ಮಕ್ಕಳಲ್ಲಿ ಕಾಣುವ ಮಲಬದ್ಧತೆಗೆ ಚಿಕಿತ್ಸೆ..

ಮಕ್ಕಳಲ್ಲಿ ಕಾಣುವ ಮಲಬದ್ಧತೆಗೆ ಚಿಕಿತ್ಸೆ..

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಚಿಕ್ಕ ಮಕ್ಕಳಲ್ಲಿ ಆಗಾಗ ಕಾಣಿಸಿಕೊಳ್ಳುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲದಕ್ಕಿಂತ ಮೊದಲು ಯಾವುದು ನಾರ್ಮಲ್ ಮೋಷನ್ ಪಾಸೇಜ್ ಎಂದು ತಿಳಿದುಕೊಳ್ಳಬಹುದು ಎಂದು ನೋಡೋಣ. ನಾರ್ಮಲ್ ಆಗಿರುವ ಮಗು ಡಿನಪ್ರತಿ ಮೋಷನ್ ಮಾಡಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತೇವೆ. ವೈದ್ಯರ ಪ್ರಕಾರ ಇದೇ ಸರಿ. ಕೆಲವೊಮ್ಮೆ ಮಗು ಒಂದು ದಿನಕ್ಕೆ ಐದಾರು ಸರಿ ಮೋಷನ್ ಮಾಡುತ್ತೆ ಇಲ್ಲವಾದರೆ ಎರಡು ಮೂರು ಬಾರಿ ದಿನದಲ್ಲಿ ಮೋಷನ್ ಮಾಡುತ್ತೆ. ಮಗು ನಾಲ್ಕು ದಿನ ಆದ್ರೂ ಒಟ್ಟು ಮೋಷನ್ ಮಾಡುತ್ತಿಲ್ಲ ಅಂದ್ರೆ ನಾವು ಆಗ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಹಾಗಾದ್ರೆ ಯಾವಾಗ ಮಲಬದ್ದತೆ ಕಾರಣಕ್ಕೆ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು ಎಂದು ನೋಡುವುದಾದರೆ, ಮೊದಲನೆಯದಾಗಿ ಮಗು ಮೋಷನ್ ಮಾಡುವಾಗ 3-4 ದಿನ ಆಗಿ ತುಂಬಾ ಹಾರ್ಡ್ ಆಗಿ ಹಾಗೂ ಮಗುವಿಗೆ ವಿಸರ್ಜನೆ ಮಾಡುವಾಗ ನೋವಾಗುತ್ತಿತ್ತು ಅಂದ್ರೆ ವಿಸರ್ಜನೆ ಮಾಡುವಾಗ ರಕ್ತ ಸ್ರಾವ ಆಗುತ್ತಿದ್ದರೆ, ಮತ್ತೆ ಮಗು ಮೋಷನ್ ಮಾಡಲು ತುಂಬಾ ಕಷ್ಟ ಪಡುತ್ತಿತ್ತು ಅಂದ್ರೆ, ಹಾಗೆಯೇ ಇಂತಹ ಪರಿಸ್ಥಿತಿ ಉಂಟಾದಾಗ ಮಗು ನೋವನ್ನು ಸಾಗಿಸುತ್ತಾ ತಡೆದುಕೊಳ್ಳುವ ಸಾಮರ್ಥ್ಯ ತೋರಿಸುತ್ತದೆ.

 

 

