ್ಕ ಕಪ್ ಹಸಿ ತೆಂಗಿನಕಾಯಿ ತುರಿ, ಸಾಸಿವೆ ಜೀರಿಗೆ ಒಂದು ಚಮಚ, 4 ಪೀಸ್ ಒಣ ಮೆಣಸಿನ ಕಾಯಿ, ಟೊಮೆಟೊ 2, 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ಬೆಲ್ಲ ಅರ್ಧ ಚಮಚ, ತೊಗರಿ ಬೇಳೆ ಅರ್ಧ ಕಪ್, ಮಸಾಲೆ ಪುಡಿ 1 ವರೆ ಚಮಚ, 1 ವರೆ ಚಮಚ ಅಚ್ಚ ಖಾರದ ಪುಡಿ, ಕೊನೆಗೆ ಒಂದು ದೊಡ್ಡ ಕಪ್ ನೀರು.
ಮೊದಲಿಗೆ ತೊಗರಿ ಬೇಳೆಯನ್ನು ತೊಳೆದುಕೊಂಡು ಇಟ್ಟುಕೊಳ್ಳಿ. ಒಂದು ಪಾನ್ ಅಲ್ಲಿ ನೀರನ್ನು ಕುಡಿಯಲು ಇಟ್ಟು ಇದಕ್ಕೆ ನುಗ್ಗೆಕಾಯಿ ಬೇಯಲು ಇಡಿ. ಕುಕ್ಕರ್ ನಲ್ಲಿ ಇಟ್ಟರೆ ಪೂರ್ತಿ ಬೆಂದು ಮೆತ್ತಗಾಗಿ ಹುಣ್ಣಾಗುತ್ತದೆ. ಈ ರೀತಿ ಬೇಯಿಸಿದರೆ 4-5 ನಿಮಿಷಗಳಲ್ಲಿ ಬೆಂದು ಹೋಗುತ್ತೆ. ಸಣ್ಣ ಕುಕ್ಕರ್ ಅಲ್ಲಿ ನೀರು ಹಾಕಿ ತೊಳೆದ ತೊಗರಿ ಬೇಳೆ , ಈರುಳ್ಳಿ, ಟೊಮೆಟೊ, ಕರಿಬೇವು, ಕೊತ್ತಂಬರಿ ಒಮ್ಮೆ ಕಲಸಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಹೊಡೆಸಿದರೆ ಸಾಕು. ಈಗ ನುಗ್ಗೆಕಾಯಿ ಬೆಂದಿದೆ. ಈಗ ಸಾಂಬಾರ್ ಮಾಡುವ ವಿಧಾನ ತಿಳಿಯೋಣ. ಮೊದಲಿಗೆ ಒಂದು ಚಿಕ್ಕ ಮಿಕ್ಸಿ ಜಾರ್ ಗೆ ತೆಂಗಿನ ತುರಿ, ಸಾಂಬಾರ್ ಪುಡಿ, ಖಾರದ ಪುಡಿ, ಬೆಲ್ಲ, ಉಪ್ಪು, 2 ಚಮಚ ಹುಣಸೆ ಹಣ್ಣಿನ ರಸ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಗ್ಯಾಸ್ ಮೇಲೆ ಒಂದು ದೊಡ್ಡ ಬಾಣಲೆ ಇಟ್ಟು, ಅದಕ್ಕೆ ಈ ಮೊದಲೇ ಕೂಗಿಸಿಕೊಂಡ ಬೇಳೆ ಮಿಶ್ರಣ ಹಾಗೂ ಕುಡಿಸಿದ ನೀರು ಸಮೇತ ನುಗ್ಗೆಕಾಯಿ ಹಾಕಿ. ರುಬ್ಬಿರುವ ಮಸಾಲೆ ಕೂಡ ಸೇರಿಸಿ.
ಈಗ ಚೆನ್ನಾಗಿ 5-6 ನಿಮಿಷ ಎಲ್ಲವೂ ಚೆನ್ನಾಗಿ ಕುಡಿಯಲು ಬಿಡಿ. ನುಗ್ಗೆಕಾಯಿ ಯನ್ನ ಕುಕ್ಕರ್ ಬಿಟ್ಟು ಪ್ರತ್ಯೇಕವಾದ ಪಾತ್ರೆಯಲ್ಲಿ ಯಾಕೆ ಬೇಯಿಸಬೇಕು ಅಂದ್ರೆ ಒಂದು ನುಗ್ಗೆಕಾಯಿ ಜಾಸ್ತಿ ಬೇಡು ಬಾಯಿ ಬಿಡುವುದಿಲ್ಲ ಮತ್ತೆ ನುಗ್ಗೆಕಾಯಿ ಕಲರ್ ಬದಲಾಗಲ್ಲ. ಈಗ ನುಗ್ಗೆಕಾಯಿ ಸಾಂಬಾರ್ ಗೆ ಒಂದು ಒಳ್ಳೆಯ ಒಗ್ಗರಣೆ ಕೊಡೋಣ. ಮೊದಲಿಗೆ ಚಿಕ್ಕ ಒಗ್ಗರಣೆ ಪ್ಯನ್ ಅಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಸಾಸಿವೆ ಜೀರಿಗೆ ಹಾಗೂ ಒಣ ಮೆಣಸಿನ ಕಾಯಿ, ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿ. ಸಾಸಿವೆ ಜೀರಿಗೆ ಚೆನ್ನಾಗಿ ಚಟ ಪಟ ಸಿಡಿದ ಮೇಲೆ ಆ ಒಗ್ಗರಣೆಯನ್ನು ಕುದಿಯುತ್ತಿರುವ ಬೇಳೆ ನುಗ್ಗೆಕಾಯಿ ಮಿಶ್ರಣಕ್ಕೆ ಸೇರಿಸಿ ಒಂದು ಕುದಿ ಬಂದರೆ ಬಿಸಿ ಬಿಸಿಯಾದ ರುಚಿ ರುಚಿಯಾದ ನುಗ್ಗೆಕಾಯಿ ಸಾಂಬಾರ್ ಸವಿಯಲು ಸಿದ್ಧ. ನೊಡಿದ್ರಲ್ವ ಸ್ನೇಹಿತರೆ ಬಿಸಿ ಅನ್ನಕ್ಕೆ, ಜೋಳ ಅಥವಾ ರಾಗಿ ಮುದ್ದೆಗೆ ಒಳ್ಳೆಯ ಕಾಂಬಿನೇಶನ್ ಆದ ನುಗ್ಗೆಕಾಯಿ ಸಾಂಬಾರ್ ಹೇಗೆ ಮಾಡುವುದು ಎಂದು. ಈ ರೆಸಿಪಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.