ಹೀಗೆ ಆದಾಗ ಮಲಬದ್ದತೆ ಇನ್ನೂ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಸೋ ಯಾಕೆ ಮಕ್ಕಳಲ್ಲಿ ಮಲಬದ್ದತೆ ಕಾಣಿಸಿಕೊಳ್ಳುತ್ತದೆ ಅಂದ್ರೆ ಕೆಲವೊಮ್ಮೆ ಈ ಬೇಸಿಗೆಯಲ್ಲಿ ಮಗು ನೀರು ಕುಡಿಯದೇ ಇರುವುದು, ಮಕ್ಕಳಿಗೆ ಜಾಸ್ತಿ ಹಾಲಿನ ಉತ್ಪನ್ನಗಳನ್ನು ಕೊಡುತ್ತಿದ್ದರೆ, ಇವೆಲ್ಲವೂ ಮಲಬದ್ಧತೆಯನ್ನು ಉಂಟು ಮಾಡುತ್ತದೆ. ಹಾಗಾದ್ರೆ ಇದನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು? ಮಗುವಿನ ಹೊಟ್ಟೆಗೆ ನಯವಾಗಿ ಮಸಾಜ್ ಮಾಡುವುದರಿಂದ, ನೀರಿನ ಟಬ್ ಅಲ್ಲಿ ಮಗುವನ್ನು ಕುಳ್ಳಿರಿಸಿ ಮಗುವನ್ನು ಮೋಷನ್ ಮಾಡುವಂತೆ ಪ್ರರೇಪಿಸುವುದೂ. ಕೆಲವೊಮ್ಮೆ ಅಂಗಾತ ಮಲಗಿಸಿ ಮಗುವಿನ ಕಾಲುಗಳನ್ನು ಸೈಕ್ಲಿಂಗ್ ಮೊಮೆಂಟ್ ಮಾಡುವುದರಿಂದ ಅಥವಾ ವಿಸರ್ಜನೆ ಮಾಡುವ ಜಾಗದ ಸ್ನಾಯುಗಳನ್ನು ಮಸಾಜ್ ಮಾಡಿ ರಿಲಾಕ್ಸ್ ಮಾಡುವುದು ಮಾಡಬಹುದು. ಒಂದುವೇಳೆ ನೀವು ನಿಮ್ಮ ಮಗುವಿಗೆ ಹಾಲಿನ ಉತ್ಪನ್ನಗಳನ್ನು ಜಾಸ್ತಿ ಕೊಡುತ್ತಿದ್ದಾರೆ ಅದನ್ನು ಕಡಿಮೆ ಮಾಡುವುದು, ತುಂಬಾ ಕಷ್ಟದ ಸಮಯದಲ್ಲಿ ಮಾಗು ಮೋಷನ್ ಮಾಡುತ್ತಲೇ ಇಲ್ಲ. ಇಲ್ಲವಾದಲ್ಲಿ ತುಂಬಾ ಕಷ್ಟ ಪಡುತ್ತಿದೆ ಅಂತಹ ಸಂದರ್ಭದಲ್ಲಿ ವೈದ್ಯರ ಬಳಿ ಹೋದಾಗ ಅವರು ಸಿಟ್ರಿ ಅಪೋಸಿಟ್ರಿ ಅಂತ ಚಿಕತ್ಸೆ ಕೊಡಬಹುದು. ಹಾಗಾದ್ರೆ ಮಕ್ಕಳಿಗೆ ಮಲಬದ್ಧತೆ ಉಂಟಾದಾಗ ಮನೆಯಲ್ಲಿ ಏನೇನು ಮಾಡಬಾರದು ಎಂದು ನೋಡುವುದಾದರೆ. ಕೆಲವೊಂದು ಮೂಢ ನಂಬಿಕೆಗಳನ್ನು ಹಳೆಯ ಮಂದಿ ಇನ್ನೂ ಅನುಸರಿಸುತ್ತಾ ಇರುತ್ತಾರೆ. ಅಂಥವುಗಳನ್ನು ಇಲ್ಲಿ ಪ್ರಯತ್ನ ಮಾಡಬಾರದು. ಅಂದ್ರೆ ಗುದದ್ವಾರದಲ್ಲಿ ಬೆರಳು ಇಡುವುದು, ವಿಲ್ಯೆದೆಲೆ ಇಡುವುದು, ಹತ್ತಿ ಹಾಕುವುದು ಇವೆಲ್ಲಾ ಮಾಡಬಾರದು.

 

 

ತುಂಬಾ ಅಪಾಯಕರ ಸೂಚನೆ ಅಂತ ತಿಳಿದ ತಕ್ಷಣ ವೈದ್ಯರ ಬಳಿ ಹೋದಾಗ ಅವರು ಕೊಡುತ್ತಾರೆ. ಅದನ್ನು ನೀವು ಗುದದ್ವಾರದಲ್ಲಿ ಹಾಕಬೇಕಾಗುತ್ತದೆ. ಹಾಗಾದ್ರೆ ಈ ಮಕ್ಕಳಲ್ಲಿ ಮಲಬದ್ದತೆ ಆಗುವುದನ್ನು ಹೇಗೆ ತಡೆಯಬಹುದು ಅಂದ್ರೆ ರಿಚ್ ಫೈಬರ್ ಅಂಶ ಇರುವ ಹಣ್ಣುಗಳನ್ನು, ತರಕಾರಿಗಳನ್ನು, ಹಾಗೆ ಆಹಾರವನ್ನು ಕೊಡಬೇಕಾಗುತ್ತದೆ. ಕಾಳುಗಳು, ಜಾಸ್ತಿ ನೀರು ಕೊಡುವುದರ ಮೂಲಕ, ಹಣ್ಣಿನ ರಸವನ್ನು ಕುಡಿಸುವುದು ಮೂಲಕ ಇದನ್ನು ಕಡಿಮೆ ಮಾಡಬಹುದು. ಮಲಬದ್ಧತೆ ಆದಾಗ ಅದು ದೊಡ್ಡ ತೊಂದರೆ ಅಲ್ಲ ಅಂದು ತಿಳಿದು ಅದಕ್ಕೆ ಪರಿಹಾರ ನೀಡುವ ಹಣ್ಣಿನ ರಸ, ನೀರು ಕುಡಿಯುವುದರಿಂದ ಸರಿ ಹೋಗುತ್ತದೆ. ಮಕ್ಕಳು ಚಿಕ್ಕವರು ಇದ್ದಾಗಲೇ ಟಾಯ್ಲೆಟ್ ಟ್ರೇನಿಂಗ್ ಹೇಳಿಕೊಡಬೇಕು. ಮಗೂಗೆ ಯಾವ ರೀತಿ ಮೋಷನ್ ಮಾಡಬೇಕು ಹಾಗೆ ನಿಗದಿತ ಅವಧಿಯಲ್ಲಿ ಮಿಶ್ರಣ ಮಾಡಬೇಕು ಅಂತ ಹೇಳಿಕೊಡಬೇಕು. ಮಗುವಿಗೆ ಈ ಸಮಸ್ಯೆ ಕಾಣಿಸಿದಾಗ ಮಗುವನ್ನು ಬೈಯುವುದು ಗದರಿಸುವುದು ಮಾಡಿದರೆ, ಮಗು ಬೇಜಾರು ಮಾಡಿಕೊಂಡು ನೋವನ್ನು ತಡೆದುಕೊಳ್ಳಲು ಶುರು ಮಾಡುತ್ತೆ. ಆಗ ಆ ಸಮಸ್ಯೆ ಇನ್ನೂ ಜಾಸ್ತಿ ಆಗುತ್ತೆ. ಅಕಸ್ಮಾತ್ ಇದು ನಿರಂತರ ಆಯ್ತು 4 ದಿನ 5 ದಿನ ಆದ್ರೂ ಮೋಷನ್ ಆಗ್ತಿಲ್ಲ, ಇಲ್ಲ ರಕ್ತ ಬರುತ್ತಿದೆ ಅಂದಾಗ ವೈದ್ಯರನ್ನು ಸಂಪರ್ಕಿಸಿ. ಅವರಲ್ಲಿಗೆ ಹೋದಾಗ ಲಕ್ಸೇಟಿವ್ ಅಂತ ಚಿಕಿತ್ಸೆ ಕೊಡುತ್ತಾರೆ. ಹಾಗೆ ಆಹಾರದ ಕ್ರಮದಲ್ಲಿ ಬದಲಾವಣೆ ಹೇಳುತ್ತಾರೆ. ಮಗುವಿನ ಬೆಳವಣಿಗೆ ಸಮಯದಲ್ಲಿ ಇವೆಲ್ಲಾ ಸಮಸ್ಯೆಗಳು ಇದ್ದಿದ್ದೇ, ಆದ್ರೆ ಪೋಷಕರು ಮಗುವಿನ ಸಮಸ್ಯೆ ಕುರಿತು ಅರಿತು ಗಮನಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಅದು ಅವರ ಕರ್ತವ್ಯ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